ನೈಟಿ ಕಂಡಹಿಡದವನಿಗೆ ನೊಬೆಲ್ ಬಹುಮಾನ

ನನಗ ಯಾಕೋ ಇತ್ತೀಚಿಗೆ ಈ ನೈಟಿ ಕಂಡ ಹಿಡದವಂಗ ನೊಬೆಲ್ ಬಹುಮಾನ ಯಾಕ ಕೊಡಬಾರದು ಅಂತ ಅನಸಲಿಕತ್ತದ. ನಾ ಹೇಳಿದ್ದ ಹೆಣ್ಣ ಮಕ್ಕಳದ ನೈಟಿ ಮತ್ತ, ಗಂಡಸರದ ನೈಂಟಿ ಅಲ್ಲಾ. ಹಂಗ ನೈಂಟಿ (ಅಲ್ಕೋಹಾಲ) ಕಂಡ ಹಿಡದಂವಾ ವಿಜ್ಞಾನಿ, ಅವಂಗ ನೋಬೆಲ್ ಸಿಕ್ಕ ಸಿಕ್ಕಿರತದ ಆ ಮಾತ ಬ್ಯಾರೆ, ಆದರ ನೈಟಿ ಕಂಡ ಹಿಡದಂವಾ ಅವನಕಿಂತಾ ಮಹಾಜ್ಞಾನಿ ಅಂತ ನನಗ ಅನಸ್ತದ. ಅಲ್ಲಾ ಇವತ್ತ ನಮ್ಮೇಲ್ಲಾರ ಮನ್ಯಾಗಿನ ಹೆಣ್ಣ ಮಕ್ಕಳ ದೇಹ ಮತ್ತ ಜೀವನದಾಗ ಹಾಸು ಹೊಕ್ಕಿರುವ […]ಆಂಟೀ…. ಒಬಿಸಿಟಿ ಡೇ

ಮೊನ್ನೆ ನಮ್ಮ ಮನಿ ಆಂಟೀ “ರ್ರಿ, ನಮ್ಮ ಮಹಿಳಾ ಮಂಡಳದಾಗ ನಂಗ ‘ಒಬಿಸಿಟಿ ಡೇ’ ಕ್ಕ ಭಾಷಣಾ ಮಾಡಲಿಕ್ಕೆ ಕರದಾರ, ಒಂದ ಭಾಷಣಾ ಬರದ ಕೊಡ್ರಿ” ಅಂದ್ಲು. ಅಲ್ಲಾ, ಈ ಮಹಿಳಾ ಮಂಡಳದವರಿಗೇನ ತಲಿ-ಗಿಲಿ ಕೆಟ್ಟದನ, ಬ್ಯಾರೆ ಯಾರ ಸಿಗಲಿಲ್ಲೇನ ಭಾಷಣಕ್ಕ, ಎಲ್ಲಾ ಬಿಟ್ಟ ನಮ್ಮ ಆಂಟೀನ ಕರದಾರಲಾ ಅನಸಲಿಕತ್ತು. ಅಲ್ಲಾ ಅದಿರಲಿ, ಈ ಒಬಿಸಿಟಿ ಡೇ ಎಲ್ಲಿಂದ ಬಂತಲೇ ಅಂತ ನಾ ವಿಚಾರ ಮಾಡಲಿಕತ್ತೆ. ಅದೇನ ಆಗಿತ್ತಂದರ ಈಕಿಗೆ ಆ ಮಹಿಳಾ ಮಂಡಳದವರ ಬಂದ ‘anti-ಒಬಿಸಿಟಿ […]ಕನ್ನಡ ಅಂದರ ಟಂಗ್ ಟ್ವಿಸ್ಟರ್……..

ಮೊನ್ನೆ ಕರ್ನಾಟಕ ರಾಜ್ಯೋತ್ಸವ ಇದ್ದಾಗ ನನ್ನ ಮಗನ ಸಾಲ್ಯಾಗ ಕನ್ನಡದಾಗ ಟಂಗ್ ಟ್ವಿಸ್ಟರ್ ಹೇಳೋ ಕಾಂಪಿಟೇಶನ್ ಇತ್ತ, ಸಾಲ್ಯಾಗ ಕಲಿಯೋ ಹುಡುಗರಿಗೆ ಅಲ್ಲಾ ಅವರ ಅವ್ವಾ-ಅಪ್ಪಗ, ಅಂದರ ನಮ್ಮಂತಾ ಪೇರೆಂಟ್ಸಗೆ. ಅಲ್ಲಾ, ನಾವು ಮಕ್ಕಳನ ಸಾಲಿಗೆ ಅವು ಕಲತ ಶಾಣ್ಯಾ ಆಗಲಿ ಅಂತ ಕಳಸಿದರ ಇತ್ತೀಚಿಗೆ ಸಾಲ್ಯಾಗ ಮಾಸ್ತರ ಹುಡುಗರಿಗಿಂತಾ ಅವರ ಅವ್ವಾ-ಅಪ್ಪಗ ಜಾಸ್ತಿ ಕಾಂಪಿಟೇಶನ್ ಇಡ್ತಾರ, ಏನ ಸಾಲ್ಯೋ ಏನೋ? ಹಂಗ ಕನ್ನಡಾ ಟಂಗ್ ಟ್ವಿಸ್ಟರ್ ಸ್ಪರ್ಧಾ ಹುಡುಗರಿಗೆ ಇಟ್ಟಿದ್ದರು ನಡಿತಿತ್ತು. ಯಾಕಂದರ ಈಗಿನ ಮಕ್ಕಳಿಗೆ […]‘ಅತ್ತೆ’ಗೊಂದ ಕಾಲ…. ಅಳಿಯಾಗ ‘ಕತ್ತೆ’ಕಾಲ

ಅತ್ತಿಗೊಂದ ಕಾಲ,ಸೊಸಿಗೊಂದ ಕಾಲ ಅಂತಿದ್ದರಲಾ ಈಗ ಆ ಕಾಲ ಹೋತ. ಈಗೇನಿದ್ದರು ಅತ್ತಿಗೊಂದs ಕಾಲ. ಇನ್ನ ಅಕಿ ಮಗಳನ ಕಟಗೊಂಡ ಅಕಿ ಕೈಯಾಗ ಸಿಕ್ಕ ಸಾಯೋದ ಅಳಿಯಾಂದ ಕಾಲ. ಆ ಅಳಿಯಾ ಅನ್ನೋವಾ ಇವರಿಬ್ಬರ ಕೈಯಾಗ ಸಿಕ್ಕ ದುಡದ ದುಡದ ಕತ್ತೆ ಆಗ್ಯಾನ ಹಿಂಗಾಗಿ ಇವತ್ತ ‘ಅತ್ತೆ’ ಕಾಲ ಅಂದರ ಅಳಿಯಾಗ ‘ಕತ್ತೆ’ ಕಾಲ. ಅಲ್ಲಾ, ಒಂದ ಕಾಲದಾಗ ಅಳಿಯಾ ಅಂದರ ದೇವರ ಇದ್ದಂಗ ಅಂತ ವರ್ಷಕ್ಕೊಮ್ಮೆ ಅತ್ತೆಂದರ ಅಳಿಯಾಂದ ಪಾದ ಪೂಜೆ ಮಾಡ್ತಿದ್ದರು. ಆದರ ಇತ್ತೀಚಿಗೆ […]mute ಮನಮೋಹನ ಸಿಂಗ್ ಮಾತಾಡಿದರು……

ಮೊನ್ನೆ ಸೆಪ್ಟೇಂಬರ್ 26ಕ್ಕ ನಾ ದಿಲ್ಲಿಗೆ ಮನಮೋಹನ ಸಿಂಗವರಿಗೆ ಎಂಬತ್ತ ವರ್ಷ ತುಂಬಿದ್ವು ಅಂತ ಅವರದ ಇಂಟರ್ವಿವ್ ತೊಗೊಳಿಕ್ಕೆ ಹೋಗಿದ್ದೆ. ನಾ ಹೋದಾಗ ಅವರು world contraception day programಗೆ ಭಾಷಣಕ್ಕ ಹೋಗಿದ್ದರು. ಅರೇ ಇದೇನ ಭಾರಿ ಕೊಇನ್ಸಿಡೇನ್ಸಲಾ, ಮನಮೋಹನಜಿ ಹುಟ್ಟಿದ್ದ ‘ಕಂಟ್ರಾಸೆಪ್ಶನ್ ಡೇ ದಿವಸ!’, ಹೆಂತಾ ವಿಚಿತ್ರ ಅನಸ್ತು. ಆದರ ಇವರು ಈ ವಯಸ್ಸಿನಾಗೂ ಕಂಟ್ರಾಸೆಪ್ಶನ್ ಡೇ ಬಗ್ಗೆ ಮಾತಡಲಿಕ್ಕೆ ಹೋಗ್ಯಾರ ಅಂದ್ರ ಗ್ರೇಟ್ ಬಿಡ ಅನಸ್ತು. ಇರಲಿ ಬಂದ ಮ್ಯಾಲೆ ನಾನೂ ಒಂದೆರಡ ಆಫ್ […]an ISO 9001ಫ್ಯಾಮಿಲಿ

ಇವತ್ತ world standards day, ಅಂದರ ಜಗತ್ತಿನಾಗ ಸ್ಟ್ಯಾಂಡರ್ಡ ಇದ್ದೋರದ ಅಷ್ಟ ಡೇ ಅಂತ ಅಲ್ಲಾ ಮತ್ತ, ಜಗತ್ತಿನಾಗ ಎಲ್ಲಾರಿಗೂ, ಎಲ್ಲಾದಕ್ಕೂ ಒಂದ ಗುಣಮಟ್ಟ ಇರಲಿ ಅಂತ ಸ್ಟ್ಯಾಂಡರ್ಡ್ಸ ಡೇ ಆಚರಿಸೋದ. ಈ ISO (international organization for standardization) ಇರೋದ ಎಲ್ಲಾದಕ್ಕೂ ಒಂದ ಸ್ಟ್ಯಾಂಡರ್ಡ ಕೊಡಲಿಕ್ಕೆ. ಇತ್ತೀಚಿಗೆ ನನಗೂ ಯಾಕ ನಮ್ಮ ಫ್ಯಾಮಿಲಿನ an ISO 9001 ಫ್ಯಾಮಿಲಿ ಮಾಡಬಾರದು ಅಂತ ಅನಸಲಿಕತ್ತಿತ್ತು. ನನ್ನ ಹೆಂಡತಿ- ಮಕ್ಕಳಿಗೆ ಅವೇರನೆಸ್, ಟ್ರೇನಿಂಗ ಕೊಟ್ಟ ಮನಿ ಮಂದಿಗೇಲ್ಲಾ ಕ್ವಾಲಿಟಿ […]ಇಬ್ಬರ ಗಂಡಂದರ ಆದಮ್ಯಾಲೆ ಒಬ್ಬಾಕಿ ಹೆಂಡತಿ

ಇದೇನ ‘ಇಬ್ಬರ ಗಂಡಂದರಾದ ಮ್ಯಾಲೆ ಒಬ್ಬಕಿ ಹೆಂಡತಿ’? ಗಂಡಂದರ ಯಾಕ ಮೊದ್ಲ , ಹೆಂಡ್ತಿ ಯಾಕ ಅಲ್ಲಾ? ಇದು ಹೆಣ್ಣಮಕ್ಕಳಿಗೆ ಅನ್ಯಾಯ ಅಂತ ಅನಬ್ಯಾಡರಿ. ನಾ ಹೇಳಿದ್ದು ನಮ್ಮ ದೇಶದಾಗ ಇಬ್ಬರು ಗಂಡಂದರ ಆತ್ಮಹತ್ಯೆ ಮಾಡ್ಕೋಂಡ ಮ್ಯಾಲೆ ಒಬ್ಬಾಕಿ ಹೆಂಡತಿ ಆತ್ಮಹತ್ಯೆ ಮಾಡ್ಕೋತಾಳ ಅಂತ. ಹಂಗ ನಮ್ಮ ದೇಶದಾಗ ಪ್ರತಿ ತಾಸಿಗೆ ಹದಿನೈದ ಮಂದಿ ಆತ್ಮಹತ್ಯೆ ಮಾಡ್ಕೊಂಡ ಸಾಯಿತಾರ. ಅದರಾಗ ಹತ್ತ ಮಂದಿ ಮದುವಿ ಆದವರ ಇರತಾರಂತ, ಇನ್ನ ಈ ಮದುವಿ ಆದವರ ಪೈಕಿ ಹತ್ತ ನಿಮಿಷಕ್ಕ […]googleನಾಗ ಗಂಡನ್ನ್ ಯಾಕ ಹುಡಕ್ತಿ ?

ನಿನ್ನೆ ನನ್ನ ಹೆಂಡತಿ ಮಗಗ “google ಅಂದ್ರ ಏನ ಬೊಗಳಲೇ?” ಅಂತ ಒದರಲಿಕತ್ತಿದ್ಲು, ಅಂವಾ ಅವರವ್ವಗ ಗೂಗಲ್ ಅಂದ್ರ ತಿಳಿಯೋದು ಅಷ್ಟರಾಗ ಅಂತ ಇಂಟರನೆಟ್..ಇಂಟರನೆಟ್ವಾ ಅಂತ ಹೇಳಲಿಕತ್ತಿದ್ದಾ, ಆದ್ರು ಆಕಿ ಮತ್ತ ಮತ್ತ “ಗೂಗಲ್ ಅಂದ್ರ ಯಾರು, ಏನು?” ಅಂತ ಗಂಟ ಬಿದ್ದಿದ್ಲು. “ಲೇ, ಆ ಗೂಗಲ್ ತೊಗಂಡ ನೀ ಏನ ಮಾಡ್ತೀ, ನಿಂಗ್ಯಾಕ ಬೇಕ” ಅಂತ ನಾ ಕೇಳಿದೆ, “ಇಲ್ಲರಿ, ಸಾಲ್ಯಾಗ ನಿಮ್ಮಗನ ಟೀಚರ ‘ನಿಮ್ಮ ಮಗಾ ಎಲ್ಲಾ ಗೂಗಲ್ ನೋಡಿ ಹೋಮ್ ವರ್ಕ್ ಮಾಡ್ತಾನ […]ದೋಸ್ತ cheers!!!

ನಿನ್ನೆ ರಾತ್ರಿ ಹನ್ನೇರಡುವರಿ ಒಂದ ಆಗಿತ್ತ ನಂಗ ಮೊಬೈಲನಾಗ ಫೋನ್ ಬಂತ. ನಾ ಜಸ್ಟ ವೀಕೆಂಡ ಪಾರ್ಟೀ ಮುಗಿಸಿಕೊಂಡ ಬಂದ ಮಲ್ಕೋಂಡಿದ್ದೆ, ಅದರಾಗ ನನ್ನ ಹೆಂಡತಿಗೆ ಮೊದ್ಲ ನಾ ಲೇಟಾಗಿ ಬಂದ ಬಾಗಲ ಬಡದ ಎಬ್ಬಿಸಿದ್ದ ಒಂದ ಸಿಟ್ಟ ಇತ್ತ, ಇನ್ನ ಅಕಿ ಹಿಂಗ ನಿದ್ದಿ ಹಚ್ಚಬೇಕ ಅನ್ನೋದರಾಗ ಫೋನ್ ಬ್ಯಾರೆ ಬಂತ. ಅಕಿ ನಿದ್ದಿ ಗಣ್ಣಾಗ “ರ್ರಿ, ಯಾರದರಿ ಅದು ಸುಡಗಾಡ ಫೋನ್, ಕುಡದ ನಶೆದಾಗ ದೋಸ್ತರೇಲ್ಲಾ ಬಿಲ್ಲ್ ಕೊಡಲಾರದ ಹಂಗ ಬಂದೀರಿ ಕಾಣತದ, ಬಾರನವರು […]ವಾಟ an idea ಸರಜೀ

ಮೊನ್ನೆ idea ಮೊಬೈಲನವರು ಮಾರ್ಕೇಟ್ ಸರ್ವೇ ಮಾಡಲಿಕ್ಕೆ ನಮ್ಮ ಹುಬ್ಬಳ್ಳಿಗೆ ಬಂದಿದ್ದರು. ಯಾಕೋ ಅವರು ಏನ idea ಮಾಡಿದರು ನಮ್ಮ ಉತ್ತರ ಕರ್ನಾಟಕದ ಒಳಗ ಅವರದ idea ಕ್ಲಿಕ್ ಆಗವಲ್ತಂತ, ಹಿಂಗಾಗಿ ಭಾಳ ಕೆಟ್ಟ ಅನಿಸಿಕೊಂಡ ‘ಸರಜೀ ನೀವೇನರ idea ಹೇಳರಿ’ ಅಂತ ನನ್ನ ಕಡೆ ಬಂದಿದ್ದರು. ನಾ ಅವರಿಗೆ “ಮೊದ್ಲ ನೀವು ನಿಮ್ಮ ‘ವಾಟ an idea ಸರಜೀ’ ಬದ್ಲಿ ಛಂದಾಗಿ ಕನ್ನಡದಾಗ “ಅವನೌನ ಏನ್ ಹೇಳಿದಿಲೇ” ಅಂತ ಅನ್ನರಿ. ಅವನೌನ ಅನ್ನೋದು ನಮ್ಮ ಉತ್ತರ […]ಪ್ರತಿಭಾನಿರ್ಗಮನೆ ‘ಪುರ್ಣೋ’ ಪರಾಜಯಃ ಪ್ರಣಬಿದಮ್….

ಒಂದ ವಾರದ ಹಿಂದ ಬೆಂಗಳೂರಾಗ ‘ಪೂರ್ಣೊ’ ಭೇಟ್ಟಿ ಆಗಿದ್ರ, ಅದ ರಾಷ್ಟ್ರಪತಿ ಅಭ್ಯರ್ಥಿ ಪೂರ್ಣೋ ಎ. ಸಂಗ್ಮಾ. ಪಾಪ, ಭಾಳ ಟೆನ್ಶನಾಗ ಇದ್ರು. “ಯಾಕ್ರಿ, ನೀವು ಇಲ್ಲೆ? ಮತ್ತೇನ್ ವಿಶೇಷ. ಯಡಿಯೂರಪ್ಪೇನರ ನಿಮಗ ಸಪೋರ್ಟ ಮಾಡಂಗಿಲ್ಲಾ ಅಂತ ಮತ್ತ ಹೆದರಸ್ಯಾರೇನ?” ಅಂದೆ. “ಹೆ..ಹಾಗೇನಿಲ್ಲಾ. ಮುಂದಿನ ವಾರ ಇಲೇಕ್ಷನ್ ಬಂತಲ್ಲಾ, ಅದಕ್ಕ ‘ಆಪರೇಶನ್ ಕಮಲ’ದ ಕಿಂಗ ಯಡಿಯೂರಪ್ಪಾಜಿನ ಭೆಟ್ಟಿ ಆಗಿ ಹೋದರಾತು ಅಂತ ಬಂದೇನಿ” ಅಂದ್ರು. ಏ ಇವರೇಲ್ಲರ ಆ ಯಡಿಯೂರಪ್ಪನ ಮಾತ ಕೇಳಿ ‘ಆಪರೇಶನ್ ಸಂಗ್ಮಾ’ ಮಾಡಲಿಕ್ಕೆ […]ಆಷಾಡದ ಅಧಿಕಾರ ಬ್ಯಾಸಗ್ಯಾಗ ಬ್ಯಾನಿ ತಿಂತದ

ಮೊನ್ನೆ ಮುಂಜಾನೆ ಏಳೋದರಾಗ ನನ್ನ ಮೊಬೈಲದಾಗ ಒಂದ ಹತ್ತ-ಹದಿನೈದ congratulations ಅಂತ message ಬಂದಿದ್ವು. ಅವನೌನ ನನಗ್ಯಾಕ ಎಲ್ಲಾರೂ congrats ಅಂತ sms ಮಾಡ್ಯಾರ್ ಅಂತ ತಿಳಿಲಿಲ್ಲಾ. ನನ್ನ ಹೆಂಡತಿಗೆ “ನಿಂದೇನರ ಮತ್ತ ವಿಶೇಷ ಅದ ಏನ್?” ಅಂತ ಕೇಳಿದೆ, ಯಾಕಂದರ ಬಿಜೇಪಿಗತೆ ಕೆಲವೊಮ್ಮೆ ನಮ್ಮ ಪರಿವಾರದಾಗೂ ಕೋರ್ ಕಮೀಟೀ ಸುದ್ದಿ ಊರ ಮಂದಿಗೆ ಗೊತ್ತಾದ್ರು ಕೋರ್ ಮಂದಿಗೆ ಗೊತ್ತಿರಂಗಿಲ್ಲಾ, ಆದ್ರ ನನ್ನ ಹೆಂಡತಿ “ಏ, ಹೋಗರಿ…ಎಲ್ಲಿ ವಿಶೇಷ, ನಾ ಏನ್ ಬಿಜೇಪಿ ಹೈಕಮಾಂಡಿನ? ನಾಲ್ಕ ವರ್ಷದಾಗ […]ಮಕ್ಕಳಿರಲವ್ವಾ ಮನೆತುಂಬ….

ಜುಲೈ11ಕ್ಕ world population day ಅಂತ, ನಿನ್ನೆ ನಮ್ಮ ಒಣ್ಯಾಗಿನ ಮಂದಿ ಬಂದ ” ಸರ್. ನೀವು population day ಕಾರ್ಯಕ್ರಮದ ದಿವಸ ಬಂದ ಒಂದ creative ಭಾಷಣಾ ಮಾಡಬೇಕು” ಅಂತ ಹೇಳಿದರು. ಅಲ್ಲಾ ನಾವೇಲ್ಲಾ ಜಾಸ್ತಿ creative ಆಗಿ create ಮಾಡಿದ್ದಕ್ಕ ನಮ್ಮ ಜನಸಂಖ್ಯೆ ಇಷ್ಟ ಆಗೇದ ಇನ್ನ ಈ creative ಭಾಷಣಾ ಅಂದರ ಏನಪಾ ಅಂತ ನಾ ತಲಿಕೆಡಸಿಕೊಳ್ಳಿಕತ್ತೆ. ಅದಿರಲಿ, ಇವರ ಎಲ್ಲಾ ಬಿಟ್ಟ ನನ್ನ ಯಾಕ ಭಾಷಣಕ್ಕ ಕರದರು ಅಂತ ನಂಗ ಗೊತ್ತಾಗಲಿಲ್ಲಾ. […]ಕಮಲೇ ಕಲಹೋತ್ಪತ್ತಿಃ’

ನಿನ್ನೆ ಮುಂಜ-ಮುಂಜಾನೆ ಎದ್ದೋವನ ನಮ್ಮಪ್ಪ “ಆ ಕಿಲ್ಲೆದಾಗಿನ ರಾಮಭಟ್ಟರಿಗೆ ಫೊನ್ ಮಾಡಿ ಮನಿಗೆ ಬಾ ಅಂತ ಹೇಳು” ಅಂದಾ. ಆಷಾಡ ಮಾಸದಾಗ ನಮ್ಮಪ್ಪನ ತಲ್ಯಾಗ ಏನ ಹೊಕ್ಕತಪಾ, ಇಂವಾ ಏನರ ಯಡಿಯೂರಪ್ಪಗ ಜೇಲ್ ಬದ್ಲಿ ಬೇಲ್ ಸಿಕ್ಕತಂತ ಮನ್ಯಾಗ ಶ್ರೀಸತ್ಯನಾರಯಣ ಪೂಜಾ ಮಾಡಸೋಂವನೋ ಇಲ್ಲಾ ವಿಧಾನಸಭಾದ್ದ ಕಲಾಪಕ್ಕ ಅರವತ್ತ ತುಂಬೇದಂತ ಶಾಂತಿ ಮಾಡಸೊಂವನೊ ಅನಸಲಿಕತ್ತು. ಹೇಳಲಿಕ್ಕೆ ಬರಂಗಿಲ್ಲಾ, ನಮ್ಮಪ್ಪಾ ಕಟ್ಟಾ ಬಿಜೇಪಿ ಮನಷ್ಯಾ, ಅದರಾಗ ಯಡಿಯೂರಪ್ಪನ ಪೈಕಿ ಬ್ಯಾರೆ, ತನ್ನ ತಲ್ಯಾಗ ತಿಳದಿದ್ದ ಮಾಡೋಂವಾ. ಯಾರಿಗೂ ಹೇಳಂಗಿಲ್ಲಾ […]ಮುಂದಿನ ಸಂಡೆ ‘ಪಪ್ಪಾನ ದಿವಸ’

ನಿನ್ನೆ ಸಂಜಿ ಮುಂದ ನನ್ನ ಹೆಂಡತಿ ಮಗಳಿಗೆ “ಮುಂದಿನ ಸಂಡೆ ನಿಮ್ಮಪ್ಪಂದ ದಿವಸ ಅದ, ಅವತ್ತ ಪಪ್ಪಾ ಪಾರ್ಟಿ ಕೋಡ್ತಾರ, ಊಟಕ್ಕ ಹೊರಗ ಹೋಗಣಂತ ಪುಟ್ಟಿ” ಅಂತ ಹೇಳಿಕತ್ತಿದ್ಲು. “ಹಂಗರ ಅವತ್ತ ಪಪ್ಪಾನ ಫೋಟಕ್ಕ ಮಾಲಿ ಹಾಕೋದು?” ಅಂತ ನನ್ನ ಮಗಳ ಕೇಳಿದ್ಲು. “ಛೆ, ಹುಚ್ಚಿ. ವಳತ ಅನ್ನ, ಏನೇನರ ಮಾತಡ್ತದ ಖೋಡಿ ಒಯ್ದಂದು. ಇನ್ನು ನಿಮ್ಮಪ್ಪ ಮನಿ ಕಟ್ಟಸಬೇಕು, ನಿಮಗ ಸಾಲಿ ಕಲಿಸಿ ದೊಡ್ಡವರನ ಮಾಡಬೇಕು” ಅಂತ ಆ ಹುಡುಗಿಗೆ ಬೈದ ಬಾಯಿ ಮುಚ್ಚಿಸಿದ್ಲು. ಪಾಪ, […]