April 26, 2017 - Posted by Prashant Adur- 0 Comments
ನೀವು ಜಾಕಿ ಕಾಲಿನ್ಸಂದ the world is full of divorced women ಮತ್ತ the world is full of married men ಬುಕ್ಕ ಹೆಸರ ಕೇಳಿರಬೇಕಲಾ. ಅದ context ಒಳಗ ನನ್ನ ಆರ್ಟಿಕಲ ಹೆಸರು ’the world is full of ಅಮ್ಮಗೊಳು’. ಒಂದ ಕಾಲದಾಗ ನಮ್ಮ ಹಾನಗಲ್ಲ ತುಂಬ ಬರೇ ಅಮ್ಮಗೊಳ ಇರತಿದ್ದರಂತ. ಅಮ್ಮಗೊಳು ಅಂದರ ಮಡಿ ಹೆಂಗಸು, ಗಂಡ ಸತ್ತೋರು, ಸೊಕೇಶಿ. ಇವರು ಗಂಡ ಸತ್ತ ಹತ್ತನೇ ದಿವಸಕ್ಕ ಒಂಥರಾ ಸನ್ಯಾಸ […]
April 3, 2017 - Posted by Prashant Adur- 2 Comments
ಲಗ್ನಾಗಿ ಹನಿಮೂನ ಮುಗದ ಹಿಂಗ ನನ್ನ ಹೆಂಡ್ತಿ ಗಂಡಗ, ಮನಿಗೆ ಹೊಂದಕೊಂಡ್ಲು ಅಂತ ಅನ್ನೋದರಾಗ ಹಗರಕ ಒಂದೊಂದ ಅಕಿವು ಕಿರಿ ಕಿರಿ ಶುರು ಆದ್ವು. ಅಕಿ ಒಂಥರಾ ಎಲ್ಲಾದರಾಗೂ ಪರ್ಟಿಕ್ಯುಲರ್ ಇದ್ದಳು, ಆರ ಗಂಟೇಕ್ಕ ಏಳ ಬೇಕಂದರ ಏಳ ಬೇಕು, ಒಂಬತ್ತುವರಿಗೆ ಮಲ್ಕೋಬೇಕ ಅಂದರ ಮಲ್ಕೋಬೇಕು ಅದ ಬೇಕಾರ ನಿದ್ದಿ ಬಂದಿರ್ಲಿ ಬಿಟ್ಟಿರ್ಲಿ, ಅಲ್ಲಾ ಹಂಗ ಲಗ್ನ ಆದ ಹೊಸ್ತಾಗಿ ಯಾ ಮಗಾ ಒಂಬತ್ತುವರಿಗೆ ಮಲ್ಕೊತಾನ ಆ ಮಾತ ಬ್ಯಾರೆ ಆದರು ಮಾತ ಹೇಳ್ತೇನಿ. ಹಿಂಗ ಇಕಿ […]
April 3, 2017 - Posted by Prashant Adur- 0 Comments
ನಮ್ಮ ಭಾಗಿರಥಿ ಮಾಮಿಗೆ ವರ್ಷಾ ಕಾಶಿಗೆ ಹೋಗೊ ಚಟಾ ಇತ್ತ. ಹಂಗ ಯಾರರ ’ನಾವ ಕಾಶಿಗೆ ಹೊಂಟೇವಿ, ನೀವ ಹೆಂಗಿದ್ದರೂ ಒಂದ ಸರತೆ ಬಿಟ್ಟ ಹತ್ತ ಸರತೆ ಹೋಗಿ ಬಂದವರ ಇದ್ದೀರಿ ನಮ್ಮ ಜೋಡಿನೂ ಬರ್ತಿರೇನ’ ಅಂತ ಕರದರ ಸಾಕ ರೈಟ ಅಂತ ಕಚ್ಚಿ ಏರಸೇ ಬಿಡ್ತಿದ್ಲು. ಪಾಪ ಗಂಡಂದ ಪೆನ್ಶನ್ ರೊಕ್ಕಾ ಪೂರ್ತಿ ಕಾಶಿ, ಬದರಿ, ರಾಮೇಶ್ವರಕ್ಕ ಹೋಗಿ ಹೋಗಿನ ಖಾಲಿ ಆಗಲಿಕತ್ತಿತ್ತ ಅಂದರೂ ಅಡ್ಡಿಯಿಲ್ಲಾ. ಹಂಗ ಅಕಿ ಕಾಶಿಗೆ ಹೋಗಬೇಕಾರ ಒಮ್ಮೆ ನಮ್ಮ ಮನಿಗೆ […]
March 29, 2017 - Posted by Prashant Adur- 0 Comments
ಏನ ಜನಾಪಾss, ಆ ಫೇಸಬುಕ್ ಬಂದಾಗಿಂದ ಅದರಾಗ ಸಂಬಂಧ ಇರಲಿ ಬಿಡಲಿ ತಮ್ಮ ತಲ್ಯಾಗ ಬಂದಿದ್ದೇಲ್ಲಾ ಬರಿತಾರ, ಅಲ್ಲಾ ಬರೀತಾರ ಅಂತಾರ ಅನ್ನೋದಕಿಂತಾ ಗೀಚತಾರ ಅನ್ನೋದ ಕರೆಕ್ಟ ಅನಸ್ತದ. ಅಲ್ಲಾ ಹಂಗ ತಾವ ಬರದರ ಬರ್ಕೊವಳ್ಳರಾಕ ಆದರ ಅದನ್ನ ಮತ್ತ ಒಂದ ಹತ್ತ ಮಂದಿಗೆ ಟ್ಯಾಗ ಮಾಡ್ತಾರ. ಇಲ್ಲೆ ನಮ್ಮ ಜೀವನನ ನಮಗ ವಜ್ಜ ಆಗಿರ್ತದ ಹಂತಾದರಾಗ ಮಂದಿ ಟ್ಯಾಗ ಕಟಗೊಂಡ ಫೇಸಬುಕ್ ತುಂಬ ನಮ್ಮ ಪ್ರೊಫೈಲ ತಿರಗತಿರತದ. ಅಲ್ಲಾ ಜನಾ ಏನೇನ ಹಾಕೋತಾರ ಫೇಸಬುಕ್ಕಿನಾಗ ಅಂತೇನಿ. […]
March 29, 2017 - Posted by Prashant Adur- 0 Comments
ಒಂದ ಆರ ತಿಂಗಳ ಹಿಂದಿನ ಮಾತ, ನಮ್ಮ ಮಾಮಾನ ಮಗನ ಮದುವಿ ಇತ್ತ, ಅದು ಜನೇವರಿ ಒಂದಕ್ಕ. ಬಹುಶ: ೨೦೧೬ರಾಗ ಮದುವಿ ಮಾಡ್ಕೊಂಡ ೨೦೧೬ರಾಗ ಒಂದ ಹಡದ ಬಿಡಬೇಕ ಅಂತ ಬರೋಬ್ಬರಿ ಒಂದನೇ ತಾರಿಖಿಗೆ ಮದುವಿ ಇಟಗೊಂಡಿದ್ದಾ ಕಾಣ್ತದ. ಅಲ್ಲಾ ಯಾಕಂದರ ಈಗಿನ ಹುಡುಗರಿಗೆ ಮೊದ್ಲ ಕನ್ಯಾ ಸಿಗಂಗಿಲ್ಲಾ ಹಿಂಗ ಏನರ ಅಪರೂಪಕ್ಕ ಕನ್ಯಾ ಸಿಕ್ಕ ಮದುವಿ ಆಗಿಬಿಟ್ಟರ ಕಂಡೇನೊ ಇಲ್ಲೊ ಅನ್ನೊರಂಗ ಮಾಡಿ ಪ್ಲ್ಯಾನಿಂಗ ಏನ ಅಂಬೊದನ್ನ ತಿಳ್ಕೊಳೊದರಾಗ ಒಂದ ಹಡದ ಬಿಡ್ತಾವ ಹುಚ್ಚ ಖೋಡಿ […]
March 29, 2017 - Posted by Prashant Adur- 2 Comments
”ಲೇ ದನಾಕಾಯೋನ ಹೇಳಿದ್ದ ತಿಳಿತದ ಇಲ್ಲ ನಿನಗ, ಮಂಗ್ಯಾ ಒಯ್ದಂದ. ಎಷ್ಟ ಸರತೆ ಹೇಳಬೇಕ ಆ ಸುಡಗಾಡ ಟಿ.ವಿ ಬಿಟ್ಟ ಏಳ ಅಂತ” ಅಂತ ನನ್ನ ಹೆಂಡ್ತಿ ಒಮ್ಮಿಕ್ಕಲೇ ಜೋರಾಗಿ ಅಡಗಿ ಮನ್ಯಾಗಿಂದ ಒದರಿದ್ಲು. ಅಕಿ ಒದರೋದ ತಡಾ ನಾ ಗಾಬರಿ ಆಗಿ ಭಡಕ್ಕನ ಎದ್ದೋನ ’ಏನಾತ, ಹಂಗ್ಯಾಕ ಒದರಿದಿ’ ಅಂತ ನಾ ಅಂದರ ’ಅಯ್ಯ ನೀವ ಕೂತಿರಿನ ಟಿ.ವಿ ಮುಂದ ನಾ ಪ್ರಥಮ ಕೂತಾನ ಅಂತ ತಿಳ್ಕೊಂಡಿದ್ದೆ, ಎಲ್ಲೆ ಹೋತ ಪೀಡಾ ಅದ, ಬೆಳಕ ಹರದರ […]
March 29, 2017 - Posted by Prashant Adur- 1 Comment
ಇದ ನನ್ನ ಹೊಸ್ದಾಗಿ ಮದುವಿ ಆದಾಗಿನ ಮಾತ, ಹಂಗ ನಾ ಮದುವಿ ಆಗಿದ್ದ ಲೋಕಲ ಕನ್ಯಾ ಹಿಂಗಾಗಿ ವಾರದಾಗ ಒಂದ್ಯಾರಡ ಸಲಾ ನನ್ನ ಹೆಂಡ್ತಿ ತವರ ಮನಿಗೆ ಹೋಗೊದ ಸಹಜ ಆಗಿತ್ತ. ನಾವು ಪಾಪ ದಣೇಯಿನ ಮದುವಿ ಆಗೇದ ಹಂಗ ತವರಮನಿದ ನೆನಪ ಆಗ್ತದ ಹೋಗಿ ಬರಲಿ ತೊಗೊ ಹೆಂಗಿದ್ದರೂ ಲೋಕಲ ಅಂತ ಸುಮ್ಮನ ಇದ್ವಿ. ಹಂತಾದರಾಗ ಅಕಿ ಲಗಭಗ ಪ್ರತಿ ಸಂಡೆ ತವರ ಮನಿಗೆ ಹೋಗೆ ಹೋಗೊಕಿ. ನಾ ಎಷ್ಟ ’ಇವತ್ತ ಸಂಡೇ ನಾನು ಮನ್ಯಾಗ […]
March 29, 2017 - Posted by Prashant Adur- 0 Comments
ಮೊನ್ನೆ ಮುಂಜ ಮುಂಜಾನೆ ನಾ ಏಳೊ ಪುರಸತ್ತ ಇಲ್ಲದ ನಮ್ಮ ಧಾರವಾಡ ಅಬಚಿ ಬಂದಿದ್ಲು. ಹಂಗ ಅಕಿ ನಮ್ಮ ಮನಿಗೆ ಬರೋದ ಭಾಳ ಅಪರೂಪ ಹಂತಾದ ಎದ್ದ ಕೂಡಲೇ ಬೆಡ್ ಟೀ ಗೆ ನಮ್ಮ ಮನಿಗೆ ಬಂದಾಳ ಅಂದರ ಏನೋ ಭಾರಿ ಇಂಪಾರ್ಟೇಂಟ್ ಕೆಲಸ ಇರಬೇಕು ಅಂತ ಅನ್ಕೋಳೊದರಾಗ ನನ್ನ ಹೆಂಡ್ತಿ ’ರ್ರಿ, ಲಗೂ ಏಳ್ರಿ ಮೌಶಿಗೆ ನಿಮ್ಮ ಕಡೆ ಮಾತೊಡದ ಅದ ಅಂತ’ಅಂತ ನಂಗs ಎಬಿಸಿದ್ಲು. ನಾ ಹಂತಾದ ಏನ ಬಂತಪಾ ಇಕಿಗೆ ನನ್ನ ಕಡೆ […]
March 29, 2017 - Posted by Prashant Adur- 0 Comments
ನಂಗ ಈ ಪೋಲಿಸರ ಸಂಬಂಧ ಸಾಕ ಸಾಕಾಗಿ ಬಿಟ್ಟದ. ಇವರ ಯಾವಾಗ ಹೆಲ್ಮೆಟ್ ಹಾಕ್ಕೊಂಡಿಲ್ಲಾ ಅಂತ ಹಿಡಿತಾರ ಯಾವಾಗ ಡ್ರಿಂಕ್ & ಡ್ರೈವ ಅಂತ ಹಿಡಿತಾರ ಒಂದು ಗೊತ್ತಾಗಂಗಿಲ್ಲಾ. ತಮಗ ಮನಸ ಬಂದಾಗ ಹಿಡಿತಾರ ಮನಸ ಬಂದಾಗ ಬಿಡ್ತಾರ. ಹಂಗ ಮಂಥ್ ಎಂಡಿಂಗ್ ಇದ್ದಾಗ, ಪೆನಾಲ್ಟಿ ಟಾರ್ಗೇಟ್ ಕೊಟ್ಟಾಗ ಕಂಪಲ್ಸರಿ ಹಿಡಿತಾರ ಮತ್ತ. ಅಲ್ಲಾ, ಮೊದ್ಲs ನಮಗ ತಲಿ ಇರೋದ ಅಷ್ಟರಾಗ ಇನ್ನ ಹಂತಾದರಾಗ ಹೆಲ್ಮೇಟ್ ಹಾಕ್ಕೊಂಡ ಗಾಡಿ ಹೊಡಿ ಅಂದರ ಹೆಂಗ ಅಂತೇನಿ, ಅದರಾಗ ನಾ […]
March 29, 2017 - Posted by Prashant Adur- 0 Comments
ಮೊನ್ನೆ ಶನಿವಾರದ ದಿವಸ ಮುಂಜ ಮುಂಜಾನೆ ಎದ್ದೋಕಿನ ನನ್ನ ಹೆಂಡ್ತಿ ’ರ್ರೀ ಶನಿ ಗ್ರಹಕ್ಕ ಯಾವಾಗ ಕರಕೊಂಡ ಹೋಗ್ತಾರ?’ಅಂತ ಕೇಳಿದ್ಲು. ನಂಗ ಒಮ್ಮಿಕ್ಕಲೇ ಗಾಬರಿ ಆತು, ಅಲ್ಲಾ ರಾತ್ರಿ ಮಲ್ಕೋಬೇಕಾರ ಹೆಂತಾ ಛಲೊ ’ಗುಡ್ ನೈಟ್, ಸ್ವೀಟ್ ಡ್ರೀಮ್ಸ್’ ಅಂತ ಪಪ್ಪಿ ಕೊಟ್ಟ ಮಲ್ಕೊಂಡಿದ್ಲು ಈಗ ಮುಂಜಾನೆ ಏಳೊದರಾಗ ಏನಾತ ಇಕಿಗೆ ಅನಸ್ತು. ನಾ ಅಕಿ ಮಾರಿ ಒಂದ ಸರೆತೆ ನೋಡಿ ’ಲೇ ಮೊದಲ ಶನಿ ಶಿಂಗಾನಪುರಕ್ಕ ಹೋಗಿ ಬರೋಣಂತ ಆಮ್ಯಾಲೆ ಶನಿ ಗ್ರಹಕ್ಕ ನೀ ಹೋಗಿ […]
March 29, 2017 - Posted by Prashant Adur- 0 Comments
ಇವತ್ತ ನಮ್ಮ ಪರಿಸ್ಥಿತಿ ಹೆಂಗ ಆಗೇದ ಅಂದರ ಮನ್ಯಾಗ ಒಂದು wi-fiನರ ಇರಬೇಕು ಇಲ್ಲಾ wife ಅಂದರ ಹೆಂಡ್ತಿನರ ಇರಬೇಕು ಅನ್ನೊಹಂಗ ಆಗೇದ. ಅಲ್ಲಾ ಹಂಗ ಒಂದ ಒಪ್ಪತ್ತ ಹೆಂಡ್ತಿ ಇಲ್ಲಾ ಅಂದರ ನಡದಿತ್ತ ಆದರ wi-fi ಅಂತೂ ಇರಬೇಕು. ಅಷ್ಟ ನಾವ ಇವತ್ತ internet ಮ್ಯಾಲೆ ಡಿಪೆಂಡ ಆಗಿಬಿಟ್ಟೇವಿ.ದೇವರ ಮನಿ ಒಳಗ ಗಾಯತ್ರಿ ಮಂತ್ರ ಮೊಬೈಲನಾಗ ಹಚಗೊಂಡ ಸಂಧ್ಯಾವಂದನಿ ಮಾಡೋದರಿಂದ ಹಿಡದ ಬಾಥ್ ರೂಮ ಒಳಗ ಕ್ಯಾಂಡಿ ಕ್ರಶ್ ಸಾಗಾ ಕ್ಲೀಯರ್ ಆಗಲಿಕ್ಕೆ ಸಹಿತ wi-fi […]
December 18, 2015 - Posted by Prashant Adur- 3 Comments
ಈ ಸುಡಗಾಡ ವಾಟ್ಸಪ್ ಒಂದ ಯಾರ ಕಂಡ ಹಿಡದರೋ ಏನೋ ಇದರ ಸಂಬಂಧ ಜೀವನ ಸಾಕ ಸಾಕಾಗಿ ಹೋಗೆದ. ಅದರಾಗ ಅರ್ಧಾ ಫೇಸಬುಕನಿಂದ ಹಳ್ಳಾ ಹಿಡದಿದ್ವಿ ಇನ್ನ ಅರ್ಧಾ ಈ ವಾಟ್ಸಪ್ ನಿಂದ ಹಳ್ಳಾ ಹಿಡದ ಬಿಟ್ಟೇವಿ. ಇನ್ನೊಂದ ಮಜಾ ಅಂದರ ವಾಟ್ಸಪ್ ನೀವ ಕಂಪನಿ ಒಳಗ ಉಪಯೋಗ ಮಾಡಬಹುದು. ಅಲ್ಲಾ, ಉಪಯೋಗ ಮಾಡಬಹುದು ಏನ ಕಂಪನಿ ಒಳಗ ಅದನ್ನ ಕಂಪಲ್ಸರಿ ಮಾಡಿ ಬಿಟ್ಟಾರ, ಯಾಕಂದರ ಅರ್ಧಾ ಕಂಪನಿ ಕೆಲಸ ಇವತ್ತ ವಾಟ್ಸಪ್ ನಾಗ ನಡಿತದ. ಹಿಂಗಾಗಿ […]
November 4, 2015 - Posted by Prashant Adur- 0 Comments
ರಾಮ ವನವಾಸ ಮುಗಿಸಿಕೊಂಡ ಪಟ್ಟಾಭಿಷೇಕ ಮಾಡಿಸಿಗೊಂಡ ಸುಖವಾಗಿ ರಾಜ್ಯ ಆಳಲಿಕ್ಕೆ ದಣೇಯಿನ ಶುರು ಮಾಡಿದ್ದಾ, ಎಲ್ಲಾ ಛಲೋ ನಡದಿತ್ತು, ಅವಂಗ ಒಮ್ಮಿಂದೊಮ್ಮಿಲೆ ಏನ ಅನಸ್ತೊ ಯಾಕ ಅನಸ್ತೋ ಏನೋ ನಮ್ಮ ರಾಜ್ಯದಾಗ ಜನಾ ನನ್ನ ಆಡಳಿತದ ಬಗ್ಗೆ ಏನ ಅನ್ನಲಿಕತ್ತಾರ ಅನ್ನೋದ ತಿಳ್ಕೊಂಡರಾತು ಅಂತ ಗೂಡಚಾರರನ ಕಳಸಿದಾ. ಗೂಡಚಾರರ ದೇಶ ಏಲ್ಲಾ ಸುತ್ತಾಡಿ ಬಂದ ’ಹಂಗ ಎಲ್ಲಾರೂ ಖುಶ್ ಇದ್ದಾರ ಆದರ ಒಂದಿಷ್ಟ ಮಂದಿ ಸೀತಾನ ಬಗ್ಗೆನ ಡೌಟ್ ಮಾಡಲಿಕತ್ತಾರ, ರಾವಣ ಅಕಿನ್ನ ಎಬಸಿಗೊಂಡ ಹೋಗಿದ್ದಾ ಹಂತಾಕಿನ […]
October 5, 2015 - Posted by Prashant Adur- 0 Comments
ಮೊನ್ನೆ ಬೆಂಗಳೂರಿಂದ ರಾಜಾ ಬಂದಿದ್ದಾ, ಪಾಪಾ ಭಾಳ ದಿವಸಾದ ಮ್ಯಾಲೆ ಕನ್ಯಾ ಫಿಕ್ಸ್ ಆಗಿತ್ತ ನಮಗೇಲ್ಲಾ ಪಾರ್ಟಿ ಗಿರ್ಟಿ ಕೊಡ್ತಾನ ತಡಿ ಅಂತ ಕೇಳಿದರ ಮಗಾ ’ಏ, ಎಲ್ಲೆ ಪಾರ್ಟಿ ಹೋಗರಲೇ’ ಅಂತ ನಮಗ ಜೋರ್ ಮಾಡಿದಾ. ಇಂವಾ ಯಾಕ ಈ ಪರಿ ಬರೇ ಕನ್ಯಾ ಫಿಕ್ಸ್ ಆಗಿದ್ದಕ್ಕ ಬೇಜಾರ ಆಗ್ಯಾನ, ಇನ್ನೂ ಲಗ್ನ ಆಗಬೇಕು, ಹಂಡ್ತಿ ಕೈಯಾಗ ಸಿಕ್ಕೊಂಡ ಒದ್ಯಾಡಬೇಕು, ಒಂದ್ಯಾರಡ ಹಡಿಬೇಕು ಆಮ್ಯಾಲೆ ಸಂಸಾರದಾಗ ಜಿಗೂಪ್ಸೆ ಹೊಂದಿ ನಮ್ಮಂಗ ಬೇಜಾರ ಆದ್ರ ಆ ಮಾತ […]
September 3, 2015 - Posted by Prashant Adur- 0 Comments
ಇದ ಒಂದ ನಾಲ್ಕ ತಿಂಗಳದ ಹಿಂದಿನ ಮಾತ ಇರಬೇಕ, ನಮ್ಮ ತಂಗಿ ಅತ್ತಿ ಮನ್ಯಾಗಿನ ಶ್ರೀಮಂತ ಮುಗಿಸಿಕೊಂಡ ಹಡಿಲಿಕ್ಕೆ ಅಂತ ಗಂಡನ ಮನ್ಯಾಗಿಂದ ಗುಡಚಾಪಿ ಕಿತಗೊಂಡ ನಮ್ಮ ಮನಿಗೆ ಬಂದ ಟೆಂಟ್ ಹಾಕಿದ್ಲು. ಹಂಗ ಅಕಿವು ಲಗ ಭಗ ಎಷ್ಟ ನಮೂನಿ ಕುಬಸ ಜಗಿತ್ತಿನಾಗ ಅವ ಅವನ್ನೇಲ್ಲಾ ನಮ್ಮವ್ವ ಮೊದ್ಲ ಮುಗಸಿದಿದ್ಲು. ಆದರು ನಮ್ಮ ತಂಗಿ ಯಾವದರ ಹೊಸಾ ಹೊಸಾ ಕುಬಸ ಇನ್ನು ಉಳದಾವೇನ ಅಂತ ಹುಡಕಿ ಹುಡಕಿ ಮಾಡಿಸ್ಗೋತ ಹೊಂಟಿದ್ಲು. ನಂಗಂತೂ ಖರೇನ ಹೇಳ್ತೇನಿ ಎಲ್ಲೆ […]