ನಾ ಬರಿಲಿಕ್ಕೆ ಶುರು ಮಾಡಿದ್ದ ’ಕೆಂಡಸಂಪಿಗೆ’ ಇಂದ…
’ಮಾತಾಡೋದ ಒಂದ – ಬರೆಯೋದ ಒಂದ ’ ಮಾಡಬಾರದು ಅಂತ ಅನ್ಕೋಂಡ ನಾ ಮಾತಡೋ ’ ಆಡು’ ಭಾಷೆ ಒಳಗ ಬರದ ಲೇಖನಗಳನ್ನ ಓದಿ ಪ್ರಕಟಿಸಿದ ’ಕೆಂಡಸಂಪಿಗೆ’ಯ ಸಂಪಾದಕ ಅಬ್ದುಲ್ ರಶೀದರಿಗೂ ನಾ ಮರೆಯಂಗಿಲ್ಲಾ. ಅವರ ನನ್ನ ಈ ಓದುಗರ ಜಗತ್ತಿಗೆ ಪರಿಚಯ ಮಾಡಿಸಿದವರು…ಇವತ್ತ ನಾ ಲೇಖಕ ಆಗೇನಿ ಅಂದರ ಅದಕ್ಕೂ ಅವರು ಒಬ್ಬರು ಕಾರಣ.
ಮೊನ್ನೆ ಪೂಣಾದಿಂದ ನಮ್ಮ ಸುಮ್ಮಕ್ಕನ ಫೋನ್ ಬಂದಿತ್ತ ,ಅಗದಿ ಭಾಳ ಖುಶಿಲೇ ತನ್ನ ಹೊಸಾ ಸೊಸಿ ‘ಹಂಗ ಇದ್ದಾಳ , ಹಿಂಗ ಇದ್ದಾಳ’ ಅಂತ ಒಂದ ತಾಸ ನಮ್ಮವ್ವನ ಮುಂದ ತನ್ನ ಸೊಸಿನ್ನ ಹೊಗಳಿದ್ದ-ಹೊಗಳಿದ್ದ. ನಮ್ಮವ್ವ ಅಕಿ ಹೇಳಿದ್ದಕ್ಕೆಲ್ಲಾ ‘ಹೂಂ..ಹೂಂ…ಹೌದಿನ್ವಾ’,’ಭಾಳ ಪುಣ್ಯಾ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...