ಡಬ್ಬ ಮಲ್ಕೊಂಡರ ಕೆಟ್ಟ ಕೆಟ್ಟ ಕನಸ ಬಿಳ್ತಾವ….

“ಪ್ರಶಸ್ತಿ ನಿಂಗ ಎಷ್ಟ ಸಲಾ ಹೇಳ್ಬೇಕ, ಮಲ್ಕೋಬೇಕಾರ ಅಂಗಾರ ಹಚಗೊಂಡ ಮಲ್ಕೊ ಅಂತ ಹೇಳಿಲ್ಲಾ” ಅಂತ ದಿವಸಾ ನಮ್ಮವ್ವ ನನ್ನ ಮಗಳ ಮಲ್ಕೋಬೇಕಾರ ಒದರೋದ ಅಗದಿ ಕಾಮನ್, ಹಂಗ ಅತ್ತಲಾಗ ನಮ್ಮವ್ವ ಒದರೋ ಪುರಸತ್ತ ಇಲ್ಲದ ನನ್ನ ಹೆಂಡತಿ “ಪ್ರಶಸ್ತಿ, ಉಚ್ಚಿ ಹೋಯ್ದ ಬಂದ ಮಲ್ಕೋ ಅಂತ ಒದರೋಕಿ” ಪಾಪ ಅಕಿ ಸಂಕಟ ಅಕಿಗೆ. ಎಲ್ಲೆ ಮಗಳ ರಾತ್ರಿ ಹಾಸಗ್ಯಾಗ ಉಚ್ಚಿ ಹೋಯ್ದರ ಮತ್ತ ನಡರಾತ್ರ್ಯಾಗ ಅಕಿನ್ನ ಎಬಿಸಿ ಅಕಿ ಡ್ರೇಸ್ ಚೆಂಜ್ ಮಾಡಬೇಕ ಅನ್ನೋದ ಅಕಿ ಚಿಂತಿ.
ಇವರಿಬ್ಬರ ನಡಕ ನನ್ನ ಮಗಳಿಗೆ ಎಷ್ಟ ಪ್ರಾಬ್ಲೇಮರಿ, ಅಕಿ ತಲಿ ಕೆಟ್ಟ ’ ನಾ ಉಚ್ಚಿ ಹೊಯ್ದ ಬಂದ ಅಂಗಾರ ಹಚ್ಗೋಳ್ಳ್ಯೊ ಇಲ್ಲಾ ಅಂಗಾರ ಹಚ್ಕೊಂಡ ಉಚ್ಚಿ ಹೋಯ್ಲೊ’ ಅಂತ ನಮ್ಮವ್ವಗ ಕೇಳೊಕಿ ಕಡಿಕೆ ನಮ್ಮವ್ವ ’ಏ, ಬೋಕಾಣ ಗಿತ್ತಿ ಉಚ್ಚಿ ಹೋಯ್ದ ಕೈಕಾಲ ತೊಕ್ಕೊಂಡ ಬಂದ ಅಂಗಾರ ಹಚ್ಗೊ ಅನ್ನೋಕಿ.
ನಮ್ಮವ್ವ ನಮ್ಮ ಮಕ್ಕಳಿಗೆ ಇಬ್ಬರಿಗೂ ಸಣ್ಣವರಿದ್ದಾಗಿಂದ ದಿವಸಾ ರಾತ್ರಿ ಮಲ್ಕೋಬೇಕಾರ ದೇವರ ಕೋಣ್ಯಾಗ ಇದ್ದದ್ದ ಅಂಗಾರ ಹಚಗೊಂಡ ಮಲ್ಕೋರಿ ಅಂದರ ರಾತ್ರಿ ಕೆಟ್ಟ ಕನಸ ಬೀಳಂಗಿಲ್ಲಾ ಅಂತ ಒಂದ ಏನೋ ಛಲೋ ಪದ್ಧತಿ ಹಾಕಿ ಇಟ್ಟಾಳ ಅದನ್ನ ದಿನಾ ರಾತ್ರಿ ಫಾಲೊ ಅಪ್ ಮಾಡ್ತಾಳ. ಹಂಗ ನನ್ನ ಮಗಳಂತೂ ದಿವಸಾ ತಾ ಅಂಗಾರ ಹಚಗೊಂಡ ಮತ್ತ ಆ ಅಂಗಾರ ತಂದ ನನಗೂ ಹಚ್ಚತಾಳ. ಪಾಪ ಅಕಿ ರಾತ್ರಿ ನಾ ಒಮ್ಮೊಮ್ಮೆ ಕನಸಿನಾಗ ಬಡಬಡಸ್ತಿರ್ತೇನಿ ಹಿಂಗಾಗಿ ಅಕಿ ನಂಗೂ ಕೆಟ್ಟ ಕನಸ ಬಿಳ್ತಾವ ಅಂತ ತಿಳ್ಕೊಂಡಾಳ, ಅಲ್ಲಾ ಆ ಕೂಸಿಗೆ ಸಹಿತ ಗೊತ್ತ ನಂಗ ಕನಸಿನಾಗೂ ಅವರವ್ವನ ಬಂದಿರ್ತಾಳ ಅಂತ.
ಅಲ್ಲಾ ಹಂಗ ನನ್ನ ಮಗಳ ಹಾಸಿಗ್ಯಾಗ ಉಚ್ಚಿ ಹೋಯ್ಕೋಳೊದಕ್ಕು ಅಕಿಗೆ ಕೆಟ್ಟ ಕನಸ ಬೀಳೊದಕ್ಕು ಏನ ಸಂಬಂಧ ಇಲ್ಲಾ ಅನಸ್ತದ, ಪಾಪ ಅಕಿ ಇನ್ನು ಸಣ್ಣೊಕಿ ಹಾಸಗ್ಯಾಗ ಹೋಗೊದ ಸಹಜ, ಹಂಗ ನಮ್ಮವ್ವ ಸಣ್ಣೊರಿದ್ದಾಗನ ಹುಡಗರಿಗೆ ದೇವರ ಬಗ್ಗೆ ಒಂದ ಸ್ವಲ್ಪ ಭಯ ಭಕ್ತಿ ಇರಲಿ ನಾಳೆ ದೊಡ್ದೊರಾಗಿ ಅವರಪ್ಪನಂಗ ಆದರ ಹೆಂಗ ಅಂತ ’ಅಂಗಾರ ಹಚಗೊಳ್ಳಿಲ್ಲಾ ಅಂದರ ಕೆಟ್ಟ ಕನಸ ಬೀಳ್ತಾವ’ ಅಂತ ತಲ್ಯಾಗ ತುಂಬ್ಯಾಳ ಇಷ್ಟ.
ಹಂಗ ಅಂಗಾತ ಮಲ್ಕೊಂಡರ ಕೆಟ್ಟ ಕನಸ ಬಿಳ್ತಾವ, ಡಬ್ಬ ಮಲ್ಕೊಂಡರ ಕನಸ ಬೀಳಂಗಿಲ್ಲಾ, ಬಲಕ್ಕ ಮಲ್ಕೊಂಡರ ಹಿಂತಾ ಕನಸ ಬೀಳ್ತಾವ, ಎಡಕ್ಕ ಮಲ್ಕೊಂಡರ ಹಂತಾ ಕನಸ ಬೀಳ್ತಾವ ಅಂತೇಲ್ಲಾ ಏನೇನೊ ಥೆರಿ ಅವ ಖರೆ ಆದರ ನಾ ಅವನ್ನು ಯಾವನ್ನು ಖಟ್ಟಿಗೆ ಹಚ್ಚಿ ನೋಡಲಿಕ್ಕೆ ಹೋಗಿಲ್ಲಾ.
ಅಲ್ಲಾ ಈಗ ಎಲ್ಲಾ ಬಿಟ್ಟ ಕನಸಿನ ಬಗ್ಗೆ ಯಾಕ ಬಂತು ಅಂದರ ಮೊನ್ನೆ ಒಂದ ಆರ್ಟಿಕಲ್ ಒಳಗ ಬರೇ ಬತ್ತಲೆ ಮಲ್ಕೊಂಡರ ಭಾಳ ದೊಡ್ಡ ದೊಡ್ಡ ಕನಸ ಬೀಳ್ತಾವ ಅಂತ ಬರದಿದ್ದರು. ನಾ ಆ ಹೆಡ್ಡಿಂಗ ಓದಿದವನ ’ಏ, ಭಾರಿ ಇಂಟರೆಸ್ಟಿಂಗ್ ಟಾಪಿಕ್, ಅಗದಿ ನನ್ನ ಟಾಪಿಕ್ ಅದ ತಡಿ’ ಅಂತ ಪೂರ್ತಿ ಆರ್ಟಿಕಲ್ ಒಂದ ಉಸಿರಿನಾಗ ಓದಿದೆ. ಅಲ್ಲಾ ಹಂಗ ಬರೇ ಬತ್ತಲೇ ಮಲ್ಕೊಂಡರ ಹೆಂತಾವ ಭಾರಿ ಭಾರಿ ಕನಸ ಬೀಳ್ತಾವ ಅಂತ ಏನ ಅದರಾಗ ಇದ್ದಿದ್ದಿಲ್ಲ ಮತ್ತ ಆದರ ಅದನ್ನ ಪೂರ್ತಿ ಓದಿದ ಮ್ಯಾಲೆ ಗೊತ್ತಾತು ನಗ್ನ ಮಲ್ಕೋಳೊದರಿಂದ ನಿದ್ದಿ ಭಾಳ ಛಲೋ ಬರ್ತದ ಅಂತ. ಅದರಾಗ ಭಾಳ ಕ್ಲೀಯರ್ ಆಗಿ ಬರದಿದ್ದರು
people who sleep naked definitely wake up to healthier and happier lives irrespective of whether they are married or not. They achieve the most REM sleep, which in turn leads to the most rest and health benefits that occur during our time in dreamland ಅಂತ.
ನಂಗ ಖರೇನ ಇದನ್ನ ಓದಿ ಭಾಳ ಆಶ್ಚರ್ಯ ಮತ್ತ ಖುಶಿ ಆತ, ಅಲ್ಲಾ ಜನಾ ನಿದ್ದಿ ಬರಂಗಿಲ್ಲಾ ಅಂತ ಏನೇನೊ ಮಾಡ್ತಾರ, ಒಬ್ಬೊಬ್ಬರು ನಿದ್ದಿ ಗುಳಗಿ ತೊಗೊತಾರ, ಒಂದಿಷ್ಟ ಮಂದಿ ದಿವಸಾ ರಾತ್ರಿ ೬೦- ೯೦ ಔಷದ ತೊಗೊತಾರ ಪಾಪ ನಿದ್ದಿ ಹತ್ತಲಾರದವರ ಸಂಕಟಾ ಅವರಿಗೆ ಗೊತ್ತ, ಹಂತಾದರಾಗ ಇಷ್ಟ ಸರಳ ಹಾಕ್ಕೊಂಡ ಅರಬಿ ಕಳದ ಹುಟ್ಟುರಬಿ ಒಳಗ ಮಲ್ಕೊಂಡರ ನಿದ್ದಿ ಬರತದ ಅಂದರ ಖುಶಿ ಆಗಲಾರದ ಏನರಿ?
ನಂಗ ಮುಂದ ಓದಿದಂಗ those who sleep in the nude are the ones more attune with their true selves and their most animalistic sides ಅಂತ ಇತ್ತ. ಹಂಗ attune to animalistic side ಅಂತ ಓದಿದ ಮ್ಯಾಲೆ ಸ್ವಲ್ಪ ಗಾಬರಿ ಆತ, ಅಲ್ಲಾ ಯಾಕಂದರ ಕೆಲವೊಬ್ಬರ ಹೆಂಡಂದರ ನಿದ್ದಿ ಗಣ್ಣಾಗ ಎದ್ದ ಗಂಡಗ ಹೊಡೇಯೋದು- ಬಡೇಯೋದು ನೋಡೇನಿ, ಅಲ್ಲಾ ಹಂಗ ಹತ್ತ ಸರತೆ ನೀರಿಲ್ಲದ ಹಿತ್ತಲ ಭಾವಿ ಒಳಗ ನಿದ್ದಿ ಗಣ್ಣಾಗ ಹಾರಿ ಇನ್ನು ಇದ್ದೋರು ಇದ್ದಾರ ಆ ಮಾತ ಬ್ಯಾರೆ. ಈಗ ಒಂದ ಸ್ವಲ್ಪ ಸ್ವಲ್ಪ ಅವರ ಯಾಕ ಹಂಗ ಮಾಡ್ತಿದ್ದರು ಅಂತ ತಿಳಿಲಿಕತ್ತ.
ಇನ್ನ ಈ ದೊಡ್ಡ ದೊಡ್ಡ ಕನಸ ಬೀಳೋದ rapid-eye movement (REM) stage of sleep ಒಳಗ ಅಂತ, ಅಂದರ when brain activity is high and resembles that of being awake. ಅಲ್ಲಾ ಹಂಗ ನಮಗ ನಮ್ಮ ನಿದ್ದಿ ಒಳಗ 25 % ಇಷ್ಟ REM sleep ಬರತದ ಅಂತ ಆ ಮಾತ ಬ್ಯಾರೆ.
ಇನ್ನ science ಪ್ರಕಾರನು ನಮಗ ಬೀಳೊ ಕನಸ ನಾವ ಹೆಂಗ ಮಲ್ಕೋತೇವಿ ಅನ್ನೋದರ ಮ್ಯಾಲೆ ಡಿಪೆಂಡ ಇರ್ತದ ಅಂತ. whether we sleep on our back, belly, or side—can affect what we dream about. But one sleep posture in particular is the key to the weirdest, scariest, and sexiest dreams is Belly-down. ಗೊತ್ತಾತಲಾ ಡಬ್ಬ ಮಲ್ಕೊಂಡರ ಅಗದಿ ಕೆಟ್ಟ ಕೆಟ್ಟ ಕನಸ ಬೀಳ್ತಾವ ಅಂತ. ಅಲ್ಲಾ ಇದ ನಾ ಹೇಳಿದ್ದಲ್ಲಾ ಮತ್ತ scientists ಹೇಳಿದ್ದ.
ಆದರ ಒಂದ ಅಂತು ಖರೆ ನಾವ ಹೆಂಗ ಮಲ್ಕೋತೇವಿ ಅನ್ನೋದರ ಮ್ಯಾಲೆ ನಮಗ ಯಾ ಟೈಪ ಕನಸ ಬಿಳ್ತಾವ ಅಂದಾಂಗ ಆತು ಅಲ್ಲಾ ನಾ ಯಾಕ ಈ ಮಾತ ಒತ್ತಿ ಹೇಳಿದೆ ಅಂದರ ನಂಗ ಲಗ್ನಾದ ಹೋಸ್ತಾಗಿ ಹೆಂಡ್ತಿ ಕಡೆ ಮಾರಿ ಮಾಡ್ಕೊಂಡರ ಕನಸ ಬೀಳೋದ ದೂರ ಹೋತ ನಿದ್ದಿನ ಬರತಿದ್ದಿಲ್ಲಾ, ಇನ್ನ ಗ್ವಾಡಿ ಕಡೆ ಮಾರಿ ಮಾಡ್ಕೊಂಡ ಮಲ್ಕೊಂಡರ ನನ್ನ ಹೆಂಡತಿ
’ನನ್ನ ಕಡೆ ಮಾರಿ ಮಾಡಿ ಮಲ್ಕೊಳ್ರಿ, ಬಾಜು ಮಲ್ಕೊಂಡ ಹೆಂಡ್ತಿಗೆ ಮಾರಿ ತಿರುವಿಕೊಂಡ ಮಲ್ಕೊಂಡರ ಹೆಂಗ’ ಅಂತ ಗಂಟ ಬೀಳ್ತಿದ್ಲು. ಅಲ್ಲಾ ಮುಂದ ಬರಬರತ ಅಕಿದು ಬೆಳವಣಗಿ ಆತು ಆಮ್ಯಾಲೆ ಅಂತು ಯಾ ಕಡೆ ಮುಖ ಮಾಡಿ ಮಲ್ಕೊಂಡರು ಗ್ವಾಡಿ ಕಡೆ ಮಾರಿ ಮಾಡಿ ಮಲ್ಕೊಂಡಂಗ ಆತ ಆ ಮಾತ ಬ್ಯಾರೆ.
ಆದರು…ಈ ಕನಸಿನ್ವು ವಿಚಿತ್ರ ವಿಚಿತ್ರ ಇರ್ತಾವ ಬಿಡ್ರಿ….ನನಗಂತು ಲಗ್ನ ಆದಾಗಿಂದ ಅದ ಒಂದ ಕನಸ ಅನಸಲಿಕತ್ತದ…ಅಲ್ಲಾ ಅದ ಹೆಂತಾ ಕನಸ ಅಂತ ಬಾಯಿ ಬಿಟ್ಟ ಏನ ಹೇಳೋದ ಬ್ಯಾಡ, ನಿಮಗ ತಿಳದ ತಿಳಿತದ ನಿಮ್ಮೊಳಗು ಭಾಳ ಮಂದಿ ಲಗ್ನ ಆದೋರ ಇದ್ದೀರಿ ಅಂತ ನನಗೊತ್ತ.

2 thoughts on “ಡಬ್ಬ ಮಲ್ಕೊಂಡರ ಕೆಟ್ಟ ಕೆಟ್ಟ ಕನಸ ಬಿಳ್ತಾವ….

  1. ಸರ್, ಭಾರಿ ಮಸ್ತ್ ಬರ್ದಿರಿ. ನಮ್ಮ ಮನಿ ಕಥಿ ನಿಮ್ಮ ಬಾಯಿಲೆ ಕೇಳಿದಂಗ ಆತು

  2. ಸರ್, ಭಾರಿ ಮಸ್ತ್ ಬರ್ದಿರಿ. ನಮ್ಮ ಮನಿ ಕಥಿ ನಿಮ್ಮ ಬಾಯಿಲೆ ಕೇಳಿದಂಗ ಆತು. ಉಚ್ಚೆ ಆಮ್ಯಾಲ ಅಂಗಾರ 😄

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ