ಕಣ್ಣಾಗ ಎಣ್ಣಿ ಹಾಕ್ಕೊಂಡ ಓದರಿ

ಮೊನ್ನೆ ನಮ್ಮ ದೋಸ್ತ ಶಂಕರ ಫೋನ ಮಾಡಿ
“ಏ… ಆ ಕಣ್ಣಿನ ಡಾಕ್ಟರ್ ಕುನಾಲ್ ನಿನ್ನ ದೋಸ್ತ ಏನ…? ’ ಅಂತ ಕೇಳಿದಾ. ನಾ
“ಹೌದ, ಯಾಕ ಏನಾತ…” ಅಂತ ಕೇಳಿದೆ.
“ಏನಿಲ್ಲಾ…ಅವ್ವಾರ ಕಣ್ಣಿಗೆ ಪರಿ ಬಂದಿತ್ತ ತೊರಸಲಿಕ್ಕೆ ಹೋಗಿದ್ದೆ…ದವಾಖಾನಿ ಬುಕ್ ಶೆಲ್ಫ್ ಒಳಗ ನಿನ್ನ ಗೊಜ್ಜವಲಕ್ಕಿ ಬುಕ್ ಇಟ್ಟಿದ್ದರ, ಅದಕ್ಕ ಅವರ ನಿನ್ನ ದೋಸ್ತ ಇರಬೇಕ ತಡಿ ಅಂತ ಫೋನ ಮಾಡಿದೆ..how is he?” ಅಂದಾ.
ನಾ ಅವಂಗ
’ಏ.. ಕುನಾಲ್ ಬೆಸ್ಟ ಡಾಕ್ಟರ….ನಾ ಮೊನ್ನೆ-ಮ್ಮೊನ್ನೇರ ’ ಹೆಣ್ಣ ಕೊಟ್ಟ ಅತ್ತಿ ಕಣ್ಣ ಇದ್ದಂಗ’ ಅಂತ ನಮ್ಮ ಅತ್ತಿವು ಎರೆಡು ಕಣ್ಣಿನ ಪರಿ ತಗಸಿಸಿದೆ…go ahead, he is best’ ಅಂತ ಹೇಳಿದೆ. ಅಂವಾ ಮುಂದ
’ಅಲ್ಲಲೇ….ದಾವಾಖಾನಿ ಒಳಗ ಎಲ್ಲಾ ಬಿಟ್ಟ ನಿನ್ನ ಬುಕ್ ಯಾಕ ಇಟ್ಟಾರ ತಿಳಿಲಿಲ್ಲಾ” ಅಂದಾ. ನಾ ಭಡಕ್ಕನ
’ಬಂದ ಪೇಶೆಂಟ್ ಓದಲಿ ಅಂತ ಇಟ್ಟಾರ’ ಅಂದೆ.
’ಅಲ್ಲಪಾ ಕಣ್ಣಿನ ದಾವಾಖಾನಿ ಒಳಗ ಎಂಟರ್ ಆಗೊ ಪುರಸತ್ತ ಇಲ್ಲದ ಕಣ್ಣಾಗ ಎಣ್ಣಿ ಹಾಕಿ ಕೂಡಸ್ತಾರ ಹಂತಾದರಾಗ ನಿನ್ನ ಗೊಜ್ಜವಲಕ್ಕಿ ಯಾರ ಓದತಾರ ಮಗನ’ ಅಂದಾ..
’ಲೇ..ಪೇಶಂಟ್ ಜೊತಿ ಬಂದವರರ ಓದತಾರ ತೊಗೊ…ನೀ ಯಾಕ ಅದರ ಬಗ್ಗೆ ಭಾಳ ತಲಿಕೆಡಸ್ಗೋತಿ’ ಅಂತ ನಾ ಅಂದೆ.
’ಮಗನ ಮದ್ಲ ನೀ ಬರದಿದ್ದ ಓದಬೇಕಂದರ ಕಣ್ಣಾಗ ಎಣ್ಣಿ ಹಾಕ್ಕೊಂಡ ಓದಬೇಕ …ಹಂತಾ ಆಡ ಭಾಷಾ ಒಳಗ ಬರಿತಿ…ಇನ್ನ ಬುಕ್ ಓದಿದ ಮ್ಯಾಲೆ ಕಣ್ಣ ಚೆಕ್ ಮಾಡಿಸ್ಗೊಂಡ ಬರಬೇಕ’ ಅಂದಾ.
ಏನ್ಮಾಡ್ತೀರಿ ಹಿಂತಾವರಿಗೆ….
ಹಂಗ ನಂಗ ಒಂದಸಲಾ ಡಾಕ್ಟರ ಏನರ ಅಕಸ್ಮಾತ ಕಣ್ಣಿನ ಆಪರೇಶನ್ ಮಾಡಿಸ್ಗೊಂಡವರಿಗೆ ಸರಿಯಾಗಿ ಓದ್ಲಿಕ್ಕೆ ಬರ್ತದ ಇಲ್ಲೋ ಅಂತ ಚೆಕ್ ಮಾಡ್ಲಿಕ್ಕೆ ನನ್ನ ಬುಕ್ ಇಟ್ಟಾರೇನ ಅಂತನೂ ಡೌಟ್ ಬಂತ…
ಅಲ್ಲಾ ಹಂಗ ಆಪರೇಶನ್ ಮಾಡಿಸ್ಕೊಂಡವರಿಗೆ ಕನ್ನಡ ಓದ್ಲಿಕ್ಕೆ ಬರತಿದ್ದಲ್ಲಾ ಅಂದರ…ಇಲ್ಲಾ ನನ್ನ ಆಡ ಭಾಷೆ ಕನ್ನಡ ಓದ್ಲಿಕ್ಕೆ ಬರಲಿಲ್ಲಾ ಅಂದರ ಆಪರೇಶನ್ ಮಾಡಿದ್ದ ಡಾಕ್ಟರದ ತಪ್ಪೋ ಇಲ್ಲಾ ಬುಕ್ ಬರದ ನಂದ ತಪ್ಪೋ?
ಆದರು ಏನ ಅನ್ನರಿ ಇವತ್ತ ಕನ್ನಡ ಓದಬೇಕಂದರ ಜನರಿಗೆ ಕಣ್ಣಾಗ ಎಣ್ಣಿ ಹಾಕ್ಕೊಂಡ ಓದಬೇಕಲಾ ಅಂತ ಅನ್ನೊ ಹಂಗ ಆಗೇದ. ಹಂತಾದರಾಗ ಪಾಪ ನಮ್ಮ ಡಾಕ್ಟರ ಕನ್ನಡ ಪುಸ್ತಕ ದವಾಖಾನಿಗೆ ಬಂದವರ ಓದ್ಲಿ ಅಂತ ಇಟ್ಟಿದ್ದ ಕೇಳಿ, ನೋಡಿ ಖುಶಿ ಆತ…
eom/-
ವಿ.ಸೂ: ’ಹೆಂಡ್ತಿ’ ಅನ್ನುವ ಒಂದೂ ಪದವನ್ನು ಬಳಕೆ ಮಾಡದೆ ಈ ಲೇಖನ ಬರದೇನಿ…

Leave a Reply

Your email address will not be published. Required fields are marked *


The reCAPTCHA verification period has expired. Please reload the page.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ