’ಗಿರಮಿಟ್’ ನನ್ನ ಪ್ರಸ್ತುತ ವಿಜಯವಾಣಿಯ ಅಂಕಣ… ನನಗೆ ಅಂಕಣ ಬರಿಲಿಕ್ಕೆ ಅವಕಾಶ ಕೊಟ್ಟ ವಿಜಯ ವಾಣಿಯವರಿಗೆ ಅನಂತ ಧನ್ಯವಾದಗಳು.
ನಿನ್ನೆ ಮಧ್ಯಾಹ್ನ ಆಫೀಸನಿಂದ ಊಟಕ್ಕ ಬಂದಾಗ ಪ್ರೇರಣಾ ಕಾಣಲಿಲ್ಲಾ. ನಮ್ಮವ್ವನ ನಾ ಬಂದದ್ದ ನೋಡಿ ತಾಟ ಹಾಕಿದ್ಲು. ನಾ ಹೊಟ್ಟಿ ಹಸ್ತಾಗ ಮನ್ಯಾಗ ಯಾರಿಲ್ಲಾ, ಯಾಕಿಲ್ಲಾ ಎಲ್ಲಾ ತಲಿ ಕೆಡಸಿಗೊಳ್ಳಿಕ್ಕೆ ಹೋಗಂಗಿಲ್ಲಾ. ಊಟ ಆದಮ್ಯಾಲೆ’ಎಲ್ಲೇ ಹೋಗ್ಯಾಳ ನಿನ್ನ ಸೊಸಿ, ಕಾಣವಳ್ಳಲಾ’ ಅಂತ...
ಈಗ ಒಂದ ಎಂಟ ತಿಂಗಳ ಹಿಂದಿನ ಮಾತ ಇರಬೇಕ, ನಾ ಒಂದ ಲಗ್ನಕ್ಕ ಹೋಗಿದ್ದೆ, ಅಲ್ಲೆ ಕಲ್ಯಾಣ ಮಂಟಪದ ಗ್ವಾಡಿ ಮ್ಯಾಲೆ ಒಂದ ಬೋರ್ಡ ಹಾಕಿ ಅದರ ಮ್ಯಾಲೆ ‘ಜೀವನ ರಥ… ಸಾಗುವ ಪಥ’ ಅಂತ ಒಂದಿಷ್ಟ ಹಿತ ವಚನ ಬರದಿದ್ದರು....
ಈಗ ಒಂದ ಎರಡ ಮೂರ ವರ್ಷದಿಂದ ದಿವಸಾ ಮುಂಜಾನೆ ಗಂಡಾ ಹೆಂಡತಿ ಇಬ್ಬರು ನಮ್ಮ ಪೇಪರ್ ಹಿಡ್ಕೊಂಡ ಆ ಪದಾವಳಿ ತುಂಬೊ ಚಟಾ ಹಚ್ಗೊಂಡೇವಿ. ಹಂಗ ಇಬ್ಬರದೂ ಕನ್ನಡ ಅಷ್ಟಕ್ಕಷ್ಟ, ನಾ ಏನೋ ಒಂದ ನಾಲ್ಕ ಅಕ್ಷರ ಆಡ ಭಾಷೆ ಒಳಗ...
ನಾ ಖರೇ ಹೇಳ್ತೇನಿ ಇತ್ತೀಚಿಗೆ ವಾರಕ್ಕ ಏನಿಲ್ಲಾಂದರೂ ಒಂದ ಐದ ಆರ ಸರತೆ ನನ್ನ ಹೆಂಡ್ತಿ ಕಡೆ ’ಮುದಕರಾದ್ರು ಮ್ಯಾಚುರಿಟಿ ಬರಲಿಲ್ಲಾ…ಬುದ್ಧಿ ಎಲ್ಲೆ ಇಟ್ಟೀರಿ’ ಅಂತ ಬೈಸ್ಗೋತಿರ್ತೇನಿ. ಹಂಗ ವಾರಕ್ಕ ಒಂದ ಎರಡ ಸರತೆ ನಮ್ಮವ್ವನೂ ಅಂತಿರ್ತಾಳ ಆ ಮಾತ ಬ್ಯಾರೆ...
ಮೊನ್ನೆ ಗಣಪತಿ ಹಬ್ಬದ ಸಾಮಾನ ಖರೀದಿ ಮಾಡ್ಲಿಕ್ಕೆ ದುರ್ಗದ ಬೈಲಿಗೆ ದಂಪತ್ ಹೋದಾಗ ಅಚಾನಕ್ ಆಗಿ ನನ್ನ ಜೊತಿ ಒಂದನೇತ್ತಾದಿಂದ ಏಳನೇತ್ತಾ ತನಕಾ ಕಲತ ಪರ್ವೇಜ್ ಭೇಟ್ಟಿ ಆದಾ. ನನ್ನ ನೋಡಿದವನ ಒಮ್ಮಿಕ್ಕಲೇ ಜೋರಾಗಿ’ಲೇ….ಭಟ್ಟಾ…ನಿಲ್ಲಲೇ ಮಗನ…….. ನೋಡಿದರೂ ನೋಡಲಾರದಂಗ ಹೋಗ್ತಿ ಅಲಾ…..’...
ಇದ ಹೋದ ವರ್ಷದ ಕಥಿ. ಇನ್ನೇನ ಶ್ರಾವಣ ಮುಗದ ಭಾದ್ರಪದ ಮಾಸ ಬರೋದಕ್ಕ ಮುಂಜ ಮುಂಜಾನೆ ಎದ್ದ ನಮ್ಮ ಮೌಶಿದ ಫೋನ್ ಬಂತ, ಇನ್ನ ಅಕಿ ಫೋನ್ ಬಂತಂದರ ನಂಗಂತೂ ಅಸಿಡಿಟಿನ ಆಗ್ತದ ಯಾಕಂದರ, ಒಂದ ಏನರ ನನಗ ಕೆಲಸಾ ಹೇಳಿ...
ಇತ್ತೀಚಿಗೆ ಡೈಟ್ ಮಾಡೋದ ಒಂದ ಚಟಾ ಆಗೇದ. ಹಂಗ ಕೆಲವೊಬ್ಬರಿಗೆ ಚಟಾ ಜಾಸ್ತಿ ಆದಮ್ಯಾಲೆ ಡೈಟ್ ಮಾಡಬೇಕಾಗ್ತದ ಆ ಮಾತ ಬ್ಯಾರೆ.ಇನ್ನ ಈ ಡೈಟಗೆ ಲಿಂಗ್ ಭೇದ ಇಲ್ಲಾ ಅಂತ ಅನ್ಕೊಂಡರು ಇದನ್ನ ಹೆಣ್ಣಮಕ್ಕಳ ಸಿರಿಯಸ್ ಆಗಿ ಮಾಡಿದಷ್ಟ ಗಂಡಸರಂತೂ ಮಾಡಂಗಿಲ್ಲಾ.ಇನ್ನ...
ಈಗ ಮೂರ ತಿಂಗಳ ಹಿಂದ ಯುಗಾದಿ ಟೈಮ ಒಳಗ ಹೊಸಾ ಪಂಚಾಂಗ ಬಂತ. ಹಂಗ ಯುಗಾದಿ ದಿವಸ ಪಂಚಾಂಗ ಪೂಜಾ ಮಾಡಿ ಒಂದ ಚೂರ ಓದಬೇಕಂತ, ಅದಕ್ಕ ನನ್ನ ಹೆಂಡತಿ ಪಂಚಾಂಗ ಹಿಡ್ಕೊಂಡ ಸೀದಾ ಶ್ರಾವಣ ಮಾಸ ಯಾವಾಗ ಬರ್ತದ, ಈ...
ಮೊನ್ನೆ ನನ್ನ ದೋಸ್ತನ ಮಗಂದ ಮುಂಜವಿ ಇತ್ತ. ಇನ್ನ ಅಂವಾ ನನಗ’ಲೇ…ನೀ ನಿಮ್ಮ ಫ್ಯಾಮಿಲಿ ಕರಕೊಂಡ ಬರಬೇಕ’ ಅಂತ ಭಾಳ ಒತ್ತಾಯ ಮಾಡಿ ಹೇಳಿದ್ದಕ್ಕ ನಾ ಹೆಂಡ್ತಿ ಮಗಳನ ಕರಕೊಂಡ ಹೋಗಿದ್ದೆ. ಹಂಗ ಅಂವಾ ಅಗದಿ ನಮ್ಮ ಫ್ಯಾಮಿಲಿ ಕ್ಲೋಸ್ ಫ್ರೆಂಡ್...
ಈಗ ಒಂದ ಐದ ತಿಂಗಳ ಹಿಂದ ನಮ್ಮ ಹಳೇ ಮನಿ ಕಡೆ ಇದ್ದ ಮಂಜು ಅಂತ ಹುಡುಗ ಒಬ್ಬೊಂವ ಹಡದಿದ್ದಾ, ಅಂದರ ಅವನ ಹೆಂಡ್ತಿ ಹಡದಿದ್ಲು. ಇನ್ನ ಅಕಿ ತವರ ಮನ್ಯಾಗ ಹಡದಿದ್ದಕ್ಕ ನಮಗ ಹೋಗಿ ಕೂಸಿನ ನೋಡ್ಲಿಕ್ಕೆ ಆಗಿದ್ದಿಲ್ಲಾ. ಹಿಂಗಾಗಿ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...