ಇವತ್ತ World Wildlife Conservation Day. ಬೆಳಿಗ್ಗೆ ನಮ್ಮ ಹುಬ್ಬಳ್ಳಿ wwfನವರು (world wide fund for nature) ನಾಲ್ಕ ಮಾತಾಡ್ರಿ ಅಂತ ಕರದಿದ್ದರು. ನಾ ಅಗದಿ ಭಾರಿ ಉಮೇದಿಲೆ ಹೋಗಿ
“The sad truth is that the world’s best loved, beautiful and fascinating species are being slaughtered day by day. We need to Raise awareness in the society and contribute to the conservation and protection of these endangered species. This global occasion provides everyone with the opportunity to learn more about wildlife conservation and to be part of the solution to wildlife crime. Please learn more about wildlife conservation, to spread the word about the importance of protecting our planet’s most endangered species and the impact of poaching on our environment. Learn how to become a responsible consumer in order to stop illicit wildlife trade………” ಅಂತ ಒಂದ ದೊಡ್ಡ ಭಾಷಣಾ ಹೊಡದ ಬಂದೆ.
ನಾ ಹಿಂಗ ಮುಂಜ ಮುಂಜಾನೆ ಎದ್ದ Wildlife Conservation Dayಕ್ಕ ಭಾಷಣಕ್ಕ ಹೋಗಿ ಬಂದಿದ್ದ ನೋಡಿ ನನ್ನ ಹೆಂಡತಿ ಭಾಳ wild ಆಗಿದ್ಲು. ಅಕಿ ನಾ ಮನಿಗೆ ಬರೋ ಪುರಸತ್ತ ಇಲ್ಲದ
“ಅಯ್ಯ…ನಿಮಗೇನ ತಲಿ Wildlife ಬಗ್ಗೆ ತಿಳಿತದ ಅಂತ ಕರದಿದ್ದರು…ಮನ್ಯಾಗ ಒಂದ ನಾಯಿ, ಬೆಕ್ಕ ಸಾಕಲಿಕ್ಕೆ ಧೈರ್ಯಾ ಇಲ್ಲಾ Wildlifeಬಗ್ಗೆ ಮಾತಾಡ್ಲಿಕ್ಕೆ ಹೋಗಿದ್ರಿ?” ಅಂತ ಕೇಳಿದ್ಲು.
ನಂಗ ತಲಿ ಕೆಡ್ತ…
“ಲೇ ನಂದ ಲಗ್ನ ಆಗಿ ಹದಿನಾಲ್ಕ ವರ್ಷ ಆತ. ಹದಿನಾಲ್ಕ ವರ್ಷದಿಂದ ನಿನ್ನ ಸಾಕಲಿಕತ್ತಿಲ್ಲಾ…ನನಗ wildlife ಬಗ್ಗೆ ಗೊತ್ತಿಲ್ಲಾ ಅಂದರ ಏನ?” ಅಂತ ನಾ ಒರಟ ಹರಿಲಿಕತ್ತೆ.
“ಅಯ್ಯ..ಲಗ್ನಕ್ಕೂ wildlife ಗೂ ಏನ ಸಂಬಂಧ” ಅಂದ್ಲು. ನಾ ಅಕಿಗೇನ ತಿಳಸಿ ಹೇಳೋದ ಬಿಡ, ನಾ ಒಂದ ಅಂದರ ಅಕಿ ಒಂದ ಅಂತಾಳ ಅದರಾಗ ಮುಂಜ ಮುಂಜಾನೆ ಯಾಕೊ ದಿನದಕಿಂತ ಹೆಚಗಿ ಇವತ್ತ wild ಆಗ್ಯಾಳ ಅಂತ ಸುಮ್ಮನಾದೆ.
ಆದರ ನಾ ಖರೇ ಹೇಳ್ತೇನಿ Wildlifeಗೂ ಈ ಸಂಸಾರಕ್ಕೂ ಭಾಳ ಸಂಬಂಧ ಅದ.
ಯಾಕಂದರ ನಾವು ಲಗ್ನಾ ಮಾಡ್ಕೋಬೇಕಾರ ನಮಗ ನಾವ ನೋಡೊ ಕನ್ಯಾನ best loved, beautiful and fascinating species in the world ಅಂತ ಅನಿಸಿರ್ತದ. ಅಲ್ಲಾ ಹಂಗ ಇವತ್ತ ಬ್ರಾಹ್ಮರ ಒಳಗ ಕನ್ಯಾದ್ದ ಇಷ್ಟs ಅಭಾವ ಅದ ಅಲಾ ಹಿಂಗಾಗೆ ಅದನ್ನ IUCN ( Internation union for conservation of nature and natural resources) ದವರು endangered species list ಒಳಗ ಹೆಸರ ಸೇರಿಸ್ಯಾರ ಆ ಮಾತ ಬ್ಯಾರೆ. ಅದಕ್ಕ ನಾ ನನ್ನ ಭಾಷಣದೊಳಗ ಹೇಳಿದ್ದ We need to Raise awareness in the society and contribute to the conservation and protection of these endangered species ಅಂತ.
ಇನ್ನ ಹಿಂತಾ ಒಂದ species, sorry ಕನ್ಯಾ ಮದುವಿ ಆಗಿ ಒಂದ ಸ್ವಲ್ಪ ವರ್ಷ ಆಗೋದರಾಗ wild wife ಆಗಿರ್ತದ,ಸಂಸಾರಿಕ life ಅನ್ನೋದ ಗಂಡಂದರಿಗೆ wildlife ಆಗಿರ್ತದ ಅನ್ನೋದ ನನ್ನ ಅನಿಸಿಕೆ. ಹಿಂಗಾಗಿ ಗಂಡಂದರಿಗೆ wildlife ಬಗ್ಗೆ ಮಾತಾಡಬೇಕಂದರ ಭಾಳ knowledge ಇರಬೇಕ ಅಂತಿಲ್ಲಾ, ಮನ್ಯಾಗ ಒಂದ wild wife ಇದ್ದರ ಸಾಕ ದುನಿಯಾ ಮಾತಾಡಬಹುದ.
ಅಲ್ಲಾ ನಂಗೂ ಈಗ ಗೊತ್ತಾತ ಎಲ್ಲಾ ಬಿಟ್ಟ ನಮ್ಮ ಹುಬ್ಬಳ್ಳಿ wwfನವರ ನಂಗ ಯಾಕ world wildlife conservation dayಕ್ಕ ಕರದಾರ ಅಂತ ಹೇಳಿ. ನನ್ನಂಗ ಹದಿನಾಲ್ಕ ವರ್ಷದಿಂದ wildlife ನಾಗ ಇದ್ದ ಮಾತಾಡಲಿಕ್ಕೆ ಧೈರ್ಯ ಇದ್ದೋರ ಸಿಗಬೇಕಲಾ.
ಆದ್ರೂ ಏನ ಅನ್ನರಿ ಇವತ್ತ ನಾವ wildlife preserve ಮಾಡೋದ ಎಷ್ಟ ಇಂಪಾರ್ಟೇಂಟ ಅದನೋ ಅಷ್ಟ wild wife preserve ಮಾಡೋದು important ಅಂತ ಅನಸ್ತದ. ಹಂಗ ಇದ್ದ ಹೆಂಡ್ತಿನ್ನ wild ಅಂತ ಬಿಟ್ಟರ ಮುಂದ ಇನ್ನೊಂದ ಕನ್ಯಾ ಸಿಗಂಗಿಲ್ಲಾ. ಮೊದ್ಲ ಹೇಳಿದ್ನೇಲ್ಲಾ ಈಗ ಕನ್ಯಾ ಅನ್ನೋವು endangered species ಆಗ್ಯಾವ ಅಂತ.