ನಮ್ಮ ಮನೆಯವರಿಗೆ Ig Nobel ಆವಾರ್ಡ ಕೊಡರಿ…….

ಮೊನ್ನೆ ಪೋಸ್ಟನಿಂದ ಒಂದ ಇಂಟರನ್ಯಾಶನಲ್ ಇಂಗ್ಲೆಂಡ ಕವರ ಬಂತು, ಅದು ಅಮೇರಿಕಾದಿಂದ, ನನ್ನ ಹೆಂಡತಿ ಹೆಸರಿನ ಮ್ಯಾಲೆ. ನಂಗ ’ಇದೇನಪಾ ನಂಗಿಷ್ಟ ಅಮೇರಿಕಾದಾಗ ಫ್ಯಾನ್ಸ ಇದ್ದಾರ ಅಂತ ಅನ್ಕೊಂಡರ ಅಕಿಗೂ ಫಾರೇನದಾಗ ಫ್ಯಾನ್ಸ ಆಗ್ಯಾರಿನ’ ಅಂತ ಅನಸಲಿಕತ್ತ. ಹಂಗ ಲೆಟರ್ ಮ್ಯಾಲೆ ಅಕಿ ಹೆಸರ ಇದ್ದರು ಅಕಿ ಮನ್ಯಾಗ ಇಲ್ಲಾ ಅಂತ ನಾನ ಧೈರ್ಯ ಮಾಡಿ ಒಪನ್ ಮಾಡಿ ನೋಡಿದರ ಅದ ಇಂಗ್ಲೀಷನಾಗ ಇತ್ತ. ಛಲೊ ಆತ ತೊಗೊ ಹಂಗ ಅಕಿ ಮನ್ಯಾಗ ಇದ್ದರು ಅಕಿಗೇನ ಓದ್ಲಿಕ್ಕೆ ಬರತಿದ್ದಿಲ್ಲಾ, ನಾನ ಓದಿ ಹೇಳಬೇಕಾಗತಿತ್ತ ಅಂತ ನಾನ ಕವರ ಬಿಚ್ಚಿ ಓದಲಿಕತ್ತೆ.
Dear Mrs Prerana Adur
We regret to inform you that the name of your beloved husband Mr.Prashant Adur has been ignored for the year 2014 Ig Nobel awards in the field of literature (humour category).
We understand his contribution to the field of kannada literature thru’ his witty articles written in north karnataka slang. But when thoroughly verified we found that you are a main source of information for his articles and you are also a source of inspiration for his so called literary work. Hence we can’t consider his work as his own work and according to us the major credit for his literary work should go to you.
However we are delighted to consider you for the Ig Nobel award if you are interested in the category of ‘women(wife)’ looking at your contribution in your husband’s literary work as it is very difficult to find such inspirational wife in this KALIYUGA that too in India.
Please let us know your interest at the earliest.
Thank you
Chairman
Ig Nobel Awards
Cambridge, USA.

ನಂಗ ಇದನ್ನ ಓದಿ ಖುಷಿ ಪಡಬೇಕೊ ಇಲ್ಲಾ ದು:ಖ ಪಡಬೇಕೊ ಅನ್ನೋದ ಗೊತ್ತಾಗಲಾರದಂಗ ಆತ. ನನ್ನ ಹೆಸರ ig nobel awardಗೆ ಹೋಗಿತ್ತಲಾ ಅಂತ ಖುಷಿ ಅನಸ್ತ ಆದರ ಅವರ ನನಗ ಕೊಡಂಗಿಲ್ಲಾ ಅಂತ ಅಂದದ್ದ ಕೆಟ್ಟ ಅನಸ್ತ. ಇನ್ನ ಅವರ ನನ್ನ ಬದ್ಲಿ ನನ್ನ ಹೆಂಡತಿಗೆರ ಕೊಡತೇನಿ ಅಂದರಲಾ ಅಂತ ಖುಷಿ ಅನಸ್ತ ಖರೆ ಆದರ ಅಷ್ಟರಾಗ ಅವರಿಗೆ ನನ್ನಕಿಂತಾ ನನ್ನ ಹೆಂಡತಿನ ಹೆಚ್ಚಿನಾಕಿ ಆದ್ಲೇನೂ ಅಂತ ದು:ಖನೂ ಆತ. ಇರಲಿ ಆದರೂ ನನ್ನ ಹೆಂಡತಿ ತಲಿ ಒಳಗ ತನ್ನ ಗಂಡನ್ನ ಹೆಸರ ಕಳಸಬೇಕ ಅಂತರ ಬಂತಲಾ ಅಷ್ಟ ಸಾಕ ಅಂತ ಸುಮ್ಮನಾದೆ.
ಅನ್ನಂಗ ಏನಿದ Ig Nobel, ಇಂವಾ ಯಾವದರ ಹೊಸಾ ನೋಬಲ್ ಹುಡಕ್ಯಾನಿನ ಮಗಾ ಅನಬ್ಯಾಡರಿ,
ಹಂಗ Ig Nobel Prizes ಅನ್ನೋದು American parody for the Nobel Prizes (ಅಮೇರಿಕಾದ ಅಣಕು ನೋಬಲ್ ಬಹುಮಾನ). igNoble ಅಂದರ which is not noble, opposite to noble, which can be ignored ಅಂತನು ಅರ್ಥ.
ಇದನ್ನ ಪ್ರತಿ ವರ್ಷ ಸೆಪ್ಟೆಂಬರ/ಅಕ್ಟೋಬರದೊಳಗ ಹತ್ತ ಮಂದಿಗೆ ’ಹುಚ್ಚುಚಾಕರ ಏನೇನರ ಕಂಡಹಿಡದವರಿಗೆ, ಸಾಧಿಸಿದವರಿಗೆ ಹುಡಕಿ ಹಿಡದ ಕೊಡ್ತಾರ. ಇದರ ಉದ್ದೇಶನ ‘to honor achievements that first make people laugh, and then make them think.’ ಅಂದರ ಆ ಸಾಧನೆ ಮೊದ್ಲ ನಗೋ ಹಂಗ ಇರಬೇಕು ಆಮ್ಯಾಲೆ ವಿಚಾರ ಮಾಡೊ ಹಂಗ ಇರಬೇಕು ಅನ್ನೋದ ಅವರ ವಿಚಾರ.
ಅಲ್ಲಾ, ಹಿಂಗಾಗೆ, ‘ನನ್ನ ಗಂಡನು ಹುಚ್ಚುಚಾಕಾರ ಬರದ ಸಾಧನೆ ಮಾಡ್ಯಾನ ಅದು ಫೇಸಬುಕ್ಕಿನಾಗ ಇಷ್ಟ ತಡಿ’ ಅಂತ ನನ್ನ ಹೆಂಡತಿ ’ನಮ್ಮ ಮನೆಯವರಿಗೆ Ig Nobel ಆವಾರ್ಡ ಕೊಡರಿ’ ಅಂತ ನನ್ನ ಹೆಸರ ಕಳಸಿದ್ದಳೊ ಏನೊ. ಹಂಗ ಕೆಲವೊಂದ ಸರತೆ ಈ ಅವಾರ್ಡ veiled criticism or gentle satire ಅಂದರ ಅಪಹಾಸ್ಯ, ವಿಡಂಬನೆಗು ಕೊಡ್ತಾರ ಅಂದ ಮ್ಯಾಲೆ ನಾ ಖರೇನ ಎಲಿಜಿಬಲ್ ಇದ್ದೆ ಬಿಡ್ರಿ. ಅವರ ಖರೇನ ನನ್ನ ಹೆಂಡತಿ ರಿಕ್ವೆಸ್ಟ ಸಿರಿಯಸ್ ಆಗಿ ಕನ್ಸಿಡರ ಮಾಡಬೇಕಿತ್ತ ಅನಸ್ತ.
ಅಲ್ಲಾ, ಅವರ ಮೊನ್ನೆ ೨೦೧೩ ರಾಗ ಹೆಂತಿತಾವರಿಗೆ, ಹೆಂತಿತ್ತಾ ವಿಷಯದ ಮ್ಯಾಲೆ ig nobel award ಕೊಟ್ಟಾರ ಗೊತ್ತೇನ ನಿಮಗ? ಇಲ್ಲೆ ಕೇಳ್ರಿ.
* for assessing the effect of listening to opera on mice which have had heart transplant operations ಅಂದರ ಹೃದಯ ನಾಟಿ ಮಾಡಿದ ಇಲಿಯ ಮೇಲೆ ಅದು ಒಪೇರಾ ಕೇಳಿದರೆ ಆಗುವ ಪರಿಣಾಮಗಳು….ಇದನ್ನ ಸ್ಟಡಿ ಮಾಡಿದವರಿಗೆ ಮೆಡಿಸೀನ್ ಕೆಟಗರಿ ಒಳಗ ig nobel ಅವಾರ್ಡ ಕೊಟ್ಟಾರ
* president of Belarusಗ ಪಬ್ಲಿಕ್ ಒಳಗ ಚಪ್ಪಾಳೆ ಹೊಡೆಯೋದ ಇಲ್ಲಿಗಲ್ (ಗೈರ ಕಾನುನಿ) ಮಾಡಿದ್ದಕ್ಕ ವಿಶ್ವಶಾಂತಿ ಅಂದರ world peace ಕೆಟಗರಿ ಒಳಗ ig nobel ಅವಾರ್ಡ ಕೊಟ್ಟಾರ. ಅವನ ಜೊತಿ Belarus State Policeಗೂ ಈ ಅವಾರ್ಡ ಕೊಟ್ಟಾರ ಯಾಕಂದರ ಅವರು ಯಾವನೊ one-armed man ಪಬ್ಲಿಕನಾಗ ಚಪ್ಪಾಳಿ ಹೊಡದಾ ಅಂತ ಅವಂಗ ಆರೆಸ್ಟ ಮಾಡಿದ್ದರಂತ.
* ಇನ್ನ ಯಾವ ಒಂದ biochemical processನಿಂದ ಜನಾ ಉಳ್ಳಾಗಡ್ಡಿ ಸುಲಿಬೇಕಾರ ಅಳತಾರಲಾ ಅದು ಸೈಂಟಿಸ್ಟ್ಸ ಮೊದ್ಲ ತಿಳ್ಕೊಂಡಿದ್ದಕಿಂತ ಕಾಂಪ್ಲಿಕೇಟೇಡ ಅದ ಅಂತ ಕಂಡ ಹಿಡದದ್ದಕ್ಕ ಈ ಅವಾರ್ಡ ಕೊಟ್ಟಾರ…..ಇದ ಕೆಮಿಸ್ಟ್ರಿ ಒಳಗ ಸಿಕ್ಕ ig nobel ಅವಾರ್ಡ..
ಅಲ್ಲಾ, ನಮ್ಮ ದೇಶದಾಗ ಜನಾ ಉಳ್ಳಾಗಡ್ಡಿ ಸುಲಿಬೇಕಾರ ಏನ ತೊಗೊಬೇಕಾರು ಅಳತಾರ ಆ ಮಾತ ಬ್ಯಾರೆ. ಇನ್ನೊಂದ ಲಾಸ್ಟ ಉದಾಹರಣೆ ಹೇಳಿ ಬಿಡ್ತೇನಿ.
* ಜನಾ ತಾವ ಕುಡದೇನಿ ಅಂತ ತಿಳ್ಕೊಳೊರು, ತಾವ ಭಾಳ ಛಂದನೂ ಇದ್ದೇವಿ ಅಂತ ತಿಳ್ಕೊತಾರಂತ experimentally confirm ಮಾಡಿದ್ದಕ್ಕ ಅವಾರ್ಡ ಕೊಟ್ಟಾರ (people who think they are drunk also think they are attractive) ……ಇದ ಸೈಕಾಲಜಿ ವಿಭಾಗದಾಗ.
ನಂಗ ಇಲ್ಲೇ ಏನೋ ಗಡಬಡಿ ಆಗೇದ ಅಂತ ಅನಸಲಿಕತ್ತದ. ಹಂಗ people who think they are drunk also think they are attractive ಅನ್ನೋದ ignoble ಆದರ ಇನ್ನ ಇದರ opposite ಅಂದರ people who think they are attractive also think they are drunk ಅನ್ನೋದು noble ಅಂದಂಗ ಆತ ಹೌದಲ್ಲ?
ಅಲ್ಲಾ, ಯಾಕ ಹೇಳಿದೆ ಅಂದ್ರ ನನ್ನ ಹೆಂಡತಿ ಯಾವಾಗಲು ತಾ attractive ಅಂತ ತಿಳ್ಕೊಂಡಿರ್ತಾಳ ಇದರ ಅರ್ಥ್ ಯಾವಗಲು ಅಕಿ ಡ್ರಂಕ್ ಅಂತ ತಿಳ್ಕೊಂಡಂಗ ಏನೋ ಅಂತ ಡೌಟ ಬಂತ. ಅಲ್ಲಾ ಕೆಲವೊಮ್ಮೆ ಅಕಿ ವ್ಯವಹಾರನು ಹಂಗ ಅನಸ್ತಿರ್ತದ ಆ ಮಾತ ಬ್ಯಾರೆ.
ಈಗ ಇವೇಲ್ಲಾ Ig Nobelದ್ದ ಕಥಿ ಓದಿದ ಮ್ಯಾಲೆ ನೀವು ಖರೇ ಹೇಳ್ರಿ ಸಾಹಿತ್ಯ ಕ್ಷೇತ್ರದಾಗ ನಂಗ ಈ Ig Nobel ಅವಾರ್ಡ ಸಿಗಬೇಕಿತ್ತೊ ಇಲ್ಲೊ? ಅಲ್ಲಾ ನನಗ ಕೊಡ್ಲಿರ ಇಲ್ಲಾ, ಸಾಯಲಿ, ಆದರ ನನ್ನ ಹೆಂಡತಿಗೆ ಕೊಡ್ತೇನಿ ಅಂತಾರ…. ಅಲ್ಲಾ, ಅಕಿಗೆ ಕೊಟ್ಟರ ನಂಗ ಹೆಂಗ ಅನಸಬಾರದ ನೀವ ಹೇಳ್ರಿ. ಅದಕ ನಾ ಭಡಾ, ಭಡಾ ಅಕಿ ಬರೋಕಿಂತಾ ಮುಂಚೆ ಆ ಲೆಟರ್ ಹರದ ಹಾಕಿ ಕೈ ತೊಳ್ಕಂಡ Ig Nobel award ignore ಮಾಡಿ ಬಿಟ್ಟೆ.
ಅನ್ನಂಗ ಈ ಬರೋ ಸೆಪ್ಟೆಂಬರ್ ೧೮, ಸಂಜಿ ೬ ಗಂಟೆಕ್ಕ Sanders Theater, Harvard University ಒಳಗ ೨೦೧೪ರ Ig Nobel prize distribution ಕಾರ್ಯಕ್ರಮ ಇಟಗೊಂಡಾರ, ಮೊನ್ನೆ ಜುಲೈ ಎಂಟರಿಂದ ಟಿಕೇಟ ಮಾರಲಿಕ್ಕೆ ಶುರು ಮಾಡ್ಯಾರೆ ಅನಕೂಲ ಇದ್ದೋರ ಹೋಗಿ ಬರ್ರಿ. ಗಾಡಿ ಖರ್ಚ ನಿಂಬದನ ಮತ್ತ, ಯಾಕಂದರ ಯಾರಿಗೆ Ig Nobel ಸಿಕ್ಕಿರತದ ಅವರು ತಮ್ಮ ಗಾಡಿ ಖರ್ಚಲೇನ ಬಂದ ಪ್ರೈಜ್ ತೊಗೊಂಡ ಹೋಗಬೇಕಂತ. ಹಂಗ ಒಂದ ರೀತಿಯಿಂದ ನನಗ Ig Nobel ಪ್ರೈಜ್ ಸಿಗಲಾರದ್ದ ಛಲೋನ ಆತ ಇಲ್ಲಾಂದರ ಗಾಡಿ ಖರ್ಚ ನನ್ನ ಮೈಮ್ಯಾಲೆ ಬರ್ತಿತ್ತ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ