ಭಿಡೆ ಬಿಟ್ಟ ಬರದಿದ್ದೆ ಬರಹ.

ಇದ ಏನ್ ಪ್ರಹಸನ ಅಲ್ಲ ಮತ್ತ, ಇದು ನಾ ಈ ಪುಸ್ತಕದಾಗ ಬರದದ್ದ ಪ್ರಹಸನಗಳ ಪ್ರಸವ ವೇದನೆಯ ಅನುಭವಗಳ ಒಂದ ಲೇಖನ. ನನ್ನ ಜೀವನದಾಗ ನಾ ಕನ್ನಡದಾಗ ಬರಿತೇನಿ ಅಂತ ಎಂದೂ ಅನ್ಕೋಂಡಿದ್ದಿಲ್ಲ ಆದರೂ ಇವತ್ತ ಒಂದ ಮಾಟನ ಛಂದನ ಪುಸ್ತಕಾ ಆಗೋ ಅಷ್ಟ ಲೇಖನ ಕನ್ನಡದಾಗ ಬರದೆ, ನೀವು ಓದಿದಿರಿ, ಬರದದ್ದ ಅಂತೂ ನನಗ ಖುಷಿ ಕೊಟ್ಟದ, ಓದಿದವರು ನೀವು ಖುಷಿ ಪಟ್ಟಿರಿ ಅಂತ ಅಂದ್ಕೊಂಡೇನಿ. ಹಂಗ ನೋಡಿದ್ರ ನಾ ಬರಿಲಿಕ್ಕೆ ಶುರುಮಾಡಿದ್ದ ಭಾರಿ ಆಕಸ್ಮಿಕ. […]ಫೆಬ್ರುವರಿ ೨೯ – ಪ್ರಪೋಸಲ್ ಡೆ

ಮುಂಜ ಮುಂಜಾನೆ ಎದ್ದ ತಯಾರ ಆಗೋ ಹೊತ್ತಿನಾಗ ನನ್ನ ಮೊಬೈಲ್ ಹೊಯ್ಕೊಳ್ಳಿಕತ್ತ, ಇನ್ನ ನಾ ಮೂಬೈಲ್ ಎತ್ತಿ ಮಾತಾಡಿದರ ನನಗ ಆಫೀಸಿಗೆ ಹೊತ್ತಾಗತದ ಆಂತ ನನ್ನ ಹೆಂಡತಿಗೆ ” ಲೇ ಫೋನ್ ಎತ್ತ, ಅದು ಒದರೋದ ಕೇಳಸಂಗಿಲ್ಲೇನ ” ಅಂತ ನಾ ಒದರಿ ಬಾಥರೂಮಗೆ ಹೋದೆ. ಮೊದ್ಲ ನಾವ ಏಳೋದ ನಮಗ ಏಳೂ ಹನ್ನೆರಡಾಣೆ ಆಗಿರ್ತದ.ಇನ್ನ ಎಂಟು ಐವತ್ತರೊಳಗ ರೆಡಿ ಆಗಿ ಆಫೀಸಿಗೆ ಹೊಗಲಿಕ್ಕೆ ಗಡಿಬಿಡಿಲೆ ತಯಾರಾಗೊ ಹೊತ್ತಿನಾಗ ಯಾರರ ಫೋನ್ ಮಾಡಿಬಿಟ್ಟರ ಮುಗದ ಹೋತು, ನಾ […]ಗಂಡಾ ಅನ್ನೋ ರಂಡೆಗಂಡಾ…….

ಮೂನ್ನೆ ಶಿರಡಿ ಪ್ರಸಾದ ಕೊಟ್ಟ ಬರೋಣಂತ ನಮ್ಮ ಕಿಲ್ಲೇದಾಗಿನ ದೋಸ್ತ ಜೋಶ್ಯಾನ ಮನಿಗೆ ಹೋಗಿದ್ದೆ, ಹಂಗ ನನಗ ತೀರ್ಥ ಯಾತ್ರಾಕ್ಕ ಹೋಗಿ ಬಂದಾಗ ಒಮ್ಮೆ ಊರ ಮಂದಿಗೆಲ್ಲಾ ಪ್ರಸಾದ ಹಂಚೊ ಚಟಾ. ಅದರಾಗ ನಾ ಶಿರಡಿಗೆ ಹೊಂಟೇನಿ ಅನ್ನೋದ ಜೋಶ್ಯಾಗ ಗೊತ್ತಾಗಿ, ಫೊನ್ ಮಾಡಿ ಒಂದ ನೂರ ರೂಪಾಯಿ ‘ಬಾಬಾ’ನ ಹುಂಡಿಗೆ ಹಾಕ ಅಂತ ಬ್ಯಾರೆ ಹೇಳಿದ್ದಾ. ಅದಕ್ಕ ನಾ ಪ್ರಸಾದ ಕೊಟ್ಟಂಗ ಆತು ಮತ್ತ ‘ಬಾಬಾ’ಗ ಹಾಕಿದ್ದ ನೂರ ರೂಪಾಯಿ ವಸೂಲ ಮಾಡಿದಂಗಾತು ಅಂತ ಹೋಗಿದ್ದೆ. […]ಗಂಗಾವತಿ ಗದ್ಲದಾಗ್ ಕನ್ನಡದ ಕರದಂಟ್

ಹೋದ ತಿಂಗಳ್ ನಮ್ಮ ಬೀದರ ಬಹಾದ್ದೂರ ದೇಸಾಯಿ ಹುಬ್ಬಳ್ಳಿಗೆ ಬಂದಿದ್ದಾ, ಹಂಗ ಮಾತಾಡ್ತಾ-ಮಾತಾಡ್ತಾ “ನಿನ್ನ ಕೆಂಡಸಂಪಿಗೆ ಒಳಗಿನ ಲೇಖನಾ ಓದಿ ನಮ್ಮ ಬೀದರನಾಗಿನ ಮಂದಿನೂ ನಿನ್ನ ಹುಬ್ಬಳ್ಳಿ ಭಾಷಾ ಕಲಿಲಿಕತ್ತಾರ, ನಿಂಗ ಬೀದರ ಜಿಲ್ಲಾ ಸಾಹಿತ್ಯ ಸಮ್ಮೇಳನದಾಗ ಮಾತಾಡಲಿಕ್ಕೆ ಕರಸಬೇಕು ಅಂತ ನನ್ನ ಒಬ್ಬರು ಕೇಳಿದರು”ಅಂದಾ. ನಾ ಅಗದಿ ಖುಷ್ ಆಗಿಬಿಟ್ಟೆ. ನನ್ನಂತಾವರನ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕ ಮಾತಾಡಲಿಕ್ಕೆ ಕರಿತಾರ ಮಂದಿ ಅಂದರ ಇದು ಸಾಹಿತ್ಯದ ಅಧೋ ಗತಿನೋ, ಇಲ್ಲಾ ಈ ಬೀದರ ಮಂದಿಗೆ ತಿಳಿದಿರೋ ಸಾಹಿತ್ಯ […]ಒಂದು ಅಪ್ರಸ್ತುತ ‘ಪ್ರಸ್ಥ’ದ ಪ್ರಸ್ತಾವನೆ

ಕರೆಕ್ಟ ಇವತ್ತಿಗೆ ಹನ್ನೊಂದ ವರ್ಷದ ಹಿಂದ ನಾ ನನ್ನ ಮೂದಲನೇ ಹನಿಮೂನಗೆ ಕೆರಳಾಕ್ಕ ಹೋಗೊ ತಯಾರಿ ಒಳಗ ಇದ್ದೆ. ಮುಂದ ಜೀವನದಾಗ ಎರಡ-ಮೂರ ವರ್ಷಕ್ಕೊಂದ ಹನಿಮೂನಗೆ ಹೋಗಬೇಕು ಅನ್ನೋ ವಿಚಾರದಿಂದ ಅದು ಮೊದಲನೇ ಹನಿಮೂನ್ ಅಂತ ನಾ ಅನ್ಕೊಂಡಿದ್ದೆ. ಆದರ ಈ ಹನ್ನೊಂದ ವರ್ಷದಾಗ ನಾ ಒಂದ ಹನಿಮೂನಗೆ ಹೋಗಿ ಬಂದದ್ದ ರಗಡ ಆತು ಅಂತ ಅನಿಸಿಬಿಟ್ಟದ. ಹಂಗ ಹಗಲಗಲ ಹನಿಮೂನಗೆ ಹೋಗಬೇಕು ಅಂದರ ಒಂದು ನಮ್ಮ ತಲ್ಯಾಗ ಎರಡ-ಮೂರ ಸುಳಿ ಇರಬೇಕು ( ತಲ್ಯಾಗಿನ ಒಂದ […]ಸುಖ ಸಂಸಾರಕ್ಕ ಒಂದ ಸೂತ್ರ……………………….ಗಂಡಸರಿಗೆ ಇಷ್ಟ ಮತ್ತ.

ನಮ್ಮ ಸುಮ್ಮಕ್ಕನ ಮಗಾ ನಿಖಿಲಂದ ಮೊನ್ನೆ ಔರಂಗಾಬಾದನಾಗ ಮದುವಿ ಆತು. ನಾವು ಇಲ್ಲಿಂದ ಗಾಡಿ ಖರ್ಚ ಮೈ ಮ್ಯಾಲೆ ಹಾಕ್ಕೊಂಡ ಹೋಗಿ ಸಾವಿರಗಟ್ಟಲೇ ಉಡಗೊರೆ ಕೊಟ್ಟ ಲಗ್ನ ಅಟೆಂಡ ಮಾಡಿ ಬಂದ್ವಿ, ಲಗ್ನಾದ ದಿವಸ ಮಧ್ಯಾಹ್ನನ ಸುಮಕ್ಕಾ ಮದುಮಕ್ಕಳನ್ನ ಕರಕೊಂಡ ಪುಣಾಕ್ಕ ಹೋಗೊಕಿ ಇದ್ದಳು. ನಾವು ಹೆಂಗಿದ್ರು ಇಷ್ಟ ದೂರ ಅನಾಯಸ ಗಾಡಿ ಖರ್ಚ ಮಾಡಕೊಂಡ ಬಂದೇವಿ, ಇನ್ನೊಂದ ಎರಡ ದಿವಸ ಅಲ್ಲೆ ಇದ್ದ ಅಜಂತಾ- ಎಲ್ಲೋರಾ ಎಲ್ಲಾ ನೋಡಿ ಹುಬ್ಬಳ್ಳಿ ಹಾದಿ ಹಿಡಿಬೇಕು ಅಂತ ಅನ್ಕೊಂಡಿದ್ವಿ. […]ಮಾಮಾನ ಯಾಕ ? ಕಾಕಾ ಯಾಕ ಅಲ್ಲಾ??

ಹೋದ ವಾರ ದೀಪಾವಳಿ ಫರಾಳಕ್ಕ ನಮ್ಮ ಗೆಳ್ಯಾ ತಮ್ಮ ಮನಿಗೆ ಕರದಿದ್ದಾ , ಈ ಗೆಳ್ಯಾಗ ಹೆಸರ ಅದ, ಆದರ ಈ ಸರತೆ ಯಾಕೋ ಹೆಸರ ಬರೆಯೋದ ಅಷ್ಟ ಸರಿ ಅನಸವಲ್ತು , ಯಾಕ ಅನ್ನೋದ ನಿಮಗೂ ಆಮೇಲೆ ಲೇಖನಾ ಒದತಾ ಗೊತ್ತಾಗ್ತದ. ಸರಿ, ಫರಾಳಕ್ಕ ಅವನ ಮನಿಗೆ ಒಬ್ಬನ ಹೋದೆ, ಅವನ ಮನಿಗೆ ಹೋಗಲಾರದನೂ ಭಾಳ ವರ್ಷ ಆಗಿತ್ತ , ಅವಂಗ ಈಗ ಒಂದ ಮೂರ ವರ್ಷದ ಮಗಳ ಬ್ಯಾರೆ ಇದ್ದಾಳಂತ ಒಂದ ಹತ್ತ ರೂಪಾಯಿದ […]ಕಿರಾಣಿ ವಿಶೇಷಾಂಕ

ಮನ್ನೆ ಮಧ್ಯಾಹ್ನ ದುಡದ ಸಾಕಾಗಿ ಬಂದ ದಣೇಯಿನ ಊಟಕ್ಕ ಕೂತಿದ್ದೆ. ಒಂದ ಸರತೆ ಸಾರೂ ಅನ್ನ ಉಂಡ, ಇನ್ನೇನ ಎರಡನೇ ಸರತೆ ಅನ್ನಕ್ಕ ಹುಳಿ ಹಾಕಸಿಗೋಬೇಕು ಅನ್ನೋದರಾಗ ನಮ್ಮವ್ವಾ ಅಡಗಿ ಮನ್ಯಾಗಿಂದ ಒಂದ ಕೈಯಾಗ ಸಾರಿನ ಸೌಟ ಹಿಡಕೊಂಡ “ಪ್ರಶಾಂತಾ, ಹೋದ ತಿಂಗಳದ್ದ ಕಿರಾಣಿ ಸಾಮನದ್ದ ರೊಕ್ಕಾ ೪೮೫೦ ರೂಪಾಯಿ ಕೊಡಬೇಕ, ನಾವ ಅದನ್ನ ಹಂಗ ಬಾಕಿ ಇಟ್ಟ ಮೊನ್ನೆ ಮತ್ತ ಹಬ್ಬದ ಸಾಮಾನ ಉದ್ರಿ ತಂದೇವಿ ” ಅಂತ ಅಂಗಡಿಯವನ ಪರವಾಗಿ ಪೇಮೆಂಟ ಕೇಳಿದ್ಲು. ನಮ್ಮ […]ನಂದ ‘ಡೇಟ್’ ಅದ, ನಾ ಬರೋದ ‘ಡೌಟ’

ಮುಂದಿನ ವಾರ ನಮ್ಮ ಸುಮಕ್ಕನ ಮಗನ ಮದುವಿ ಫಿಕ್ಸ ಆಗೇದ. ನಿನ್ನೆ ನಮ್ಮ ಸುಮಕ್ಕ ನನ್ನ ಹೆಂಡತಿಗೆ ದೇವರ ಊಟಕ್ಕ ‘ಹಿತ್ತಲ ಗೊರ್ಜಿ’ ಮುತ್ತೈದಿ ಅಂತ ಹೇಳಲಿಕ್ಕೆ ಬಂದಿದ್ದರು. ಆದ್ರ ನನ್ನ ಹೆಂಡತಿ “ಸುಮಕ್ಕ ನಂದ ಡೇಟ್ ಅದ , ನಾ ಬರೋದ ಡೌಟ ” ಅಂತ ಅವರ ಮಾರಿ ಮ್ಯಾಲೆ ಹೊಡದಂಗ ಹೇಳಿ ಬಿಟ್ಟಳು. ಪಾಪಾ ನಮ್ಮ ಸುಮಕ್ಕ ” ಅಯ್ಯ ನಮ್ಮವ್ವ ಇನ್ನ ಹಿತ್ತಲಗೊರ್ಜಿ ಮುತ್ತೈದಿನ ಎಲ್ಲೆ ಹುಡಕಬೇಕವಾ, ನೋಡು ಒಳಗ ಇದ್ದರ ಬಂದ […]ತಾಯಿ ಬನಶಂಕರೀ….ಸಾಕಾತವಾ ಜೀವಾ…..ಲಗೂನ ಕರಕೋಳವಾ.

ನಾ ಸಣ್ಣವ ಇದ್ದಾಗ ನನಗ ನಮ್ಮ ಮನಿ ಕುಲದೇವರ ಬನಶಂಕರಿ ಅಂತ ಗೋತ್ತಾಗಿದ್ದ ನಮ್ಮವ್ವಾ ಹಗಲಗಲಾ “ಸಾಕವಾ ನಮ್ಮವ್ವಾ… ಈ ಮಕ್ಕಳ ಸಂಬಂಧ ಸಾಕಾಗಿ ಹೋಗೇದ, ತಾಯಿ ಬನಶಂಕರೀ, ಶಾಕಾಂಭರೀ…… ಲಗೂನ ಕರಕೊಳ್ಳವಾ” ಅಂತ ಅನ್ನೋದನ್ನ ಕೇಳಿ – ಕೇಳಿ. ಮೊದಲ ನನಗ ‘ಯಾಕ ಇಕಿ ಇಷ್ಟೇಲ್ಲಾ ದೇವರನ ಬಿಟ್ಟ ಬನಶಂಕರೀಗೆ ಗಂಟ ಬಿದ್ದಾಳ’ ಅಂತ ಅನಸ್ತಿತ್ತು ಆಮೇಲೆ ಗೊತ್ತಾತು ಶ್ರೀಬನಶಂಕರಿ ನಮ್ಮನಿ ಕುಲ ದೇವರು ಅದಕ್ಕ ನಮ್ಮವ್ವಾ ‘ನಾವ ಅಕಿ ಜೀವಾ ತಿನ್ನೊದ’ ತಾಳಲಾರದಕ್ಕ ‘ಅಕಿ […]ಡಾ|| ರಿಯಲ್ ಎಸ್ಟೇಟ್ ಪಾಚಾಪುರ

ಹೆಸರ ಓದಿ ಕನಫ್ಯೂಸ್ ಆಗಬ್ಯಾಡ್ರಿ, ನಮ್ಮ ಪಾಚಾಪುರ ಡಾಕ್ಟರಗೆ ಈ ಹೆಸರ ಬಂದದ್ದು ಅವನ ‘ಧಂಧೆ’ ಮ್ಯಾಲೇ , ಕಲತದ್ದು ಡಾಕ್ಟರಕಿ ಅಂತ ಹೆಸರ ಹಿಂದ ‘ಡಾ||’ ಅಂತ ಬರದೇನಿ, ಆದರ ಅವನ ಉಪಜೀವನ ನಡೇಯೋದು ‘ರಿಯಲ್ ಎಸ್ಟೇಟ್’ಮ್ಯಾಲೆ ಅಂತ ಅದನ್ನ ಮೊದಲ ಸೇರಿಸೇನಿ ಇಷ್ಟ. ಹಂಗ ಸಣ್ಣ-ಪುಟ್ಟ ನೆಗಡಿ, ಕೆಮ್ಮು, ಜ್ವರಾ, ಹೊಟ್ಟಿ ಝಾಡಸ್ತದ ಹಿಂತಾವನೆಲ್ಲಾ ತೋರಸಬಹುದು. ಇಲ್ಲೇ ನಮ್ಮ ಘಂಟಿಕೇರಿ ತಬೀಬಲ್ಯಾಂಡ ಕ್ರಾಸನಾಗ ಒಂದ ಹಳೇ ಗಬ್ಬ ನಾರೋ ಸಾರ್ವಜನಿಕ ಮೂತ್ರಿ ಇತ್ತಲಾ, ಆ […]ಸೆನ್ಸೆಕ್ಸ ಬಿತ್ತ್………ಇವನ ಶುಗರ್ ಎತ್ತ್

ನಾಳೆ ಗಣಪತಿ ಹಬ್ಬ, ನಮ್ಮ ಎಲ್ಲಾ ಹುಬ್ಬಳ್ಳಿ ಹಳೇ ದೋಸ್ತರಿಗೆ ತಮ್ಮ ಊರು, ಅವ್ವಾ-ಅಪ್ಪಾ, ಹಳೇ ದೋಸ್ತರು ,ತಮ್ಮ ಹಳೇ ಓಣಿ, ತಮ್ಮ ಮಾಜಿ ಇವೆಲ್ಲಾ ನೆನಪಾಗೋದ ಹಿಂತಾ ಹಬ್ಬ ಬಂದಾಗ ಇಲ್ಲಾ ಅವರ ಪೈಕಿ ಯಾರರ ಇಲ್ಲೇ ಗೊಟಕ್ ಅಂದಾಗ. ಇಲ್ಲಾಂದರ ಇಲ್ಲೇನ ಅದ ಹುಬ್ಬಳ್ಯಾಗ ಮಣ್ಣು ಅಂತ ದೊಡ್ಡ-ದೊಡ್ಡ ಊರಾಗ ದೊಡ್ಡ ನೌಕರಿ ಹಿಡದ ಕಿಸೆತುಂಬ ಪಗಾರ, ಮ್ಯಾಲೆ ಅಪಾರ್ಟಮೆಂಟನಾಗ ಒಂದ ಮನಿ, ಬುಡಕ ನಾಲ್ಕ ಗಾಲಿ ಕಾರು, ಬಗಲಾಗ ಒಂದ ಹೆಂಡತಿ, ಹೊರಗ […]ನೀವು ಬಾಣಂತನಾ ಮಾಡ್ತೇನೀ ಅಂದರ …………ನಾ ಇನ್ನೊಂದ ಹಡಿತೇನಿ.

ಮೊನ್ನೆ ನಮ್ಮ ಅಬಚಿ (ಮೌಶಿ) ಮಗಾ ವಿನಾಯಕ ಭೆಟ್ಟಿಯಾಗಿದ್ದಾ , ಮಾತಾಡ್ತಾ-ಮಾತಾಡ್ತ ” ಏನಪಾ ಎರಡನೇದ ಲೋಡ ಮಾಡಿ ಅಂತ, ಹೇಳೆ ಇಲ್ಲಲಾ, ಮೊನ್ನೆ ನಿಮ್ಮವ್ವ ಫೋನ್ ಮಾಡಿದಾಗ ಗೋತ್ತಾತು” ಅಂದೆ. “ಹಕ್ಕ್.. ನಿನಗೂ ಬಂತಾ ಸುದ್ದಿ , ನಮ್ಮವ್ವನ ಬಾಯಾಗ ಮಾತ ನಿಲ್ಲಂಗಿಲ್ಲ ನೋಡ, ನಾನು ಸರಪ್ರೈಸ್ ಕೊಡೋಣಂತ ಯಾರಿಗೂ ಹೇಳಿದ್ದಿಲ್ಲಾ ” ಅಂದಾ. ಅವನ ಮಾತ ಕೇಳಿದ್ರ ಅವಂಗ ಅವನ ಹೆಂಡತಿ ಈ ಸುದ್ದಿ ಹೇಳಿ ಸರಪ್ರೈಸ ಕೊಟ್ಟಂಗ, ಅಂವಾ ಅದನ್ನ ಕೇಳಿ ಶಾಕ್ […]ನಳಾ ಬಂದ್ರ……ಗೌರಿ ಕುಡಸೋದು

“ಪ್ರಶಾಂತಾ ನಾಳೇ ನೀ ರಜಾ ತಗೋ, ಎಲ್ಲಿನೂ ತಿರಗಲಿಕ್ಕ ಹೋಗಬ್ಯಾಡಾ, ಎರಡ ದಿವಸ ಆತು ನಳಾ ಬಂದಿಲ್ಲಾ. ನಾಳೆ ಗ್ಯಾರಂಟೀ ಬರತದ, ನೀನ ಮಡಿನೀರ ತುಂಬಬೇಕ ಈ ಸರತೆ” ಅಂತ ಸೋಮವಾರ ರಾತ್ರಿ ಊಟಕ್ಕ ಕೂತಾಗ ನಮ್ಮವ್ವಾ ಒಂದು ದೂಡ್ದ ಬಾಂಬ್ ಹಾಕಿದ್ಲು. “ಯಾಕ, ನಿಮ್ಮಪ್ಪನ ಶ್ರಾದ್ಧ ಮನ್ನೇನ ಮುಗದದ, ನಿಮ್ಮವ್ವಾ ಇನ್ನೂ ಗಟ್ಟಿ ಇದ್ದಾಳ ಮತ್ಯಾಕ ಮಡಿನೀರು?” ಅಂದೆ. “ಯಪ್ಪಾ ಬ್ರಾಹ್ಮಣರ ಮನ್ಯಾಗ ಅಪ್ಪಿ-ತಪ್ಪಿ ಹುಟ್ಟಿ ನೋಡ. ಮಡಿನೀರ ಏನ್ ಶ್ರಾದ್ಧಕ್ಕ ಇಷ್ಟ ತುಂಬತಾರೇನ? ನಿನ್ನೀ […]ಇರೋಂವಾ ಒಬ್ಬ ಮಗಾ …….ಅವನೂ ಮೆಡಿಕಲ್ ರೆಪ್ ಇದ್ದಾನ

ಒಂದ ೧೫ ವರ್ಷದ ಹಿಂದಿನ ಮಾತು, ನಮ್ಮ ದೊಸ್ತ ಅನಂತ ಸುಬ್ಬರಾವ ( ಅನಂತು) ಅವರ ಅಪ್ಪಾ ಅಂದರ ಸುಬ್ಬರಾವ ಭಟ್ಟರು ತಮ್ಮ ಅನಂತೂಗ ಬಿ.ಎಸ್.ಸಿ ಮಾಡಿದ ಮ್ಯಾಲೆ ಮೆಡಿಕಲ್ ರೆಪ್ ಕೆಲಸ ಸಿಕ್ಕಾಗ ತಮ್ಮ ಹೋಟೆಲಗೆ ಬಂದ ಅವರ ಗೆಳೆಯಾ ಜೋಶಿಯವರ ಮುಂದ “ಇರೋಂವಾ ಒಬ್ಬ ಮಗಾ, ಅವನೂ ಮೆಡಿಕಲ್ ರೆಪ್ ಆಗ್ಯಾನ” ಅಂತ ಹೆಳ್ತಿದ್ರು. ಅವರ ಮಾತಿನಾಗ ಮಗಾ ‘ಮೆಡಿಕಲ್ ರೆಪ್’ ಆಗಿದ್ದಕ್ಕ ಭಾಳ ಬ್ಯಾಸರ ಇತ್ತು. ಪಾಪ ! ಮಗಾ ಏನೇನೋ ಆಗ್ತಾನ […]