ಕಸಬರಿಗೆ ಅಂದೋಲನದಿಂದ crossed legs movement…..

ಮೊನ್ನೆ ಸಂಜಿಗೆ ನಾ ಮನಿಗೆ ಬರೋದ ತಡಾ ನನ್ನ ಹೆಂಡತಿ
“ರ್ರೀ, ನೀವು ಇವತ್ತಿನಿಂದ ಪಡಸಾಲ್ಯಾಗ ಮಲ್ಕೋಬೇಕು” ಅಂದ್ಲು. ನಾ ಒಮ್ಮಿಕ್ಕಲೇ ಗಾಬರಿ ಆಗಿ
“ಯಾಕಲೇ, ಹೋದ ವಾರದಾಗರ ಮೂರ ದಿವಸ ಹೊರಗ ಮಲ್ಕೊಂಡಿದ್ದೆ, ಈಗ ಮತ್ತ ಮೂರ ದಿವಸ ಹೊರಗ ಮಲ್ಕೋಬೇಕ್?” ಅಂತ ಕೇಳಿದರ
“ಮೂರ ದಿವಸ ಇಷ್ಟ ಅಲ್ಲಾ, ನಮ್ಮ ಓಣಿ ರಸ್ತೆ ರಿಪೇರಿ ಆಗೊ ತನಕಾ, ವಾರಕ್ಕ ಎರಡ ಸರತೆ ನಳಾ ಬರೋತನಕಾ, ಓಣ್ಯಾಗಿನ ಗಟರ್ ಕ್ಲೀನ್ ಆಗೋತನಕ ನೀವು ಹೊರಗ ನಾ ಒಳಗ” ಅಂದ್ಲು.
ಅಯ್ಯ, ಈ ರಸ್ತೆ ರಿಪೇರಿ, ನಳದಾಗ ನೀರು, ಗಟರ್ ಕ್ಲೀನ್ ಇದಕ್ಕ ನನಗ ಏನ ಸಂಬಂಧಲೇ ನಾ ಏನ ಕಾರ್ಪೋರೇಶನದಾಗ ಕೆಲಸಾ ಮಾಡ್ತೇನೇನ್? ಅಂತ ಕೇಳಿದರ
“ರ್ರಿ, ಅದೇಲ್ಲಾ ನಂಗೊತ್ತಿಲ್ಲಾ, ನಾವ ಇವತ್ತ ಮಹಿಳಾ ಮಂಡಳದ ಸದಸ್ಯರೆಲ್ಲಾ ಸೇರಿ ನಮ್ಮ ಓಣಿ ರೋಡ ರಿಪೇರಿ ಆಗೋತನಕ, ಮೂರ ದಿವಸಕ್ಕೊಮ್ಮೆ ನಳಾ ಬರೋ ತನಕಾ ’ನೊ ಸೆಕ್ಸ್’ ಅಂತ ಡಿಸೈಡ ಮಾಡೇವಿ. ನಮ್ಮ ಪಾಲಿಟಿಸಿಯನ್ಸಗೆ ಅಂತೂ ಯಾರು ಹೇಳೊರ ಇಲ್ಲಾ ಕೇಳೋರ ಇಲ್ಲಾ ಹಿಂಗಾಗಿ ನಾವ sex strike ಮಾಡೊರಿದ್ದೇವಿ” ಅಂದ್ಲು. ನಂಗ ಸಿಟ್ಟ ನೆತ್ತಿಗೇರಿ
“ಲೇ, ಏನ್ ಹುಚ್ಚರಂಗ ಮಾಡ್ತೀರಿ, ನಳಾ ಬರಲಿಲ್ಲಾಂದ್ರ, ರೋಡ ರಿಪೇರಿ ಆಗಲಿಲ್ಲಾಂದ್ರ ನಾವೇನ ಮಾಡಬೇಕ್, ಬೇಕಾರ ಆ ಕಾರ್ಪೋರೇಟರ್ ಮನಿ ಮುಂದ ಹೋಗಿ ಕಸಬರಗಿ ಹಿಡಕೊಂಡ ಸ್ಟ್ರೈಕ ಮಾಡಿರಿ ಹಂತಾದ ಬಿಟ್ಟ no road, no sex ಅಂದರ ಹೆಂಗ” ಅಂತ ನಾ ಅಂದರ ಅಕಿ
“ರ್ರಿ, ಆ ಕಸಬರಗಿ ಅಂದೊಲನ ಎಲ್ಲಾ ಹೋದ್ವ, ಈಗ ನಾವು ಮಾಡರ್ನ ಆಗೇವಿ, ಈಗ ಏನಿದ್ದರು ಕ್ರಾಸ್ಡ ಲೆಗ್ಸ್ ಮೂವಮೆಂಟ, no city development, no sex. ’ಏ ನನಗ ಲೋಕಲ್ ಎಮ್.ಪಿ, ಗೊತ್ತ, ಎಮ್.ಎಲ್, ಎ ಗೊತ್ತ, ನಮ್ಮ ಓಣಿ ಕಾರ್ಪೋರೇಟರ್ ನಮ್ಮ ದೋಸ್ತ’ ಅಂತೇಲ್ಲಾ ದೊಡ್ಡ ದೊಡ್ಡ ಮಾತಾಡ್ತೀರಿ, ಹೋಗಿ ಅವರ ಕಡೆ ಡೆವಲಪಮೆಂಟ ಮಾಡಸರಿ, ಅವರಿಗೆ ಹೋಗಿ ಹೇಳ್ರಿ ‘ನೀವು ರೋಡ ಮಾಡಲಿಲ್ಲಾಂದರ ನನ್ನ ಹೆಂಡತಿ ನನಗ ಬೆಡ್ ರೂಮಿನಿಂದ ಹೊರಗ ಹಾಕ್ತಾಳ’ ಅಂತ, ಏನಾಂತರ ನೋಡ್ರಿ ನಿಮ್ಮ ಲೀಡರ್” ಅಂತ ನಂಗ ಜೋರ ಮಾಡಲಿಕತ್ಲು.
ಅಲ್ಲಾ ನಮ್ಮ ಲೀಡರ್ ಏನಂತಾರ, ಹಂಗ ಅವರ ಹೆಂಡತಿ ಅವರನ್ನ ಬೆಡ್ ರೂಮಿನಿಂದ ಹೊರಗ ಹಾಕಿದ್ದರ ಮಾತ ಬ್ಯಾರೆ ಇತ್ತ.
ಅಲ್ಲಾ ಆದ್ರು ಇದೇಲ್ಲಿ ಕನ್ಸೆಪ್ಟಲೇ ಊರ ಡೆವಲಪಮೆಂಟಗು ಗಂಡನ ಜೊತಿ ಮಲ್ಕೊಳದಕ್ಕೂ ಏನ ಸಂಭಂಧ ಅಂತ ಕೇಳಿದರ ಆಮ್ಯಾಲೆ ಗೊತ್ತಾತು ಇದೇಲ್ಲಾ ಕೋಲಂಬಿಯನ್ ಕ್ರಾಸ್ಡ ಲೆಗ್ಸ್ ಮೂವಮೆಂಟದ ಎಫೆಕ್ಟ ಅಂತ.
ಅದೇನ ಆಗಿತ್ತಂದರ ಮೊನ್ನೆ ಕೊಲಂಬಿಯಾದ ಬಾರ್ಬಕೋಸ್ ಒಳಗ ಕ್ರಾಸ್ಡ ಲೆಗ್ಸ್ ಮೂವಮೆಂಟ್ ಅಂತ ಹೆಣ್ಣಮಕ್ಕಳು ಹೊಸಾ ನಮೂನಿ ಸ್ಟ್ರೈಕ ಶುರು ಮಾಡಿದ್ದರು. ಅಂದರ ಆ ಊರಿನ ಹೆಣ್ಣ ಮಕ್ಕಳು ’ನಮ್ಮ ಊರಿನ ರಸ್ತೆ ಸರಿ ಆಗೋತನಕ ನಾವು ಸೆಕ್ಸಗೆ ಕೊ-ಆಪರೇಟ ಮಾಡಂಗಿಲ್ಲಾ ಅಂತ ಸ್ಟ್ರೈಕ್ ಮಾಡಲಿಕತ್ತಿದ್ದರು. ಅದ ಒಂಥರಾ ’ಸೆಕ್ಸ್ ಸ್ಟ್ರೈಕ್’ಇದ್ದಂಗ. ಹಂಗ ಅಲ್ಲಿ ಪರಿಸ್ಥಿತಿ ಬ್ಯಾರೆ ಇತ್ತ ಅವರ ಊರಾಗ ಒಂದ ಛಲೋ ರೋಡ ಇಲ್ಲಾ, ಒಂದ ಕಾರ ಸಹಿತ ಊರಾಗ ಓಡಾಡೊ ಹಂಗ ಇಲ್ಲಾ, ಎಮರ್ಜನ್ಸಿ ಟೈಮ್ ಒಳಗ ಒಂದ ಅಂಬುಲೆನ್ಸ್ ದಾವಾಖಾನಿ ಸಹಿತ ಮುಟ್ಟಂಗಿಲ್ಲಾ ಹಂತಾ ಹೊಲಸ ರೋಡ ಅವ. ಹಿಂತಾ ವಾತಾವರಣದಾಗ ಅವರು ನಾವ ಮಕ್ಕಳನ ಹಡದ ಅವಕ್ಕ್ಯಾಕ ಕಷ್ಟ ಕೊಡಬೇಕು ಹಿಂಗಾಗಿ ಊರಿನ ಕಂಡಿಶನ್ ಸುಧಾರಿಸೊ ತನಕ ನಮಗ ಮಕ್ಕಳು ಬ್ಯಾಡ ಅಂತ ಅವರ ಸೆಕ್ಸ್ ಸ್ಟ್ರೈಕ ಶುರು ಮಾಡಿದ್ದರು
ಅವರ ಪ್ರಕಾರ “Why bring children into this world when they can just die without medical attention and government can’t even offer them the most basic rights? So we decided to stop having sex and stop having children until the state fulfils its developmental promises.” ಹಿಂಗಾಗಿ “No more sex. We want our road” ಅಂತ ಅವರದ ವಿಚಾರ.
ಇನ್ನೊಂದ ಮಜಾ ಅಂದ್ರಾ ಅಲ್ಲೆ ಈ ಸ್ಟ್ರೈಕಿಗೆ ಅವರ ಗಂಡಂದರು ಸಪೋರ್ಟ ಮಾಡಲಿಕತ್ತಿದ್ದರು.
ಈ ವಿಚಾರ ಅದ ಹೆಂಗೋ ನನ್ನ ಹೆಂಡತಿ ಕಿವಿಗೆ ಬಿದ್ದ ಅಕಿ ಅದನ್ನ ನಮ್ಮ ಓಣಿ ಮಹಿಳಾ ಮಂಡಳ ಮೀಟಿಂಗನಾಗ ಹೇಳಿ ಬಿಟ್ಟಾಳ. ತೊಗೊ ಕೇಳ್ತೀರೇನ ನಮ್ಮ ಓಣಿ ಹೆಣ್ಮಕ್ಕಳೇಲ್ಲಾ
“very innovative idea, ನಮ್ಮ ಓಣಿ ರೋಡು ಹಳ್ಳಾ ಹಿಡದಾವ, ಮೂರ ದಿವಸಕ್ಕೊಮ್ಮೆ ಬರೋ ನಳಾ ಆರ ದಿವಸಕ್ಕ ಬರತದ, ಯಾರ ಹೇಳೊರ ಇಲ್ಲಾ ಕೇಳೋರ ಇಲ್ಲಾ, ನಮ್ಮ ಗಂಡಂದರಿಗಂತೂ ಜವಾಬ್ದಾರಿನ ಇಲ್ಲಾ, ಹಂಗ ಹಿಂಗ….” ಅಂತ ಲೋಕಲ್ ಲೀಡರನಿಂದ ಹಿಡದ ಮನಿ ಗಂಡನ್ನ ತನಕಾ ಎಲ್ಲಾರಿಗೂ ಬೈದ ತಾವು sex strike ಮಾಡಬೇಕು ಅಂತ ಡಿಸೈಡ ಮಾಡ್ಯಾರ.
ಏನ ಮಾಡ್ತೀರಿ ಅದಕ್ಕ ಹೇಳೊದು ಭಾಳ ಕಲತೊರನ ಮಾಡ್ಕೋಬಾರದು ಅಂತ. ಈಗ ನೋಡ್ರಿ ಈ ಸುಡಗಾಡ ರೋಡ ಯಾವಾಗ ಆಗಬೇಕೊ, ಯಾವಾಗ ವಾರದಾಗ ಎರಡ ಸರತೆ ನೀರ ಬರಬೇಕೊ ಆ ದೇವರಿಗೆ ಗೊತ್ತ. ಅಲ್ಲಿ ತನಕಾ ನಾವ ಪಡಸಾಲ್ಯಾಗ ಮಲ್ಕೋಳೊದ. ಹಂಗ ನಮ್ಮ ಲೀಡರ್ಸ್ ಕೆಲಸಾ ಮಾಡೋದ ನೋಡಿದರ ಎಲ್ಲೆ ಕಾಯಂ ಪಡಸಾಲಿನ ಗತಿ ಆಗ್ತದೋ ಅಂತ ನನಗಂತೂ ಹೆದರಕಿನ ಬರಲಿಕತ್ತದ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ