About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ.
ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ,
ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ).
ಸದ್ಯೇಕ ಹುಬ್ಬಳ್ಳಿ ಒಳಗ swastik winding wires pvt ltd ಅನ್ನೋ ಒಂದ ಪ್ರೈವೇಟ ಕಂಪನಿ ಒಳಗ ಸಿ.ಇ.ಒ. ಅಂತ ೨೦ ವರ್ಷದಿಂದ ಕೆಲಸಾ.
ಆವಾಗ – ಇವಾಗ ಬರಿಯೋದು, ತಿಂಗಳಿಗೆ ಒಂದೆರಡ ಸಲಾ ವಿಜಯವಾಣಿ ಒಳಗ ’ಗಿರಮಿಟ್’ ಅಂಕಣ,
ತಲ್ಯಾಗ ತಿಳದಾಗ ಒಮ್ಮೆ ಪೇಂಟಿಂಗೂ, ಫೋಟೋಗ್ರಾಫಿ… ಉಳದದ್ದ ಟೈಮನಾಗ ಊರ ಹಿರೇತನ ಅಂದರ
ಸಮಾಜ ಸೇವಾ. ಸೋಸಿಯಲ್ ಮೀಡಿಯಾದ್ದ ಒಂದ ಸ್ವಲ್ಪ ಹುಚ್ಚ ಜಾಸ್ತಿ ಹಿಂಗಾಗಿ ಫೇಸಬುಕ್ ನನ್ನ ಅಡ್ಡಾ ಇದ್ದಂಗ.

As Writer (ಬರಹಗಾರನಾಗಿ)
ಬರಿಲಿಕ್ಕೆ ಶುರು ಮಾಡಿದ್ದ ಕೆಂಡಸಂಪಿಗೆ ಬ್ಲಾಗ್ ನಿಂದ, ಮುಂದ ವಿಜಯ ಕರ್ನಾಟಕದೊಳಗ ’ಹಾಳ ಹರಟೆ’ ಅಂಕಣ ಶುರು ಆತು..ಮುಂದ ನನ್ನ ಒಂದನೇ ಪುಸ್ತಕ ’ಕುಟ್ಟವಲಕ್ಕಿ’ ಛಂದ ಪುಸ್ತಕದವರು ಪ್ರಕಟಿಸಿದರು. ಆಮ್ಯಾಲೆ, ಅವಧಿ, ಕನ್ನಡ ಓನ್ ಇಂಡಿಯಾ, ಅಪರಂಜಿ ಹಿಂಗ ಟೈಮ ಸಿಕ್ಕಾಗೇಲ್ಲಾ ಬರಿತಿದ್ದೆ, ಮುಂದ ’ಗೊಜ್ಜವಲಕ್ಕಿ’ ಪುಸ್ತಕ ಪ್ರಕಟ ಆತು. ಸದ್ಯೇಕ ಅವ ಎರಡ ನಾ ಬರದ ಪುಸ್ತಕ. ಹಂಗ ಒಟ್ಟಾರೇ ನಾ ಏನಿಲ್ಲಾಂದರ ಒಂದ ಎರಡನೂರಾ ಐವತ್ತ ಲೇಖನ ಬರದಿರಬಹುದು, ಆವೇಲ್ಲಾ ಲೇಖನ ಈ ಬ್ಲಾಗ್ ಒಳಗ ಅವ.

Academic and Career
B.Sc. (PCM) with distinction and first to college, and 3rd to university in chemistry.
Even I apply for M.A philosophy to KUD and stood first to university in entrance exam but could not take admission for financial reasons then.

I started career as production supervisor in M/s.Vibhava chemicals in 1994, was in charge for producing the black belt phenyle and I also used to give tutions to marwadi students write from my college days. Later joined Kirloskar Electric on merit basis thru’ college.

Was in charge of Uni bake Painting shop, the only plant in whole asia where motor components were pre treated and then painted with stoving epoxy.( the plant is dismantled now) After leaving KEC, I did MBA from symbiosys-pune ( distance education) in marketing and gave exams in IIM -Bangalore and finished with B grade (lowest I ever got in my academica career)

In 1998 joined M/s.Swastik Winding wires pvt ltd in the capacity of manager, it was new company and I was the first employee and started it from scratch, today we do turn over of almost 10-12 cr per year.
It would be my last job for sure as I am planning for retirement soon.
enjoy bloody life is my motto of life.

Social Activities and Accolades
Right from college days ABVP activist, Right winger for Right cause, associated with RSS, BJP for last 20 years.
I was the state co-convenor for BJP IT-Cell karnataka during 2014 elections, once Modi became prime minister I resigned as active political activity was not my priority.

I am expert in social media campaigning and still do consultancy of social media for politicians.

Presently syndicate member of karnataka university dharwad, governor nominee, period ends by end of Dec 2019
Was Telephone advisory committee member of Dharwad circle.

Other Hobbies
Occasional painting and photography are main.
cricket is the only sports I have ever played, Love listening to music and was part of organising many national level concerts at hubli.

I believe in being jack of all than focussing on mastering only one passion in life.
Life comes once so let us touch every field is my opinion.

ನನ್ನ ಕುಟುಂಬ (About Family)
ಸದ್ಯೇಕ ಒಂದ ಹೆಂಡ್ತಿ, ಎರಡ ಮಕ್ಕಳ ಜೊತಿ ವಾಸ..ಅಲ್ಲಾ ಹಂಗ ಇನ್ನೇನ ನಂದ ಮತ್ತೊಂದ ಮದ್ವಿ ಆಗಂಗಿಲ್ಲಾ ಮತ್ತ ನನ್ನ ಹೆಂಡ್ತಿಗೆ ಮಕ್ಕಳೂ ಆಗಂಗಿಲ್ಲಾ.
ಪ್ರೇರಣಾ- ನನ್ನ ಹೆಂಡ್ತಿ, ನನ್ನ ಜೀವನದ ಎಲ್ಲಾ ಚಟುವಟಿಕೆಗಳಿಗೆ ಅಕಿನ ಪ್ರೇರಣೇ…ಇನ್ನ ಪ್ರಥಮ ಮಗಾ, ಪ್ರಶಸ್ತಿ ಮಗಳು….ಒಂದ ಲೈನ ಒಳಗ ಹೇಳ್ಬೇಕಂದರ
ಪ್ರಶಾಂತನಿಗೆ ಪ್ರೇರಣೆಯಿಂದ ಪ್ರಥಮ ಪ್ರಶಸ್ತಿ.
ಇನ್ನ ನನ್ನ ಜೊತಿ ನಮ್ಮವ್ವ ಇದ್ದಾಳ…ಇವತ್ತ ನಾ ಜೀವನದಾಗ ಏನ ಒಂದ ಸ್ವಲ್ಪ ಸಾಧಸಿದ್ದರ ಅದಕ್ಕ ಅಕಿ ಪರಿಶ್ರಮನ ಕಾರಣ.
ಹಂಗ ನಮ್ಮಪ್ಪ ಹೋಗಿ ಎರಡ ತಿಂಗಳಾತು….ನಮ್ಮ ಅವ್ವಾ ಅಪ್ಪಾ ಇಬ್ಬರು ಇಪ್ಪತ್ತೈದ-ಮೂವತ್ತ ವರ್ಷ ಪ್ರೇಸ್ ಒಳಗ ದುಡದ ನನಗ ಕಲಿಸಿ ಇವತ್ತ ಈ ಲೇವಲಗೆ ಬಂದ ಮುಟ್ಟೋಹಂಗ ಮಾಡ್ಯಾರ.
ಒಬ್ಬೋಕಿ ತಂಗಿ ’ಪ್ರತಿಮಾ’ ಇದ್ದಾಳ ಅಕಿನ್ನ ಲಗ್ನಾ ಮಾಡಿ ಕೊಟ್ಟೇನಿ. ಅಕಿ ತನ್ನಷ್ಟಕ್ಕ ತಾ ಕೈಬಿಟ್ಟ ತನ್ನ ಸಂಸಾರ ನಡಿಸಿಗೊಂಡ ಹೊಂಟಾಳ.

You can Contact Me
Prashant Adur
House No.47,
63rd Cross,
Morarji Nagar,
Gokul Road
Hubballi – 580030

Mobible : 9379101596
email : [email protected]

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ