Infosys ಮಾರಿ facebook ತೊಗೊ

ಹೋದ ವಾರ ನಮ್ಮ sensex ದಪ್ಪಂತ ಬಿತ್ತ. ಹಂಗ ಇದ ಏಳೋದ ಬೀಳೋದ ನಮಗೇನ ಹೋಸಾದಲ್ಲ ಬಿಡ್ರಿ, ಆದ್ರೂ ಈ ಸರತೆ ಬೀಳಲಿಕ್ಕೆ ಕಾರಣ ಅಂದ್ರ ಅಮೇರಿಕನ್ ಮಾರ್ಕೆಟನಾಗ facebook ಎತ್ತ, ಅಂದ್ರ ಆವಾಗ facebookದ್ದ IPO ಇತ್ತ. ಇಷ್ಟ ದಿವಸ ಏನ್ ಅವನೌನ ಅಗದಿ facebook ಪ್ರೈವೆಟ್ ಅಫೇರ್ ಇದ್ದೊರಗತೆ ಈಗ ಪಬ್ಲಿಕ್ ಆಫರ್ ಮಾಡ್ಲಿಕತ್ತಾರಲಾ ಅನ್ನಬ್ಯಾಡರಿ, ಹಂಗ ನಾವೇಲ್ಲಾ ನಮ್ಮ ಪ್ರೈವೆಟ್ ಅಫೇರ facebookನಾಗ ಹುಚ್ಚರಂಗ public ಮಾಡ್ಕೊಂಡಿದ್ದಕ್ಕ facebookದವರು ಪಬ್ಲಿಕ್ ಆಫರ್ ಮಾಡಿದ್ದು. […]googleನಾಗ ನಮ್ಮಪ್ಪ ಯಾರ ನೋಡ………

ಈ ಸುಟ್ಯಾಗ ಮಕ್ಕಳ ಮನ್ಯಾಗ ಕೂತ ಜೀವಾ ತಿಂತಾಂವ ಅಂತ ಒಂದ ಐದನೂರ ರೂಪಾಯಿ ಬಡದ ಸಮ್ಮರ್ ಕ್ಯಾಂಪಗೆ ಹಾಕಿದರ, ಆ ಸಮ್ಮರ್ ಕ್ಯಾಂಪನವರು ಮತ್ತ ಪೆರೆಂಟ್ಸ್ ಜೀವಾ ತಿನ್ನಲಿಕ್ಕೆ ಆ ಮಕ್ಕಳಿಗೆ ಹೋಮವರ್ಕ ಕೊಟ್ಟ ಕಳಸ್ತಾರ. ಇಷ್ಟ ದಿವಸ ಮಾಡಿದ್ದಲ್ಲದ ಈಗ ಸುಟ್ಯಾಗೂ ನಾವು ಹೋಮವರ್ಕ ಮಾಡಬೇಕಾಗೇದ. ಮೊನ್ನೆ ನನ್ನ ಮಗಗ ‘who is the father of the state ಅಂತ ಕೇಳ್ಕೊಂಡ ಬಾ ನಿಮ್ಮಪ್ಪನ ಕಡೆ’ ಅಂತ ಹೇಳಿ ಕಳಿಸ್ಯಾರ. ಅಲ್ಲಾ ನನಗ […]ಹಾಡಿದ್ದ ಹಾಡೋ ಕಿಸಬಾಯಿ ದಾಸ……..

ಇತ್ತಿಚಿಗೆ ಮುಂಜಾನೆ ಎದ್ದ ಪೇಪರ ತಗದರ ಸಾಕ ಬರೇ ಭಿನ್ನಮತದ ಸುದ್ದಿನ ತುಂಬಿರತದ, ಅದರಾಗ ಮಾತ -ಮಾತಿಗೆ ಹೈಕಮಾಂಡ ಅಂತ ದಿಲ್ಲಿ ಮಂದಿನ್ನ ಕರಸ್ತಾರ, ಅವರ ಇಲ್ಲೆ ಬಂದ ಉದ್ದಹುರಿಯೋದು ಅಷ್ಟರಾಗ ಅದ. ಖರೇ ಅಂದ್ರ ನಮ್ಮ ರಾಜ್ಯದ ರಾಜಕೀಯ ಹದಗೆಡಸಿದ್ದ ಈ ದಿಲ್ಲಿ ಹೈಕಮಾಂಡನವರು. ಅವರಿಗರ ಸ್ವಂತ ಬುದ್ಧಿ ಇಲ್ಲಾ, ಲೋಕಲ್ ಪಾಲಿಟಿಕ್ಸ ತಿಳಿಯಂಗಿಲ್ಲಾ, ಸುಮ್ನ ಇಲ್ಲೆ ಬಂದ ಯಾರ ಜಾಸ್ತಿ ರೊಕ್ಕಾ ಕೊಡ್ತಾರ ಅವರ ಬಾಲ ಬಡದ ಹೋಗಿ ಬಿಡ್ತಾರ. ಹಗ್ಗ ಹರೆಯಂಗಿಲ್ಲಾ ಕೋಲ್ […]ಊ ಲಾ ಲಾ ಲಾ ಲೇಓ……..

ಹಂಗ ಹೆಡ್ಡಿಂಗ್ ಓದಿ ಗಾಬರಿ ಆಗಿ ಇವಂಗೇನ್ ನಿನ್ನಿದ ಇನ್ನೂ ಇಳದಿಲ್ಲೇನ ಅನ್ನಬ್ಯಾಡ್ರಿ. ಇದ ಒಂದ ವಾರದ ಹಿಂದಿಂದ. ಒಂದ ಹತ್ತ ದಿವಸದ ಹಿಂದ ನನಗ ಅಮೇರಿಕಾದಿಂದ ನಮ್ಮ ಸಾವಜಿ ದೋಸ್ತ ಫೋನ್ ಮಾಡಿ ” ಲೇ, ನಮ್ಮ ದೇಶದಾಗ ನ್ಯಾಶನಲ್ ಬೀಯರ ಡೇ ಮಾಡೋರ ಇದ್ದಾರ, ಯಾರನರ ಶಾಣ್ಯಾರನ ಇಂಡಿಯಾದಿಂದ ಮಾತಾಡಲಿಕ್ಕೆ ಕರಸ ಅಂತ ಹೇಳ್ಯಾರ. ನೀ ಹೆಂಗ ಇದ್ದರು ಹುಬ್ಬಳ್ಳಿ ಕಮರಿಪೇಟದಾಗ ಹುಟ್ಟಿ ಬೆಳದಾಂವ, ಒಂದ ಬಿಟ್ಟ ಹತ್ತ ಬ್ರ್ಯಾಂಡ್ ಬಗ್ಗೆ ಗೊತ್ತಿದ್ದಾಂವ, ಗಾಡಿ […]ಕನ್ಯೆಗಳು ಕಾಣೆಯಾಗಿವೆ

ಒಮ್ಮೆ ನೈಮಿಷವೆಂಬ ಅರಣ್ಯದಲ್ಲಿ ವಾಸಿಸುವ ಶೌನಕರು, ೠಷಿ-ಮುನಿಗಳು ಭರತಖಂಡದ ಬ್ರಾಹ್ಮಣ ವರಗಳ ದಯನೀಯ ಸ್ಥಿತಿಯನ್ನು ಕುರಿತು, ಪುರಾಣಗಳನ್ನು ಬಲ್ಲ ಮಹಾ ತೇಜಸ್ವಿಯೂ, ಮಹಾಕೀರ್ತಿವಂತನೂ, ಶ್ರೀಮನ್ ನಾರಾಯಣನ ಭಕ್ತನೂ ಆದ ನಾರದನನ್ನೂ ಕುರಿತು ಬ್ರಾಹ್ಮಣ ವರಗಳ ಹಿತಾರ್ಥವಾಗಿ ಪ್ರಶ್ನೆ ಮಾಡಿದರು. ” ಎಲೈ ಮುನಿಯೆ! ಕಲಿಯುಗದ ಬ್ರಾಹ್ಮಣ ವರಗಳ ಕನ್ಯಾ ಬಯಕೆಯು ಅದಾವ ವ್ರತದಿಂದ ಇಲ್ಲವೇ ಆದಾವ ತಪಸ್ಸಿನಿಂದ ಈಡೇರುವವು?” ಆಗ ನಾರದ ಮಹರ್ಷೀಯೂ” ಏಲೈ ಋಷಿಗಳೇ ! ಇದೇ ಪ್ರಶ್ನೆಯನ್ನು ಮೊನ್ನೆ ನಾನು ಕಮಲಾಪತಿಯಾದ ಶ್ರಿಮನ್ ನಾರಯಣನನ್ನು […]ಕಮಲದೊಳ್ ಪಕ್ಷವನ್ನ್ ಕೆಣಕಿ ಉಳಿದವರಿಲ್ಲ

ಹೋದ ಸಂಡೇ ಶಿರ್ಶಿ ಜಾತ್ರೆಗೆ ಹೋಗಿದ್ದೆ. ಯಾಕೋ ಜಾತ್ರ್ಯಾಗ ಅಷ್ಟ ಮದ್ಲಿನಂಗ ಗದ್ಲನ ಇದ್ದಿದ್ದಿಲ್ಲಾ. ನಾ ದೇವರಿಗೆ ಕಾಯಿ ಒಡಿಸಿಕೊಂಡ ಕೈಮುಗದ ಹೊರಗ ಬಂದೆ. ಜಾತ್ರೆ ತುಂಬ ನಾಟಕ ಕಂಪನಿ, ಯಕ್ಷಗಾನದವರು , ಆಟಗಿ ಸಾಮಾನ ಮಾರೋರು ಇವರ ಇದ್ದರು. ಆದರ ಅವರನ ಮಾತಾಡ್ಸೋರು ಇದ್ದಿದ್ದಿಲ್ಲಾ. ಯಕ್ಷಗಾನ- ನಾಟಕ ಕಂಪನಿ ಮುಂದ ಅಂತೂ ಹಣಕಿ ಹಾಕೋರ ಇದ್ದಿದ್ದಿಲ್ಲಾ. ಪಾಪ ಆ ಯಕ್ಷಗಾನ ಪಾತ್ರದವರಂತೂ ಡ್ರೆಸ್ ಹಾಕ್ಕೊಂಡ್ ಯಾರರ ಒಳಗ ಬಂದ್ರ ಯಕ್ಷಗಾನ ಶುರು ಮಾಡೋಣ ಅಂತ ದಾರಿ […]International ಮುತ್ತೈದೀಯರು ?

ನಿನ್ನೆ ಸಂಜಿಗೆ ನಾ ಮನಿಗೆ ಬರೋದ ತಡಾ ನನ್ನ ಹೆಂಡತಿ ತಯಾರ ಆಗಿ ನಿಂತಿದ್ದಳು , “ಯಾಕವಾ, ಎಲ್ಲೊ ಹೊಂಟಿಯಲ್ಲಾ ? ” ಅಂತ ಕೇಳಿದೆ, ” ನಮ್ಮ ಮಹಿಳಾ ಮಂಡಳದವರ ಜೋತಿಗೆ ಹೊರಗ ಹೊಂಟೇನಿ ” ಅಂದ್ಲು. ಅಲ್ಲಾ ಮನ್ಯಾಗ ಮೊದ್ಲ ನಮ್ಮವ್ವಗ ಮೂರ ದಿವಸದಿಂದ ಆರಾಮ ಇಲ್ಲಾ, ಹಂತಾದರಾಗ ಇಕಿ ತಿರಗಲಿಕ್ಕೆ ಹೊಂಟಾಳಲಾ ಅಂತ ಸಿಟ್ಟಲೆ ” ಹಂತಾದ ಏನ ವಿಶೇಷದ , ಯಾರರ ಹಡದಾರೊ ಏನ ಮ್ಯಾಲೆ ಹೋಗ್ಯಾರೋ ? ” ಅಂತ […]ಭಾಜಪಾಡಳಿತದ ಕೊನೆಯ ದಿನಗಳು…………..

ಮೊನ್ನೆ ಮಟಾ -ಮಟಾ ಮಧ್ಯಾಹ್ನ ದುರ್ಗದಬೈಲಾಗ ದುರ್ವಾಸ ಮುನಿಗಳು ಕಂಡರು, ಒಂದ ಲಂಡ ಬರ್ಮೋಡಾದ ಮ್ಯಾಲೆ ಓಂ ಅಂತ ಬರದಿದ್ದ ಕೇಸರಿ ಟಿ–ಶರ್ಟ ಹಾಕ್ಕೊಂಡ ಸಂತ್ಯಾಗ ಲಿಂಬೆ ಹಣ್ಣು, ಹಸಿಮೆಣಸಿನ ಕಾಯಿ ಆರಸಲಿಕತ್ತಿದ್ದರು. ಅವರ ಆಕಾರ ನೋಡಿದ್ರ ಸದಾನಂದ ಗೌಡ್ರದ ಮಲ್ಪೆ ‘ರೇವ್’ ಪಾರ್ಟಿ ಮುಗಿಸಿಕೊಂಡ ಬಂದಂಗ ಕಾಣತಿತ್ತು. ನಾಡದ ಅಮವಾಸ್ಯೆಲಾ, ಬಹುಶಃ ನಮ್ಮ ವಿಧಾನಸೌಧಕ್ಕ ದೃಷ್ಟಿ ಬೀಳಬಾರದು ಅಂತ ಮಾಟಾ-ಮಂತ್ರಾ ಮಾಡಲಿಕ್ಕೆ ಬಂದಿರಬೇಕು ಅನ್ಕೊಂಡೆ. ನಂಗ ಈ ಮನಷ್ಯಾನ ಹುಬ್ಬಾಳ್ಯಾಗ ನೋಡಿ ಹೆದರಕಿನ ಆತು. ಮೊದ್ಲ […]ನೀ facebookನಾಗ್ ಇಲ್ಲಾ ?…!!!

ನಿನ್ನಿಗೆ ನಮ್ಮ facebookಗೆ ಎಂಟ ತುಂಬಿ ಒಂಬತ್ತರಾಗ ಬಿತ್ತು. ನಾವು ಲೋಕಲ್ ಫೆಸಬುಕ್ ಗೆಳ್ಯಾರೆಲ್ಲಾ ಸೇರಿ ಅದರ ಬರ್ಥಡೆ ಸೆಲೆಬ್ರೇಟ್ ಮಾಡಿದ್ವಿ. ಇತ್ತೀಚಿಗಂತೂ ‘facebook ’ ನಮಗೆಲ್ಲಾ ಒಂದ ಕೆಟ್ಟ ಚಟಾ ಆಗಿಬಿಟ್ಟದ. ನನಗಂತೂ ಎದ್ದ ಕೂಡಲೇನ ಕ್ಯಾಮಾರಿಲೇ ಮೊದಲ ಕಂಪ್ಯೂಟರನಾಗ ಫೇಸಬುಕ್ ಅಕೌಂಟ ಒಪನ್ ಮಾಡಿ ನೋಡಿ, good morning to all ಅಂತ ಎಲ್ಲಾರಿಗೂ ವಿಶ್ ಮಾಡಿ on the way to bathroom ಅಂತ ಸ್ಟೇಟಸ್ ಮೇಸೆಜ್ ಹಾಕಿದ ಮ್ಯಾಲೆ ಮುಂದಿನ ಕೆಲಸ. […]‘ವಿದ್ಯುದ್ದಾಲಿಂಗನಕೆ’ ಸಿಕ್ಕಿದೆ ಜೀವಾ…….. ಸಾಯಲಿಕ್ಕೂ ಕರೆಂಟ ಇಲ್ಲಾ

ನಿನ್ನೆ ರಾತ್ರಿ ಮಲಕೋಬೇಕಾರ ನನ್ನ ಹೆಂಡತಿ ಮಾರಿ ನೋಡಿ ಮಲ್ಕೋಂಡಿದ್ದೇನೋ ಏನೋ ? ನಡ ರಾತ್ರ್ಯಾಗ ಗಬಕ್ಕನ ಎಚ್ಚರ ಆತು. ಕಿವ್ಯಾಗ ಗುಂಗಾಡ ಗುಂಯ್ಯ ಅನ್ನಲಿಕತ್ತಿದ್ವು, ಸುಡಗಾಡ ಕರಂಟ ಯಾವಾಗೋ ಹೋಗಿ ಫ್ಯಾನ ಬಂದ ಆಗಿತ್ತು. ಒಂದ ಕಡೆ ಗೊಡೆ, ಒಂದ ಕಡೆ ಹೆಂಡತಿ, ನಡಕ ನಾ ಸಿಕ್ಕೊಂಡ ಸಾಯಲಿಕತ್ತಿದ್ದೆ. ಬೆಳಕಾಗೋದನ್ನ ಕಾಯಕೋತ ಅಂಗಾತ ಬಿದ್ದೆ, ಅಂತೂ ಬೆಳಕಾತ, ಹೀಂಗ ಬಾಥರೂಮ ಒಳಗ ಇನ್ನೇನ ಮುಂಜಾನಿ ಕಾರ್ಯಕ್ರಮ ಮುಗಸಬೇಕ ಅನ್ನೊದ್ರಾಗ ನೀರ ಬಂದಾತು “ಲೇ ಕರೆಂಟ ಬಂದಾವ […]ನಾ ಸತ್ತಂಗ ಮಾಡ್ತೇನಿ …..ನೀ ಅತ್ತಂಗ ಮಾಡ………..

ಡಿಸೆಂಬರ್ ೨೯ ರ ರಾತ್ರಿ ನಮ್ಮ ಎಮ್. ಎಲ್. ಏ ಮಾಮಾ ಹನ್ನೆರಡ ಆದ್ರು ಮಲ್ಕೋಳ್ಳಲಾರದ ಟಿ.ವಿ ಮುಂದ ಕೂತಿದ್ದಾ ” ಮಾಮಾ ಇವತ್ತ ಹೊಸ ವರ್ಷ ಅಲ್ಲಾ ಹೋಗಿ ಮಲ್ಕೊ , ಹೊಸಾ ವರ್ಷಕ್ಕ ಇನ್ನೂ ಎರಡ ದಿವಸ ಅದ ” ಅಂದೆ, ” ಲೇ, ನೀ ಸುಮ್ಮನ ಮಲ್ಕೊ ಮಗನ, ಇವತ್ತ ರಾತ್ರಿ ರಾಜ್ಯಸಭಾದಾಗ ಲೋಕಪಾಲ್ ಬಿಲ್ ಬಿತ್ತಂದರ ನಮಗೆಲ್ಲಾ ಇವತ್ತ ಹೊಸ ವರ್ಷ ಇದ್ದಂಗ ” ಅಂದಾ. ಕಡಿಕೂ ಅವತ್ತ ರಾಜ್ಯಸಭಾದಾಗ ಲೋಕಪಾಲ್ […]‘ಲೋಕಪಾಲ ಪುರಾಣೆ’ ಪ್ರಥಮೋಧ್ಯಾಯಃ

ಮೊನ್ನೆ ಹಂಪಿಗೆ ನಮ್ಮಜ್ಜನ ಧರ್ಮೋದಕ ಬಿಡಲಿಕ್ಕ ಹೋಗಿದ್ದೆ. ನದಿ ದಂಡಿ ಮ್ಯಾಲೆ ‘ಕಾಗಿ ಪಿಂಡ’ ರೆಡಿಮಾಡಿ ಕಾಗಿಗೆ ಅಹ್ವಾನ ಮಾಡಿದರು. ಒಂದ ಕಾಗಿನೂ ಅರ್ಧತಾಸ ಆದರೂ ಪಿಂಡದ ಹತ್ತರ ಹಾಯಲಿಲ್ಲಾ , ನಾವೇಲ್ಲಾ ಒದ್ದಿ ಪಂಜಿಲೆ ಇಂಥಾ ಥಂಡ್ಯಾಗ ಸಾಯ್ಕೋತ ಕಾಗಿ ಪಿಂಡ ಆಗೋದನ್ನ ಕಾಯಲಿಕತ್ತಿದ್ದಿವೆ . ಹೊಟ್ಟಿ ಹಸ್ತ ನಮ್ಮಪ್ಪಗ ಬಿ. ಪಿ. ನೆತ್ತಿಗೆ ಏರಲಿಕತ್ತ, ನಮ್ಮ ಅತ್ಯಾನ ಶುಗರ ಲೊ ಆತು. ನಮ್ಮ ಮೂರ ಮಂದಿ ಕಾಕಾಗೋಳ ಪಿಂಡದ ಮುಂದ ಹೋಗಿ ಮನಸ್ಸಿನಾಗ ನಾವ […]ಏನ್ ‘ಗುರು’……. ಕಾಫಿ ಆಯ್ತಾ?

ನಾಳೆ ಡಿಸೆಂಬರ್ ೧೩ಕ್ಕ ನಮ್ಮ ದೇಶದ ಸಂಸತ್ತ ಮ್ಯಾಲೆ ದಾಳಿಯಾಗಿ ಹತ್ತ ವರ್ಷ ಆತು. ನಮ್ಮ ಮಂದಿಗೆ ಪಾರ್ಲಿಮೆಂಟ ಮ್ಯಾಲೆ ಅಟ್ಯಾಕ ಆಗಿತ್ತೂ ಅದನ್ನ ತಡಿಲಿಕ್ಕೆ ಹೋಗಿ ಏಳ ಮಂದಿ ಹುತಾತ್ಮರಾಗಿದ್ದರು ಅನ್ನೋದ ನೆನಪಾಗೋದ ವರ್ಷಕ್ಕ ಒಂದ ಸಲಾ. ಏನ್ಮಾಡೋದು ನಮ್ಮ ದೇಶದಾಗ ಮ್ಯಾಲಿಂದ ಮ್ಯಾಲೆ ಸಣ್ಣ -ಪುಟ್ಟ ದಾಳಿ , ಬಾಂಬ್ ಸ್ಪೋಟ ಆಗಕೋತ ಇರತಾವ. ಒಂದ ಮರೆಯೋದರಾಗ ಇನ್ನೋಂದ ಆಗಿರತದ. ಪಾಪ, ಜನಾ ಯಾವದಂತ ನೆನಪ ಇಡಬೇಕು. ಇನ್ನ ಹಿಂತಾದರಾಗ ಪಾರ್ಲಿಮೆಂಟಗೆ ಅಟ್ಯಾಕ ಮಾಡಿದವರನ […]ಪಾಟಿ ಮ್ಯಾಲೆ ಪಾಟಿ , ಪಾರ್ಲಿಮೆಂಟ್ ಸೂಟಿ……………….

” ಏನ್ರಿ ಸಾಹೇಬರ ಮನ್ನೇನ ದಿಲ್ಲಿಗೆ ಸೆಶನಗೆ ಹೋಗಿದ್ರಿ, ಯಾವಾಗೋ ವಾಪಸ ಬಂದಿರಲಾ ? ” ಅಂತ ನಿನ್ನೆ ಒಂದ ಮದುವ್ಯಾಗ ನಮ್ಮ ಲೋಕಲ ಎಮ್.ಪಿ. ನೋಡಿ ಕೇಳಿದೆ. ” ಏ, ದಿನಾ ಪಾರ್ಲಿಮೆಂಟನಾಗ ಗದ್ಲಾ ಮಾಡಿ ಸೂಟಿ ಮಾಡ್ಲಿಕತ್ತಾರ ಹಿಂಗಾಗಿ ಅಲ್ಲೆ ಇದ್ದರ ಏನ್ ಮಾಡೋದ ಅಂತ ವಾಪಸ ಬಂದೆ, ಅದರಾಗ ಈಗ ಲಗ್ನದ ಸಿಸನ್ ಬ್ಯಾರೆ, ಉರಾಗ ಒಂದಿಷ್ಟ ಮದುವಿ ಅದಾವ, ಅವನ್ನೆಲ್ಲಾ ಬಿಡಾಕೂ ಬರಂಗಿಲ್ಲ. ಒಂದ ವಾರ ಇದ್ದ ಎಲ್ಲಾ ಮುಗಿಸಿಕೊಂಡ ಮುಂದ […]” ಇದೇನ ರಕ್ತೋ, ಏನ್ ಸಕ್ಕರಿ ಪಾಕೊ ? “

ನಾಳೆ ನವೆಂಬರ್ ೧೪ಕ್ಕ ’ವಿಶ್ವ ಮಧುಮೇಹ ದಿವಸ’, ಅದರ ಸಂಬಂಧ ಒಂದ ವಾರದಿಂದ ನಮ್ಮ ದೋಸ್ತ ಬಂಕಾಪುರ ಡಾಕ್ಟರ್ ಡಯಾಬೀಟಿಸ್ ಕ್ಯಾಂಪ್ ಮಾಡಲಿಕತ್ತಾನ. ” ನೀವು ಗಂಡಾ ಹೆಂಡತಿ ಬಂದ ಪುಕ್ಕಟ ಚೆಕ್ ಮಾಡಿಸಕೊಂಡ ಹೋಗರಿ ” ಅಂತ ಅಂದಿದ್ದಾ. ಹಂಗ ನೋಡಿದ್ರ ನಂಬದೇನ ಶುಗರ್ ಚೆಕ್ ಮಾಡಿಸ್ಗೋಳೊ ವಯಸ್ಸೇನಲ್ಲಾ ಆದರು ಪುಕಶೆಟ್ಟೆ ಚೆಕ ಮಾಡಸೋದ ಅಂತ ಹೋದವಿ. ನೂರಾರ ಮಂದಿ ನಮ್ಮಂಗ ಬಂದ ಪಾಳಿ ಹಚ್ಚಿದ್ದರು. ಇಬ್ಬರು ರಕ್ತಾ ಸ್ಯಾಂಪಲ್ ಕೊಟ್ಟ ರಿಪೋರ್ಟಗೆ ಕಾಯಕೋತ ಕೂತವಿ. […]