ನಾ ಬರಿಲಿಕ್ಕೆ ಶುರು ಮಾಡಿದ್ದ ’ಕೆಂಡಸಂಪಿಗೆ’ ಇಂದ…
’ಮಾತಾಡೋದ ಒಂದ – ಬರೆಯೋದ ಒಂದ ’ ಮಾಡಬಾರದು ಅಂತ ಅನ್ಕೋಂಡ ನಾ ಮಾತಡೋ ’ ಆಡು’ ಭಾಷೆ ಒಳಗ ಬರದ ಲೇಖನಗಳನ್ನ ಓದಿ ಪ್ರಕಟಿಸಿದ ’ಕೆಂಡಸಂಪಿಗೆ’ಯ ಸಂಪಾದಕ ಅಬ್ದುಲ್ ರಶೀದರಿಗೂ ನಾ ಮರೆಯಂಗಿಲ್ಲಾ. ಅವರ ನನ್ನ ಈ ಓದುಗರ ಜಗತ್ತಿಗೆ ಪರಿಚಯ ಮಾಡಿಸಿದವರು…ಇವತ್ತ ನಾ ಲೇಖಕ ಆಗೇನಿ ಅಂದರ ಅದಕ್ಕೂ ಅವರು ಒಬ್ಬರು ಕಾರಣ.
ಇದ ಒಂದ ವಾರದ ಹಿಂದಿನ ಮಾತ… ರಾತ್ರಿ ಹನ್ನೊಂದ ಹನ್ನೊಂದುವರಿ ಆಗಿತ್ತ, ಹಿಂಗ ನಿದ್ದಿ ಹತ್ತಲಿಕತ್ತಿತ್ತ ಸಡನ್ ಆಗಿ ಮೊಬೈಲ್ ರಿಂಗ ಆತ. ನನಗ ಮೊದ್ಲs ಮೊಬೈಲ ರಿಂಗ ಆಗಿದ್ದ ಕನಸಿನಾಗೊ ಇಲ್ಲಾ ಖರೇನೊ ಅಂಬೋದ ಕ್ಲೀಯರ್ ಆಗಲಿಲ್ಲ, ಅದರಾಗ ಅದ...
ಇದ ನನ್ನ ಲಗ್ನ ಆದ ಹೊಸ್ತಾಗಿನ ಮಾತ…ಹಂಗ ನಂದ ಮೊದ್ಲಿಂದ ದೋಸ್ತರದ ದೊಡ್ಡ ಸರ್ಕಲ್ ಅದರಾಗ ಎಲ್ಲಾರೂ ಲಗ ಭಗ್ ಒಂದ ವಾರ್ಗಿಯವರ ಇದ್ವಿ ಹಿಂಗಾಗಿ ನನ್ನ ಲಗ್ನ ಆಗಿ ಒಂದ್ಯಾರಡ ವರ್ಷ ಅನ್ನೋದರಾಗ ಭಾಳಿಷ್ಟ ದೋಸ್ತರದೇಲ್ಲಾ ಲಗ್ನ ಆಗೇ ಬಿಡ್ತ....
ನಿಮಗ ಹಿಂಗ ನಳಾ ಬಂತ ನಳಾ ಅಂತ ಹೆಡ್ಡಿಂಗ್ ನೋಡಿ ಇದೇನಪಾ ಹೆಡ್ಡಿಂಗ್ ಅಂತ ಅನಸಬಹುದು ಆದರ ಒಂದ ಇಪ್ಪತ್ತ ಇಪ್ಪತ್ತೈದ ವರ್ಷದ ಹಿಂದ ನಮಗ ನಳಾ ಬರೋದು ಅಂದರ ಅವತ್ತಿನ breaking news ಇದ್ದಂಗ ಇತ್ತ. ಈಗೀನ tv ಚಾನೆಲದ್...
ಇದ ಒಂದ ದೀಡ ತಿಂಗಳ ಹಿಂದಿನ ಮಾತ ಇರಬೇಕ ನಮ್ಮ ಮೌಶಿ ಮಗಂದ ಮದ್ವಿ ಇತ್ತ, ಅದನ್ನ ತಪ್ಪಸಲಿಕ್ಕೆ ಬರಂಗಿಲ್ಲಾ ಮೌಶಿ ಮಗಂದ ಬ್ಯಾರೆ ಅದರಾಗ ನಮ್ಮ ಮೌಶಿ ದೇವರ ಊಟಕ್ಕ ’ಹಿತ್ತಲಗೊರ್ಜಿ ಮುತ್ತೈದಿ’ ಅಂತ ನನ್ನ ಹೆಂಡತಿಗೆ ಕರದ ಹೊಟ್ಟಿ...
ಮೊನ್ನೆ ಸೊಲ್ಹಾಪುರದಿಂದ ನಮ್ಮ ಮಾಮಾ ಒಬ್ಬೊಂವ ಫೋನ ಮಾಡಿದ್ದಾ, ಹಂಗ ನನಗ ಅಂವಾ ದೂರಿಂದ ಮಾಮಾ ಆಗ್ಬೇಕ ಹಿಂಗಾಗಿ ರೆಗ್ಯೂಲರ ಫೋನ ಮಾಡೋ ಗಿರಾಕಿ ಅಂತೂ ಅಲ್ಲಾ, ಎಲ್ಲರ ಲಗ್ನಾ, ಮುಂಜವಿ,ಸೀಮಂತ, ವೈಕುಂಟ ಸಮಾರಾದ್ನಿ ಇದ್ದಾಗೊಮ್ಮೆ ಭೆಟ್ಟಿ ಆಗಿ ಅದು ಎದರ...
ನನ್ನ ಲಗ್ನ ಆಗಿ ಎರಡ ಮೂರ ತಿಂಗಳಾಗಲಿಕ್ಕೆ ಬಂದಿತ್ತ, ಒಂದ ದಿವಸ ನಂಗ ಒಮ್ಮಿಂದೊಮ್ಮಿಲೆ ಊಟ ಸೇರಲಾರದಂಗ ಆಗಿ ಏನ ಉಂಡರು ವೈಕ್ ವೈಕ ಅನ್ನೊಂಗ ಆಗಲಿಕತ್ತ, ನಮ್ಮವ್ವ ಅದನ್ನ ನೋಡಿ ’ಅಯ್ಯ..ನಮ್ಮಪ್ಪ, ಇದೇನ ಕಾಲ ಬಂತೊ ಮಾರಾಯ? ಲಗ್ನ ಆಗಿ...
ನಿನ್ನೆ sslc ರಿಸಲ್ಟ ಬಂತ…ಅಲ್ಲಾ….ಹಂಗ ಒಂದ ವಾರದಿಂದ ಹಿಂತಾ ದಿವಸ ರಿಸಲ್ಟ ಬರ್ತದ ಅಂತ ಪೇಪರನಾಗ ಬರಲಿಕತ್ತಿತ್ತಲಾ ಆವಾಗಿಂದ ನನ್ನ ಹೆಂಡತಿ ಒಂದ ತುತ್ತ ಕಡಮಿನ ಉಣ್ಣಲಿಕತ್ತಿದ್ಲು. ಅಲ್ಲಾ ಹಂಗ ಅಕಿ ಪ್ರಕೃರ್ತಿಗೂ ಅದು ಛಲೋ ಬಿಡ್ರಿ. ನಾ ನಿಂದ ವೇಟ್...
’ಹಳೇ ಕೆಬ್ಬಣಾ,ಮೊಡ್ಕಾ ಡಬ್ಬಿ, ವಡ್ಕಾ ಪ್ಲಾಸ್ಟಿಕ ಬಕೇಟ ಮಾರಾಕ ಕೊಡೊ…….ಹರಕಾ ಚಪ್ಪಲ್, ರದ್ದಿ ಪೇಪರ, ಖಾಲಿ ಬಾಟಲಿ ಮಾರಕ್ ಕೊಡೆ………’ಅಂತ ಒದರಕೋತ ಒಂದ ದುಗುಸೊ ಗಾಡಿ ತೊಗಂಡ ಓಣಿ ತುಂಬಾ ಅಡ್ಯಾಡೊರನ ನೋಡಿರಬೇಕಲಾ? ಈಗ ಒಂದ ಸ್ವಲ್ಪ ಕಡಿಮೆ ಆಗೇದ, ಇಲ್ಲಾಂದ್ರ...
ಹೆಂಡ್ತಿ ಹಾದಿ ತಪ್ಪಿದರ ಅಂದರ ಹಂಗ ಹಾದಿ ತಪ್ಪೋದಲ್ಲಾ ಮತ್ತ, ನೀವೇಲ್ಲರ ಅಪಾರ್ಥ ಮಾಡ್ಕೋಂಡಿರಿ, ಹೆಂಡ್ತಿ ಹೊರಗ ಹೋದೊಕಿ ದಾರಿ ತಪ್ಪಿ ಮನಿಗೆ ಬರಲಿಲ್ಲಾ ಅಂದರ, ಇಲ್ಲಾ ನಾವ ಮನಿಗೆ ಬಂದಾಗ ಅಕಿ ಮನ್ಯಾಗ ಕಾಣಲಿಲ್ಲಾ ಅಂದರ ನಾವ ಭಾಳ ತಲಿಕೆಡಸಿಗೊಂಡ...
ನಿನ್ನೆ ಶುಕ್ರವಾರ ‘ವರ್ಲ್ಡ ಸ್ಲೀಪ ಡೇ’ ಇತ್ತು, ಅಂದರ ‘ವಿಶ್ವ ಮಲ್ಕೋಳೊ ದಿವಸ’. ವರ್ಷಾ ಪ್ರತಿ ಮಾರ್ಚ ತಿಂಗಳದ ಮೂರನೇ ಶುಕ್ರವಾರ ‘ವರ್ಲ್ಡ ಸ್ಲೀಪ ಡೇ’ ಇರತದ. ಹಂಗ ಇದರ ಬಗ್ಗೆ ನಮ್ಮ ದೇಶದಾಗ ಭಾಳ ಮಂದಿಗೆ ಗೊತ್ತಿರಲಿಕ್ಕಿಲ್ಲಾ ಆದರ ನಮ್ಮ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...