ನಾ ಬರಿಲಿಕ್ಕೆ ಶುರು ಮಾಡಿದ್ದ ’ಕೆಂಡಸಂಪಿಗೆ’ ಇಂದ…
’ಮಾತಾಡೋದ ಒಂದ – ಬರೆಯೋದ ಒಂದ ’ ಮಾಡಬಾರದು ಅಂತ ಅನ್ಕೋಂಡ ನಾ ಮಾತಡೋ ’ ಆಡು’ ಭಾಷೆ ಒಳಗ ಬರದ ಲೇಖನಗಳನ್ನ ಓದಿ ಪ್ರಕಟಿಸಿದ ’ಕೆಂಡಸಂಪಿಗೆ’ಯ ಸಂಪಾದಕ ಅಬ್ದುಲ್ ರಶೀದರಿಗೂ ನಾ ಮರೆಯಂಗಿಲ್ಲಾ. ಅವರ ನನ್ನ ಈ ಓದುಗರ ಜಗತ್ತಿಗೆ ಪರಿಚಯ ಮಾಡಿಸಿದವರು…ಇವತ್ತ ನಾ ಲೇಖಕ ಆಗೇನಿ ಅಂದರ ಅದಕ್ಕೂ ಅವರು ಒಬ್ಬರು ಕಾರಣ.
ಮತ್ತ IPL ಶುರು ಆತು. ಇದು ಐದನೇ ಕಂತು, ಭಾಗ, ಆವೃತ್ತಿ, ಸರಣಿ ಏನ ಸುಡಗಾಡರ ಅನ್ರಿ. ಇನ್ನ ಒಂದೆರಡ ತಿಂಗಳಂತೂ ತಲಿ ಚಿಟ್ಟ ಹಿಡಿಯೋಷ್ಟ ಕ್ರಿಕೆಟ. ಹಂಗ ರೊಕ್ಕಾ ತೊಗಂಡ ಆಡೋರಿಗೆನ ಅನಸಂಗಿಲ್ಲಾ, ಪುಕಶೆಟ್ಟೆ ಮನ್ಯಾಗ ಕೂತ ನೋಡವರಿಗೆ ತ್ರಾಸ....
ಈ ಕೆಂಡಸಂಪಿಗೆ ಅಂದ್ರ ಏನ ಅಂತ ನನ್ನ ಹೆಂಡತಿಗೆ ನಾ ಒಂದ್ಯಾರಡ ಲೇಖನಾ ಬರೇಯೊತನಕಾ ಗೊತ್ತ ಇದ್ದಿದ್ದಿಲ್ಲಾ, ಅಲ್ಲಾ ಹಂಗ ನನಗೂ ಬರೇಯೋಕಿಂತ ಮುಂಚೆ ಗೊತ್ತಿದ್ದಿಲ್ಲಾ ಆ ಮಾತ ಬ್ಯಾರೆ. ಆದ್ರ ನಾ ಇತ್ತೀಚಿಗೆ ಕೆಂಡಸಂಪಿಗೆ ಜೊತಿ ಹೊತ್ತ ಕಳದಷ್ಟ ನನ್ನ...
ಒಂದ ಎಂಟ ದಿವಸ ಹಿಂದ ಹಿಂಗs ಫಾಲತು ಬ್ರೌಸಿಂಗ ಮಾಡಬೇಕಾರ ಒಂದ ಇಂಟರೆಸ್ಟಿಂಗ ಟೈಟಲ್ ಕಾಣ್ತ. ’Royal baby worth $376 Million to the British Economy’ ಅಂತ ಇತ್ತ. ಅಲ್ಲಾ ಬರೇ Royal baby worth $376 Million...
ಕೆಂಡಸಂಪಿಗೆ ಒಳಗ ಒಂದ ಪ್ರಹಸನ ಬರಿಲಿಕ್ಕೆ ಶುರು ಮಾಡಿದ್ದ ಇವತ್ತ ಒಂದ ಪುಸ್ತಕ ಆಗೋತನಕ ಬಂದ ಮುಟ್ಟತ, ಕಡಿಕೆ ಮೊನ್ನೆ ಎಪ್ರಿಲ್ 6ಕ್ಕ ಬೆಂಗಳೂರಾಗ ‘ಕುಟ್ಟವಲಕ್ಕಿ’ ಅಂತ ಹೆಸರಿಲಿ ಪುಸ್ತಕನು ಬಿಡುಗಡೆ ಆತು. ಛಂದ ಪುಸ್ತಕದವರ ಈ ನನ್ನ ಪ್ರಹಸನಗಳನ್ನ ಎಲ್ಲಾ...
ಒಂದ ವಾರದಿಂದ ಯಾಕೋ ನನ್ನ ಹೆಂಡತಿ ನನಗ “ರ್ರಿ ಬರೋ ಮಾರ್ಚ೩೧ಕ್ಕ ನಂದ ಅಕೌಂಟ ಕ್ಲೋಸ್ ಮಾಡಿ ಬಿಡರಿ” ಅಂತ ಗಂಟs ಬಿದ್ದಾಳ. ನಂಗ ಅಕಿ ಯಾ ಸುಡಗಾಡ ಅಕೌಂಟ ಬಗ್ಗೆ ಮಾತಡಲಿಕತ್ತಾಳ ಅಂತ ಗೊತ್ತಾಗವಲ್ತಾಗೇದ. ಹಂಗ ಅಕಿ ಎರಡ ಹಡದ...
“ಲೇ, ನಿನ್ನೌನ. ಎಲ್ಲಿ ಇದ್ದೀಲೇ? ಏನ ಸುದ್ದೀನ ಇಲ್ಲಲಾ? ಇದಿಯೋ ಸತ್ತೀಯೋ” ಅಂತ ನಿನ್ನೆ ನಮ್ಮ ರಾಘ್ಯಾ ಬೆಂಗಳೂರಿಂದ ಫೋನ ಮಾಡಿದ್ದಾ. ಅವನೌನ ಇವಂಗ ಎಲ್ಲಾ ಬಿಟ್ಟ ಇವತ್ತ ಯಾಕ ನಂದ ನೆನಪಾತಪಾ? ಈ ಮಗಾ ಲಾಸ್ಟ ನನಗ ಫೋನ ಮಾಡಿದ್ದ...
ಇದ ದೀಪಾವಳಿ ಟೈಮಿನಾಗಿನ ಸುದ್ದಿ. ನಮ್ಮ ದೋಸ್ತ ದೇಸಾಯಿ ದೀಪಾವಳಿಗೆ ತಮ್ಮ ಮನಿಗೆ ಫರಾಳಕ್ಕ ಕರದಿದ್ದಾ. ಅಂವಾ ಅಮೇರಿಕಾದಿಂದ ಮೂರ ವರ್ಷದ ಮ್ಯಾಲೆ ಬಂದಿದ್ದಾ ಹಿಂಗಾಗಿ ಎಲ್ಲಾ ದೋಸ್ತರಿಗೂ ಭೆಟ್ಟಿ ಆದಂಗ ಆಗತದ ಅಂತ ಕರದಿದ್ದಾ. ಅದರಾಗ ಯಾಕೋ ಈ ವರ್ಷ...
ನಾ B.Sc ಕಲಿಬೇಕಾರ ನನ್ನ ಜೊತಿ ಪಕ್ಯಾ ಅಂತ ಒಬ್ಬ ದೋಸ್ತ ಇದ್ದಾ. ಹಂಗ ವಯಸ್ಸಿನಾಗ ನನ್ನ ಕಿಂತಾ ಎರಡ ಮೂರ ವರ್ಷ ದೊಡ್ಡಂವ, ಆದರ SSLC ಒಳಗ, PUCIIರಾಗ ಜಾಸ್ತಿ knowledge ಬರಲಿ ಅಂತ ಲಗಾ ಹೊಡದ B.Sc ಒಳಗ...
ಇದ ಒಂದ ಮೂರ ನಾಲ್ಕ ವರ್ಷದ ಹಿಂದಿನ ಮಾತ. ನಮ್ಮ ದೋಸ್ತ ಒಬ್ಬಂವಾ ಹಡದಿದ್ದಾ. ದೋಸ್ತ ಅಂದರ ದೋಸ್ತನ ಅಲ್ಲಾ, ದೋಸ್ತನ ಹೆಂಡತಿ ಹಡದಿದ್ಲು. ನಾವ ನಾಲ್ಕೈದ ಮಂದಿ ದೋಸ್ತರ ಸೇರಿ ದಾವಾಖಾನಿಗೆ ಕೂಸಿನ ನೋಡ್ಕಂಡ ಬರಲಿಕ್ಕೆ ಹೋಗಿದ್ವಿ. ನಮ್ಮ ದೋಸ್ತ...
ಫೇಸಬುಕ್ ಬಂದ ಆಗತದ ಅಂತ. ಒಂದ ಎರಡ ವರ್ಷದ ಹಿಂದ ಮಾರ್ಚ ೧೫ ಕ್ಕ ಫೇಸಬುಕ್ ಬಂದ್ ಆಗತದ ಅಂತ ಇಂಟರನೇಟನಾಗ ಆರ್ಟಿಕಲ್ ಬರಲಿಕತ್ತಿದ್ವು. ನನಗಂತೂ ಓದಿ ಗಾಬರಿನ ಆಗಿತ್ತು. ಹಾರ್ಟ್ ಅಟ್ಯಾಕ ಆಗೋದ ಒಂದ ಬಾಕಿ ಇತ್ತ. ಆದರ ಅಷ್ಟರಾಗ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...