(world contraception day ನಿಮಿತ್ತ ಬರೆದ ಪ್ರಹಸನ)
ಒಂದ ವಾರದ ಹಿಂದಿನ ಮಾತ ಇರಬೇಕ ನಾ ಸಿರಿಯಸ್ ಆಗಿ ಏನೋ ವಿಚಾರ ಮಾಡ್ಕೋತ ಆಫೀಸಗೆ ಹೊಂಟಿದ್ದೆ, ಎದರಿಗೆ ಮೂರ ನಾಲ್ಕ ಮಂದಿ ನಮ್ಮ ಓಣಿ ಹುಡುಗರು ಬಂದರು. ನಂಗ ನೋಡಿದವರ
“ಅರೇ ನೀವ ಇಲ್ಲೇ ಬಂದರಿ, ಭಾಳ ಛಲೋ ಆತ ನಾವ ನಿಮ್ಮನಿಗೆ ಹೊಂಟಿದ್ವಿ” ಅಂತ ನನ್ನ ತಡದ ನಿಲ್ಲಸಿದರು.
ಈ ಹುಡುಗರು ಒಂದ ನಾಲ್ಕ ಮಂದಿ ಸೇರಿ ಒಂದ ngo ಮಾಡ್ಕೊಂಡಾರ ಹಿಂಗಾಗಿ ಏನರ ಪ್ರೋಗ್ರಾಮ್ ಮಾಡಲಿಕತ್ತರ ಸಾಕ ಕಂಟ್ರಿಬ್ಯೂಶನ್ ಮಾಡರಿ ಅಂತ ನನ್ನ ಹತ್ತರ ಬಂದ ಬಿಡ್ತಾರ. ಇವತ್ತ ಮತ್ತ ಏನಪಾ ಇವರದ ಅಂತ ನಾ ವಿಚಾರ ಮಾಡೊದರಾಗ ಒಬ್ಬೊಂವಾ
“ಸರ್ ಸೆಪ್ಟೆಂಬರ್ ೨೬ಕ್ಕ world contraception day ಮಾಡಬೇಕಂತ ಮಾಡೇವಿ, ಸ್ವಲ್ಪ ನೀವು contribution ಮಾಡಬೇಕಲಾ” ಅಂತ ಅಗದಿ ದಯನಾಸ ಪಟ್ಟ ಕೇಳಿದಾ.
ನಾ ಒಮ್ಮಿಕ್ಕಲೇ ಗಾಬರಿ ಆಗಿ ಇದೆಲ್ಲಿ contraception day ಬಂತಲೇ ಅಂತ
“ಏ, ನಾ ಈಗಾಗಲೇ ನನ್ನ ಹೆಂಡತಿದ operation ಮಾಡಿಸೇನೋ ಮಾರಾಯಾ, ಮತ್ತೇನ ತಲಿ contribution ಮಾಡಬೇಕ” ಅಂದೆ.
“ಹಂಗ ಅಲ್ಲ ಸರ್, ಅದ ನಿಮ್ಮ ಮನಿಗೆ ಆತ, ಸಮಾಜಕ್ಕೂ ಏನರ contribution ಮಾಡಬೇಕಲಾ” ಅಂದಾ.
ನಾ ತಲಿಕೆಟ್ಟ ” ಇನ್ನೇನ ನಾನೂ operation ಮಾಡಿಸಿಗೊಳ್ಳೇನಪಾ” ಅಂದೆ.
“ಅಲ್ಲಾ ಸರ್..ನೀವು ನಮ್ಮನ್ನ ತಪ್ಪ ತಿಳ್ಕೊಳಿಕತ್ತೀರಿ, ನಮ್ಮ ಕಾರ್ಯಕ್ರಮಕ್ಕ ಏನರ contribution ಮಾಡರಿ” ಅಂದಾ.
ನಾ ಕಡಿಕೆ ಇವರ ನನಗ ಸುಮ್ಮನ ಬಿಡೋರಲ್ಲಾ ಅಂತ
“ನೀವ ಯಾವದರ ಸುಡಗಾಡ ದಿವಸಾ ಮಾಡ್ಕೋರಿ ನನ್ನ ಜೀವಾ ಮಾತ್ರ ತಿನ್ನ ಬ್ಯಾಡರಿ” ಅಂತ ಸೀದಾ ಪ್ಯಾಂಟಿನ ಕಿಸೆದಾಗ ಕೈ ಹಾಕಿ ಪಾಕೇಟ ತಗಿಲಿಕತ್ತೆ. ಅಷ್ಟರಾಗ ಒಬ್ಬಂವ ನಾ ಪಾಕೇಟ ತಗಿಯೋದ ನೋಡಿ ಗಾಬರಿ ಆಗಿ
“ಏ ಅಂಕಲ್ ಏನ ಕೊಡಲಿಕತ್ತೀರಿ” ಅಂತ ಒದರಿದಾ
“ನೂರ ರೂಪಾಯಿ ಕೊಡಲಿಕ್ಕೆ ಹೊಂಟಿದ್ದೆ, ನೀ ಏನ ಕೊಡಲಿಕತ್ತೇನಿ ಅಂತ ತಿಳ್ಕೊಂಡಿದ್ದಿ” ಅಂದೆ.
ಹಂಗ ನಾ ಪಾಕೇಟ ತಗದದ್ದ ನೋಡಿ ಅಂವಾ ಎಲ್ಲರ ನಾ ಪಾಕೇಟನಾಗಿಂದ contraception ಏನರ ತಗದ ಕೊಡಲಿಕತ್ತೇನಿ ಅಂತ ತಿಳ್ಕೊಂಡಿದ್ನೊ ಏನೊ, ಅಲ್ಲಾ ಲಗ್ನ ಆಗಿ ಹದಿನೈದ ವರ್ಷ ಆಗಲಿಕ್ಕೆ ಬಂತ ಇನ್ನೂ ಏನ ಕಿಸೆದಾಗ ಇಟಗೊಂಡ ಅಡ್ಯಾಡತೇವೆ? ಅಲ್ಲಾ ನನ್ನ ನೋಡಿದರರ ಹಂತಾ ಮನಷ್ಯಾ ಅಂತ ಅನಸ್ತದ. ಏನ ಹುಡುಗರೋ ಏನೋ ಈಗಿನ್ವು ಎಲ್ಲಾದರಾಗೂ ಫಾರವರ್ಡ ಆಗಿ ಬಿಟ್ಟಾವ, ನಮ್ಮ ಕಾಲದಾಗ contraception ಹೆಂಗ use ಮಾಡಬೇಕು ಅನ್ನೋದರಾಗ ಎರಡ ಮೂರ ಮಕ್ಕಳ ಆಗಿರ್ತಿದ್ದವು ಈಗೀನ ಹುಡುಗರ ನೋಡಿದರ ಇನ್ನು ಲಗ್ನ ಇಲ್ಲಾ ಸುಡಗಾಡ ಇಲ್ಲಾ ಈಗಿಂದ contraception day celebrate ಮಾಡಲಿಕತ್ತಾವ ಅಂತ ನಾ ವಿಚಾರ ಮಾಡೋದರಾಗ ಇನ್ನೊಬ್ಬಂವ
“ಸರ್, ನಮಗ ರೊಕ್ಕ ಗಿಕ್ಕ ಏನ ಬ್ಯಾಡರಿ, ನಾವು contraception dayಕ್ಕ ಮಾರುತಿ ಗುಡಿ ಸಮುದಾಯ ಭವನದಾಗ group discussion ಇಟಗೊಂಡೇವಿ ನೀವು ಬಂದ ancient contraception methods ಮ್ಯಾಲೆ ಒಂದ ನಾಲ್ಕ ಮಾತ ಮಾತಾಡ್ರಿ” ಅಂತ ಅಂದಾ.
ಅಲ್ಲಾ ಇವರಿಗೆ ಬ್ಯಾರೆ ಯಾರು ಸಿಗಲಿಲ್ಲೇನ? ಎಲ್ಲಾ ಬಿಟ್ಟ ನನ್ನ ಕರಿಲಿಕತ್ತಾರ ಅದು ಹಿಂತಾ ಟಾಪಿಕ್ಕಗೆ, ಅದರಾಗ ancient contraception methods ಬಗ್ಗೆ ಮಾತಡಬೇಕಂತ, ಅಲ್ಲಾ ನಾ ಏನ ancient daysದಿಂದ contraception ಬಳಸಿಗೋತ ಬಂದೇನಿನ ಅದರ ಬಗ್ಗೆ ಮಾತಡಲಿಕ್ಕೆ ಅಂತ ನಂಗ ಖರೇನ ಸಿಟ್ಟ ಬಂತ.
ನಾ ನೋಡಿದರ modern method ತಿಳಿಲಾರದ ಒಂದ ಹಡಿಲಿಕ್ಕೆ ಹೋಗಿ ಎರಡ ಹಡದೊಂವಾ, ಇನ್ನ ಈ ancient method ಬಗ್ಗೆ ಏನ ಮಾತಾಡಬೇಕಪಾ ಅಂತ ವಿಚಾರ ಮಾಡಲಿಕತ್ತೆ. ಖರೆ ಹೇಳ್ಬೇಕಂದರ ಈ ಸುಡಗಾಡ contraceptionದ ಲಫಡಾನ ಬ್ಯಾಡ ಅಂತ ಹೆಂಡತಿದ ಆಪರೇಶನ್ ಮಾಡಿಸಿದ ಮಗಾ ನಾ, ಆ ಮಾತಿಗೂ ಈಗ ಎಂಟ ವರ್ಷ ಆಗಲಿಕ್ಕೆ ಬಂತ ಹಂತಾದರಾಗ ಈಗ ಮತ್ತ ಅದರ ಬಗ್ಗೆ ಮಾತಾಡಂದ್ರ? ಅಲ್ಲಾ ಎಲ್ಲಾ ಎಲ್ಲೆ ನೆನಪ ಇರತದ ಹೇಳ್ರಿ… ಆದರು ಇನ್ನ ನಂಗ ಇಷ್ಟ ಕಿಮ್ಮತ್ತ ಕೊಟ್ಟ ಕರದಾರ ಪಾಪ ಹುಡುಗರು, ಹಂಗ knowledge ಶೇರ ಮಾಡಿದಷ್ಟ ಜಾಸ್ತಿ ಬೆಳಿತದ ಅಂತಾರ, ಹೋಗಿ ಒಂದ ನಾಲ್ಕ ಮಾತಾಡಿ ಬಂದರಾತ ಅಂತ ನಂಗ ಗೊತ್ತಿದ್ದದ್ದ ಒಂದಿಷ್ಟ points ಬರಕೊಂಡ ಇಟಗೊಂಡೇನಿ.
ಹಂಗ ನಾ ಬರದದ್ದ ಎಲ್ಲಾ ancient contraception method ಇಲ್ಲೆ writing ಒಳಗ ನಿಮ್ಮ ಜೊತಿ ಹಂಚಗೊಳಿಕ್ಕೆ ಬರಂಗಿಲ್ಲಾ, ಆದರೂ ಒಂದ ಎರಡ ancient contraceptive methodsದ example ಹೇಳಿ ನನ್ನ ನಾಲ್ಕ ಮಾತ ಮುಗಸ್ತೇನಿ.
• A pessary ಅಂದರ diaphragm made of dried crocodile dung. ಇದ Ancient Egypt method. ಹಂಗ ಇಜಿಪ್ತ ಒಳಗ ಹೆಣ್ಣಮಕ್ಕಳ ಖಾಲಿ ಹೊಟ್ಟಿಲೇ ಅವರಿಕಾಯಿ ತಿಂತಿದ್ದರಂತ ಇದು ಒಂದ contraceptive method. ಅಲ್ಲಾ ಈಗ ಅವರಿಕಾಯಿ ೨೫ ರೂಪಾಯಕ್ಕ ಪಾವ ಕಿಲೋ ಆಗ್ಯಾವ ಆದರೂ ಮಾತ ಹೇಳಿದೆ.
• A mixture of olive oil and oil of cedar (ದೇವದಾರು) placed in the vagina. ಇದ ಅರಿಸ್ಟಾಟಲ್ ಹೇಳಿದ್ದ ಮೆಥಡ್ ಮತ್ತ ನಾ ಹೇಳಿದ್ದಲ್ಲಾ.
• The woman must drink the froth from a camel’s mouth. ಹೆಣ್ಣಮಕ್ಕಳು ಒಂಟಿ ಬಾಯಾಗಿನ ಬುರಗ ಕುಡಿಬೇಕಂತ. ಇದು ಪುರಾತನ ಆಫ್ರಿಕಾದ ಪದ್ದತಿ.
• The woman must drink sheep urine or rabbit blood ಇದು Medieval Europeದಾಗ ಚಾಲ್ತಿ ಇದ್ದ ಪದ್ದತಿ.
• ಹಂಗ ಚೈನಾದಾಗ ಹೆಣ್ಣ ಮಕ್ಕಳ after sex hot mercury ಅಂದರ ಬಿಸಿ ಬಿಸಿ ಪಾದರಸಾ ಕುಡಿಯೋ ಪದ್ದತಿ ಇತ್ತಂತ. ಇದರಿಂದ ಕೆಲವೊಮ್ಮೆ brain hamrage, kidney ಫೇಲಾಗೊ ಚಾನ್ಸಿಸ್ ಇರ್ತಿತ್ತು ಆದರ ಆವಾಗ stopping the baby was the main issue, ಹಿಂಗಾಗಿ ಪಾದರಸ ಕುಡಿಬೇಕಾಗತಿತ್ತ…..
ಅಲ್ಲಾ ಹಂಗ ಹಿಂತಾವ ನೂರಾ ಎಂಟ ancient ಪದ್ದತಿ ಗೊತ್ತವ ಬಿಡ್ರಿ ಆದರ ಎಲ್ಲಾ ಬರಿಲಿಕ್ಕೆ ಬರಂಗಿಲ್ಲಾ.
ಹಂಗ ನನ್ನ ಹೆಂಡತಿ ಪ್ರಕಾರ ಬೆಸ್ಟ್ ಮೆಥಡ್ ಅಂದರ ಯಾವಾಗ ಮಕ್ಕಳ ಬ್ಯಾಡ ಅನಸ್ತದ ಆವಾಗ ಗಂಡನ್ನ ಮನಿ ಬಿಟ್ಟ ಹೊರಗ ಹಾಕೋದು ……ಇರಲಿ ಅನ್ನಂಗ ಬರೊ ಸೆಪ್ಟೆಂಬರ ೨೬ಕ್ಕ್ world contraception day ಇರೋದ, ಯಾರಿಗೆ ಇನ್ನೂ details ಬೇಕ ಅವರ ಬರ್ರಿ ನನ್ನ ಭಾಷಣಾ ಕೇಳಲಿಕ್ಕೆ.