ಸಾರ್ಥಕ ಮನೆಯ ಲಕ್ಷಣಗಳು…..

ಧಾರವಾಡದ ಹೊಸಾ ಎಲ್ಲಾಪುರದಾಗ ನಮ್ಮ ಅಜ್ಜಿ ಮಾನ್ಯಾಗ ಒಂದ ಹಳೇ ಕಟ್ಟ ಹಾಕಸಿದ್ದ ಫೋಟೊ ಇತ್ತ. ಅಗದಿ ಹಳೇದ, ನಮ್ಮ ಅಜ್ಜ ಶಿಂದಗಿ ಮಾಸ್ತರ ಜಿ.ಬಿ.ಟಿ.ಸಿ. ಟ್ರೇನಿಂಗ ಕಾಲೇಜಿನಾಗ ಹುಡಗರಿಗೆ ಕಾರ್ಪೆಂಟರಕಿ ಕಲಸತಿದ್ದಾ ಹಿಂಗಾಗಿ ಅದನ್ನ ತಾನ ಸ್ವಂತ ತನ್ನ ಕೈಲೆ ಕಟ್ಟಹಾಕಿದ್ದನಂತ. ಹಂಗಂತ ಅದರಾಗ ನಮ್ಮಜ್ಜಿಗೊಳ ಫೋಟೊ ಏನ ಇರಲಿಲ್ಲ ಮತ್ತ. ಅದರಾಗ ಛಂದಾಗಿ ದೊಡ್ಡ ದೊಡ್ಡ ಆರ್ಟಿಸ್ಟಿಕ್ ಅಕ್ಷರದಲೆ, ಅದು ನಮ್ಮಜ್ಜನ ಹ್ಯಾಂಡರೈಟಿಂಗಲೆ ಬರದಿದ್ದ ಐದ ಅಚ್ಚ ಕನ್ನಡದ ಲೈನ ಇದ್ದವು. ಮ್ಯಾಲೆ ಹೆಡ್ಡಿಂಗ […]ಕೆಂಡಸಂಪಿಗೆ ಕಂಡ್ರ ಉರದ ಬಿಳ್ತಾಳ….

ಈ ಕೆಂಡಸಂಪಿಗೆ ಅಂದ್ರ ಏನ ಅಂತ ನನ್ನ ಹೆಂಡತಿಗೆ ನಾ ಒಂದ್ಯಾರಡ ಲೇಖನಾ ಬರೇಯೊತನಕಾ ಗೊತ್ತ ಇದ್ದಿದ್ದಿಲ್ಲಾ, ಅಲ್ಲಾ ಹಂಗ ನನಗೂ ಬರೇಯೋಕಿಂತ ಮುಂಚೆ ಗೊತ್ತಿದ್ದಿಲ್ಲಾ ಆ ಮಾತ ಬ್ಯಾರೆ. ಆದ್ರ ನಾ ಇತ್ತೀಚಿಗೆ ಕೆಂಡಸಂಪಿಗೆ ಜೊತಿ ಹೊತ್ತ ಕಳದಷ್ಟ ನನ್ನ ಹೆಂಡತಿ-ಮಕ್ಕಳ ಜೊತಿನು ಕಳೆಯಂಗಿಲ್ಲಾ ಹಿಂಗಾಗಿ ಅಕಿ ಕೆಂಡಸಂಪಿಗೆ ಕಂಡ್ರ ಉರದ ಬೀಳ್ತಾಳ. ಅಲ್ಲಾ, ಬರೆ ನಾ ಅಕಿ ಕಡೆ ಲಕ್ಷ ಕೊಡಂಗಿಲ್ಲಾ ಅಂತ ಇಷ್ಟs ಅಲ್ಲಾ, ಆದರ ನಾ ಅದರಾಗ ಅಕಿ ಬಗ್ಗೆ ಜಾಸ್ತಿ […]ರಿದ್ದಿ,ಮೈಲಗಿ,ಮಡಿ ಕಡಿಗೇ ಕಡಿಗಿ…………

ಇದ ಒಂದ ಮೂರ ನಾಲ್ಕ ವರ್ಷದ ಹಿಂದಿನ ಮಾತ. ನಮ್ಮ ದೋಸ್ತ ಒಬ್ಬಂವಾ ಹಡದಿದ್ದಾ. ದೋಸ್ತ ಅಂದರ ದೋಸ್ತನ ಅಲ್ಲಾ, ದೋಸ್ತನ ಹೆಂಡತಿ ಹಡದಿದ್ಲು. ನಾವ ನಾಲ್ಕೈದ ಮಂದಿ ದೋಸ್ತರ ಸೇರಿ ದಾವಾಖಾನಿಗೆ ಕೂಸಿನ ನೋಡ್ಕಂಡ ಬರಲಿಕ್ಕೆ ಹೋಗಿದ್ವಿ. ನಮ್ಮ ದೋಸ್ತ ಒಂದ ಹೆಣ್ಣ ಹಡದ ಆರ-ಏಳ ವರ್ಷದ ಮ್ಯಾಲೆ ಮತ್ತ ಮತ್ತ ಪ್ರಯತ್ನ ಮಾಡಿ ಈ ಸರತೆ ಗಂಡ ಗ್ಯಾರಂಟೀ ಆಗತದ ಅಂತ ಗ್ಯಾರಂಟೀ ಆದಮ್ಯಾಲೆ ಹಡದಿದ್ದಾ. ದೇವರ ದೊಡ್ಡಂವಾ ಅವನ ವಿಜ್ಞಾನದ ಮ್ಯಾಲಿನ ನಂಬಿಕಿ […]ಮಾಸಿದ ನೆನೆಪುಗಳು – ಹಳೆ ಹನಿಮೂನ

ಇವತ್ತಿಗೆ ನನ್ನ ಮದುವಿ ಆಗಿ ಕರೆಕ್ಟ ಹನ್ನೇರಡ ವರ್ಷ ಆತ. ಹಂಗ ಈ ಹನ್ನೇರಡ ವರ್ಷದಾಗ ನಾ ಎಷ್ಟ ಸಾಧಸೇನಿ, ಎಷ್ಟ ಸವದೇನ ಅದ ನನಗ ಗೊತ್ತ. ಆದ್ರೂ ಹನ್ನೇರಡ ವರ್ಷ ಹೆಂಗ ಹೋತ ಗೊತ್ತಾಗಲಿಲ್ಲಾ. ನಾ ವರ್ಷಾ ಅನಿವರ್ಸರಿ ಮುಂದ ನನ್ನ ಮದುವಿದ ಮತ್ತ ಹನಿಮೂನದ್ದ ಅಲ್ಬಮ ತಗದ ನೋಡಿ ಧೂಳಾ ಝಾಡಿಸಿ ಮತ್ತ ಕಪಾಟನಾಗ ಇಡತೇನಿ. ಹಂಗ ಹನ್ನೇರಡ ವರ್ಷದಿಂದ ಹೆಂಡ್ತಿನ್ನ ಇಷ್ಟ ಅಲ್ಲಾ ಅಲ್ಬಮ್ ಕಾಯಕೊಂಡ ಬಂದೇನಿ ಆ ಮಾತ ಬ್ಯಾರೆ. ಮೊನ್ನೆ […]ನನ್ನ ಸಾಧನೇಯ ‘ಸಮಾವೇಶ’…

ಇದೇನಪಾ ಸಾಧನೇಯ ಸಮಾವೇಶ, ಇಂವಾ ಏನ್ ಜೀವನದಾಗ ಹಂತಾದ ಸಾಧಸಿದಾ ಅಂತ ಸಮಾವೇಶ ಮಾಡ್ಕೋಳಿಕ್ಕೆ ಹೊಂಟಾನ ಅಂತ ಗಾಬರಿ ಆಗಬ್ಯಾಡರಿ. ನಾ ಹಂತಾದ ಏನ್ ಸಾಧಿಸಿಲ್ಲಾ, ಹಂಗ ಸಾಧಸಲಿಕ್ಕು ಹೋಗಂಗಿಲ್ಲಾ. ನನ್ನ ಕಡೆ ಆಗಂಗನ ಇಲ್ಲಾ, ನನ್ನ ಹೆಂಡತಿ ಸಾಧಸಲಿಕ್ಕ ಬಿಟ್ಟರಲಾ ನಾ ಏನರ ಸಾಧಸೋದು? ಹಂಗ ಜೀವನದಾಗ ಸಾಧಸೇ ತೀರಬೇಕು ಅಂದರ ಹೆಂಡತಿನ್ನ ಬಿಡಬೇಕಾಗತದ. ಕಟಗೊಂಡ ಹೆಂಡತಿನ್ನ ಬಿಡೋದು ಒಂದ ದೊಡ್ಡ ಸಾಧನೆನ ಆದರ ಸದ್ಯೇಕ ಅದೇನ ಬ್ಯಾಡ. ಇಷ್ಟ ದಿವಸ ಛಂದಾಗಿ ಹೆಂಡತಿ ಜೋತಿ […]ಹತ್ತ ದಾಸಿಯರಕಿಂತಾ ಒಬ್ಬ ರಾಜ ನರ್ತಕಿ ಛಲೊ..

‘ಹತ್ತ ದಾಸಿಯರನ ಇಟಗೊಳೊದ ಕಿಂತಾ ಒಬ್ಬ ರಾಜ ನರ್ತಕಿನ ಇಟಗೋಬೇಕು’ ಅಂತ ಒಂದ ಗಾದಿ ಮಾತ ಅದ, ಕೇಳಿರೇನ? ಅಲ್ಲಾ, ಹಿಂತಾವೇಲ್ಲಾ ನೀನ ಕೇಳಿರತಿ ಇಲ್ಲಾ ಹುಟ್ಟಿಸಿರತಿ ತೊಗೊ ಮಗನ ಅಂತ ಅನಬ್ಯಾಡರಿ. ಖರೇನ ಇದ ಒಂದ ಗಾದಿ ಮಾತ, ನಾ ಹುಟ್ಟಿಸಿದ್ದೇನ ಅಲ್ಲಾ. ಹಂಗಂತ ನಾ ಏನ ಯಾರನ ಇಟಗೊಳ್ಳಿಕ್ಕೆ ಹೊಂಟಿಲ್ಲ ಮತ್ತ, ಕಟಗೊಂಡಿದ್ದ ಒಂದನ್ನ ಸಂಭಾಳಸೋದ ರಗಡ ಆಗೇದ ಮತ್ತ ಇನ್ನೇನ ತಲಿ ಇಟಗೋತಿರಿ. ಹಂಗ ಈ ಹೆಡ್ಡಿಂಗ ನೋಡಿ ಏನ ಭಾರಿ ಟಾಪಿಕ್ […]ದೇಸಾಯರ sms ಪಂಚಾಂಗ ಬಂತ.

ತಿಂಗಳದ ಒಂದನೇ ವಾರ ಯಾವಗಲೂ ಭಾಳ ಟೆನ್ಶನ್ ವಾರ. ನಳದ ಬಿಲ್ಲ, ಕರೆಂಟ ಬಿಲ್ಲ, ಹಾಲಿಂದ, ಕಿರಾಣಿದ ಎಲ್ಲಾ ಸುಡಗಾಡ ಬಿಲ್ಲ ಬರೋದ ಒಂದನೇ ವಾರದಾಗ. ಹಂಗ ಪ್ರತಿ ಬಿಲ್ಲ ನೋಡಿದಾಗ ಒಮ್ಮೆ ನಾ ಬಿ.ಪಿ ಏರಿಸಿಗೊಂಡ ನಮ್ಮವ್ವಗ ‘ನೋಡಿ ಖರ್ಚ ಮಾಡವಾ, ತಿಳಿತದ ಇಲ್ಲೊ ಮನ್ಯಾಗ ದುಡಿಯೋಂವ ನಾ ಒಬ್ಬನ’ ಅಂತ ಹೇಳೋದು ಪ್ರತಿ ತಿಂಗಳ ನಡದಿರತದ. ಹಂತಾದರಾಗ ಒಂದಿಷ್ಟ ಪೇಮೆಂಟ ರಿಮೈಂಡರ sms ಒಂದನೇ ವಾರದಾಗ ಬರತಾವ, ನಿಂಬದ ಈ ತಿಂಗಳದ credit card […]ಲೇ, ಯಾವದರ ಸಸ್ತಾದಾಗ ಹೆಂಡ್ತಿ ಇದ್ದರ ನೋಡ

“ಏ, ಏಳ್, ಏಳುವರಿ ಆಗಲಿಕ್ಕೆ ಬಂತ ಇನ್ನು ಬಿದಕೊಂಡಿಯಲ್ಲಾ. ಇವತ್ತ ಸೋಮವಾರ, ಆ ಹುಡುಗರನ ಎಬಿಸಿ ತಯಾರಮಾಡಿ ಸಾಲಿಗೆ ಬಿಟ್ಟ ನೀ ಆಪೀಸಿಗೆ ಹೋಗಬೇಕು. ಆಮ್ಯಾಲೆ ಲೇಟ ಆದರ ನಾ ನಿಂಗ ನಾಷ್ಟಾ ಇಲ್ಲದ ಹಂಗ ಕಳಸ್ತೇನ್ ಮತ್ತ?” ಅಂತ ನನ್ನ ಹೆಂಡತಿ ಮೊನ್ನೆ ಮುಂಜಾನೆ ಸುಪ್ರಭಾತ ಶುರು ಮಾಡಿದ್ಲು. ನಂಗ ದಿವಸಾ ಅಕಿದ ಈ ಚೀರ ಧ್ವನಿ ಅಲಾರಾಮ್ ಇಲ್ಲದ ಏಳಲಿಕ್ಕೆ ಆಗಂಗಿಲ್ಲಾ, ರೂಡಿ ಬಿದ್ದ ಹೋಗೇದ. ಹೆಂಡ್ತಿ ಹತ್ತ ಸರತೆ ಹೋಯ್ಕೊಂಡ ಚಾದರ ಜೊತಿ […]ಕಾಕು ಕೋಮಾದಾಗ ಹೋದ್ಲು

ಮುಂಜಾನೆ ಹತ್ತುವರಿ ಹನ್ನೊಂದ ಆಗಿತ್ತ ನಮ್ಮ ಕಾಕನ ಮಗಾ ತಮ್ಮಾ ಫೋನ್ ಮಾಡಿದಾ ” ಪ್ರಶಾಂತ, ಅಮ್ಮ ಯಾಕೋ ಇನ್ನೂ ಎದ್ದೇ ಇಲ್ಲೋ, ಎಷ್ಟ ಒದರಿದರು ಏಳವಳ್ಳು, ಹಂಗ ಉಸಿರಾಡಲಿಕತ್ತಾಳ ಆದರ ನೀರ ಗುಜ್ಜಿದರು ಎಚ್ಚರ ಆಗವಲ್ತು” ಅಂದಾ. ” ಅಲ್ಲೇ ಯಾವದರ ಡಾಕ್ಟರಗೆ ಕರದ ತೊರಸಲೇ, ನಿನ್ನೆ ಆಪರೇಶನ್ ಮಾಡಸ್ಬೇಕಾರ ಕೊಟ್ಟದ್ದ ಅನೇಸ್ಥೇಶಿಯಾದ ಇಫೆಕ್ಟ್ ಇರಬಹುದು ತೊಗೊ ” ಅಂದೆ. ನಿನ್ನೆ ಸಂಜಿ ಮುಂದ ಅಂವಾ ಅವರವ್ವಗ ಡೈಲಸಿಸಿ ಮಾಡಸೊ ಸಂಬಂಧ ಒಂದ ಸಣ್ಣ ಆಪರೇಶನ […]ಮಾಸಿದ ನೆನಪುಗಳು….’ನೋಡಿದ್ದ ಒಂದ ಕನ್ಯಾ’

ಈ ಪ್ರಹಸನ ನನ್ನ ಜೀವನದಾಗ ನಡೆದ ಖರೆ ಘಟನೆಗಳನ್ನ ಒಳಗೊಂಡಿದ್ದ, ಅಂದರ ಇಷ್ಟ ದಿವಸ ನಾ ಸುಳ್ಳ-ಸುಳ್ಳ ಘಟನೆಗಳನ್ನ ಬರಿತಿದ್ದೆ ಅಂತ ಅನ್ಕೋಬ್ಯಾಡರಿ, ಅವು ಖರೇನ ಆದ್ರ ಇದು ಒಂಥರಾ ನನ್ನ ಆಟೊಬೈಯೊಗ್ರಾಫಿ ಇದ್ದಂಗ, ಹಿಂದ ನಡೆದ ಹೋದ, ಮಾಸಿದ ಆದ್ರ ಹಳಸಲಾರದ ಪ್ರಹಸನ…….. ಇದು 95-96 ರಾಗಿನ ಮಾತ, ಆವಾಗ ನಂಗ ದಣೇಯೀನ 22 ತುಂಬಿ 23ರಾಗ ಬಿದ್ದಿತ್ತು. ಒಂದ ಸರತೆ ಊಟಕ್ಕ ಕೂತಾಗ ನಮ್ಮಪ್ಪ ಸಡನ್ನಾಗಿ ಮಾತಾಡ್ತ-ಮಾತಾಡ್ತ ನಮ್ಮವ್ವನ ಮುಂದ “ನಿನ್ನ ಮಗನ ಮದುವಿ […]parents ದೇವೋ ಭವ !!!

ಮೊನ್ನೆ ಸಂಡೆ ಮುಂಜಾನೆ ನಸೀಕಲೇ ನಮ್ಮ ವಿನ್ಯಾ ಆಸ್ಟ್ರೇಲಿಯಾದಿಂದ ಫೊನ್ ಮಾಡಿದಾ, ಅದು ಲ್ಯಾಂಡ ಲೈನಿಗೆ. ಅದ ಅಗದಿ ಅಲಾರಾಮ್ ಆದೊರಗತೆ ಹೊಡ್ಕೊಂಡತ, ನಾವು ಗಾಬರಿ ಆಗಿ ಇಡಿ ಮನಿ ಮಂದೇಲ್ಲಾ ಎದ್ದ ಬಿಟ್ಟವಿ. ಇವತ್ತ ಸಂಡೆ ಆರಾಮ ಎದ್ದರಾತ ಅಂತ ಬಿದ್ಕೋಂಡಿದ್ದೆ, ಈ ಸುಡಗಾಡ ಫೋನ್ ಎಬ್ಬಿಸಿ ಬಿಡ್ತು. ಅಲ್ಲಾ ಅವನೌನ ಇಂವಾ ಎಲ್ಲಾ ಬಿಟ್ಟ ಹೊತ್ತಿಲ್ಲದ ಹೊತ್ತಿನಾಗ ಅದು ಮೊಬೈಲ ಬಿಟ್ಟ ಲ್ಯಾಂಡ ಲೈನಗೆ ಯಾಕ ಫೋನ ಮಾಡಿದಾ ಅಂತ ನೋಡಿದರ, ನಡರಾತ್ರ್ಯಾಗ ನಂದ […]ಹೆಂಡ್ತಿ ಹಾದಿ ತಪ್ಪಿದರ, ತವರ ಮನಿ

ಹೆಂಡ್ತಿ ಹಾದಿ ತಪ್ಪಿದರ ಅಂದರ ಹಂಗ ಹಾದಿ ತಪ್ಪೋದಲ್ಲಾ ಮತ್ತ, ನಿವೇಲ್ಲರ ಅಪಾರ್ಥ ಮಾಡ್ಕೋಂಡಿರಿ, ಹೆಂಡ್ತಿ ಹೊರಗ ಹೋದೊಕಿ ದಾರಿ ತಪ್ಪಿ ಮನಿಗೆ ಬರಲಿಲ್ಲಾ ಅಂದರ, ಇಲ್ಲಾ ನಾವ ಮನಿಗೆ ಬಂದಾಗ ಅಕಿ ಮನ್ಯಾಗ ಕಾಣಲಿಲ್ಲಾ ಅಂದರ ನಾವ ಭಾಳ ತಲಿಕೆಡಸಿಗೊಂಡ ಚಿಂತಿ ಮಾಡೋ ಅವಶ್ಯಕತೆ ಏನ ಇಲ್ಲಾ, ಅಕಿ ತವರ ಮನಿಗೆ ಹೋಗಿರತಾಳ ಅಂತ ಗ್ಯಾರಂಟಿ ಅನ್ನೋ ಅರ್ಥದಾಗ ನಾ ಬರದಿದ್ದ ಇಷ್ಟ. ಒಂಥರಾ ಈ ‘ಕತ್ತಿ ಹಾದಿ ತಪ್ಪಿದರ ಹಾಳ ಗ್ವಾಡಿ’ ಅಂತಾರಲಾ ಹಂಗ […]ಮಾರ್ಕಂಡೇರಾಯರು ಮುಕ್ತಿ ಹೊಂದಿದರು…….

ಈ ಮಾತಿಗೆ ಒಂದ ದಿಡ ತಿಂಗಳ ಆಗಲಿಕ್ಕೆ ಬಂತು. ನಮ್ಮ ಮಾಳಮಡ್ಡಿ ಶತಾಯುಷಿ ಮಾರ್ಕಂಡೇರಾಯರು ಜಡ್ಡ ಇಲ್ಲಾ ಜಾಪತ್ರಿಲ್ಲಾ, ಏನೋ ಬಚ್ಚಲಾದಾಗ ನಡರಾತ್ರ್ಯಾಗ ಕೈ ಕಾಲ ತೊಕ್ಕೊಳ್ಳಿಕ್ಕೆ ಹೋದಾಗ ಕಾಲ ಜಾರಿ ಬಿದ್ದರಂತ ಒಂದ ದಿವಸ ದಾವಾಖಾನಿಗೆ ಅಡ್ಮಿಟ್ ಆದೋರ ಮತ್ತ ವಾಪಸ ಮನಿಗೆ ಬರಲೇ ಇಲ್ಲಾ. ತಲಿಗೆ ಪೆಟ್ಟ ಹತ್ತಿದ್ದ ಒಂದ ನೆವಾ ಸಾಕಾಗಿತ್ತ, ಮ್ಯಾಲೆ ಹೋಗಿ ಬಿಟ್ಟರು. ಹಂಗ ಈ ವಯಸ್ಸಾದವರು ಬಚ್ಚಲ ಮನ್ಯಾಗ ಬಿದ್ದದ್ದ ನೆವಾ ಮಾಡ್ಕೋಂಡ ಸಾಯೋದ ಇತ್ತೀಚಿಗೆ ಭಾಳ ಆಗೇದ. […]ಹನಮ್ಯಾ ಹೊಚ್ಚಲಾ ದಾಟಿದಾ

ನಿನ್ನೆ ಬೆಳಿಗ್ಗೆ ಏಳೋ ಪುರಸತ್ತ ಇಲ್ಲದ ನಮ್ಮ ಕೌಸ್ತ್ಯಾನ ಫೋನ್ ಬಂತ, ಇಂವಾ ಹಂಗ ಇಷ್ಟ ಲಗೂ ಎದ್ದ ಫೋನ್ ಮಾಡೋಂವ ಅಲ್ಲಾ, ಯಾಕ ಮಾಡಿದಾ ಪಾ, ಯಾರರ ಗೊಟಕ ಅಂದ-ಗಿಂದಾರಿನ ಅಂತ ವಿಚಾರ ಮಾಡ್ಕೋತ ಫೋನ ಎತ್ತಿದೆ. ಅಂವಾ ಒಂದ ನಾಲ್ಕ ಮಾತಾಡಿ, ‘ನಿಮ್ಮ ಒಬ್ಬ ಹಳೆ ದೋಸ್ತ ಬಂದಾನ ಮಾತಾಡ್ತಾನಂತ ನೋಡ’ ಅಂತ ಫೋನ್ ಯಾರೊ ಒಂದ ಅನ್ನೌನ ಮನುಷ್ಯಾನ ಕೈಯಾಗ ಕೊಟ್ಟಾ, ಅಂವಾ ಅತ್ತಲಾಗಿಂದ “ಏನಪಾ, ರಾಜಾ ಹೆಂಗಿದ್ದಿ ,ಗೊರ್ತ ಹಿಡದಿ ಏನ್ […]ನಳಾ ಹೋತ ಇನ್ನರ ಯರಕೋಳೊದ ಮುಗಸ……

ಮೊನ್ನೆ ನಮ್ಮ ವೈಶಾಲಿ ಹೆಗಡೆಯವರ ‘ಉರ್ಮಿಳಾನ ಸ್ನಾನ ಕಡಿಕೂ ಮುಗಿತೊ ಇಲ್ಲೊ..?’ ಅನ್ನೊ ಬರಹ ಓದಿ ನನಗ ನನ್ನ ಹೆಂಡತಿ ಸ್ನಾನದ್ದ ಪುರಾಣಗಳು ನೆನಪಾದವು. ಹಂಗ ರಾಮಾಯಣದಾಗ ಲಕ್ಷ್ಮಣ ವನವಾಸಕ್ಕ ತನ್ನ ಹೆಂಡತಿ ಉರ್ಮಿಳಾನ್ನ ಬಿಟ್ಟ ಹೋದಾಗ ಆಕಿ ಸಿಟ್ಟಿಗೆದ್ದ ೧೪ ವರ್ಷಗಟ್ಟಲೆ ಬಚ್ಚಲದಾಗ ಇದ್ದಳೊ ಇಲ್ಲಾ ಅಂವಾ ಹೋಗಬೇಕಾರ ‘ ಆಕಿ ಬಚ್ಚಲದಾಗ ಇದ್ದಾಳ, ಇನ್ನ ಅಕಿ ಹೊರಗ ಬರೋದ ಲೇಟಾಗತದ. ಅಷ್ಟ ಕಾಯಲಿಕ್ಕ ಆಗಂಗಿಲ್ಲಾ, ವನವಾಸಕ್ಕ ಅರ್ಜೆಂಟ್ ಹೋಗಬೇಕು’ ಅಂತ ಆಕಿಗೆ ಹೇಳದ ವನವಾಸಕ್ಕ […]