ಅಲ್ಲಾ ಇತ್ತೀಚಿಗೆ ಎಲ್ಲಾರ ಕನಸಿನಾಗೂ TRUMP ಬರಲಿಕತ್ತಾನ ಬಿಡ್ರಿ ಆ ಮಾತ ಬ್ಯಾರೆ
ಈ ಗಾಡಿ ಹೆಸರ TRUMP ಅಲ್ಲಾ TRIUMPH, ಆಮ್ಯಾಲೆ ಈ ಗಾಡಿನೂ ನಂದ ಅಲ್ಲಾ….
ನನ್ನ ಹಣೇಬರಹದಾಗ ಇಲ್ಲೆ ನೋಡಿದ್ರ ಟ್ರಂಪ್ ಕಾಟಕ್ಕ ಇದ್ದ ಕಾರ ಮಾರಿ ಸೈಕಲ್ ತೊಗೊಳೊ ಪರಿಸ್ಥಿತಿ ಬಂದದ….ಇನ್ನ ಮೂರ ಲಕ್ಷದ್ದ ಬೈಕ್ ಎಲ್ಲೇ ತೊಗೊತಿರಿ….
ಅಲ್ಲಾ TRUMP ಸಂಬಂಧ ಎಲ್ಲೇ ಮನ್ಯಾಗಿನ ಸಿಲೆಂಡರ್ ಜಾಸ್ತಿ ಖಾಲಿ ಆಗ್ತದ ಅಂತ ಸಂಕಟಕ್ಕ ಇದ್ದ ಒಂದ ಹೆಂಡ್ತಿನ್ನ ತವರಮನಿಗೆ ಕಳಸಿ ವಾರಕ್ಕ ಮೂರ ಸರತೆ ತಾಯಿ ಮಗಾ ಅನ್ನಾ ತಂಬೂಳಿ ಉಣ್ಣಲಿಕತ್ತೇವಿ…ನಮ್ಮ ಮಗಳ ಅಂತೂ ಎಲ್ಲೇ ಇವತ್ತಿಲ್ಲಾ ನಾಳೆ ಇದ್ಲಿ ಒಲಿ ಮ್ಯಾಲೆ ಮ್ಯಾಗಿ ಮಾಡ್ಕೊಂಡ ತಿಂತಾಳೋ ಅನ್ನೊಹಂಗ ಆಗೇದ….ಹೋಗ್ಲಿ ಬಿಡ್ರಿ ಆ TRUMPನ ವಿಷಯ ಬರಲಿಕತ್ತರ ಅದ ಒಂದ ಆರ್ಟಿಕಲ್ ಆಗ್ತದ……ವಾಪಸ TRIUMPHಕ್ಕ ಬರ್ರಿ..
ನಮ್ಮ ದೋಸ್ತ ಒಬ್ಬೊಂವ ಡಿಸೈಲ್ ರೇಟ್ ಜಾಸ್ತಿ ಆಗಿದ್ದಕ್ಕ ತಲಿಕೆಟ್ಟ THAR jeep ಗಾಡಿ ಮಾರಿ TRIUMPH ಬೈಕ ತೊಗೊಂಡಾ.
ನಾ ಒಂದ ರೌಂಡ ಕೊಡಲೇ ಅಂದರ..
“ಲೇ ಮಗನ ಮೊದಲ ಈ ಬೈಕದ್ದ ಸೈಡ್ ಸ್ಟ್ಯಾಂಡ ತಗಿ….ಆಮ್ಯಾಲೆ ಒಂದ ರೌಂಡ ಹೋಡಿಯೊವಂತಿ” ಅಂತ ಒಬ್ಬೊಂವ ಅಂದರ ಇನ್ನೊಬ್ಬಂವಾ
“ತಮ್ಮಾ ಇದ 250kg ಅದ….ಎಲ್ಲರ ಮೈಮ್ಯಾಲೆ ಹಾಕ್ಕೊಂಡರ ನೀ ಸೈಲನ್ಸರಗ ಅಂಟಗೋತಿ ನೋಡ ಮತ್ತ”….ಅಂದಾ
“ಲೇ…26 ವರ್ಷದಿಂದ ಸಂಸಾರದ ಭಾರನ ಹೊತ್ತೇನಿ ಇದೇನ ದೊಡ್ಡದಲೇ” ಅಂತ ನಾ ಅಂದರ
“ತಮ್ಮಾ ಸಂಸಾರ ನಡಸಲಿಕ್ಕೆ ವಾರಕ್ಕ 180 ml ಸಾಕ ಇದ 400cc ಬೈಕ ….. ನೀ ಇದರ ಮ್ಯಾಲೆ ಹೊಂಟರ ಹಾರೇ ಹೋಗ್ತಿ… ಸುಮ್ಮನ
ಇದರ ಮ್ಯಾಲೆ ಕೂತ ಫೋಟೊ ಹೊಡಿಸ್ಗೊಂಡ ಸೋಸಿಯಲ್ ಮೀಡಿಯಾದಾಗ ಹಾಕ್ಕೊ ಸಾಕ…..” ಅಂದಾ..
ಏನ್ಮಾಡ್ತೀರಿ… ನಾ ಅದು ಖರೇ ಬಿಡ ಅಂತ ಸುಮ್ಮನ ಫೋಟೊ ಹೊಡ್ಕೊಂಡ ನಿಮ್ಮ ಜೊತಿ ಹಂಚಗೊಂಡೆ ಇಷ್ಟ……
ಅಲ್ಲಾ on serious note ನಿಂಬದ ಯಾರದರ ಮನ್ಯಾಗ BHARAT GAS ಸಿಲೆಂಡರ್ extra ಇದ್ದರ ಒಂದ ಕೊಡ್ರೇಲಾ…..please
ಅಲ್ಲಾ, ಹೆಂಡ್ತಿನ್ನ ತವರಮನಿಯಿಂದ ವಾಪಸ ಕರಸಬೇಕ ಅಂತ ಮಾಡೇನಿ, ಯಾಕಂದರ ಈ ಯುದ್ಧ ಯಾವಾಗ ಮುಗಿತದ ಗೊತ್ತಿಲ್ಲಾ…ಇನ್ನ ಯುದ್ಧ ಮುಗಿಯೋತನಕಾ ಅಂದರ ಎಲ್ಲೇ ನನ್ನ ಹೆಂಡ್ತಿ ಒಲಿಗೆ ಕಟಿಗೆ ಆರಿಸ್ಗೋತ ತವರಮನಿಯಿಂದ ಸೀದಾ ವನವಾಸಕ್ಕ ಹೋಗ್ತಾಳೊ ಅಂತ ಚಿಂತಿ ಹತ್ತೇದ….
eom/-
