ಬಾರ್ ನಾಗ ಬರೇ ನಮ್ಮಂದಿನ

ಒಂದ ೧೦-೧೫ ದಿವಸ ಆತು ಮಳಿ ಹಿಡದ ಬಿಟ್ಟದ ,ಎಲ್ಲಿನೂ ಹೊರಗ ಹೊಗೋಹಂಗಿಲ್ಲ, ಯಾವಾಗ ಮಳಿ ಬರತದ ಯಾವಗ ಇಲ್ಲಾ ಅಂತ ಗೊತ್ತ ಆಗಂಗಿಲ್ಲ, ಮೊನ್ನೆ ೨-೩ ಸಲ ಮಳ್ಯಾಗ ತೋಯ್ಸಕೊಂಡ ನೆಗಡಿ ಬ್ಯಾರೇ ಆಗಿತ್ತು. ಒಂದ ಸ್ವಲ್ಪ ಮೈಯಾಗ ಬ್ಯಾರೆ ಕಣಿ-ಕಣಿನು ಅನಸ್ತಿತ್ತು. ಅದರಾಗ ನನಗ ನೆಗಡಿ ಬಂದರ ಲಗೂನ ಹೊಗಂಗನೂ ಇಲ್ಲಾ. ಯಾವಾಗಲೂ ಮೂಗ ಸುರ್-ಸುರ್ ಅಂತಿರ್ತದ. “ಲೇ ಒಂದ ಸಿಕ್ಸ್ಟೀ ಹೂಡಿ ಎಲ್ಲಾ ಆರಾಮ ಆಗತೈತಿ” ಅಂತ ಏನಿಲ್ಲಾ ಅಂದರು ಮೂರ-ನಾಲ್ಕ ಮಂದಿ […]ಬ್ರಾಹ್ಮಣರಾಗ ಕನ್ಯಾ ತೀರಿ ಹೋಗ್ಯಾವ ಅಂತ………..ಭಾಗ ೨

” ರ್ರಿ…ರ್ರಿ….ಏಳ್ರಿ…ಎಷ್ಟ ಒದರಬೇಕರಿ, ಹತ್ತಸಲಾ ಆತು ಎಬ್ಬಸಲಿಕತ್ತ, ರಾತ್ರಿ ಲೇಟಾಗಿ ಬರೋದು ಮುಂಜಾನೆ ಲಗೂನ ಏಳಂಗಿಲ್ಲಾ. ಅದರಾಗ ಸಂಡೆ ಇದ್ದರಂತು ಮುಗದ ಹೋತು” ಅಂತ ನನ್ನ ಹೆಂಡತಿ ಕಿವ್ಯಾಗ ಶಂಖಾ ಊದಿದ್ಲು. ನಾ ಗಾಬರಿ ಆಗಿ ಎದ್ದ ಕೂತೆ. “ಏಳ್ರಿ, ಎದ್ದ ರೆಡಿ ಆಗರಿ, ಕೊಪ್ಪಳದಿಂದ ಬನುನ ಅಪ್ಪಾ ಬರೋರಿದ್ದಾರ, ಮರತ ಬಿಟ್ಟಿರೇನ ? ಅವರ ಜೊತಿ ಹೋಗಬೇಕಲಾ” ಅಂತ ನೆನಪ ಮಾಡಿದ್ಲು. ಅಯ್ಯೋ ಖರೇನ ಮರತಬಿಟ್ಟಿದ್ದೆ.ಮೊನ್ನೆ ಅಚಾನಕ್ಕಾಗಿ ಕೊಪ್ಪಳ ಬೀಗರು (ಅವರ ಮನಿಗೇ ನಮ್ಮ ತಮ್ಮನ್ನ […]ಬ್ರಾಹ್ಮಣರಾಗ ಕನ್ಯಾನ ತೀರಿ ಹೋಗ್ಯಾವ ಅಂತ. ಭಾಗ ೧

ಬ್ರಾಹ್ಮಣರಾಗ ಕನ್ಯಾ ತೀರಿ ಹೋಗ್ಯಾವ ಅಂದರ ಎಲ್ಲಾ ತೀರಕೊಂಡಾವ ಅಂತಲ್ಲಾ, ಖಾಲಿ ಆಗ್ಯಾವ ಅಂದರ ಮುಗದಾವ ಅಂತ ಅರ್ಥ. ಮುಗದಾವ ಅಂದರ ಎನ ಎಲ್ಲಾ ಪೂರ್ತಿಖಾಲಿನೂ ಆಗಿಲ್ಲಾ ಆದರ ತಳಕ್ಕ ಅಂತೂ ಹತ್ಯಾವ. ಆ ಉಳದ ತಳದಾಗಿನ ಕನ್ಯಾಗಳಿಗೆ ಈಗ ಎಲ್ಲಿಲ್ಲದ “ಡಿಮಾಂಡ-ಡಿಮಾಂಡ್”. ನಮ್ಮ ಪೈಕಿ ಎನಿಲ್ಲಾಂದರು ಒಂದ ೮-೧೦ ವರಾ ಅವ. ಒಂದಿಷ್ಟ ಅಗದೀ ಎಳೇವ ಅದಾವ ಒಂದಿಷ್ಟ ಇಗಾಗಲೇ ಬಲತ ಬಿಟ್ಟಾವ. ಪಾಪ ಅವಕ್ಕ ಒಂದು ಸರಿಯಾದ ಕನ್ಯಾ ಸಿಗವಲ್ವು. ತಿಂಗಳಿಗೆ ೧೫ ಸಾವಿರ […]ಇಲ್ಲಾ. . . . . . . ಅಕೀ ಬರೋಹಂಗ ಇದ್ದಿದ್ದಿಲ್ಲಾ

ಸುಮಾರ ಮೂರ ವರ್ಷದ ಹಿಂದಿನ ಮಾತು, ಶ್ರಾವಣ ಮಾಸದಾಗ ಒಂದ ಸಂಡೆ ನಮ್ಮ ಚಂದಕ್ಕ ಮೌಶಿ ಮನ್ಯಾಗ ಪವಮಾನ ಹೋಮ ಮತ್ತ ಸತ್ಯನಾರಾಯಣ ಪೂಜಾ ಇಟ್ಕೊಂಡಿದ್ದರು. ಇದ ಬ್ರಾಹ್ಮಣರಾಗ ಕಾಮನ್, ಅವರಿಗೆ ಶ್ರಾವಣ-ಭಾದ್ರಪದ ಮಾಸ ಬಂದಾಗ ಗೊತ್ತಾಗೋದು ಅವರ ಬ್ರಾಹ್ಮಣರಂತ, ವರ್ಷದಾಗ ಇನ್ನ ಹತ್ತ ತಿಂಗಳ ಮರತ ಬಿಟ್ಟಿರತಾರ ಅನ್ನಸ್ತ. ನಮ್ಮವ್ವ ಹೇಳಿದ್ಲು “ಈ ಸಲಾ ಸತ್ಯನಾರಾಯಣ ಪೂಜಾಕ್ಕ ನೀನ ಹೋಗಿ ಬಾ, ಅಕಿ ಇಷ್ಟ ಸಲಾ ಕರದಾಗೂ ಬರೇ ನಾವ ಹೋಗಿ ಬಂದೇವಿ, ನೀ ಒಮ್ಮಿನೂ […]ಗ್ರಹಣಾ ಭೂಮಿ ಮ್ಯಾಲೇ..ಅದರ್ ಫಲಾ ನನ್ನ ರಾಶಿ ಮ್ಯಾಲೇ

ಒಂದ ರವಿವಾರ ಬಾದಾಮಿನಗರ ರಾಯರ ಮಠಕ್ಕ ನಮ್ಮ ಗೆಳ್ಯಾ ಪಚ್ಚ್ಯಾನ ಮಗನ ಜವಳಕ್ಕ ಹೋಗಿದ್ದೆ. ಹೋಗೊದರಾಗ ಜವಳ ಮುಗದು ರಾಯರ ಕನಕಾಭಿಷೇಕ ಬಾಕಿ ಇತ್ತು. ಕನಕಾಭಿಷೇಕ ಆದ ಮ್ಯಾಲೇನ ಎಲಿ ಹಾಕೋದು ಅಂತ ಧಾಬಳಿ ಉಟಗೊಂಡ ಭಟ್ಟರು ಹೇಳಿ ಮ್ಯಾಲೇ ಹಂಗರ ರಾಯರ ದರ್ಶನಾನರ ಮಾಡಿ ಬರೋಣ ಅಂತ ಹೋದೆ. ಮೊದ್ಲಿಂದ ನನಗು ರಾಯರಗು ಅಷ್ಟ ಕಷ್ಟ, ಆದ್ರೂ ನಾ ಶಂಕರ ಮಠಕ್ಕಿಂತ ರಾಯರ ಮಠಕ್ಕ ಜಾಸ್ತಿ ಹೋಗಿರ್ತೇನಿ. ಹಿಂಗ ಒಂದ ಸುತ್ತ ಪ್ರದಕ್ಷಿಣಿ ಹೊಡದ ಬರಬೇಕಾರ […]