’ಹಿತ್ತಲಗೊರ್ಜಿ ಮುತ್ತೈದಿ’ ಇದ್ದಾರೇನ್ರೀ?

ಮೊನ್ನೆ ಮುಂಜ ಮುಂಜಾನೆ ನಾ ಇನ್ನೇನ ಗಾಡಿಗೆ ಕಿಕ್ ಹೊಡದ ಆಫೀಸಿಗೆ ಹೋಗಬೇಕ ಅಂತ ಗೇಟ ತಗಿಯೊದಕ್ಕ ಕಿಲ್ಲೇದಾಗಿನ ಗಾಯತ್ರಿ ಮೌಶಿ ಆಟೊ ತಗೊಂಡ ಇಳದ್ಲು, ಅಕಿ ಬಂದಿದ್ದ ಸ್ಪೀಡ್ ನೋಡಿದರ ಏನೋ ಎಮರ್ಜನ್ಸಿ ಆಗಿರಬೇಕ ಅಂತ ’ಏನ ಆತ ಮೌಶಿ, ಮುಂಜ ಮುಂಜಾನೆ ಎದ್ದ ಬಂದಿಯಲಾ, ಏನ ಹಂತಾ ಗಡಬಡಿ’ ಅಂತ ನಾ ಕೇಳೊ ಪುರಸತ್ತ ಇಲ್ಲದ ’ನಿನ್ನ ಹೆಂಡತಿ ಹೊರಗ ಇದ್ದಾಳೊ ಇಲ್ಲಾ ಒಳಗ ಇದ್ದಾಳೊ ಅದನ್ನ ಮೊದ್ಲ ಹೇಳ’ಅಂತ ಅಗದಿ ಒಂದ ಉಸಿರಿನಾಗ […]ಕಣ್ಮರೆಯಾಗಲಿರುವ ಕನ್ನಡಕಗಳು…………

ನನಗ ಚಸ್ಮಾ(ಕನ್ನಡಕ) ಬಂದ ಇಪ್ಪತ್ತ ವರ್ಷ ಆಗಲಿಕ್ಕೆ ಬಂತ. ನಾ ಕೆ.ಇ.ಸಿ ಇಂಟರ್ವಿವಗೆ ಹೋದಾಗ ಡಾಕ್ಟರ ಚೆಕ್ ಮಾಡಿ ಹೇಳಿದ್ದರು ’ತಮ್ಮಾ, ನಿಂದ ದೂರ ದೃಷ್ಟಿ ಸರಿ ಇಲ್ಲಾ’ ಅಂತ. ಹಂಗ ನಂಗ ಹತ್ತರಿಂದ ಎಲ್ಲಾ ಕರೆಕ್ಟ ಕಂಡರೂ ದೂರಿಂದ ಕರೆಕ್ಟ ಕಾಣ್ತಿದ್ದಿಲ್ಲಾ. ಬಸ್ಸಿನ ಬೋರ್ಡ ಓದಲಿಕ್ಕೆ ತ್ರಾಸ ಆಗ್ತಿತ್ತ. ಬ್ರಾಡ ವೇ ಒಳಗ ಯಾವದರ ಹಳೇ ಕ್ಲಾಸಮೇಟ್ ಭೇಟ್ಟಿ ಆದರ ಅಕಿ ಹತ್ತರ ಬಂದ ಹಾಯೋತನಕ ಗೊತ್ತ ಆಗ್ತಿದ್ದಿಲ್ಲಾ, ಒಟ ಒಂದ ಮಾತಿನಾಗ ಹೇಳಬೇಕಂದರ ದೂರಿಂದ […]#ಇವತ್ತೇನಲೇ ಟ್ರೆಂಡಿಂಗ್

ಬೆಳಕ ಹರಿತ ಅನ್ನೊಂಗಿಲ್ಲ ನೋಡ್ರಿ, ನನ್ನ ಹೆಂಡ್ತಿ ವಟಾ- ವಟಾ ಶುರುನ. ಹಬ್ಬ ಇರಲಿ ಹುಣ್ಣಮಿ ಇರಲಿ ಇಕಿದ ಒಂದ ಸಮನs ಚಾಲುನ ಇರತದ. ಅಲ್ಲಾ ಹಂಗ ನಂಗ ಇದೇನ ಹೊಸಾದಲ್ಲ ಬಿಡ್ರಿ, ಮೊದ್ಲ ನಮ್ಮವ್ವ ವಟಾ- ವಟಾ ಅಂತಿದ್ಲು ಈಗ ಮದುವಿ ಆದಾಗಿಂದ ಹೆಂಡ್ತಿ ವಟಾ-ವಟಾ ಅನ್ನಲಿಕತ್ತಾಳ ಇಷ್ಟ ಫರಕ. ಹಂಗ ನನ್ನ ಹೆಂಡತಿಗೆ ’ಏನ ಒಂದ ಸಮನ ವಟಾ- ವಟಾ ಅಂತ ಗಂಟ ಬಿದ್ದಿಲೇ’ ಅಂತ ಅಂದರ ಸಿಟ್ಟ ಬರತದ ಹಿಂಗಾಗಿ ನಾ ಅಕಿ […]ಯಾ ದಿಕ್ಕಿಗೆ ’ಕಮೋಡ್’ ಮಾಡಿ?

ನಾ ಒಂದ ಮನಿ ಕಟ್ಟಲಿಕತ್ತೇನಿ ಹುಬ್ಬಳ್ಳಿ ಒಳಗ, ಅದೇನೊ ಅಂತಾರಲಾ ’ಮನಿ ಕಟ್ಟಿ ನೋಡ, ಮದುವಿ ಮಾಡ್ಕೊಂಡ ನೋಡ’ ಅಂತ ಹಂಗ ಮದುವಿ ಮಾಡ್ಕೊಂಡಂತೂ ನೋಡಿದೆ, ಅದರ ಹಣೆಬರಹ ನಿಮಗೇಲ್ಲಾ ಗೊತ್ತಿದ್ದದ್ದ ಅದ. ಇನ್ನ ಮನಿ ಕಟ್ಟೋದ ಒಂದ ಬಾಕಿ ಇತ್ತ, ಅದನ್ನು ಹೆಂಡ್ತಿ ಕಾಟಕ್ಕ ಚಾಲು ಮಾಡಿ ದೀಡ ವರ್ಷ ಆಗಲಿಕ್ಕೆ ಬಂತ. ಹಂಗ ಅದ ಮುಗಿಲಿಕ್ಕೆ ಇನ್ನೂ ಒಂದ ವರ್ಷ ಬೇಕ ಆ ಮಾತ ಬ್ಯಾರೆ. ನನ್ನ ಹೆಂಡ್ತಿ ’ರ್ರಿ, ಅವರ ಮನಿ ಕಟ್ಟಿದರು, […]ದೊಸ್ತ..ಅದಕ್ಕ ದ್ರೋಸ್ಟ್ ಎಫೆಕ್ಟ್ ಅಂತಾರ.

ಮೊನ್ನೆ ಬೆಂಗಳೂರಾಗ ನಮ್ಮ ದೋಸ್ತ ರಾಹುಲ ಭೆಟ್ಟಿ ಆಗಿದ್ದಾ, ಅವಂದ ಎಂಗೇಜಮೆಂಟ ಆಗಿ ಜಸ್ಟ ಒಂದ ವಾರ ಆಗಿತ್ತ ಅಂವಾ ಪೂರ್ತಿ ಆ ಹುಡಗಿ ಗುಂಗಿನಾಗ ಇದ್ದಾ. ಹಂಗ ನಾ ಹುಡಗಿ ಫೋಟೊ ಫೇಸಬುಕ್ಕಿನಾಗ ನೋಡಿದ್ದೆ ಖರೆ ಆದ್ರೂ ಈ ಫೇಸಬುಕ್ಕಿನಾಗ ಹುಡಗ್ಯಾರ ಫೋಟೊ ಭಾಳ ಫೇಕ ಇರ್ತಾವಲಾ ಹಿಂಗಾಗಿ ’ಹೆಂಗಿದ್ದಾಳಲೇ ನಿನ್ನ ಹೆಂಡ್ತಿ ಫಿಸಿಕಲಿ ನೋಡಲಿಕ್ಕೆ’ ಅಂತ ಕೇಳಿದೆ. ನಾ ಹಂಗ ಕೇಳಿದ್ದ ತಪ್ಪಾತ ಅಂವಾ ಬ್ರಿಗೇಡ ರೋಡನಾಗ ಕಂಡ ಕಂಡ ಛಂದ ಛಂದ ಹುಡಗ್ಯಾರನ […]ಒಂದು ಸ್ಟಾರ ಚೀಟಿನ ಸ್ವಾರಸ್ಯ…. (statutory warning: tobacco chewing is injurious to health….not reading this article)

ಇದು ೯೬-೯೭ರ ಒಳಗಿನ ಮಾತ ಇರಬೇಕ. ಒಂದ ಸರತೆ ನಮ್ಮ ಮನಿ ಒಳಗ ನಮ್ಮಜ್ಜನ ಶ್ರಾದ್ಧ ಇತ್ತ, ಅದು ಆದಿತ್ಯವಾರ ಇತ್ತ. ಹಂಗ ನಮ್ಮ ಮನ್ಯಾಗ ಏನ ಫಂಕ್ಶನ್ ಮಾಡಿದರು ನಾವ ಆದಿತ್ಯವಾರನ ಮಾಡ್ತೇವಿ ಅನ್ನೋದ ನಿಮಗೇಲ್ಲ ಗೊತ್ತ ಅದ. ಅದರಾಗ ಹಿಂಗ ಶ್ರಾದ್ಧನೂ ರವಿವಾರ ಬಂದಿದ್ದ ಖರೇನ ನಮ್ಮಜ್ಜನ ಲಕ್ ಅನಸ್ತ. ಯಾಕಂದರ ಈ ಸರತೆ ಅವನ ಶ್ರಾದ್ಧಕ್ಕ ಅವಂಗ ಮೊಮ್ಮಗನ ಕಡೆ ಅಂದರ ನನ್ನ ಕಡೆ ನಮಸ್ಕಾರ ಮಾಡಿಸ್ಗೊಳೊ ಭಾಗ್ಯ ಸಿಕ್ಕಿತ್ತ. ನಮ್ಮಪ್ಪ ತನ್ನ […]ಕೂಸಿನ ಕೈಯಾಗ ಕಾಂಚಾಣ…

ಮೊನ್ನೆ ನಮ್ಮ ಅಂಗಡಿ ಪ್ರಭ್ಯಾನ ಎರಡನೇ ಮಗಳನ ನೋಡಲಿಕ್ಕೆ ಹೋಗಿದ್ದೆ, ಪಾಪ ಒಂದನೇದು ಮಗಳ ಇತ್ತ. ಎರಡನೇದ ಬ್ಯಾಡ ಅಂತ ಅವನ ಹೆಂಡತಿ ಎಷ್ಟ ಬಡ್ಕೊಂಡರು ಈ ಮಗಾ ’ಏ ಒಂದ ಗಂಡ ಆಗಬೇಕ, ನಾಳೆ ಕಿರಾಣಿ ಅಂಗಡ್ಯಾಗ ಕೂಡೋರ ಯಾರು?’ಅಂತ ಗಂಟ ಬಿದ್ದ ಎರಡನೇದ ಹಡದಿದ್ದಾ. ಪಾಪ ಗಂಡ ಆಗಲಿ ಅಂತ ಬಡಬಡಸಿದರ ಎರಡನೇದು ಹೆಣ್ಣ ಆಗಿತ್ತ. ನಾ ಒಂದ ಸರತೆ ಹೋಗಿ ಅವನ್ನ ಮಾತಾಡಿಸಿದಂಗೂ ಆತ ಹಂಗ ಮಗಳನ ನೋಡಿದರಾತು ಅಂತ ಹೆಂಡತಿನ್ನ ಕರಕೊಂಡ […]ನಾ ನೋಡಿದ್ದ ಕನ್ಯಾ, ನೀ ಹೆಂಗ ಮಾಡ್ಕೊಂಡಿ?

ಇದ ೧೯೯೯-೨೦೦೦ರ ಟೈಮನಾಗಿನ ಮಾತ, ನಮ್ಮ ಒಂದಿಷ್ಟ ದೋಸ್ತರ ಸಿರಿಯಸ್ ಆಗಿ ಲಗ್ನಾ ಮಾಡ್ಕೋಬೇಕು ಅಂತ ಕನ್ಯಾ ನೋಡಲಿಕ್ಕೆ ಶುರು ಮಾಡಿದ್ದರು. ಆವಾಗ ಇವಾಗಿನಗತೆ ಕನ್ಯಾದ್ದ ಶಾರ್ಟೇಜ ಏನ ಇರಲಿಲ್ಲಾ ಹಿಂಗಾಗಿ ಒಂದ ಬಿಟ್ಟ ಇಪ್ಪತ್ತ ಕನ್ಯಾ ನೋಡಿ ಇದ್ದಿದ್ದರಾಗ ಛಂದನ್ವು ಆರಿಸಿ ಮತ್ತ ಅದರಾಗ ಚೀಟಿ ಎತ್ತಿ ಮಾಡ್ಕೋಬಹುದಿತ್ತ. ಅದರಾಗ ನಮ್ಮ ಓಣ್ಯಾಗ ಬ್ರಾಹ್ಮರವು ಒಂದ ನಾಲ್ಕ ವರಾ ಇದ್ದವು. ನನ್ನ ಬಿಟ್ಟ ಮತ್ತ, ಆವಾಗ ನಂಗ ದಣೇಯಿನ ೨೬ ಮುಗದಿದ್ವು ಹಿಂಗಾಗಿ ಇನ್ನು ವರಾ […]ನನ್ನ ಹೆಂಡ್ತಿ ಹೇಳಿದ ’ಹಲ್ಲಿ ಶಾಸ್ತ್ರ’…

ನಾ ಮದುವಿ ಮಾಡ್ಕೊಂಡ ಹೊಸ್ತಾಗಿ ಗಾಂಧಿನಗರದಾಗಿನ ಡಬಲ್ ಬೆಡ್ ರೂಮ್ ಮನಿಗೆ ಶಿಫ್ಟ ಆಗಿದ್ದೆ. ಹಂಗ ಮನಿ ಎಲ್ಲಾ ಛಲೋ ಇತ್ತ ಆದರ ಆ ಮನ್ಯಾಗ ಜೊಂಡಿಗ್ಯಾ, ಹಲ್ಲಿ, ಇಲಿ, ಕಪ್ಪಿ ಸಿಕ್ಕಾ ಪಟ್ಟೆ ಇದ್ವು. ನನ್ನ ಹೆಂಡತಿಗೆ ಹಲ್ಲಿ ಒಂದ ಬಿಟ್ಟ ಬ್ಯಾರೆ ಯಾವದ ಹುಳಾ-ಹುಪ್ಪಡಿ ಕಂಡರ ಸಾಕ ಚಿಟ್ಟನ ಚೀರಿ ಹೆದರಿ ಸಾಯಿತಿದ್ದಳು. ಹಂಗ ಅಕಿ ಗಂಡನ ಮನ್ಯಾಗ ಹೆದರಲಾರದ್ದ ಅಂದರ ನಂಗೊದ್ದ. ಅಲ್ಲಾ ನನ್ನ ಹೆಂಡತಿ ನಂಗ ಹೆದರತಿದ್ದಿಲ್ಲಾ ಬರೇ ಹುಳಾ-ಹುಪ್ಪಡಿಗಿಷ್ಟ ಹೆದರತಿದ್ದಳು […]ತುಟಿ ಪಿಟ್ಟ ಅಂದರ ಕೇಳ…ಬಾಯಿ ಮುಚ್ಚಿದರ ಕೇಳ..

ಇದ ಮೊನ್ನೆ ಎಪ್ರಿಲ್ ೧೭ನೇ ತಾರೀಖಿನ ಮಾತ, ಅವತ್ತ ಯಾಕೊ ಮುಂಜಾನಿಯಿಂದ ನಮ್ಮವ್ವ ತುಟಿ ಪಿಟ್ಟ ಅನಲಾರದ ತಾ ಆತು ತನ್ನ ಕೆಲಸ ಆತು ಅಂತ ಸುಮ್ಮನ ಇದ್ದಳು. ಹಂಗ ಅಕಿ ಒಂದ ಮುಂಜಾನೆ ಎದ್ದಳೂ ಅಂದರ ಒಬ್ಬರಿಗಿಲ್ಲಾ ಒಬ್ಬರಿಗೆ ಯಾವಗಲೂ ವಟಾ ವಟಾ ಅನ್ಕೋತ ಇರೋಕಿ ಹಂತಾಕಿ ಸುಮ್ಮನ ಇದ್ದದ್ದಕ್ಕ ಮನಿ ಒಂಥರಾ ಭಣಾ ಭಣಾ ಅನಸಲಿಕತ್ತಿತ್ತ. ಅದರಾಗ ಅಕಿ ನನಗಂತೂ ದಿವಸಾ ಮುಂಜಾನೆ ಏಳೋ ಪುರಸತ್ತಿಲ್ಲದ ನನ್ನ ಬೆಡ ರೂಮಿಗೆ ಬಂದ ಹಣಿಕಿ ಹಾಕಿ […]’ಲೇ, ಎನಫೀಲ್ಡದ್ದ ನೀ ಬರೇ side stand ತಗಿ ಮಗನ, ಸಾಕ’.

ಒಂದ ಹತ್ತ ದಿವಸದ ಹಿಂದಿನ ಮಾತ ಇರಬೇಕ, ಮಧ್ಯಾಹ್ನ ಊಟಾ ಮಾಡಿ ಆಫೀಸಗೆ ಬಂದೆ, ಅದರಾಗ ಮನ್ಯಾಗ ಬಿಸಿಬ್ಯಾಳಿ ಅನ್ನ ಉಂಡ ಬಂದಿದ್ದೆ ಹಿಂಗಾಗಿ ಹೊಟ್ಟ್ಯಾಗ ಕಾಂಕ್ರೀಟ್ ಹಾಕಿದಂಗ ಆಗಿತ್ತ. ಅಲ್ಲಾ ಹಂಗ ಅದರ ಟೇಸ್ಟೂ ಹಂಗ ಆಗಿತ್ತ ಆ ಮಾತ ಬ್ಯಾರೆ. ಇನ್ನ ಅದನ್ನ ಯಾರ ಮಾಡಿದ್ದರ ಅಂತ ಬಿಡಿಸಿ ಹೇಳೋದ ಏನ ಬ್ಯಾಡ ಅಲಾ? ಸರಿ, ಹೊಟ್ಟಿ ವಜ್ಜಾ ಆಗೇದ, ಒಂದ ರೌಂಡ ಫ್ಯಾಕ್ಟರಿ ಒಳಗ ಅಡ್ಡಾಡಿ ಬಂದರಾತು ಅಂತ ಶಾಪ್ ಫ್ಲೋರ ರೌಂಡ್ಸಗೆ […]ಹ್ಯಾಷ್ ಟ್ಯಾಗ್( # ) ಹೆಂಡ್ತಿ……….

ನನ್ನ ಹೆಂಡತಿಗೆ ಮೊದ್ಲ ಮೊದ್ಲ ಈ ಹ್ಯಾಷ ಟ್ಯಾಗ್ ಅಂದರು ಏನು? ಅದನ್ನ ಯಾಕ ಹಾಕ್ತಾರ ಅಂತ ಗೊತ್ತ ಆಗತಿದ್ದಿಲ್ಲಾ, ಅಕಿ ಯಾರರ ಫೇಸಬುಕ್ಕಿನಾಗ ಇಲ್ಲಾ ಟ್ವಿಟ್ಟರನಾಗ ಇದನ್ನ ಹಾಕಿದ್ದರು ಅಂದರ, ಒಂದು ಅವರ ಟೈಪಿಂಗ್ ತಪ್ಪ ಮಾಡ್ಯಾರ (typo) ಇಲ್ಲಾ ಅದ ಏನೋ ಒಂಥರಾ ಎರಡ ಉದ್ದ, ಎರಡ ಅಗಲ ಲೈನದ್ದ ರಂಗೋಲಿ ಅಂತ ತಿಳ್ಕೊಂಡಿದ್ದಳು. ನಾನೂ ಅಕಿಗೇನ ತಲಿ ಒಡಕೊಂಡ ತಿಳಿಸಿ ಹೇಳೊದ ಬಿಡ, it is not her cup of tea […]ನನ್ನ ಬಾಯಾಗ ಮಚ್ಚೆ ಅದ, ನಿಂಗ ಎರಡನೇದ ಗಂಡs ಆಗ್ತದ…

ಇವತ್ತ ಬೆಳಿಗ್ಗೆ ಬೆಳಿಗ್ಗೆ ರಾಜಾ ಫೋನ ಮಾಡಿದಾ, ಪಾಪ ಅವನ ಹೆಂಡತಿ ದಿಂದಾಗ ಇದ್ಲು, ಒಂದ ವಾರದಿಂದ ಇವತ್ತ ನಾಳೆ ಇವತ್ತ ನಾಳೆ ಅಂತ ನಡದಿತ್ತು, ನಾನು ತಾಸ ತಾಸಿಗೊಮ್ಮೆ ಆತೇನು ಆತೇನು ಅಂತ ಕೇಳಿ ಕೇಳಿ ಅವನ ಜೀವಾ ತಿನ್ನಲಿಕತ್ತಿದ್ದೆ. ಅಲ್ಲಾ, ಹಂಗ ಅವಂದ ಇದ ಎರಡನೇದ ಹಂತಾ ಕ್ಯೂರಿಯಾಸಿಟಿ ಏನ ಇದ್ದಿದ್ದಿಲ್ಲಾ ಮ್ಯಾಲೆ ಅಂವಾ ಹಡೆಯೊದಕ್ಕ ನಾ ತಲಿಕೆಡಸಿಗೊಳ್ಳೊ ಅವಶ್ಯಕತೆ ಏನ ಇದ್ದಿದ್ದಿಲ್ಲಾ ಆ ಮಾತ ಬ್ಯಾರೆ. ಆದರ ಅವಂಗ ಒಂದನೇದ ಹೆಣ್ಣಾಗಿತ್ತ, ಹಿಂಗಾಗಿ […]ಕನ್ಯಾ ಏನ ಗಿಡದಾಗ ಹುಟ್ಟತಾವ?

ಒಮ್ಮೆ ನೈಮಿಷ ಅರಣ್ಯದಲ್ಲಿ ವಾಸಿಸುವ ಶೌನಕರು, ೠಷಿ-ಮುನಿಗಳು ಭರತಖಂಡದ ಪ್ರಸ್ತುತ ಬ್ರಾಹ್ಮಣ ವರಗಳ ದಯನೀಯ ಸ್ಥಿತಿಯನ್ನು ಕುರಿತು, ಪುರಾಣಗಳನ್ನು ಬಲ್ಲ ಮಹಾ ತೇಜಸ್ವಿಯೂ, ಮಹಾಕೀರ್ತಿವಂತನೂ, ಶ್ರೀಮನ್ ನಾರಾಯಣನ ಭಕ್ತನೂ ಆದ ನನ್ನನ್ನು ಕುರಿತು ಬ್ರಾಹ್ಮಣ ವರಗಳ ಹಿತಾರ್ಥವಾಗಿ ಪ್ರಶ್ನೆ ಮಾಡಿದರು. “ಎಲೈ ಪ್ರಶಾಂತನೇ! ಈ ಮೃತ್ಯು ಲೋಕದಲ್ಲಿ ಬ್ರಾಹ್ಮಣ ವರಗಳು ಕನ್ಯೆಗಳಿಗಾಗಿ ಬಹು ದು:ಖದಿಂದ ಬಳಲುತ್ತಿದ್ದಾರೆ. ಆದಾವ ವ್ರತದಿಂದ ಇಲ್ಲವೇ ಆದಾವ ತಪಸ್ಸಿನಿಂದ ಅವರಿಗೆ ಕನ್ಯಾ ಪ್ರಾಪ್ತವಾಗುವದೆಂದು ನೀವು ದಯವಿಟ್ಟು ಶ್ರೀಮನ್ ನಾರಾಯಣನನ್ನು ಕೇಳಿ ಈ ವರಗಳ […]ನಮ್ಮ ಮನಿಯವರ ಇಲ್ಲಾ…’ನಾಳೆ ಬಾ’

ನಮ್ಮವ್ವಗ ಮೊದ್ಲಿಂದ ಯಾರ ಮನಿ ಮುಂದ ಬಂದ ಏನ ಬೇಡಿದ್ರು ಇಲ್ಲಾ ಅಂತ ಹೇಳಿ ಕಳಸಿ ಗೊತ್ತಿದ್ದಿಲ್ಲಾ, ಹಂಗ ಬೇಡೋರ ಬಂದಾಗ ನಿನ್ನಿ ಅನ್ನ ಉಳದಿದ್ದಿಲ್ಲಾ ಅಂದರ ಒಂದ ಹಿಡಿ ರೇಶನ್ ಅಕ್ಕಿ ಹಾಕಿ ’ನೀನ ಬಿಸಿ ಅನ್ನಾ ಮಾಡ್ಕೊಂಡ ಉಣ್ಣು’ ಅಂತ ಕಳಸ್ತಿದ್ಲ ಹೊರತು ಖಾಲಿ ಕೈಲೆ ಎಂದು ಕಳಸ್ತಿದ್ದಿಲ್ಲಾ. ಹಂಗ ಒಮ್ಮೊಮ್ಮೆ ಹಿಂದಿನ ದಿವಸದ ಅನ್ನ ಉಳದಾಗ ’ಪ್ರಶಾಂತ, ನಿನ್ನಿ ಅನ್ನಾ ನೀ ಕಲಸನ್ನ ಉಣತೇನಿ ಅಂದರ ಇಡ್ತೇನಿ, ಇಲ್ಲಾ ಹೊರಗ ಬೇಡಲಿಕ್ಕೆ ಬಂದಾರ […]