ಸಂತಿಗೆ ಹೋಗಿ ಹೆಂಡ್ತಿ ಮರತ ಬಂದರಂತ………

ಈಗ ಒಂದ ಎರಡ ವರ್ಷದಿಂದ ನಮ್ಮನಿ ಬಾಜು ಇಬ್ಬರ ಅಗದೀ ವಯಸ್ಸಾದ ಗಂಡಾ ಹೆಂಡ್ತಿ ಬಂದಾರ. ಹಂಗ ಅದ ಅವರದ ಸ್ವಂತ ಮನಿ, ಇಷ್ಟ ವರ್ಷ ಬೆಂಗಳೂರಾಗ ಮಗಾ ಸೊಸಿ ಜೊತಿ ಇದ್ದರು ಹಿಂಗಾಗಿ ಹುಬ್ಬಳ್ಳಿ ಮನಿ ಭಾಡಗಿ ಕೊಟ್ಟಿದ್ದರು. ಎರಡ ವರ್ಷದ ಹಿಂದ ಮಗಾ ’ನಾ ಲಂಡನ್ನಿಗೆ ಶಿಫ್ಟ ಆಗ್ತೇನಿ, ಐದ ವರ್ಷದ ಪ್ರೋಜೆಕ್ಟ ಅದ’ ಅಂತ ಹೇಳಿ ಹೆಂಡ್ತಿ ಮಕ್ಕಳನ್ನ ಕಟಗೊಂಡ ಲಂಡನ್ನಿಗೆ ಹೋದ ಮ್ಯಾಲೆ ಇವರಿಗೆ ಬೆಂಗಳೂರ ಒಲ್ಲೆ ಅನಸ್ತ. ಇತ್ತಲಾಗ ಮಗಳು […]ಹಳೇಹುಬ್ಬಳ್ಳಿ ಹಸಬಂಡ್ಸ್…..

ನಾ ನನ್ನ ಜೀವನದಾಗ ಪೂರ್ತಿ ಓದಿದ್ದ ಮೊದ್ಲನೇ ಇಂಗ್ಲೀಷ್ ಫಿಕ್ಶನ್ ಅಂದರ ಜಾಕಿ ಕಾಲಿನ್ಸಂದ ’ಹಾಲಿವುಡ್ ಹಸಬಂಡ್ಸ್’. ನಂಗ ಈ ಬುಕ್ ಸಿಕ್ಕದ್ದ ನಮ್ಮ ಚಿಮ್ಮಲಗಿ ಮಾಮನ ಮನ್ಯಾಗ, ಅವರ ಮಗಳ ಚೈತ್ರಿ ನಾನು ಕ್ಲಾಸಮೇಟ್ ಹಿಂಗಾಗಿ ನಾ ಯಾಕ ರಿಸ್ಕ ತೊಗೊಬೇಕು ಅಂತ ಅವರಪ್ಪಗ ಮಾಮಾ ಮಾಮಾ ಅಂತ ಹಚಗೊಂಡಿದ್ದೆ. ಹಾಲಿವುಡ್ ಹಸಬಂಡ್ಸ್ ನಂಥಾ ಬುಕ್ ಅವರ ಮನ್ಯಾಗ ಹೆಂಗ ಬಂತೊ ಆ ಜಾಕಿ ಕಾಲಿನ್ಸಗೆ ಗೊತ್ತ. ಯಾಕಂದರ ಅವರ ಮನ್ಯಾಗ ಬರೇ ಮಡಿ-ಮೈಲಗಿ, ಆರತಿ-ಪಾರಾಯಣದ […]ಕೂಸ ಬಂತ ಕೂಸ…ಮುನ್ನೂರ ಮಿಲಿಯನ್ ಕೂಸು.

ಒಂದ ಎಂಟ ದಿವಸ ಹಿಂದ ಹಿಂಗs ಫಾಲತು ಬ್ರೌಸಿಂಗ ಮಾಡಬೇಕಾರ ಒಂದ ಇಂಟರೆಸ್ಟಿಂಗ ಟೈಟಲ್ ಕಾಣ್ತ. ’Royal baby worth $376 Million to the British Econom’ ಅಂತ ಇತ್ತ. ಅಲ್ಲಾ ಬರೇ Royal baby worth $376 Million ಅಂತ ಇದ್ದರ ನಂಗು ಅರ್ಥ ಆಗತಿತ್ತ, ಹೇಳಿ ಕೇಳಿ ರಾಜಕುಮಾರ – ರಾಜಕುಮಾರಿ ಕೂಸು, ಅದರಾಗ ಇಂಗ್ಲೆಂಡ ರಾಣಿಮನೆತನದ ಸಿಕ್ಕಾ ಪಟ್ಟೆ ಆಸ್ತಿ ಅದ ಹಿಂಗಾಗಿ ಹುಟ್ಟೊ ಕೂಸಿನ ಹೆಸರಿಗೆ ಇಷ್ಟ ಆಸ್ತಿ ಬರಬಹುದು […]ಯಾರದೊ ರೊಕ್ಕಾ ಯಲ್ಲಮ್ಮನ ಜಾತ್ರೆ..

ನಾವ B.Sc ಕಲಿಬೇಕಾರ ನಮ್ಮ ಜೊತಿ ಒಬ್ಬ ಮಾರವಾಡಿ ದೋಸ್ತ ಇದ್ದಾ. ಹಂಗ ಆವಾಗ ಮಾರವಾಡಿ ಮಂದಿ ಸೈನ್ಸ ಕಲಿಯೋದ ಭಾಳ ಕಡಿಮಿ ಇತ್ತ. ಮಾರವಾಡಿ ಮಂದಿ ಟ್ರೇಡಿಂಗ ಮಾಡೊದ ಜಾಸ್ತಿ ಹಿಂಗಾಗಿ ಅವರೇಲ್ಲಾ ಕಾಮರ್ಸ ತೊಗೊಂಡ ಪಿ.ಯು.ಸಿ ಪಾಸ್ ಆದರ ಡಿಗ್ರಿ ಮಾಡೋರು ಪಾಸ ಆಗದಿದ್ದರ ಸೀದಾ ತಮ್ಮ ತಮ್ಮ ಅಂಗಡಿಗೆ ಹೋಗಿ ಧಂಧೆ ನೋಡ್ಕೊಳೊರು. ಆದರ ನಮ್ಮ ಮಾರವಾಡಿದ ಫ್ಯಾಕ್ಟರಿ ಇತ್ತ ಹಿಂಗಾಗಿ ಅಂವಾ ಸೈನ್ಸ ತೊಗೊಂಡಿದ್ದಾ. ನಮಗೆಲ್ಲಾ ಒಬ್ಬ ಮಾರವಾಡಿ ದೋಸ್ತ ಸಿಕ್ಕದ್ದ […]ವೈ ಶುಡ್ ಬಾಯ್ಸ್ ಹ್ಯಾವ್ ಆಲ್ ದ ಫನ್

ನೀವು ಆ ಎರಡಗಾಲಿ scootyದ advertisement ನೋಡಿರಬೇಕಲಾ, ಅದs, ಪ್ರೀಯಾಂಕ ಛೋಪ್ರಾಂದ. ರಾತ್ರಿ ಆದ ಮ್ಯಾಲೆ ಗಾಡಿ ತೊಗೊಂಡ why should boys have all the fun ಅಂತ ಗಂಡಬೀರಿಗತೆ ತಿರಗಲಿಕ್ಕೆ ಹೋಗ್ತಾಳಲಾ. ಯಾವಗಿಂದ ಆ ad ಶುರು ಆಗೇದಲಾ ಆವಾಗಿಂದ ನನ್ನ ನಾಲ್ಕ ವರ್ಷದ ಮಗಳ ಸಹಿತ “ಪಪ್ಪಾ, ನಂಗ ದೊಡ್ಡೊಕಿ ಆದ ಮ್ಯಾಲೆ ಸ್ಕೂಟಿ ಕೊಡಸ್ತಿ?” ಅಂತ ದಯನಾಸ ಪಟ್ಟ ಕೇಳ್ತಾಳ, ಇನ್ನ ಮಗಳ ಕೇಳ್ತಾಳ ಅಂದ್ರ ಮುವತ್ತ ದಾಟಿದ್ದ ಅವರವ್ವ ಸುಮ್ಮನ […]ನಂದ ಒಂದನೇದ ಎರಡರಾಗ ಹೋಗಿತ್ತ

ಮೊನ್ನೆ ನಮ್ಮ ರಾಜಾಗ ಕಡಿಕೂ ಮದುವಿ ಆಗಿ ಎಂಟ ವರ್ಷದ ಮ್ಯಾಲೆ ಒಂದ ಕೂಸ ಹುಟ್ಟತು. ಏನಿಲ್ಲದ ಅವಂಗ ಕನ್ಯಾ ಸಿಕ್ಕ ಮದುವಿ ಆಗೋದರಾಗ ೩೬ ವರ್ಷ ಆಗಿದ್ವು, ಅದರಾಗ ಅಂವಾ ಸಾಲಿ ಜಾಸ್ತಿ ಕಲತಿದ್ದಿಲ್ಲಾ, ಥರ್ಡ ಕ್ಲಾಸಿನಾಗ ಬಿ.ಎಸ್ಸಿ ಮಾಡಲಿಕ್ಕೆ ಐದ ವರ್ಷ ತೊಗೊಂಡಿದ್ದಾ. ಮುಂದ ಛಲೋ ನೌಕರಿ ಸಿಗೋತನಕಾ ಅಂತ ಒಂದ ಕೊರಿಯರ್ ಏಜೆನ್ಸಿ ಒಳಗ ಕೆಲಸಕ್ಕ ಹೊಂಟಂವಾ ಅದನ್ನ ಪರ್ಮನೆಂಟ ಮಾಡ್ಕೊಂಡಾ. ಹಂಗ ಆವಾಗಿನ್ನೂ ನಮ್ಮ ಮಂದ್ಯಾಗ ಕನ್ಯಾದ್ದ ಅಷ್ಟ ಬರಗಾಲ ಬಿದ್ದಿದ್ದಿಲ್ಲಾ […]ನಿಮ್ಮ ಆಶೀರ್ವಾದಕ್ಕೆ ನಮ್ಮ ಉಡುಗೊರೆ

ನಿಮ್ಮ ಆಗಮನವೇ ಉಡುಗೊರೆ, your presence is presents. ನಿಮ್ಮ ಆಶೀರ್ವಾದವೇ ಉಡುಗೊರೆ, presents in blessings only ಅಂತೇಲ್ಲಾ ಕಾರ್ಡ ಮ್ಯಾಲೆ ಪ್ರಿಂಟ ಮಾಡಿ ಮತ್ತು ಕಾರ್ಯಕ್ರಮದ ದಿವಸ ಎರಡು ಕೈಲೆ ಪ್ರೆಸೆಂಟ್ಸ್ ತೊಗೊಂಡ ಫೋಟೊ ಹೊಡಸಿಗೊಳೊ ಮಂದಿನ್ನ ನೀವ ನೋಡಿರಬಹುದು, ಅಲ್ಲಾ ಹಂಗ ಕೆಲವೊಬ್ಬರ strictly presents are prohibited ಅಂತ ಮಂದಿಮುಂದ ತೊಗೊಳಂಗೇಲಾ ಆ ಮಾತ ಬ್ಯಾರೆ. ಆದರ ನಾ ಈಗ ಇಲ್ಲೇ ಹೇಳ್ತಿರೋದು ಮಂದಿ ನಮಗ ಪ್ರೆಸೆಂಟ್ಸ್ ಕೊಡೊದರ ಬಗ್ಗೆ ಅಲ್ಲಾ, […]ಮಾಸಿದ ನೆನಪುಗಳು : ಕೀರ್ಲೋಸ್ಕರದಾಗ ಕೆಲಸ ಸಿಕ್ಕತ

ಹಂಗ ನಾ ದುಡಿಲಿಕ್ಕೆ ಚಾಲು ಮಾಡಿದ್ದ B.Sc ಫಸ್ಟ ಇಯರ ಇದ್ದಾಗಿಂದ. ಯಾವಾಗ ನಮ್ಮ ಮನ್ಯಾಗ ನಂಗ ಮೆರಿಟ್ ಮ್ಯಾಲೆ ಸೀಟ ಸಿಕ್ಕರು ವರ್ಷಕ್ಕ ಹತ್ತ ಸಾವಿರ ರೂಪಾಯಿ ಖರ್ಚ ಮಾಡಿ B.E ಕಲಸಲಿಕ್ಕೆ ಆಗಂಗಿಲ್ಲಾಂತ ಖಾತರಿ ಆತ ಆವಾಗ ನನಗ ಬಿ.ಎಸ್.ಸಿ ನ ಗತಿ ಅಂತ ಗ್ಯಾರಂಟೀ ಅನಸ್ತ. ಇನ್ನ ಈ B.Sc. ಕಲಿಬೇಕಂದರು ಸೈಡಗೆ ಏನರ ಮಾಡಬೇಕ ಇಲ್ಲಾಂದರ ಕಾಲೇಜ ಕಲಿಯೋದ ವಜ್ಜ ಆಗ್ತದ ಅಂತ ತಲ್ಯಾಗ ಹೊಕ್ಕತು. ಇನ್ನ ನನ್ನ ಲೇವೆಲ್ ಪಾರ್ಟ […]ನಿಂದ ಛೊಲೋ ಬಿಡವಾ.. ನಿಂಗ ಪೆನ್ಶನ್ ಬರತದ…..

ಮೊನ್ನೆ ಹಾನಗಲದಿಂದ ನನ್ನ ಹೆಂಡತಿ ಶಕ್ಕು ಮೌಶಿ ಬಂದಿದ್ಲು, ಹಂಗ ಅಕಿ ಹುಬ್ಬಳ್ಳಿಗೆ ಬಂದು ಹೋಗಿ ಮಾಡೇ ಮಾಡತಿರ್ತಾಳ. ಆದ್ರ ಇತ್ತೀಚಿಗೆ ಸ್ವಲ್ಪ ಬರೋದ ಕಡಿಮೆ ಆಗಿತ್ತ. ಬಂದೋಕಿನ ಸೀದಾ ನನ್ನ ಹೆಂಡತಿಗೆ “ಏನ್ವಾ, ಮಗನ ಮುಂಜ್ವಿ ತಗದಿ ಅಂತ, ಏನ ಹೇಳೆ ಇಲ್ಲಾ” ಅಂತ ಶುರು ಮಾಡೆ ಬಿಟ್ಟಳು. ಆತ ತೊಗೊ ಇನ್ನ ಇಕಿಗೆ ಸುದ್ದಿ ಮುಟ್ಟೇದ ಅಂದ್ರ ನಾವ ಒಂದ ಐವತ್ತ ಕಾರ್ಡ ಕಡಮಿ ಮಾಡಸಲಿಕ್ಕೆ ಅಡ್ಡಿಯಿಲ್ಲಾ ಅನಸ್ತ. ಏನಿಲ್ಲದ ಬಾಯಿ ಬಡಾಯಿ ಹೆಣ್ಣ […]ವೃದ್ಧಾಶ್ರಮಕ್ಕ ಒಂದ ಜಾಗಾ ಇದ್ದರ ನೋಡ

ಇದ ದೀಪಾವಳಿ ಟೈಮಿನಾಗಿನ ಸುದ್ದಿ. ನಮ್ಮ ದೋಸ್ತ ದೇಸಾಯಿ ದೀಪಾವಳಿಗೆ ಮನಿಗೆ ಫರಾಳಕ್ಕ ಕರದಿದ್ದಾ. ಅಂವಾ ಅಮೇರಿಕಾದಿಂದ ಮೂರ ವರ್ಷದ ಮ್ಯಾಲೆ ಬಂದಿದ್ದಾ ಹಿಂಗಾಗಿ ಎಲ್ಲಾ ದೋಸ್ತರಿಗೂ ಭೆಟ್ಟಿ ಆದಂಗ ಆಗತದ ಅಂತ ಕರದಿದ್ದಾ. ಅದರಾಗ ಯಾಕೋ ಈ ವರ್ಷ ದೀಪಾವಳಿಗೆ ನಮ್ಮ ಭಾಳ ಮಂದಿ NRI ದೋಸ್ತರ ತಮ್ಮ ತವರ ಮನಿಗೆ ಬಂದಿದ್ದರು. ಎಲ್ಲಾರೂ ಏಷ್ಟೋ ದಿವಸದ ಮ್ಯಾಲೆ ಸೇರಲಿಕತ್ತಿದ್ವಿ. ಆಸ್ಟ್ರೇಲಿಯಾದಿಂದ ಪವ್ಯಾ ಬಂದಿದ್ದ, ಲಂಡನ್ನಿಂದ ಜೋಶ್ಯಾ ಬಂದಿದ್ದ, ಅಮೇರಿಕಾದಿಂದ ಇನ್ನೊಬ್ಬ ದೋಸ್ತ ಶ್ರೀಪ್ಯಾ ಬಂದಿದ್ದಾ, […]ರ್ರೀ….ನಂದ ಅಕೌಂಟ ಕ್ಲೋಸ್ ಮಾಡರಿ

ಒಂದ ವಾರದಿಂದ ಯಾಕೋ ನನ್ನ ಹೆಂಡತಿ ನನಗ “ರ್ರಿ ಬರೋ ಮಾರ್ಚ ೩೧ಕ್ಕ ನಂದ ಅಕೌಂಟ ಕ್ಲೋಸ್ ಮಾಡಿ ಬಿಡರಿ” ಅಂತ ಗಂಟs ಬಿದ್ದಾಳ. ನಂಗ ಅಕಿ ಯಾ ಸುಡಗಾಡ ಅಕೌಂಟ ಬಗ್ಗೆ ಮಾತಡಲಿಕತ್ತಾಳ ಅಂತ ಗೊತ್ತಾಗವಲ್ತಾಗೇದ. ಹಂಗ ಅಕಿ ಎರಡ ಹಡದ ಮ್ಯಾಲೆ ಅಕಿ ಅಕೌಂಟ ನಾ ಅಕಿ ತವರಮನಿ ಖರ್ಚನಾಗ ಕ್ಲೋಸ ಮಾಡೆ ಮಾಡೇನಿ ಇನ್ನ ಮತ್ತ ಯಾವದ ಇಕಿದ ಅಕೌಂಟ ಒಪೆನ ಅದಪಾ ಕ್ಲೋಸ ಮಾಡಲಿಕ್ಕೆ ಅಂತ ನಾ ವಿಚಾರ ಮಾಡಲಿಕತ್ತೇನಿ. ಅಲ್ಲಾ, […]ಚಿತ್ರ ಸಂತೆಯಲ್ಲೊಂದು ವಿಚಿತ್ರ ಸಂತೆ….

ಮೊನ್ನೆ ಸಂಡೇ ಮಾರ್ಚ್ ೩ಕ್ಕ ನಮ್ಮಜ್ಜಿ ಜನ್ಮಶತಮಾನೋತ್ಸವ ಸಂಬಂಧ ಹುಬ್ಬಳ್ಳಿ ಒಳಗ ಚಿತ್ರಸಂತೆ ಇತ್ತ. ಏನ ಇವರಜ್ಜಿ ಅಷ್ಟ ಫೇಮಸ್ ಇದ್ಲೋ ಇಲ್ಲಾ ರವಿ ವರ್ಮನ ಅಬಚಿನೋ ಅಕಿ ಸಂಬಂಧ ಚಿತ್ರಸಂತೆ ಮಾಡಲಿಕ್ಕೆ ಅಂತ ಅನಬ್ಯಾಡರಿ. ನಮ್ಮಜ್ಜಿ ನಂಗಿಷ್ಟ ಅಜ್ಜಿ ಅಲ್ಲಾ, ಅಕಿ ಇಡಿ ಹುಬ್ಬಳ್ಳಿ ಮಂದಿಗೆ ಅಜ್ಜಿ. ನಮ್ಮಜ್ಜಿ – ಗಂಗುಬಾಯಿ ಹಾನಗಲ್. ಇನ್ನ ನಮ್ಮಜ್ಜಿ ಸಂಬಂಧ ಈ ಚಿತ್ರಸಂತೆ ಅಂತ ನಾನು ಇದರಾಗ ಭಾಗವಹಿಸಿದ್ದೆ. ಹಂಗ ನಾ ಒಂದ ಎಂಟ-ಹತ್ತ ವರ್ಷದಿಂದ ಆವಾಗ ಇವಾಗ […]ವಕ್ಕ್ಯಾನ ವ್ಯಾಲೆಂಟೇನ್ಸ್ ವೀಕ್….

ನಾ B.Sc ಕಲಿಬೇಕಾರ ನನ್ನ ಜೊತಿ ವಕ್ಕುಂದ ಅಂತ ಒಬ್ಬ ದೋಸ್ತ ಇದ್ದಾ. ಹಂಗ ವಯಸ್ಸಿನಾಗ ನನ್ನ ಕಿಂತಾ ಎರಡ ಮೂರ ವರ್ಷ ದೊಡ್ಡಂವ, ಆದರ SSLC ಒಳಗ,PUC IIರಾಗ ಲಗಾ ಹೊಡದ B.Sc ಒಳಗ ನನ್ನ ಕ್ಲಾಸಮೇಟ್ ಆಗಿದ್ದಾ. ಅಂವಂಗೇನ ಸಾಲಿ ಕಲತ ಶಾಣ್ಯಾ ಆಗಬೇಕಂತ ಇದ್ದಿದ್ದಿಲ್ಲಾ ಮತ್ತ ಆ ಕ್ಯಾಪಾಸಿಟಿನೂ ಅವಂಗ ಇರಲಿಲ್ಲ. ಅವರದೊಂದ ಚಹಾ ಪುಡಿ ಅಂಗಡಿ ಇತ್ತ, ಹಿಂಗಾಗಿ ಅಂವಾ ಕಾಲೇಜಿಗೆ ಹೋಗಲಿಲ್ಲಾ ಅಂದರ ಮನ್ಯಾಗ ಚಹಾ ಪುಡಿ ಪಟ್ಣಾ ಕಟ್ಟಲಿಕ್ಕೆ […]ಎಲ್ಲೆರ ಇರು, ಹೆಂಗರ ಇರು…ಒಟ್ಟ ಫೇಸಬುಕ್ಕಿನಾಗ ಇರು…

“ಲೇ, ನಿನ್ನೌನ. ಎಲ್ಲಿ ಇದ್ದೀಲೇ? ಏನ ಸುದ್ದೀನ ಇಲ್ಲಲಾ? ಇದಿಯೋ ಸತ್ತೀಯೋ” ಅಂತ ನಿನ್ನೆ ನಮ್ಮ ರಾಘ್ಯಾ ಬೆಂಗಳೂರಿಂದ ಫೋನ ಮಾಡಿದ್ದಾ. ಅವನೌನ ಇವಂಗ ಎಲ್ಲಾ ಬಿಟ್ಟ ಇವತ್ತ ಯಾಕ ನಂದ ನೆನಪಾತಪಾ? ಈ ಮಗಾ ಲಾಸ್ಟ ನನಗ ಫೋನ ಮಾಡಿದ್ದ ಆರ ತಿಂಗಳ ಹಿಂದ, ಭೆಟ್ಟಿ ಆಗಲಾರದಂತೂ ಎರಡ ವರ್ಷದ ಮ್ಯಾಲೆ ಆತ ಹಂತಾವ ಒಮ್ಮಿಂದೊಮ್ಮಿಲೆ ಏನ ನಾವ ದಿವಸಾ ಒಬ್ಬರಿಗೊಬ್ಬರ ಭೆಟ್ಟಿ ಆಗೊರಗತೆ ಏನ ಸುದ್ದೀನ ಇಲ್ಲಾ, ಇದ್ದೇನೋ ಇಲ್ಲೊ ಅಂತ ಕೇಳಲಿಕತ್ತಾನಲಾ ಅಂತ […]“ಒಂದು ಕೆಟ್ಟ ಕನಸು – ದೇವಯಾನಿ”

ನಿನ್ನೆ ರಾತ್ರಿ ನಾ ಬಂದಾಗ ಎಷ್ಟ ಹೊಡದಿತ್ತೊ ಆ ಭಗವಂತಗ ಗೊತ್ತ, ಲಾಸ್ಟ ನಾ ಬಾರನಾಗ ಟೈಮ ನೋಡ್ಕೊಂಡಾಗ ೧೨.೨೦ ಆಗಿತ್ತ, ನಾ ನಮ್ಮ ದೋಸ್ತರಿಗೆ ಹೋಯ್ಕೊಂಡೆ “ಸಾಕ ಮುಗಸರಲೇ ನಿಮ್ಮೌರ, ಮನ್ಯಾಗ ನನ್ನ ಹೆಂಡತಿ ನನ್ನ ಹೆಸರಿಲಿ ಹೋಯ್ಕೋತಿರ್ತಾಳ” ಅಂತ ಹೇಳಿದರು ಅವರೇನ ಕೇಳಲಿಲ್ಲಾ. ” ಲೇ, ಹೆಂಡಂದರ ಇರೋದ ಗಂಡಂದರ ಹೆಸರಲೇ ಹೋಯ್ಕೊಳ್ಳಿಕ್ಕೆ. ನಾವ ಜೀವಂತ ಇದ್ದಾಗೂ ಹೋಯ್ಕೋತಾರ , ಸತ್ತರು ಹೋಯ್ಕೋತಾರ. ಇನ್ನ ಅವರ ನಮ್ಮ ಹೆಸರಲೇ ಹೋಯ್ಕೊಳಿಲ್ಲಾ ಅಂದರ ಬ್ಯಾರೆ ಯಾರ […]