ಬಯಕೆ ನೂರು..ನೂರು ತರಹ….

ನಿನ್ನೆ ಮುಂಜ-ಮುಂಜಾನೆ ಏಳೋ ಪುರಸತ್ತ ಇಲ್ಲದ ಪೂಣಾದಿಂದ ನಮ್ಮ ಮೌಶಿದ ಫೊನ, ನಾ ಫೋನ ಎತ್ತಿದೆ ಆದರ ಅಕಿ ನನ್ನ ಜೊತಿ ಭಾಳ ಮಾತಾಡಲಾರದ ಸೀದಾ “ನಿಮ್ಮ ಅವ್ವಗ ಫೊನ ಕೊಡ” ಅಂತ ಹೇಳಿದ್ಲು. ನಂಗ ಒಂದ ಸಲಾ ಅಕಿ ಹಂಗ ಅಂದಾಗ ಹೆದರಕಿ ಆತ, ಯಾಕಂದರ ಹಂಗ ಮನ್ಯಾಗಿನ ಹೀರೆಮನಷ್ಯಾರಿಗೆ ಫೋನ ಕೊಡ ಅನ್ನೋದ ನಾರ್ಮಲಿ ಯಾರರ ಮ್ಯಾಲೆ ಹೋಗಿದ್ದ ಸುದ್ದಿ ಹೇಳಬೇಕಾರ ಇಷ್ಟ, ಅದರಾಗ ಅವರವ್ವ ಇವತ್ತ ನಾಳೆ ಅನ್ನಲಿಕತ್ತ ಒಂದ ನಾಲ್ಕೈದ ವರ್ಷ […]ನಮ್ಮ ಮನೆಯವರದ ಇನ್ನು ಬೆಳವಣಗಿ ನಿಂತಿಲ್ಲಾ

ಹೋದ ಸಂಡೆ ನಾ ಯಾಕೊ ಭಾಳ ಸಾಕಾಗೇದ ಮಲ್ಕೊಂಡರಾತು ಅಂತ ಮಧ್ಯಾಹ್ನ ಮನ್ಯಾಗ ಹಿಂಗ ಒಬ್ಬನ ಅಡ್ಡಾಗಿದ್ದೆ. ಇನ್ನ ನನ್ನ ಹೆಂಡತಿಗಂತೂ ಮಧ್ಯಾಹ್ನ ಮಲ್ಕೋಳೊ ಚಟಾ ಇಲ್ಲಾ. ಚಟಾ ಇಲ್ಲಾ ಅನ್ನೊದಕಿಂತ ಅಕಿಗೆ ದಿವಸಾ ಟಿ.ವಿ ಒಳಗ ಮಧ್ಯಾಹ್ನದ ಧಾರಾವಾಹಿ ನೋಡೊ ಚಟಾ ಹಿಂಗಾಗಿ ಎಷ್ಟ ತ್ರಾಸಾಗಿದ್ರು ಆ ಸುಡಗಾಡ ಧಾರಾವಾಹಿ ಸಂಬಂಧ ಮಧ್ಯಾಹ್ನ ಒಂದ ಚೂರು ರೆಸ್ಟ ತೊಗೊಳಂಗಿಲ್ಲಾ, ರಾತ್ರಿ ಗಂಡ ಬಾಜು ಬಂದಕೂಡಲೇ ’ರ್ರಿ ನಂಗ ಇವತ್ತ ಖರೇನ ಭಾಳ ಸಾಕಾಗೇದ’ ಅನ್ಕೋತ ಆಕಳಸಿ […]’ನಾ ಸೀರಿ ಉಟ್ಕೊಳೊದರಾಗ, ನೀವು ಸಂತಿ ತೊಗೊಂಡ ಬರ್ರಿ’

“ರ್ರಿ, ಒಂದ ಕೆಲಸಾ ಮಾಡ್ರಿ, ಪಟ್ಟ ಅಂತ ಹೇಳಿ ನಾ ಸೀರಿ ಉಟ್ಕೋಳೊದರಾಗ ನೀವು ಇಲ್ಲೆ ಸಂತಿಗೆ ಹೋಗಿ ಒಂದ ನಾಲ್ಕ ಕಾಯಿಪಲ್ಯಾ, ಲಿಂಬೆ ಹಣ್ಣ, ಕೊತಂಬರಿ ತಂದ ಬಿಡ್ರಿ, ಮತ್ತ ಇವತ್ತ ಆಗಲಿಲ್ಲಾಂದ್ರ ಒಂದ ವಾರ ಗಟ್ಟಲೇ ಆಗಂಗಿಲ್ಲಾ” ಅಂತ ನಿನ್ನೆ ನನ್ನ ಹೆಂಡತಿ ನಂಗ ಗಂಟ ಬಿದ್ಲು. ಅದೇನ ಆಗಿತ್ತಂದರ ನಮ್ಮ ಪೈಕಿ ಒಬ್ಬರ ಮನ್ಯಾಗ ಸತ್ಯಾನಾರಯಣ ಪೂಜಾ ಇತ್ತ, ದಂಪತ್ತ ಬರ್ರಿ ಅಂತ ಕರದಿದ್ದರು. ಅದರಾಗ ಸಂಡೆ ಇದ್ದಿದ್ದರಿಂದ ನಂಗ ತಪ್ಪಿಸಿಗೊಳ್ಳಿಕ್ಕೆ ಏನ […]ರ್ರಿ, ನಿಮ್ಮ ಪಾಲಿಂದ ಕುಕ್ಕರ ಇಡ್ಲ್ಯೋ ಬ್ಯಾಡೋ?

“ರ್ರಿ, ನಿಮ್ಮ ಪಾಲಿಂದ ಕುಕ್ಕರ ಇಡ್ಲ್ಯೋ ಬ್ಯಾಡೋ? ನೀವು ಈಗ ಹೇಳಿ ಹೋಗರಿ” ಅಂತ ನಿನ್ನೆ ನನ್ನ ಹೆಂಡತಿ ನಾ ಸಂಜಿ ಮುಂದ ಹೊರಗ ಹೋಗಬೇಕಾರ ಬಾಗಲದಾಗ ನಿಂತ ಜೋರ ಮಾಡಿ ಕೇಳಿದ್ಲು. ನಾ ಸಿಟ್ಟಿಗೆದ್ದ “ಕುಕ್ಕರ ಇಡ್ಲ್ಯೋ ಬ್ಯಾಡೋ ಅಂದರ ಏನದ? ದಿನಾ ಒಂದಕ್ಕೂ ಅದ್ನೇನ ಕೇಳೋದ? ನಿನ್ನ ಮಾತ ಕೇಳಿದವರ ಯಾರರ ನಾ ಊಟಕ್ಕ ಬ್ಯಾರೆ ಮನಿಗೆ ಹೋಗ್ತೇನಿ ರಾತ್ರಿ ಮಲ್ಕೋಳಿಕ್ಕೆ ಇಷ್ಟ ಈ ಮನಿಗೆ ಬರತೇನಿ ಅಂತ ತಿಳ್ಕೋಬೇಕೇನ?” ಅಂತ ಜೋರ ಮಾಡಿದೆ. […]ಮುಂಜ್ವಿ ಸಾಲ ಮುಟ್ಟೊತನಕ ಸಂಧ್ಯಾವಂದನಿ ಮಾಡ ಮಗನ

ಮೊನ್ನೆ ನಮ್ಮನಿಗೆ ಬಂದ ನಮ್ಮ ಮೋನಪ್ಪ ಮಾಮಾ ನನ್ನ ಮಗಾ ಮುಂಜಾನೆ ಎದ್ದ ಸಂಧ್ಯಾವಂದನಿ ಮಾಡೋದ ನೋಡಿ ಗಾಬರಿ ಆಗಿ ಬಿಟ್ಟಾ. ನಂಗ ಕರದ “ಲೇ, ಮಗನ ನೋಡ ನಿನ್ನ ಮಗನ್ನ, ಅವನ್ನ ನೋಡಿ ಕಲಿ, ನೀ ಮಾಡ್ತಿ ಏನಲೇ ಸಂಧ್ಯಾವಂದನಿ?” ಅಂತ ನನಗ ಜೋರ ಮಾಡಿದಾ. ನಾ ಮುಂಜ ಮುಂಜಾನೆ ಎದ್ದ ಇವಂದೇನೊ ಮಾರಾಯಾ ಅಂತ ತಿರಗಿ “ಏ, ನಂದ ಲಗ್ನ ಆಗೇದೋ ಮಾರಾಯಾ, ಎಲ್ಲಿ ಸಂಧ್ಯಾವಂದನಿ…ಲಗ್ನ ಆದ ಮ್ಯಾಲೆ ಯಾರರ ಸಂಧ್ಯಾವಂದನಿ ಮಾಡ್ತೇರೇನ? ಈಗ […]ಎದ್ದೇಳು ಚಿನ್ನ ಮೂಡಲ ಹರಿತು……….

ಹಂಗ ನಾ ಕನ್ಯಾ ಫಿಕ್ಸ್ ಮಾಡ್ಕೋಳೊಕಿಂತ ಮೊದಲ ಭಾಳ ತಲಿ ಕೆಡಸಿಗೊಂಡ ವಿಚಾರ ಮಾಡಿದ್ದರ ಪೈಕಿ ಇಂಪಾರ್ಟೆಂಟ್ ವಿಚಾರ ಅಂದರ ’ಈ ಹುಡಗಿ ನನ್ನ ಜೊತಿ ಹೊಂದ್ಕೊಂಡ ಹೋಗಲಿಲ್ಲಾ ಅಂದ್ರು ಎಷ್ಟ ಹೋತು, ನಮ್ಮ ಮನಿಗೆ ಹೊಂದ್ಕೊಂಡ ಹೋಗ್ತಾಳೊ ಇಲ್ಲೊ? ಈಕಿ ನಮ್ಮ ಅವ್ವಾ ಅಪ್ಪನ್ನ ಇಷ್ಟ ಅಲ್ಲದ ನಮ್ಮ ತಂಗಿನ್ನೂ ಸಂಬಾಳಸ್ತಾಳೊ ಇಲ್ಲೊ?’ ಅನ್ನೊ ವಿಚಾರ. ಹಂಗ ಏನs ಹೊಸಾ ಕೆಲಸಾ ಮಾಡಬೇಕಾರು ಹತ್ತ ಸಲಾ ವಿಚಾರ ಮಾಡಿ ಮಾಡಬೇಕು ಅಂತಾರ ಇನ್ನ ಮದುವಿ ಮಾಡ್ಕೋಬೇಕಾರ […]ಅಳೆತನ ಮದ್ಲೊ ಬಾಣಂತನಾ ಮದ್ಲೊ?

ಇವತ್ತಿಗೆ ಕರೆಕ್ಟ ನಮ್ಮ ಮಾಮಾನ ಮಗಾ ವಿನ್ಯಾಂದ ಮದುವಿ ಆಗಿ ಒಂಬತ್ತ ತಿಂಗಳ ಹದಿನೆಂಟ ದಿವಸ ಆತ, ಹಂಗ ಇವತ್ತ ಅವನ ಮಗನ ಹೆಸರ ಇಡೊ ಕಾರ್ಯಕ್ರಮನೂ ಮುಗದಂಗ ಆತ ಅನ್ನರಿ. ಅಂವಾ ನಾಳೆನ ತನ್ನ ಹೆಂಡತಿನ್ನ ಕಟಗೊಂಡ ಹೆತ್ತಿ ಬಣ ಅಂತ ವಾಪಸ ಬೆಂಗಳೂರಿಗೆ ಹೊಂಟಾನ, ಮುಂದಿನ ಬಾಣಂತನ ಅಲ್ಲೇ ಬೆಂಗಳೂರಾಗ. ಅದು ಪಾಪ ನಮ್ಮ ಮಾಮಿನ ಮಾಡೋಕಿ. ಊಟಕ್ಕ ಕೂತಾಗ ಎಲ್ಲಾರು ವಿನ್ಯಾಗ ಕಾಡಸೋರ ಕಾಡಸೋರ, ಅದರಾಗ ಒಂದ ಹತ್ತ ದಿವಸದ ಹಿಂದsನ ದೀಪಾವಳಿ […]ಒಗಟ ಹಚ್ಚಿ ಗಂಡನ ಹೆಸರ ಹೇಳ…….

ಮೊನ್ನೆ ನಮ್ಮ ಮಾಮಾನ ಮಗನ ಮದುವಿ ಇತ್ತು, ಪಾಪ ಹೆಣ್ಣಿನವರು ಬೆಂಗಳೂರ ಕಡೆದವರ ಆದರೂ ನಮ್ಮ ಬಳಗೇಲ್ಲಾ ಇಲ್ಲೆ ಹುಬ್ಬಳ್ಳ್ಯಾಗ ಅದ ಅಂತ ಇಲ್ಲೆ ಬಂದ ಮದುವಿ ಮಾಡಿ ಕೊಟ್ಟರು. ಮರದಿವಸ ನಮ್ಮ ಮಾಮಾನ ಮನ್ಯಾಗ ಹಗಲ ಹೊತ್ತಿನಾಗ ಸತ್ಯನಾರಾಯಣ ಪೂಜಾ ರಾತ್ರಿ ಮದ್ವಿ ಆದ ಹುಡಗರದ ಪ್ರಸ್ಥದ್ದ ವ್ಯವಸ್ಥಾ ಇತ್ತ. ಮಧ್ಯಾಹ್ನ ಸತ್ಯನಾರಾಯಣ ಪೂಜಾದ್ದ ಊಟಾ ಹೊಡದ ಎಲ್ಲಾರು ಹೊಸ್ದಾಗಿ ಲಗ್ನಾದ ಹುಡಗಾ ಹುಡಗಿನ್ನ ಹಿಡ್ಕೊಂಡ ಹರಟಿ ಹೊಡ್ಕೋತ ಕೂತಿದ್ವಿ. ಒಮ್ಮಿಂದೊಮ್ಮೆಲೆ ನಮ್ಮ ಮಾಮಿ ತಂಗಿಗೆ […]ಸರ್..ಒಂದ ಛಲೊ obituary ಬರದ ಕೊಡ್ರಿ…

ಇದ ಒಂದ ಹತ್ತ-ಹನ್ನೆರಡ ದಿವಸದ ಹಿಂದಿನ ಮಾತ ಇರಬೇಕು. ಒಬ್ಬರು ಅರವತ್ತ- ಅರವತ್ತೈದ ವರ್ಷದ ಆಸ ಪಾಸ ಇರೋರು, ಇನ್ನೊಬ್ಬಂವ ನನ್ನ ವಾರ್ಗಿ ಹುಡಗಾ ಓಣ್ಯಾಗ ನಮ್ಮ ಮನಿ ಎಲ್ಲೆದ ಅಂತ ಕೇಳ್ಕೊಂಡ ಮುಂಜ – ಮುಂಜಾನೆ ಕಾರ ತೊಗೊಂಡ ಬಂದ್ರು. ಅವರ ಬಂದಾಗ ನಾ ಸ್ನಾನಕ್ಕ ಹೋಗಿದ್ದೆ, ನಮ್ಮಪ್ಪ ಅವರನ ಒಳಗ ಕರದರ ಅವರು “ಇಲ್ಲಾ, ನಾವ ಒಳಗ ಬರೋ ಹಂಗ ಇಲ್ಲಾ, ನಮಗ ಮೈಲಗಿ ಅದ, ನಿಮ್ಮ ಮಗನ ಹೊರಗ ಕರಿರಿ” ಅಂದರಂತ. ನಮ್ಮಪ್ಪಾ, […]ನಿಂದ ನಾರ್ಮಲ್ಲೋ ಇಲ್ಲಾ ಸಿಜಿರಿನ್ನೊ?

ಯಾರರ ಹಡದದ್ದ ಸುದ್ದಿ ಬಂತ ಅಂದರ ಮೊದ್ಲ ನಾವ ಕೇಳೊದ ಏನು? ಗಂಡೋ, ಹೆಣ್ಣೊ ಹೌದಲ್ಲ ಮತ್ತ..? ಮೊನ್ನೆ ನನ್ನ ಹೆಂಡತಿ ಮೌಶಿ ತನ್ನ ಮಗಳ ಹಡದದ್ದ ಸುದ್ದಿ ಹೇಳಲಿಕ್ಕೆ ಫೋನ ಮಾಡಿದರ ನನ್ನ ಹೆಂಡತಿ ಮೊದ್ಲ ಕೇಳಿದ್ದ ಏನಪಾ ಅಂದರ “ಸವ್ವಿ ಹಡದ್ಲ..ಯಾವಾಗ? ನಾರ್ಮಲ್ ಆತೋ ಇಲ್ಲಾ ಸಿಜರಿನ್ ಆತೊ?” ಅಂತ. ಅಷ್ಟರಾಗ ಹಿಂದಿನಿಂದ ನಮ್ಮವ್ವಾ ಕೂಸು ಬಾಣಂತಿ ಆರಾಮ ಇದ್ದಾರಿಲ್ಲೋ ಕೇಳು ಅಂತ ಒದರಿದ್ಲು, ಇಕಿ “ಸಿಜರಿನ್ ಆತ, ಭಾಳ ಛಲೋ ಆತ ತೊಗೊ… […]ಎದ್ದೇಳು ಚಿನ್ನ ಮೂಡಲ ಹರಿತು……….

ಹಂಗ ನಾ ಕನ್ಯಾ ಫಿಕ್ಸ್ ಮಾಡ್ಕೋಳೊಕಿಂತ ಮೊದಲ ಭಾಳ ತಲಿ ಕೆಡಸಿಗೊಂಡ ವಿಚಾರ ಮಾಡಿದ್ದರ ಪೈಕಿ ಇಂಪಾರ್ಟೆಂಟ್ ವಿಚಾರ ಅಂದರ ’ಈ ಹುಡಗಿ ನನ್ನ ಜೊತಿ ಹೊಂದ್ಕೊಂಡ ಹೋಗಲಿಲ್ಲಾ ಅಂದ್ರು ಎಷ್ಟ ಹೋತು, ನಮ್ಮ ಮನಿಗೆ ಹೊಂದ್ಕೊಂಡ ಹೋಗ್ತಾಳೊ ಇಲ್ಲೊ? ಈಕಿ ನಮ್ಮ ಅವ್ವಾ ಅಪ್ಪನ್ನ ಇಷ್ಟ ಅಲ್ಲದ ನಮ್ಮ ತಂಗಿನ್ನೂ ಸಂಬಾಳಸ್ತಾಳೊ ಇಲ್ಲೊ?’ ಅನ್ನೊ ವಿಚಾರ. ಹಂಗ ಏನs ಹೊಸಾ ಕೆಲಸಾ ಮಾಡಬೇಕಾರು ಹತ್ತ ಸಲಾ ವಿಚಾರ ಮಾಡಿ ಮಾಡಬೇಕು ಅಂತಾರ ಇನ್ನ ಮದುವಿ ಮಾಡ್ಕೋಬೇಕಾರ […]ರ್ರಿ, ನಂದು ಒಂದ ಮೇಣದ ಮೂರ್ತಿ ಮಾಡಸರಿ….

ಇದ ಮೊನ್ನೆ ಮೂರ ದಿವಸದ ಹಿಂದ ನನ್ನ ಹೆಂಡತಿ ಅನಿವರ್ಸರಿ ಟೈಮನಾಗಿನ ಸುದ್ದಿ, ಹಂಗ ಅದು ನಂದು ಅನಿವರ್ಸರಿನ ಖರೆ, ಆದರ ವರ್ಷಾ ಸೆಲೆಬ್ರೇಶನ್ ಮಾಡೊಕಿ ಅಕಿ, ವರ್ಷಾನ ಗಟ್ಟಲೇ ಸಫರ್ ಆಗೋಂವಾ ನಾ. ಹಿಂಗಾಗಿ ನಾ ಅನಿವರ್ಸರಿ ಬಗ್ಗೆ ಭಾಳ ತಲಿಕೆಡಸಿಗೊಳ್ಳಿಕ್ಕೆ ಹೋಗಂಗಿಲ್ಲಾ. ಅವತ್ತ ಪುಣ್ಯಾ ಯಾಕೊ ನಂಗ ಎಚ್ಚರಾಗೊ ಪುರಸತ್ತ ಇಲ್ಲದ ನಂಬದ ಅನಿವರ್ಸರಿ ಅಂತ ನೆನಪಾತ ಹಿಂಗಾಗಿ ಬಾಜುಕ ಮಲ್ಕೊಂಡ ಹೆಂಡತಿನ್ನ ಗಲ್ಲಾ ತಟ್ಟಿ ಎಬಿಸಿ ’ಹ್ಯಾಪಿ ಅನಿವರ್ಸರಿ ಡಾರ್ಲಿಂಗ್’ ಅಂತ ಅಂದೆ, […]ಥಟ್ ಅಂತ ಹೇಳಿ…..

ಒಂದ ದಿವಸ ಸಂಜಿಮುಂದ ನಾ ಹಿಂಗ ಕೆಲಸಾ ಮುಗಿಸಿಕೊಂಡ ಬಂದ ಸಾಕಾಗಿ ಅಡ್ಡಾಗಿದ್ದೆ, ನನ್ನ ಮೊಬೈಲಗೆ ಒಂದ ಫೋನ್ ಬಂತ. ಬರೇ ನಂಬರ ಇಷ್ಟ ಇತ್ತ ಹಿಂಗಾಗಿ ಕಂಪಲ್ಸರಿ ಎತ್ತ ಬೇಕಾತ. ಹಂಗ ಹೆಸರ ಬಂದಿತ್ತಂದರ ಆ ಹೆಸರ ನೋಡಿ ಫೋನ ಎತ್ತೋದು ಬಿಡೋದ ಡಿಸೈಡ ಮಾಡೊ ಮನಷ್ಯಾ ನಾ. ಸರಿ, ನಾ ಫೋನ ಎತ್ತಿದೆ, ಆ ಕಡೆಯಿಂದ “ನಮಸ್ಕಾರ, ನಾನು ಡಿ.ಡಿ.ಚಂದನ ದಿಂದ ಆರತಿ ಮಾತೊಡೊದ” ಅಂದರು. ನಾ ಅವರ ಹೆಸರ ಕೇಳಿದ್ದೆ, ಹಂಗ ಫೇಸಬುಕ್ಕಿನಾಗ […]ಮುದಕಾದಿ, ಮುಸರಿ ಯಾವದು…ಎಂಜಲ ಯಾವದು ತಿಳಯಂಗಿಲ್ಲಾ?

“ದನಾ ಕಾಯೋನ ಬುದ್ಧಿ ಎಲ್ಲೆ ಇಟ್ಟಿ, ಊಟಕ್ಕ ಕೂತಾಗ ಬಲಗೈಲೆ ಸಾರಿನ ಸೌಟ ಮುಟ್ಟ ಬ್ಯಾಡ ಅಂತ ಎಷ್ಟ ಸರತೆ ಹೇಳಬೇಕ? ಮುದಕಾದರು ಮುಸರಿ ಯಾವದು ಎಂಜಲ ಯಾವದು ತಿಳಿಯಂಗಿಲ್ಲಲಾ, ಯಾ ಕೈಲೆ ಏನ ಮಾಡಬೇಕು, ಏನ ಮಾಡಬಾರದು ಅಂತ ಗೊತ್ತಾಗಂಗಿಲ್ಲಾ” ಅಂತ ಮನ್ನೆ ಭಾದ್ರಪದ ಮಾಸದಾಗ ಸ್ವರ್ಣಗೌರಿ ಪೂಜಾ ದಿವಸ ಊಟಕ್ಕ ಕೂತಾಗ ನನ್ನ ಮಗನ ಬಲಗೈ ಸಾರಿನ ಸೌಟಿಗೆ ಬಡದದ್ದಕ್ಕ ನಮ್ಮವ್ವ ಜೋರಾಗಿ ಒದರಿ ಬಿಟ್ಟಳು. ಹಂಗ ಅಕಿ ಮರದಿವಸ ಗಣಪತಿ ಸಂಬಂಧ ಇನ್ನು […]ಎಲ್ಲಾರ ಮನ್ಯಾಗು ತಾಟನಾಗ ಕೂದಲ ಬರೋದ….

’ಎಲ್ಲಾರ ಮನ್ಯಾಗು ತಾಟನಾಗ ಕೂದಲ ಬರೋದ’ಅಂತ ಗಾದಿ ಮಾತ ಅದ. ಕೇಳಿರೇನ? ಕೇಳಿಲ್ಲ ಹೌದಲ್ಲ. ಅಲ್ಲಾ, ಹಂಗೇನ ಸುಡಗಾಡ ಗಾದಿ ಮಾತಿಲ್ಲಾ ಮತ್ತ, ಇದ ನಮ್ಮವ್ವ ಕಟ್ಟಿದ್ದ ಗಾದಿ ಮಾತ. ನಮ್ಮ ಮನ್ಯಾಗ ಊಟದ್ದ ತಾಟ ನಾಗ ವಾರದಾಗ ಒಂದ್ಯಾರಡ ಸರತೆ ಕೂದಲ ಬರೋದ ಮೊದ್ಲಿಂದ ಬಂದ ಸಂಪ್ರದಾಯ. ಅದರಾಗ ಶುಕ್ರವಾರ ಇಲ್ಲಾ ಮಂಗಳವಾರ (ನಮ್ಮವ್ವ ಯರಕೊಂಡಾಗ ಒಮ್ಮೆ) ಅಂತೂ ಗ್ಯಾರಂಟಿ ಇರತಿತ್ತ. ಏನಿಲ್ಲದ ನಮ್ಮಪ್ಪ ಭಾರಿ ಪಿಸಿ ಮನಷ್ಯಾ, ಅವಂಗ ಊಟದಾಗ ಏನರ ಹೆಚ್ಚು ಕಡಮಿ […]