ನಾಳೆ ನೀ ಸತ್ತರ ಯಾರು ಬರಂಗಿಲ್ಲಾ……

ನಾ ಹಿಂಗ ಆಫೀಸಿಗೆ ಬಂದ ಇನ್ನೇನ ಸಿಸ್ಟಿಮ್ ಆನ್ ಮಾಡಬೇಕು ಅನ್ನೋದರಾಗ ನಮ್ಮ ಸುಬ್ಯಾಂದ ಫೋನ ಬಂತ. ನಂಗ ಅವಂದ ಫೋನ ಬಂದರ ಸಾಕ ಹೆದರಕಿನ ಬರತದ. ಯಾಕಂದರ ಅಂವಾ ೯೦% ಫೋನ ಮಾಡೋದ ಯಾರರ ಸತ್ತದ್ದ ಸುದ್ದಿ ಹೇಳಲಿಕ್ಕೆನ. ಆ ಸತ್ತೋರ ನಮಗ ಪರಿಚಯ ಇರಲಿ ಬಿಡಲಿ ಒಟ್ಟ ಅವರ ಹೆಸರ ನಾವ ಕೇಳೇವಿ ಅಂದರ ಸಾಕ ನಮಗ ಸುದ್ದಿ ಮುಟ್ಟಿಸಿ ಬಿಡೊಂವಾ. ಅಂವಾ ಹಂಗ ಬರೇ ಸುದ್ದಿ ಹೇಳಿ ಸುಮ್ಮನಿದ್ದರ ಮುಗದ ಹೋಗ್ತಿತ್ತ. ಆದರ […]ಇಳಗಿ, ಗೀಸರ್ and ಬೆಲ್ಲಾ….

ನನ್ನ ಹೆಂಡತಿ ನನ್ನ ಮದವಿ ಮಾಡ್ಕೊಂಡ ನಮ್ಮ ಮನಿಗೆ ಬಂದ ಸಂಸಾರ ಶುರು ಮಾಡಿ ಒಂದನೇ ವಾರದಾಗಿನ ಕೆಲವು ಸಂದರ್ಭಗಳು….. ಸಂದರ್ಭ ಒಂದು… ಇಳಗಿಗೆ ಸಂಬಂಧ ಪಟ್ಟದ್ದು ನನ್ನ ಹೆಂಡತಿ ನಮ್ಮವ್ವಗ “ನಿಮ್ಮ ಇಳಗಿ ಹರ್ತ ಅದ, ನಂಗ ನಿಮ್ಮನಿ ಇಳಗ್ಯಾಗ ಹೆಚ್ಚಲಿಕ್ಕೆ ಬರಂಗಿಲ್ಲಾ, ಕೊಬ್ಬರಿ ಹೆರಿಲಿಕ್ಕೂ ಬರಂಗಿಲ್ಲಾ, ಸವತಿಕಾಯಿ ಕೊಚ್ಚಲಿಕ್ಕಂತೂ ಸಾಧ್ಯನ ಇಲ್ಲಾ, ನಮ್ಮ ಅವ್ವನ ಮನ್ಯಾಗ ಹಿಂತಾ ಇಳಗಿ ಇಲ್ಲಾ, ಅದರಾಗ ನಿಮ್ಮ ಮನಿ ಇಳಗಿ ಕುಂಟ್ಯಾಡತದ. ಇದರಾಗ ಹೆಚ್ಚಲಿಕ್ಕೆ-ಕೊಚ್ಚಲಿಕ್ಕೆ ಹೋಗಿ ಎಲ್ಲರ ನಂದ […]ಸಿಂಧೂನ ಗಂಡ…..

ಕೃಷ್ಣಮೂರ್ತಿಗೆ ಈಗ ೭೫ ವರ್ಷ ಆಗಲಿಕ್ಕೆ ಬಂತ. ಅವನ ಹೆಂಡ್ತಿ ಸಿಂಧೂಗ ೬೭ ದಾಟಿದ್ವು. ಇಬ್ಬರದು ೪೩-೪೪ ವರ್ಷದ ಸಂಸಾರ, ಎರಡ ಮಕ್ಕಳು, ಎರಡು ಮೊಮ್ಮಕ್ಕಳು ಅಗದಿ ಫ್ಯಾಮಿಲಿ ಪ್ಲ್ಯಾನಿಂಗ ಫ್ಯಾಮಿಲಿ. ಹಂಗ ಕೃಷ್ಣಮೂರ್ತಿದ ಆರೋಗ್ಯ ಈಗ ಒಂದ ಸ್ವಲ್ಪ ಡಗಮಾಯಿಸಿದುರು ತನ್ನ ಕಾಲ ಮ್ಯಾಲೆ ತಾ ನಿಲ್ತಾನ, ಸಿಂಧು ಭಾಂಡಿ ಗಲಬರಿಸಿದರ ಅಂವಾ ಇವತ್ತು ಡಬ್ಬ್ ಹಾಕ್ತಾನ, ಅಕಿ ಅರಬಿ ಹಿಂಡಿ ಕೊಟ್ಟರ ಹೊರಗ ಮುಂಚಿ ಕಡೆ ಒಣಾ ಹಾಕ್ತಾನ, ಮರದಿವಸ ಒಣಾ ಹಾಕಿದ್ದ ಅರಬಿ […]ಈಗ ನಮಗ ಇನ್ನೊಂದ ಹಡಿ ಅಂದರ ಹಡಿಲಿಕ್ಕೆ ಆಗ್ತದೇನು?

“ಈಗ ನಮಗ ಇನ್ನೊಂದ ಹಡಿ ಅಂದರ ಹಡಿಲಿಕ್ಕೆ ಆಗ್ತದೇನ್ವಾ, ನೀನ ಹೇಳ? ನೀ ಎಲ್ಲಾ ಕಲತೊಕಿದ್ದಿ, ಏನ ನಿನಗ ತಿಳವಳಕಿಲ್ಲಾ ಅನ್ನೊಂಗಿಲ್ಲಾ ಏನಿಲ್ಲಾ” ಅಂತ ಪ್ರತಿ ಸರತೆ ಹೇಳೊ ಹಂಗ ಭಾಗಿರಥಿ ಮಾಮಿ ತನ್ನ ಸೊಸಿ ಮುಂದ ದಯನಾಸ ಪಡಲಿಕತ್ತಿದ್ಲು, ಆದರ ಅತ್ತಲಾಗ ಅವರ ಸೊಸಿ ಭಾಮಾ ಕಿವ್ಯಾಗ ಒಂದ ಇಯರ್ ಫೊನ ಹಾಕ್ಕೊಂಡ ಸುಮ್ಮನ ಅತ್ತಿ ಹೇಳಿದ್ದಕ್ಕ ’ಇಲ್ಲಾ’ ’ಇಲ್ಲಾ’ಅಂತ ಗೋಣ ಹಾಕಲಿಕತ್ತಿದ್ಲು. ಅಕಿದ ಮೊದ್ಲಿಂದ ಒಂದ ಸಿಂಪಲ್ ಪ್ರಿನ್ಸಿಪಲ್, ಬಹುಶಃ ಅವರವ್ವ ಹೇಳಿ ಕೊಟ್ಟಿದ್ಲೋ […]ಯಾರರ ಆರತಿ ಹಾಡ ಹೇಳ್ರೆ ನಮ್ಮವ್ವ…

ಮೊನ್ನೆ ಶ್ರಾವಣ ಮಾಸದಾಗ ನನ್ನ ಹೆಂಡತಿ ಜೀವಾ ತಿಂದ ತಿಂದ ’ನನ್ನ ಕಸೀನ ಮನಿ ಒಳಗ ಸತ್ಯನಾರಾಯಣ ಪೂಜಾಕ್ಕ ದಂಪತ್ತ ಕರದಾರ ಹೋಗೊಣ ಬರ್ರಿ, ನನ್ನ ಜೊತಿ ಬರೋರ ಯಾರಿಲ್ಲಾ ನೀವ ಬರ್ರಿ’ ಅಂತ ಗಂಟ ಬಿದ್ದ ನನ್ನ ಕರಕೊಂಡ ಹೋದ್ಲ. ಅಲ್ಲಾ ದಂಪತ್ತ ಕರದಾರ ಅಂತನೂ ಹೇಳ್ತಾಳ ಮತ್ತ ನನ್ನ ಜೊತಿ ಬ್ಯಾರೆ ಯಾರ ಬರೋರರಿಲ್ಲಾ ಅಂತನೂ ಅಂತಾಳಲಾ ಹುಚ್ಚಿ ಅನಸ್ತ. ಹಂಗ ದಂಪತ್ತಂತ ಕರದರ ಅಕಿ ಜೊತಿ ನಾನ ಹೋಗಬೇಕಲಾ? ಮತ್ಯಾರನರ ಕರಕೊಂಡ ಹೋಗೊಕಿ […]ಕುಂಕಮ ತೊಗೊಂಡ ಹೋಗ ಬರ್ರಿ….

ಇದ ಅಗದಿ ಎಲ್ಲಾರ ಮನ್ಯಾಗಿನ ಹೆಣ್ಣ ಮಕ್ಕಳದ ಟಿಪಿಕಲ್ ಡೈಲಾಗ, ಯಾರರ ಹೆಣ್ಣಮಕ್ಕಳ ಮನಿಗೆ ಬಂದರ ಅವರಿಗೆ ಹೋಗಬೇಕಾರ ’ಕುಂಕಮ ತೊಗೊಂಡ ಹೋಗ ಬರ್ರಿ’ಅಂತ ಅರಿಷಣ ಕುಂಕಮ ಕೊಟ್ಟ ಕಳಸೋದ ಪದ್ದತಿ ಮತ್ತ ಅದ ನಮ್ಮ ಸಂಸ್ಕೃತಿ. ಹಂಗ ಯಾರರ ಭಾಳ ಅಪರೂಪಕ್ಕ ಬಂದಿದ್ದರ, ’ಅಯ್ಯ, ಇದ ಮೊದ್ಲನೇ ಸಲಾ ಬಂದೀರಿ’ಇಲ್ಲಾ ’ ’ಭಾಳ ಅಪರೂಪಕ್ಕ ಬಂದೀರಿ’ ಅಂತ ಅರಿಷಣ-ಕುಂಕಮದ ಜೊತಿ ಒಂದ ಜಂಪರ್ ಪೀಸ ಉಡಿ ತುಂಬಿ ಕಳಸೋದು ಪದ್ದತಿ. ಇನ್ನ ಇದು ಎಲ್ಲಾ ಸುಸಂಸ್ಕೃತರ […]ಶಿವಪ್ಪಾ ಹೋಗಿ ಇವತ್ತಿಗೆ ಮೂರ ದಿವಸ ಆತ..

ಅವತ್ತ ಮುಂಜ ಮುಂಜಾನೆ ಗಡಿಬಿಡಿಲೆ ಸ್ನಾನ ಮಾಡಿ ರೆಡಿ ಆಗೋ ಹೊತ್ತಿನಾಗ ನಮ್ಮ ಮೌಶಿ ಮಗಾ ವಿನಾಯಕ ಧಾರವಾಡದಿಂದ ಫೋನ ಮಾಡಿದಾ. ಹಂಗ ನಾ ಬ್ಯಾರೆ ಯಾರದರ ಫೋನ ಇದ್ದರ ಮುಂಜಾನಿ ಹೊತ್ತನಾಗ ಎತ್ತೊವನ ಅಲ್ಲಾ ಆದರ ಈ ಮನಷ್ಯಾ ನಾವ ಫೋನ ಮಾಡಿದಾಗ ಎತ್ತೋಂವ ಅಲ್ಲಾ ಹಂತಾವ ತಾನಾಗೆ ಯಾಕೊ ಫೋನ ಮಾಡ್ಯಾನ ಅಂದರ ಅರ್ಜೆಂಟ ಇರಬೇಕ ಅಂತ ಮನಸ್ಸಿನಾಗಿನ ರಾಮರಕ್ಷಾ ಸ್ತೋತ್ರಕ್ಕ ಒಂದ ಕಮರ್ಶಿಯಲ್ ಬ್ರೆಕ್ ಕೊಟ್ಟ ಫೋನ ಎತ್ತಿದೆ. ನಾ ಎತ್ತೊ ಪುರಸತ್ತ […]ನಮ್ಮ ಮನೆಯವರಿಗೆ ಮಿಡಲೈಫ್ ಕ್ರೈಸಿಸ್ ಆಗೇದ..

ದಿನಾ ನಡೆಯೊ ಹಂಗ ಮೊನ್ನೆ ಗಂಡಾ ಹೆಂಡತಿದ ಮನ್ಯಾಗ ವಾಸ್ಯಾಟ ನಡದಾಗ ಒಮ್ಮಿಂದೊಮ್ಮಿಲೆ ನನ್ನ ಹೆಂಡತಿ “ರ್ರಿ, ಹಂಗ್ಯಾಕ ಎಲ್ಲಾದಕ್ಕೂ ಸಿಡಿ-ಸಿಡಿ ಹಾಯ್ತೀರಿ…ಸ್ವಲ್ಪ ಸಮಾಧಾನ ಇಟಗೋರಿ. ನಂಗೊತ್ತ ನಿಮಗ ಮಿಡಲೈಫ ಕ್ರೈಸಿಸ್ ಸ್ಟಾರ್ಟ್ ಆಗೇದ ಅಂತ” ಅಂತ ಅಂದ ಬಿಟ್ಳು. ನಂಗ ಅಕಿ ಹಂಗ ಅಂದ ಕೂಡಲೇ ಪಿತ್ತ ನೆತ್ತಿಗೇರಿ ಇನ್ನು ಸಿಟ್ಟ ಜಾಸ್ತಿ ಬಂತ. “ಲೇ, ನಿಂಗ್ಯಾರ ಹೇಳಿದರ ನಂಗ ಮಿಡಲೈಫ ಕ್ರೈಸಿಸ್ ಶುರು ಆಗೇದ ಅಂತ. ನಂಗ ಆಗಿದ್ದ ಮಿಡ್ ಎಜಡ್ ವೈಫ ಕ್ರೈಸಿಸ್” […]ನನ್ನ ಕೇಳದ ನಮ್ಮಪ್ಪನ ಯಾರ ಕರದರು ಕಳಸಬ್ಯಾಡರಿ…..

ಮೊನ್ನೆ ಬೆಂಗಳೂರ ಬನಶಂಕರಿ ನಾಲ್ಕನೇ ಸ್ಟೇಜ ಶ್ರೀ.ವೆಂಕಟೇಶ್ವರ ಮಂಗಲ ಕಾರ್ಯಾಲಯದಾಗ ಸುಬ್ಬಣ್ಣಂದ ವರ್ಷಾಂತಕ ಇತ್ತ. ಹಂಗ ಸುಬ್ಬಣ್ಣ ಇಲ್ಲೇ ಧಾರವಾಡದಾಗ ಸತ್ತ ಇಲ್ಲಿ ಪಂಚಭೂತದೊಳಗ ಲೀನ ಆಗಿದ್ದ ಖರೇ ಆದರ ಬಳಗದವರ ಒಂದ ನಾಲ್ಕ ಮಂದಿ ವರ್ಷಾಂತಕಕ್ಕರ ಬರಲಿ ಸತ್ತಾಗ ಅಂತು ಧಾರವಾಡ ತನಕಾ ಅವರಿಗೆ ಬರಲಿಕ್ಕೆ ಆಗಲಿಲ್ಲಾ ಪಾಪಾ ಎಲ್ಲಾರು ಬೆಂಗಳೂರಾಗ ಸೆಟ್ಲ ಆದೋರು ಅಂತ ಹೀರೆ ಮಗಾ ರಾಮಣ್ಣ ಮುದ್ದಾಮ ಬೆಂಗಳೂರಾಗ ವರ್ಷಾಂತಕ ಇಟಗೊಂಡಿದ್ದಾ. ಹಂಗ ಧಾರವಾಡದಿಂದ ವರ್ಷಾಂತಕಕ್ಕ ಹೋದೊಂವ ವಾಸಣ್ಣ ಒಬ್ಬನ, ಹೆಗಲ […]ಎಲ್ಲಾದರಾಗೂ ಹೆಂಡ್ತಿನ್ನ ಯಾಕ ಕರಕೊಂಡ ಬರ್ತಿ?

ಒಂದ ಆರ ತಿಂಗಳ ಹಿಂದ ಬೆಂಗಳೂರಿಗೆ ಒಂದ ಬುಕ್ ಬಿಡಗಡೆ ಫಂಕ್ಶನಗೆ ಹೋಗಿದ್ದೆ, ಹಂಗ ಅಲ್ಲಿ ಬಂದವರೇಲ್ಲಾ ನನ್ನ ಫಸ್ಟ ಟೈಮ ಭೆಟ್ಟಿ ಆಗಲಿಕತ್ತವರು, ಆದರ ಫೇಸಬುಕ್ಕ ಒಳಗ ಭಾಳ ಕ್ಲೋಸ ಇದ್ದವರು ಹಿಂಗಾಗಿ ಬೆಂಗಳೂರ ತನಕ ಅವರನೇಲ್ಲಾ ಭೆಟ್ಟಿ ಆಗಲಿಕ್ಕಂತ ಹೋದಂಗ ಆಗಿತ್ತ. ನನ್ನ ಭೆಟ್ಟಿ ಆದವರೇಲ್ಲಾ ನನ್ನ ಜೊತಿ ಒಂದ್ಯಾರಡ ಮಾತ ಮಾತಾಡಿದಂಗ ಮಾಡಿ “ಏನ್ರಿ, ನಿಮ್ಮ ಹೆಂಡತಿನ್ನ ಯಾಕ ಕರಕೊಂಡ ಬಂದಿಲ್ಲಾ” ಅಂತ ಕೇಳೆ ಕೇಳೊರ, ನಂಗರ ನನ್ನಕಿಂತಾ ನನ್ನ ಹೆಂಡತಿನ ಭಾಳ […]ಅವ್ವಾ… ನಂದ ಆತ, ನೀರ ಹಾಕ ಬಾ

ನಾವ ಸಣ್ಣೊರ ಇದ್ದಾಗಿನ ಮಾತ, ಆವಾಗ ಇವಾಗಿನಗತೆ ಮನ್ಯಾಗ ಇರೊ ರೂಮಿನಾಗೇಲ್ಲಾ ಒಂದೊಂದ ಸಂಡಾಸ ಇರತಿದ್ದಿಲ್ಲಾ. ಅಲ್ಲಾ ಆವಾಗ ಮನಿಗೆ ಒಂದ ಸಂಡಾಸ ದೂರ ಹೋತ ನಾಲ್ಕ- ಐದ ಮನಿಗೆ, ಇಲ್ಲಾ ಇಡಿ ಚಾಳಿಗೆ ಒಂದೊ ಎರಡೊ ಸಂಡಾಸ ಇರತಿದ್ವು. ಒಂಥರಾ ಸಾರ್ವಜನಿಕ ಪಾಯಖಾನಿ ಅನ್ನರಿ. ಇದ್ದ ಒಂದರಾಗ ಎಲ್ಲಾ ಮನಿಯವರು ಪಾಳೆ ಹಚ್ಚಿ ಒಂದಕ್ಕ ಎರಡಕ್ಕ ಮಾಡಬೇಕ ಹಂತಾ ಹಣೇಬರಹ ಇತ್ತ. ಇನ್ನ ಹಂತಾ ಪರಿಸ್ಥಿತಿ ಒಳಗ ನಮ್ಮಂತಾ ಸಣ್ಣ ಹುಡಗರಿಗೆ ಅಲ್ಲೇ ಹೋಗಲಿಕ್ಕೆ ಅವಕಾಶನ […]ವರ್ಷಕ್ಕ ನಿಂದ ಬರ್ಥಡೆ ಎಷ್ಟ ಸರತೆ ಬರತದ..

ಇದ ನಂದ ಲಗ್ನ ಆದ ವೆರಿ ನೆಕ್ಸ್ಟ ಇಯರದ್ದ ಮಾತ, ಆ ವರ್ಷ ನನ್ನ ಹೆಂಡತಿದ ಅತ್ತಿ ಮನ್ಯಾಗ ಅಂದರ ನಮ್ಮ ಮನ್ಯಾಗ ಮೊದ್ಲನೇ ಬರ್ಥಡೆ ಬಂತ. ಹಂಗ ಅಕಿಗೆ ಅವರವ್ವನ ಮನ್ಯಾಗ ಇಷ್ಟ ದೊಡ್ಡೊಕಿ ಆದರು ವರ್ಷಾ ಬರ್ಥಡೆ ಸೆಲೆಬ್ರೇಶನ್ ಮಾಡಿಸ್ಗೊಳೊ ಪದ್ಧತಿ ಇತ್ತ. ಅವರಪ್ಪಂತೂ “ನಮ್ಮ ಅವ್ವಕ್ಕ ಎಷ್ಟ ದೊಡ್ಡೊಕಿ ಆದರ ಏನರಿ ನಮಗಂತು ಮಗಳ, ನಮ್ಮಕಿಂತಾ ಸಣ್ಣೋಕಿನ” ಅಂತ ವರ್ಷಾ ಅಲ್ಲೆ ನೇಕಾರನಗರದಾಗ ಯಾವದೊ ಒಂದ ಲೋಕಲ್ ಬೇಕರಿ ಒಳಗ ಮಾಡಿದ್ದ ಕೇಕ […]ಹ್ಯಾವೇಲ್ಸ್ ಅಪ್ಲೈಯನ್ಸಿಸ್..ರಿಸ್ಪೆಕ್ಟ್ wooಮೆನ್

(ಟಿ.ವಿ. ಒಳಗ ಜಾಹಿರಾತುಗಳನ್ನ ನೋಡವವರಿಗಾಗಿ ಮಾತ್ರ) ಏನ ಸುಡಗಾಡ ಅಡ್ವರ್ಟೈಸಮೆಂಟ್ ಬರತಾವರಿಪಾ ಟಿ.ವಿ. ಒಳಗ, ನನಗ ಅನಸ್ತದ ಅರ್ಧಾ ನಮ್ಮ ಸಂಸಾರ ಹಾಳಾಗೋದ ಈ ಟಿ.ವಿ. ಸಂಬಂಧ ಅದು ಈ ಅಡ್ವರ್ಟೈಸನಿಂದನ ಅಂತ. ಅಲ್ಲಾ, ಈಗ ಎಲ್ಲಾ ಬಿಟ್ಟ ಈ ಟಿ.ವಿ. ಅಡ್ವರ್ಟೈಸಮೆಂಟ ಮ್ಯಾಲೆ ಯಾಕ ಬಂತ ನನ್ನ ಸಿಟ್ಟ ಅನ್ನಲಿಕ್ಕೆ ನಿನ್ನೆ ಬೆಳಿಗ್ಗೆ ಎದ್ದ ಸೋಲಾರನಾಗ ಬಿಸಿನೀರ ಬರವಲ್ವು, ಗೀಸರ್ ಬ್ಯಾರೆ ಕೆಟ್ಟ ಹೋಗೇದ ಮೊದ್ಲ ಮಳೇಗಾಲ ಅಂತ ನನ್ನ ಹೆಂಡತಿಗೆ ಸ್ನಾನಕ್ಕ ಗ್ಯಾಸ ಮ್ಯಾಲೆ […]ನಂಗ ಗೊತ್ತದ, ಆದರ ನಾ ಯಾಕ ಹೇಳಲಿ?

ಮೊನ್ನೆ ಸಂಪತ್ತ ಶುಕ್ರವಾರ ಬೆಳಿಗ್ಗೆ ನಾ ಏಳೋ ಪುರಸತ್ತ ಇಲ್ಲದ ದೇವರ ಮನ್ಯಾಗ ನಮ್ಮವ್ವಂದ ‘ಭಾಗ್ಯದ ಲಕ್ಷ್ವೀ ಬಾರಮ್ಮಾ, ಶುಕ್ರವಾರದ ಪೂಜೆಯ ವೇಳೆಗೆ’ ಶುರು ಆಗಿತ್ತ. ಇತ್ತಲಾಗ ನನ್ನ ಹೆಂಡತಿದ ಇನ್ನೂ ಏಳೋ ವೇಳೆ ಆಗಿದ್ದಿಲ್ಲಾ. ಅಲ್ಲಾ ಅಕಿಗೆ ಮೊದ್ಲಿಂದ ದೇವರು ದಿಂಡ್ರು ಅಂದ್ರ ಅಷ್ಟ ಕಷ್ಟ ಅದರಾಗ ಅಕಿಗೆ ಈ ಆರತಿ ಹಾಡು, ದೇವರ ಸ್ತೋತ್ರ ಬರಂಗೇಲಾ ಹಿಂಗಾಗಿ ಅಕಿ ಲಗು ಎದ್ದ ಏನಮಾಡಬೇಕ ಅಂತ ಆರಾಮ ಏಳೋ ಗಿರಾಕಿ. ಅಕಿ ಇನ್ನೇನ ನಮ್ಮವ್ವನ ದೇವರ […]ನಮ್ಮ ಸೀರಿ ನಮಗ ವಾಪಸ್ಸ ಬಂತ……

ಇದ ನನ್ನ ಮಗನ ಮುಂಜವಿಗೆ ಸಂಬಂಧ ಪಟ್ಟಿದ್ದ ಮಾತ. ಹಂಗ ನಾ ಮುಂಜವಿಗೆ ಬಂದೊರಿಗೆಲ್ಲಾ ’ನಿಮ್ಮ ಆಶೀರ್ವಾದಕ್ಕೆ ನಮ್ಮ ಉಡುಗೊರೆ’(return gift) ಅಂತ ದೊಡ್ಡಿಸ್ತನಾ ಬಡದ ಬಾಂಬೆದಿಂದ ಮೂರ ನಾಲ್ಕ ನಮನಿವ ಹೋಲಸೇಲನಾಗ ಏರ್ ಟೈಟ ಸ್ಟೇನಲೆಸ್ ಸ್ಟೀಲ್ ಡಬ್ಬಿ ಸೆಟ್ ತರಿಸಿ ಕೊಟ್ಟಿದ್ದ ನಿಮಗೇಲ್ಲಾ ಗೊತ್ತ ಅದ. ಹಂಗ ಮುಂಜವಿಗೆ ಬಂದೊರ ತೊಗೊಂಡು ಹೋಗಿರಿ ಆ ಮಾತ ಬ್ಯಾರೆ. ಅದ ಏನಾತ ಅಂದರ ನನ್ನ ಮುಗನ ಮುಂಜವಿ ಆಗಿ ಒಂದ ಮೂರ ತಿಂಗಳಾದ ಮ್ಯಾಲೆ ನಮ್ಮ […]