ನನ್ನ ಹೆಂಡ್ತಿ ಒಂದನೇ ಸರತೆ ಆ ಟೈಟಾನಿಕ್ ಪಿಕ್ಚರ್ ನೋಡಿದಾಗ “ರ್ರೀ…ನಾವು ಟೈಟಾನಿಕ ಒಳಗ ಹೋಗೊಣ್ರಿ” ಅಂತ ಗಂಟ ಬಿದ್ದಿದ್ಲು.
“ಲೇ..ಹುಚ್ಚಿ ಪಿಕ್ಚರ್ ಹೆಂಗ ನೋಡಿದಿಲೇ… ಟೈಟಾನಿಕ ಸಮುದ್ರದಾಗ ಮುಳಗಿ ಹೋಗಿದ್ದ ನೋಡಲಿಲ್ಲಾ…ಮತ್ತೇಲ್ಲಿ ಟೈಟಾನಿಕ್ ಹತ್ತತಿ” ಅಂತ ಅಂದ ಮ್ಯಾಲೆ ಅಕಿ ತಲ್ಯಾಗ ಹೋತ, ಅಕಿ ಮತ್ತೊಂದ ಹಂತಾದ ಇನ್ನೊಂದ ಟೈಟಾನಿಕ್ ಅದ ಅಂತ ತಿಳ್ಕೊಂಡಿದ್ಲ ಕಾಣ್ತದ. ಹಂಗ ಇವತ್ತಿಗೂ ಅಕಿ ಟೈಟಾನಿಕ ಹತ್ತಿದಾಗೊಮ್ಮೆ ಅಗದಿ ಭಾರಿ ಇಂಟರೆಸ್ಟಲೇ ನೋಡ್ತಾಳ ಮತ್ತ. ಅಲ್ಲ ಅಕಿಗೆ ಒಂದನೇ ಸರತೆ ನೋಡಿದಾಗ ತಿಳಿದಿಲ್ಲಾ ಅಂತ ಮತ್ತ ಮತ್ತ ನೋಡ್ತಾಳೊ ಇಲ್ಲಾ ಸಮುದ್ರ, ಹಡಗ ಅಂದರ ಭಾಳ ಲೈಕ ಆಗ್ತದ ಅಂತ ನೋಡ್ತಾಳೊ ಇಲ್ಲಾ ಲಾಸ್ಟಿಗೆ ಹೀರೋ ನೀರಾಗ ಮುಳಗತಾನ ಅಂತನೋ ಗೊತ್ತಿಲ್ಲಾ ಒಟ್ಟ ಟೈಟಾನಿಕ್ ಹತ್ತಂದರ ಟಿ.ವಿ ಮುಂದ ಕುತ ಬಿಡ್ತಾಳ.
ಮೊನ್ನೆ ಒಂದ ಸರತೆ ಅಂತೂ ಟೈಟಾನಿಕ ನೋಡಬೇಕಾರ
“ರ್ರೀ, ಈ ಸರತೆ ಟೈಟಾನಿಕ ಒಳಗ ಹೋದ ಸರತೆಕಿಂತಾ ನೀರ ಜಾಸ್ತಿ ಬಂದದ ನೋಡ್ರಿ” ಅಂತ ಅಂದ ನನ್ನ ಕಡೆ ಬೈಸ್ಗೊಂಡಿದ್ಲು. ಏನ್ಮಾಡ್ತೀರಿ ಹಿಂತಾವರಿಗೆ?
ಇನ್ನ ನನ್ನ ಮಗಳ ಸಹಿತ ಇಕಿ ಜೊತಿ ಪಿಕ್ಚರ ನೋಡಿ ನೋಡಿ
” ಪಪ್ಪಾ, ನಂಗೂ ಟೈಟಾನಿಕ ಒಳಗ ಕರಕೊಂಡ ಹೋಗ” ಅಂತ ಗಂಟ ಬಿದ್ದಿದ್ಲು, ಅಲ್ಲಾ ಪಾಪ ಅದ ಕೂಸ ಬಿಡ್ರಿ ಅಕಿಗೆ ತಿಳಿಯಂಗಿಲ್ಲಾ, ನಾ ತಿಳಿಸಿ ಹೇಳಿದ ಮ್ಯಾಲೆ
“ಒಟ್ಟ ಹಂತಾ ಹಡಗದಾಗ ಕರಕೊಂಡ ಹೋಗ…ಪಪ್ಪಾ” ಅಂತ ಗಂಟ ಬಿಳಿಕತ್ಲು.
ಅಲ್ಲಾ ನಮ್ಮ ಹುಬ್ಬಳ್ಳ್ಯಾಗ ನೋಡಿದರ ಇರೋದ ಒಂದ ಉಣಕಲ್ ಕೇರಿ ಅದು ಬತ್ತಿ ಹೊಂಟದ. ಒಂದ ನದಿ ಇಲ್ಲಾ, ಸಮುದ್ರ ಇಲ್ಲಾ..ಇಲ್ಲೇಲ್ಲ ಹಡಗ ಬರಬೇಕ ಅಂತ ಹೇಳಿ ನಾ ಮಾತ ಮರಸ್ತಿದ್ದೆ.
ಆದರ ಒಂದ ತಿಂಗಳ ಹಿಂದ ನನ್ನ ಹೆಂಡ್ತಿ ವಾಟ್ಸಪನಾಗ ಯಾರೋ ’ಆಂಗ್ರೀಯಾ’ ಗೋವಾ-ಮುಂಬೈ ಕ್ರೂಸದ್ದ ವೀಡೀಯೋ ಕಳಸಿದ್ದರು. ಅದನ್ನ ತಾಯಿ ಮಗಳು ನೋಡಿದ್ದ ತಡಾ ಕರಕೊಂಡ ಹೋಗ್ರಿ ಅಂತ ಗಂಟ ಬಿದ್ದರು.
ನಾನೂ ಆತ ತೊಗೊ ನೋಡೋಣ ಅಂತ ಹೇಳಿದೆ, ಆದರ ಅವರ ತಲಿ ತಿಂದ ತಿಂದ ನೋಡೋಣ ಅಂದಿದ್ದನ್ನ, ’ಹೋಗೋಣ’ ಅನಸಿಸಿ ಟಿಕೇಟ್ ಬುಕ್ಕಿಂಗ ಮಾಡಿಸೆ ಬಿಟ್ಟರ.
ನನ್ನ ಮಗಳಂತೂ ಖುಷ ಆಗಿ ಇಡಿ ಓಣಿ ತುಂಬ ನಾವ ಟೈಟಾನಿಕ ಒಳಗ ಹೊಂಟೇವಿ ಅಂತ ಹೇಳಿದ್ದ ಹೇಳಿದ್ದ.
ಇನ್ನ ಆಫಿಸಿಯಲ್ ಫ್ಯಾಮಿಲಿ ಜೊತಿ ಹೋಂಟೇನಿ…ಕಂಜೂಸ ತನಾ ಬ್ಯಾಡ ಅಂತ ಅಗದಿ ಟಾಪ್ ಎಂಡ್ ರೂಮ್ಸ ಬುಕ್ ಮಾಡಿದೆ, ಅದು ಎರಡ..ಒಂದ ಮಕ್ಕಳಿಗೆ buddy’s room ಇನ್ನ ಕೇಟ್ ವಿನ್ಸ್ಲೇಟಗ್ ( ಅಂದರ ಪ್ರೇರಣಾಗ) ನನಗ ಫ್ಯಾಮಿಲಿ ರೂಮ್..ಎರಡು ರೂಮ ಸೇರಿ ಮೂವತ್ತೇಳ ಸಾವಿರ ಬಡದ್ವಿ ಅನ್ನರಿ.
ಅದರಾಗ ನನ್ನ ಹೆಂಡ್ತಿ
’ಹತ್ತ ಅಲ್ಲಾ ಇಪ್ಪತ್ತ ಸಾವಿರ ಆಗಲಿ ಅಗದಿ ಮ್ಯಾಲಿನ ಡೆಕ್ ಬುಕ್ಕ ಮಾಡ್ರಿ’ ಅಂತ ಬ್ಯಾರೆ ಹೇಳಿದ್ಲು. ಅಕಿ ’ಹಂಗ ಹಡಗ ಏನರ ಮುಳಗಿದರ ಮೊದ್ಲ ಕೆಳಗಿನ ಡೆಕ್ ಮುಳಗ್ತಾವ ಹಿಂಗಾಗಿ ನಾವ ಮ್ಯಾಲಿಂದ ಡೆಕ್ ಮಾಡೋಣ’ ಅಂತ ಹೇಳಿ ಗಂಟ ಬಿದ್ದ ಮಾಡಸಿದ್ಲು. ನಾ ಎಷ್ಟ ಬಡ್ಕೊಂಡೆ ಯಾ ಡೇಕ್ ಆದರ ಏನಲೇ. ಅದ ಹಡಗ, ಅದ ಅರಬ್ಬಿ ಸಮುದ್ರ….ಮುಳಗೋದ ನಮ್ಮ ಹಣೇಬರಹದಾಗ ಇತ್ತಂದರ ಮ್ಯಾಲೆ ಇದ್ದರೇನೂ ಕೆಳಗ ಇದ್ದರೇನು ಅಂದರು ಕೇಳಲಿಲ್ಲಾ. ಮ್ಯಾಲೆ ಸಾಲದ್ದಕ್ಕ ಲಾರ್ಜ್ ವಿಂಡೋ ಇದ್ದದ್ದ ರೂಮ ಬೇಕ ಅಂತ ಗಂಟ ಬಿದ್ಲು. ಅಲ್ಲಾ ಅಲ್ಲೇನ ಖಿಡಕಿ ಓಪನ ಮಾಡಲಿಕ್ಕೆ ಬರಂಗಿಲ್ಲಾ ಏನಿಲ್ಲಾ, ಮ್ಯಾಲೆ ಇಕಿಗೆನ ಖಿಡಕಿ ಒಳಗ ಕೈ, ಮಾರಿ ಹಾಕಿ ಟಾಟಾ ಮಾಡಲಿಕ್ಕೆ ಬರಂಗಿಲ್ಲಾ, ಹಂಗ ಟಾಟಾ ಮಾಡಿದರೂ ನೋಡೊರ ದಿಕ್ಕಿಲ್ಲಾ…ಆದ್ರೂ ನನ್ನ ಮಾತ ಎಲ್ಲೇ ಕೇಳ್ಬೇಕ. ಇದೇಲ್ಲಾ ಆ ಸುಡಗಾಡ ಟೈಟಾನಿಕ ಪಿಕ್ಚರ್ ಒಂದ ಹತ್ತ ಸರತೆ ನೋಡಿದ್ದರ ಪ್ರಭಾವ ಅನ್ನರಿ. ಅದು ಬಿಡ್ರಿ..ಮೊನ್ನೆ ಇನ್ನೇನ ನಾವ ಹೋಗೊದ ಗ್ಯಾರಂಟಿ ಆತ ಅಲಾ, ಆವಾಗ ಮತ್ತೊಮ್ಮೆ ನೋಡಿದ್ಲು. ಮತ್ತ ಯಾಕ ಅಂದರ ಒಂದ ಸ್ವಲ್ಪ ಹಡಗದ ಫೀಲಿಂಗ್ ಬರಲಿ ಅಂತ ಅಂದ್ಲು. ನನಗರ ಆ ಕೇಟ್ ವಿನ್ಸ್ಲೇಟ್ ನೋಡಿದಾಗೊಮ್ಮೆ ಬ್ಯಾರೆ ಫೀಲಿಂಗ ಬರೋದ.
ಕಡಿಕೆ ಹೆಂಗಿದ್ದರೂ ಡಿಸೆಂಬರ ೧೩ಕ್ಕ ಮಗನ ಬರ್ಥಡೇ ಇತ್ತ ಅದನ್ನ ಅಲ್ಲೇ ಮಾಡಿದರಾತ ಅಂತ ಅವತ್ತೀನ ಡೇಟಿಗೆ goa- to mumbai ಬುಕ್ ಮಾಡಿದೆ. ಹಂಗ ನಾ ಬುಕ್ ಮಾಡಿದ್ದ odd day ಇದ್ದದ್ದಕ್ಕ angriya cruise rush ಇದ್ದಿದ್ದಿಲ್ಲಾ ಮ್ಯಾಲೆ goa to mumbai ಜನಾ ಜಾಸ್ತಿ ಹೋಗಂಗಿಲ್ಲಾ, ಹಿಂಗಾಗಿ ನಾವ ಆರಾಮ ಹೋಗಬಹುದು ಅಂತ ನಾ ಗೋವಾ ಟು ಮುಂಬೈನ ಮಾಡಸಿದ್ದೆ. ನನ್ನ ಹೆಂಡ್ತಿನೂ
“ಹೌದ ನೀವ ಹೇಳೋದ ಖರೇ ಅದ ಸುಮ್ಮನ ಜನಾ ಜಾಸ್ತಿ ಆದರ ಲೈಫ ಜಾಕೇಟ್, ಲೈಫ ಬೋಟ ಕಡಮಿ ಬಿದ್ದರ ಏನ್ಮಾಡ್ತೀರಿ, ಗೋವಾ ಟು ಮುಂಬೈನ ಮಾಡಸರಿ” ಅಂತ ಹೇಳಿದ್ಲು. ಅಲ್ಲಾ ಅಕಿ ಮಾತೋಡದ ಕೇಳಿದ್ರ ಎಲ್ಲೇ ಖರೇನ ನಾವ ಟೈಟಾನಿಕ ಒಳಗ ಹೊಂಟೇವಿ ತಿರಗಿ ಎಲ್ಲಾರೂ ಬರೋದ ಗ್ಯಾರಂಟೀ ಇಲ್ಲಾ ಅಂತ ತಿಳ್ಕೊಂಡಿದ್ಲ ಕಾಣ್ತದ.
ಅಲ್ಲಾ ಬಹುಶಃ ಇಕಿ ಅದಕ್ಕ ನಾ ನವೆಂಬರ ೨೮ಕ್ಕ ಇಬ್ಬರ ಹೋಗೊಣ ನಮ್ಮ ಅನಿವರ್ಸರಿಗೆ ಅಂದಾಗ ಬ್ಯಾಡರಿ ಮಕ್ಕಳನು ಕರಕೊಂಡ ಹೋಗೊಣು ಅಂತ ಗಂಟ ಬಿದ್ಲಿದ್ಲು, ಯಾಕಂದರ ಈಕಿಗೆ ಗೊತ್ತಿತ್ತ ಹಂಗೇನರ ಹೆಚ್ಚು ಕಡಮಿ ಆದರ children and women first ಅಂತ ಅವರೇಲ್ಲಾ ವಾಪಸ ಬರ್ತಾರ ಒಟ್ಟ ತಾ ಸೇಫ್ ಇರಬೇಕು ಅಂತ ಮಕ್ಕಳನು ಕಟಗೊಂಡ ಹೋಗೊಣ ಅಂದಿದ್ಲು. ಒಟ್ಟ ಒಂದ ಮಾತನಾಗ ಹೇಳ್ಬೇಕಂದರ ಅಕಿಗೆ ನಂದ ಒಬ್ಬವಂದ ವಾಪಸ ಬರ್ತೇನಿ ಅಂತ ಗ್ಯಾರಂಟಿ ಇದ್ದಿದ್ದಿಲ್ಲಾ ಅನ್ರಿ.
ಇನ್ನ ನಾವು ಒಮ್ಮೆ ಗೋವಾ ಟರ್ಮಿನಲ್ ಮುಟ್ಟಿದ ಮ್ಯಾಲೆ ನಮ್ಮ ಇ-ಟಿಕೇಟ್ ತೊರಿಸಿ ಬೋರ್ಡಿಂಗ ಪಾಸ ತೊಗೊಂಡ್ವಿ, ಮುಂದ ಒಂದ ತಾಸ ಗ್ಯಾಪ ಇತ್ತ
’ಮ್ಯಾಲೆ ರಿಫ್ರೆಶಮೆಂಟ್ ಏರಿಯಾ ಒಳಗ ಇರ್ರಿ ಎರಡ ಗಂಟೆಕ್ಕ ಬಸ ಬರ್ತದ ಅದರಾಗ ನಿಮ್ಮನ್ನ ಕರಕೊಂಡ ಹೋಗಿ ಜೆಟ್ಟಿಗೆ ಬಿಡ್ತಾರ’ ಅಂತ ಹೇಳಿದರು.
ಹಿಂಗಾಗಿ ನಾವ ಒಂದ ತಾಸ ಅಲ್ಲೇ ರೆಸ್ಟ ಮಾಡ್ಲಿಕತ್ತಿದ್ವಿ, ಅಲ್ಲೇ ಸಡನ್ ಆಗಿ ಒಬ್ಬರ ಮೇಡಮ್ ಬಂದರು, ನನ್ನ ಮಗಳ ಅವರನ ನೋಡಿದೋಕಿನ
’ ಪಪ್ಪಾ ನಾವ ಇವರನ ಅಂಗ್ರೀಯಾದ್ದ ಯು ಟೂಬ್ ಒಳಗ ನೋಡಿದ್ವೇಲ್ಲಾ” ಅಂತ ನೆನಪ ಮಾಡಿ ಕೊಟ್ಟಳು. ನಂಗೂ ಅವರನ ನೋಡಿದ ಕೂಡ್ಲೆ ಹೌದ she is part of angriya management ಅಂತ ಅವರದ ಯಾರೊ ಇಂಟರ್ವಿವ್ ತೊಗೊಳೊದ ನೋಡಿದ್ದೆ ಹಿಂಗಾಗಿ ಸೀದಾ ಅವರ ಹತ್ತರ ಹೋಗಿ ಪರಿಚಯ ಮಾಡ್ಕೊಂಡೆ.
ಅವರು ತಮ್ಮ ಪರಿಚಯ ಮಾಡ್ಕೊಂಡರು. I am leena kamat prabhu, executive vice chairman of angriya ಅಂತ ಅಂದರು… I was delighted to meet her. She is the main person behind getting angriya ship from japan to India and she has spent two years in making this angriya, familiarizing herself with every aspect of angriya- technical,marine, navigation, architecture, interiors, branding with her curious character, artistic sense. even F and B, cooks, captains..you name it everything was well planned and executed by her.
ಹಿಂಗಾಗಿ ಅವರಿಗೆ 1st lady of angriya ಅಂತ ಗೌರವ ಕೊಟ್ಟಾರ ಅಂತ. she truly deserves that.
ನಾ ಹಂಗ ಅವರ ಜೊತಿ ಹರಟಿ ಹೊಡಿಯೊದ ತಡಾ ನನ್ನ ಹೆಂಡ್ತಿ ತನ್ನ ಬಟಾಲಿನ್ ತೊಗೊಂಡ ಬಂದ ಬಿಟ್ಟಳು. ನಾ ಮತ್ತ ಅವರಿಗೆ ನನ್ನ ಹೆಂಡ್ತಿನ್ನ ಪರಿಚಯ ಮಾಡಿಸಿಸಿ ” she is my 1st lady…prerana” ಅಂತ ಹೇಳಿ ನನ್ನ ಎರಡು ಮಕ್ಕಳನ ಭೆಟ್ಟಿ ಮಾಡಿಸಿಸಿದೆ, she was very nice to kids, ಅದರಾಗ ನಾ ಇವತ್ತ ನನ್ನ ಮಗಂದ ಬರ್ಥಡೆ ನಾವ ಅದನ್ನ ಸೆಲೆಬ್ರೇಟ್ ಮಾಡಲಿಕ್ಕೆ ಅಂಗ್ರೀಯಾ ಒಳಗ ಹೋಂಟೇವಿ ಅಂದ ಕೂಡಲೇ ಅವರ ಮೇನ್ ಚೆಫಗ ಕರದ ’meet vinayak, he is our main cheff for angriya’ ಅಂತ ಪರಿಚಯ ಮಾಡಿಸಿಸಿ, ನನ್ನ ಮಗನ ತೊರಿಸಿ ’this boy is celebrating his birthday in angriya today’ ಅಂತ ಹೇಳಿದರು.
ಇನ್ನ ಮೇಡಮ್ ಅಷ್ಟ ಹೇಳಿದ ಮ್ಯಾಲೆ ಮುಗಿತಲಾ, ಪಾಪ ಆ ಚೆಫ್ ಆಮ್ಯಾಲೆ ನನ್ನ ಕಡೆ ಬಂದ ತಮ್ಮ ಮೆನೂ ಏನ ಇರ್ತದ ಎಲ್ಲಾ ಡಿಟೇಲ್ಸ ಹೇಳಿದಾ, do you wish to have anything extra ಅಂತ ಬ್ಯಾರೆ ಕೇಳಿದಾ…ನಾ i would like have curd rice and sambar if possible ಅಂತ ಹೇಳಿದೆ. ಪಾಪ ಅಂವಾ i will try sir ಅಂತ ಹೇಳಿ ಹೋದಾ. ನಾ ಮೊಸರನ್ನಾ ಅಂತ ಹೇಳಿದ್ದಕ್ಕ ನನ್ನ ಹೆಂಡ್ತಿ ಹಣಿ ಹಣಿ ಬಡ್ಕೊಂಡ್ಲು.
’ಅಲ್ಲರಿ, ಎಲ್ಲಾ ಬಿಟ್ಟ ಸಮುದ್ರದಾಗ ಮೊಸರನ್ನಾ ತಿನ್ನೋರ..ಮೊದ್ಲ ಹೇಳಿದ್ದರ ಬುತ್ತಿ ಗಂಟ ಕಟಗೊಂಡ ಬರ್ತಿದ್ದೆ, at least ಕುಲ್ಚಾ, ನಾನ್ ಮಾಡ ಅಂತರ ಹೇಳ್ಬೇಕ ಬ್ಯಾಡ’ ಅಂತ ಬೈಲಿಕತ್ಲು. ಅಲ್ಲಾ ಯಾಕಂದರ ಅಂಗ್ರೀಯಾ ಒಳಗ ಬರೇ ಪರೋಟಾ ಇಷ್ಟ ಮಾಡ್ತಾರ ಅವ ಪಾಪ ಅಕಿ ಹಲ್ಲಿಗೆ ಬರಂಗಿಲ್ಲಾ ಹಿಂಗಾಗಿ ಹಂಗ ಹೇಳಿದ್ಲು.
ಮುಂದ ಒಂದ ಅರ್ಧಾ ತಾಸಿಗೆ ಬೋರ್ಡಿಂಗ್ ಟೈಮ್ ಆತು ನಾವು ನಮ್ಮ ಲಗೇಜ್ ಎಲ್ಲಾ ಸ್ಕ್ಯಾನ ಮಾಡಿಸಿಸಿ, angriya ಹತ್ತಿದ್ವಿ, ಬೋರ್ಡಿಂಗ ಮಾಡಬೇಕಾರ ನನ್ನ ಹೆಂಡ್ತಿ
“ರ್ರೀ..ಲಗೂ ಲಗೂ ನಡ್ರಿ…ನಾವ ಮೊದ್ಲ ಹೋಗೋಣ” ಅಂತ ಅಂದ್ಲು.
“ಯಾಕ ನೀ ಏನ ಕರ್ಚೀಫ್ ಒಗದ ಸೀಟ ಹಿಡಿಯೋಕಿ ಇದ್ದಿ ಏನ ಅಲ್ಲೇ..ನಮ್ಮ ರೂಮ್ ರಿಸರ್ವ್ ಆಗ್ಯಾವ ಸುಮ್ಮನಿರ” ಅಂತ ನಾ ಜೋರ ಮಾಡಿದೆ…..ಅಲ್ಲಾ ಅಕಿ ಬಹುಶಃ ಆ ಟೈಟಾನಿಕ್ ಒಳಗ ಹೀರೋ ಕೆಳಗ ಡಾರ್ಮಿಟರಿ ಒಳಗ ಇರ್ತಾನ ಇಕಿ ಮ್ಯಾಲೆ ರಾಣಿಗತೇ ರೂಮನಾಗ್ ಇರ್ತಾಳಲಾ ಹಂಗ ಅಂತ ತಿಳ್ಕೊಂಡಿದ್ಲೊ ಏನೋ?
ಕಡಿಕೂ ಇಬ್ಬರೂ ಕೂಡೆ ಲೈನ ಒಳಗ ನಿಂತ ಬೋರ್ಡ ಮಾಡಿದ್ವಿ. ಹೋದ ಕೂಡ್ಲೆ high tea ಇತ್ತ..ಇನ್ನ ನಾ ಟೀ..ಕಾಫಿ ಕುಡಿಯಂಗಿಲ್ಲಾ ಬಾರ್ ನಾಲ್ಕುವರಿ ತನಕಾ ಶುರು ಆಗಂಗಿಲ್ಲಾ ಅಂತ ಹಣ್ಣಿನ ರಸಾ ಕುಡಿಬೇಕಾತ ಅನ್ನರಿ. ಇನ್ನ ಆ high tea ಜೋತಿಗೆ ಎಲ್ಲಾ instructions and safety video ತೊರಸಿದರು…ನನ್ನ ಹೆಂಡ್ತಿ ಅಗದಿ ಲಕ್ಷ ಕೊಟ್ಟ ಎಲ್ಲಾ ಕೇಳಲಿಕತ್ತಿದ್ಲು, ಹಿಂಗಾಗಿ ನಾ ಭಾಳ ತಲಿ ಕೆಡಸಿಕೊಳ್ಳಲಿಲ್ಲಾ, ಮುಂದ ಹಂತಾ ಪರಿಸ್ಥಿತಿ ಬಂದರ ಅಕಿನ ನನ್ನ ಸೇಫಟಿ ಅಂತ ನಾ ಕ್ರೂಸ್ ಎಂಜಾಯ್ ಮಾಡಲಿಕ್ಕೆ ಎದ್ದ ಹೋದೆ.
ಮುಂದ ರೂಮಿಗೆ ಹೋಗಿ ಫ್ರೇಶ್ ಆದರಾತು ಅಂತ ನಮ್ಮ ರೂಮ ಕಿ ತೊಗೊಳಿಕ್ಕೆ ರಿಸೆಪ್ಶನಗೆ ಹೋದ್ವಿ…ರಿಸೆಪ್ಶನ್ ಇರೋದ c deck ಒಳಗ…ಹಂಗ ನೀವು ship enter ಆಗೋದ B deck ಒಳಗ…..but C deck is the base of the ship ( ground floor) ಅದರ ಕೆಳಗ D and E ಮ್ಯಾಲೆ A and B deck ಅವ. ಇನ್ನ ರೂಮ ಬಗ್ಗೆ ಹೇಳ್ಬೇಕಂದರ ಅಗದಿ ಚೊಕ್ಕ, neat and clean rooms..very aesthetic and beautiful rooms in all decks…cleaniliness is too good in angriya.
ರೂಮಗೆ ಹೋಗಿ ಚೆಂಜ್ ಆಗಿ ಸೀದಾ ಕ್ರೂಸ ನೋಡಲಿಕ್ಕ ಅಡ್ಡಾಡಲಿಕತ್ವಿ. swimming pool ಏರಿಯಾಕ್ಕ ಹೋದ್ವಿ, ಅದ ಇರೋದ B deck ಮ್ಯಾಲೆ, ಅಲ್ಲೇ infinity pool ಅಂತ ಅಗದಿ small and compact swimming pool with sea at the one end and bar at the other end. i feel that is one of the main attraction of the cruise not because of bar but for the pool.
ಅಷ್ಟರಾಗ ಅಲ್ಲೇ ಬಾರ್ ಶುರು ಆತ, ರೇಟ್ ಮಾತ್ರ ಅಗದಿ ಖತರನಾಕ ಇಟ್ಟಾರ. ಅಲ್ಲೇ ಒಂದ ದಿವಸ ಕುಡಿಯೋದು ಹುಬ್ಬಳ್ಳಿ MRP ಒಳಗ ಪಾರ್ಸೆಲ್ ತೊಗೊಂಡ ಹದಿನೈದ ದಿವಸ ಮನ್ಯಾಗ ಕೂತ ಕುಡಿಯೋದ ಒಂದ ಮತ್ತ. ಆದರ ಇನ್ನ ಅಲ್ಲಿ ತನಕ ಹೋಗಿ ಹಂಗ ಬಂದರ ಹೆಂಗ ಅಸಂಯ್ಯ ಅಂತ ಅಲ್ಲೇನೂ ಜೀಕೇರಿ ಮಾಡಿ ಒಂದ ಅರ್ಧಾ ಕೇಸ ಪಿಂಟ್ ಬೀಯರ್ ತೊಗೊಂಡ್ವಿ ಆ ಮಾತ ಬ್ಯಾರೆ.
ಇನ್ನೊಂದ ನೆನಪ ಇಡ್ರಿ, ಅಂಗ್ರೀಯಾ ಒಳಗ ಕ್ಯಾಶ್, ಕಾರ್ಡ ನಡಿಯಂಗಿಲ್ಲಾ, ನೀವು ಗೋವಾ ಪೋರ್ಟ ಒಳಗ ಮಿನಿಮಮ್ ಎರಡುವರಿ ಸಾವಿರದ್ದ ಒಂದ ಪ್ರಿಪೇಡ್ ಕಾರ್ಡ ತೊಗೊಂಡ ಹೋಗಬೇಕು. ಹಂಗೇನರ ಶಿಪ್ ಒಳಗ ಖರ್ಚ ಮಾಡಿದರ ಈ ಕಾರ್ಡ ಇಷ್ಟ ನಡೆಯೋದ, ಬ್ಯಾರೆ ಏನೂ ನಡಿಯಂಗಿಲ್ಲಾ. ಹಂಗ ಆ ಕಾರ್ಡ ಖಾಲಿ ಆದರ ಶಿಪ್ ಒಳಗ ರಿ-ಚಾರ್ಜ ಮಾಡಸಬಹುದು ಆದರ ಕಾರ್ಡ ಮಾತ್ರ ಹೊರಗ ಪೋರ್ಟ ಒಳಗ ತೊಗೊಂಡ ಹೋಗಬೇಕು.
ಆಮ್ಯಾಲೆ ನೀವು ಬೀರ ಬಿಡ್ರಿ, ನೀರಿನ ಬಾಟಲನಿಂದ ಹಿಡದ ಸಣ್ಣ ಹುಡಗರದ ಬಿಸ್ಕಟ ಸಹಿತ ಒಳಗ ಒಯ್ಯಂಗಿಲ್ಲಾ, ಒಂದೂ ಎಲ್ಲಾ ಶಿಪ್ ಹತ್ತೊಕಿಂತ ಮೊದ್ಲ ತಿಂದ ಕುಡದ ಖಾಲಿ ಮಾಡಬೇಕು ಇಲ್ಲಾ ಅದನ್ನ ಕಾರ್ಗೋ ಮಾಡಿಸಿಸಿ ವಾಪಸ ಮುಂಬಯಿ ಮುಟ್ಟಿದ ಮ್ಯಾಲೆ ವಾಪಸ ಇಸ್ಗೊಬೇಕು. only medicines and its patients are allowed. ಚೀಟ ಸಹಿತ ಚೆಕ್ ಮಾಡಿ ಕಿಸೆದಾಗ ಇದ್ದರ ಜಪ್ತಿ ಮಾಡಿ ಒಳಗ ಬಿಡ್ತಾರ ಮತ್ತ.
ಹಂಗ ಮೊದ್ಲ ನಾನೂ ಹೆಂಗಿದ್ದರೂ ಗೋವಾದಿಂದ ಹೊಂಟೇನಿ, ಏನಿಲ್ಲದ ಅಲ್ಲೇ ಸಸ್ತಾ ಇರ್ತಾವ ಒಂದ ಕೇಸ ಬೀಯರ್ ಹಾಕ್ಕೊಂಡ ಹೋದರಾತ ಅಂತ ತಿಳ್ಕೊಂಡಿದ್ದೆ ಆದರ ಯಾವಾಗ ರೂಲ್ಸ ಗೊತ್ತಾತ ಅದರ ವಿಚಾರ ಬಿಟ್ಟ ಬಿಟ್ಟೆ. ನನ್ನ ಜೊತಿ ಇದ್ದ ಒಬ್ಬ ದೋಸ್ತ ಒಂದ ಬಾಟಲ್ ವೈನ್ ತೊಗೊಂಡ ಬಂದಿದ್ದಾ, ಅವಂಗ ಅದನ್ನ ಕಾರ್ಗೋ ಮಾಡಸ ಅಂದ ಕೂಡ್ಲೆ ಅಂವಾ ತಲಿ ಕೆಟ್ಟ ಅಲ್ಲೇ refreshment areaದಾಗ ಕೂತ ಇಡಿ ಬಾಟಲ್ ಗಟಾ ಗಟಾ ಕುಡದ ಶಿಪ್ ಹತ್ತಿ ಬಿಟ್ಟಾ. so you can’t carry any eatables and beverages in the cruise.
ಮುಂದ ಮಕ್ಕಳನ ಕಟಗೊಂಡ ಸ್ವಿಮಿಂಗ್ ಪೂಲ ಒಳಗ ಇಳದ್ವಿ. ಹಂಗ ಇಜಾಡಲಿಕ್ಕೆ ಬರಲಿಲ್ಲಾ ಅಂದರೂ ನಾವ ಮುಳಗೋ ಅಷ್ಟೇನ ದೊಡ್ದದ ಸ್ವಿಮಿಂಗ್ ಪೂಲ ಇಲ್ಲಾ, ಮ್ಯಾಲೆ ಲೈಫ್ ಜಾಕೇಟ ಬ್ಯಾರೆ ಕೊಡ್ತಾರ. ಒಂದ ಎಂಡ ಗ್ಲಾಸ್ ಬ್ಯಾರಿಕೇಡ್ ಇರ್ತದ, ಅದರ ಆ ಕಡೆ ಸಮುದ್ರ ಕಾಣ್ತದ..ನೋಡಿದವರಿಗೆ ಅದ infinity pool ಥರಾ ಕಾಣ್ತದ. that is the beauty of it.
ಸ್ವಿಮಿಂಗ ಮುಗದ ಮ್ಯಾಲೆ ಮತ್ತ ಸ್ನಾನ, ಥಂಡಿ ಹತ್ತ ಅಂತ ಮತ್ತ hot ಚಾಲೂ ಆತ ಅನ್ನರಿ, ಕಡಿಕೆ ಕತ್ತಲಿ ಆತ, ಡಿಸ್ಕೋ ಥೆಕ್ ಪೂಲ್ ಏರಿಯಾದಾಗ ಶುರು ಆಗಲಿಕತ್ತ, ಬಣ್ಣ ಬಣ್ಣದ ಲೈಟ, ಮ್ಯೂಸಿಕ್ ಎಷ್ಟ ಜೋರ ಬಾರಸಿದರು ಯಾ ಕಾರ್ಪೋರೇಶನದವರದ, ಪೋಲಿಸರದ ಕಾಟ ಇದ್ದಿದ್ದಿಲ್ಲಾ, ರಾತ್ರಿ ಹನ್ನೊಂದ ಆತ ಮ್ಯೂಸಿಕ್ ಬಂದ ಮಾಡ್ರಿ ಅಂತ ರೂಲ್ಸ್ ಇಲ್ಲಾ ಏನಿಲ್ಲಾ. ಮುಂಜಾನೆ ನಾಲ್ಕ ಗಂಟೆ ಮಟಾ ಡ್ಯಾನ್ಸ, ಮ್ಯೂಸಿಕ್, ಬಾರ್ ಎಲ್ಲಾ ಚಾಲೂ.
ಇನ್ನ ನಮಗಂತೂ ಯಾರಿಗೂ ಡ್ಯಾನ್ಸ ಮಾಡಲಿಕ್ಕೆ ಬರಂಗಿಲ್ಲಾ, ಹಂಗ ನನ್ನ ಮಗಳ ಒಬ್ಬೊಕಿನ ಡ್ಯಾನ್ಸ ಕಲಿಲಿಕತ್ತಾಳ ಅದು ಭರತ ನಾಟ್ಯ, ಹಿಂಗಾಗಿ ಅದಕ್ಕೇನ ಅಲ್ಲೇ ಸ್ಕೋಪ ಇರಲಿಲ್ಲಾ, ಕಡಿಕೆ ಹೊಟ್ಟಿ ಹಸ್ತಾವ ನಡಿರಿ, ಅಡಗಿ ಆರಿ ಹೋಗ್ತದ ಅಂತ ನನ್ನ ಹೆಂಡ್ತಿ ಗಂಟ ಬಿದ್ದ ಊಟಕ್ಕ ಕರಕೊಂಡ ಹೋದ್ಲು. ಅಕಿಗೆ ಎಲ್ಲೇ ಲೇಟಾಗಿ ಹೋದರ ವೆಜ್ ಊಟ ಖಾಲಿ ಆಗ್ತದ ಅಂತ ಸಂಕಟ ಬ್ಯಾರೆ ಇತ್ತ.
ಅದರಾಗ ಅವತ್ತ ನನ್ನ ಮಗನ ಬರ್ಥಡೇ ಬ್ಯಾರೆ ಇತ್ತಂತ ಹೇಳಿದ್ನೇಲಾ ಹಿಂಗಾಗಿ the first lady of angriya ಲೀಲಾ ಕಾಮತ ಪ್ರಭು ಅವರ main cheffಗ ಹೇಳಿ ನನ್ನ ಮಗನ ಸಂಬಂಧ ಕೇಕ್ ಕಾಂಪ್ಲಿಮೆಂಟ್ ಮಾಡಿಸಿಸಿದ್ದರು. ಕೇಕ್ ಕಟ್ ಮಾಡಿ ಮತ್ತ ಉಳದದ್ದನ್ನ ಇಟ್ಟ ಎರಡ ದಿವಸ ತಿನ್ನಲಿಕ್ಕೆ ಅಲ್ಲೇ ಫ್ರಿಡ್ಜ ಇಲ್ಲಾ ಅಂತ ನನ್ನ ಹೆಂಡತಿ ಆಜು ಬಾಜುದವರಿಗೆಲ್ಲಾ ಹಂಚಿದ್ಲು. ಮುಂದ ಮತ್ತೊಂದ ತಾಸ ಪೂಲ್ ಏರಿಯಾ ಅಡ್ಡಾಡಿ ಕಡಿಕೆ ನಮ್ಮ ನಮ್ಮ ರೂಮಿಗೆ ಹೋಗಿ ಮಲ್ಕೊಂಡ್ವಿ.
ಯಾಕೋ ನಾವ ಹೋದ ದಿವಸ ಒಂದ ಸ್ವಲ್ಪ ಹೈಟೈಡ್ಸ ಇದ್ವು, ಅಂದರ ತೆರೆಗಳು ಭಾಳ ದೊಡ್ಡವು ಇದ್ವು ಹಿಂಗಾಗಿ ಒಂಥರಾ ಶಿಪ್ ಶೇಕ್ ಆದಂಗ ಆಗಲಿಕತ್ತಿತ್ತ. ಮೊದ್ಲ ನಾ ತೊಗೊಂಡಿದ್ದ ಭಾಳ ಆಗಿರಬೇಕ ಅಂತ ಅನ್ಕೊಂಡಿದ್ದೆ, ಆದರ ನನ್ನ ಹೆಂಡತಿನೂ ಅಳಗ್ಯಾಡೋದ ನೋಡಿ ಬಹುಶಃ ನನ್ನ ಹೆಂಡ್ತಿ ಹೊಟ್ಟಿ ತುಂಬ ಉಂಡ ನಡಿಲಿಕತ್ತದ್ದಕ್ಕ ಅಳಗ್ಯಾಡಲಿಕತ್ತದ ಅಂತ ತಿಳ್ಕೊಂಡೆ ಆದರ ಅಷ್ಟರಾಗ ಯಾರೋ ಬಂದ today we have bit high tides ಅಂತ ಹೇಳಿ ನನ್ನ ಡೌಟ ಕ್ಲೀಯರ ಮಾಡಿದ್ರ.
ನನ್ನ ಹೆಂಡ್ತಿ ಯಾಕ ರಿಸ್ಕ ತೊಗೊಬೇಕು ಅಂತ ಮಲ್ಕೊಬೇಕಾರ ಲೈಫ್ ಜಾಕೇಟ್ ಹಾಕ್ಕೊಂಡ ಮಲ್ಕೊಂಡಿದ್ಲು, ಅದು ಒಂದಲ್ಲಾ ಎರಡ ಮತ್ತ..ಅಲ್ಲಾ ಹಂಗ ಒಂದ ಜಾಕೇಟ ಅಕಿ ವೇಟ್ ಹಿಡಿತದ ಇಲ್ಲೊ ಅಂತ ಅಕಿಗೆ ಗ್ಯಾರಂಟೀ ಇದ್ದಿದ್ದಿಲ್ಲಾ ಅನ್ರಿ. ನಾ ಕಡಿಕೆ ತಲಿಕೆಟ್ಟ ನನ್ನ ಜಾಕೇಟ ಅಕಿ ಕೊಟ್ಟ ಬಿಟ್ಟೆ, ನಮ್ಮ ಹೆಣೇಬರಹದಾಗ ಏನದ ಅದ ಆಗಲಿ ಅಂತ…
ಅಕಿ
’ನೀವೇನ ತೆಳ್ಳಗಿದ್ದಿರಿ ಹಂಗೇನರ ಆದರ ಒಂದ ಥೆರ್ಮಾಕೊಲ ಪ್ಲೇಟ ಹಿಡ್ಕೊಂಡ ತೇಲಬಹುದು, ನಂದ ಹಂಗಲ್ಲಾ ನಾ ಮುಳಗಿ ಬಿಡ್ತೇನಿ, ಇನ್ನ ಯಾರರ ನನ್ನ ಎತ್ತಲಿಕ್ಕೆ ಹೋದರ ಅವರು ಮುಳಗತಾರ’ ಅಂತ ಭಿಡೇ ಬಿಟ್ಟ ಹೇಳಿದ್ಲು.
ಮರ ದಿವಸ ಮುಂಜಾನೆ ಆರ ಆಗೋದಕ್ಕ ನನ್ನ ಹೆಂಡ್ತಿ ಖಿಡಕ್ಯಾಗ ಕೂತಿದ್ಲು. ನಾ ಇಕಿ ಹಿಂಗ್ಯಾಕ ಗಾದಿ ಪಲ್ಲಂಗ ಬಿಟ್ಟ ಖಿಡಕ್ಯಾಗ ಕೂತಾಳ, ಎಲ್ಲೇರ ಮಂಚದ ಬುಡಕ ನೀರ ಬಂದದ ಏನ ಅಂತ ನೋಡಿದರ ಹಂಗೇನಾಗಿದ್ದಿಲ್ಲಾ.
“ಲೇ…ಹಂಗ್ಯಾಕ ಖಿಡಕ್ಯಾಗ ಕೂತಿ…ಖಿಡಕಿ ಒಡದ ಜಿಗಿಯೋಕಿ ಇದ್ದಿ ಏನ” ಅಂತ ಅಂದರ
“ರ್ರಿ…ನೋಡ ಬರ್ರಿ ಇಲ್ಲೇ ಎಷ್ಟ ಹಡಗ ಅವ” ಅಂತ ಒಂದ ಉಸಿರನಾಗ ಒದರಲಿಕತ್ಲು. ನಮ್ಮ ಅಂಗ್ರೀಯಾ ಅಷ್ಟರಾಗ ಮುಂಬೈ ಹತ್ತರ ಇರೋ ಅಲಿಬಾಗ್ ಕಡೆ ಬಂದಿತ್ತ..ಎಲ್ಲೇ ನೋಡಿದಲ್ಲೇ ಕಾರ್ಗೋ ಶಿಪ್ಸ, ಪಾಸೆಂಜರ್ ಶಿಪ್ಸ..ಇನ್ನೂ ಬೆಳಕಾಗಿದ್ದಿಲ್ಲಾ, ಅಗದಿ ಕಲರಫುಲ್ ಲೈಟ್ ಹಚಗೊಂಡ ನೂರಾರ ಶಿಪ್ಸ ಇದ್ವು, ಇಕಿ ಅವನ್ನ ನೋಡಲಿಕ್ಕೆ ಖಿಡಕ್ಯಾಗ ಕೂತಿದ್ಲು. ಕಡಿಕೆ ಅಕಿನ್ನ ಅಲ್ಲಿಂದ ಎಬಿಸಿಗೊಂಡ ಸನ್ ರೈಸ ತೋರಸ್ತೇನಿ ಬಾ ಅಂತ ಮತ್ತ ಡೆಕ್ ಮ್ಯಾಲೆ ಕರಕೊಂಡ ಹೋಗಿ ಅಲ್ಲೇ ಒಂದ್ಯಾರಡ ಟೈಟಾನಿಕ ಫೋಸನಾಗ ಅಕಿ ಜೊತಿ ಫೋಟೊ ಹೊಡಿಸಿಕೊಂಡ ಅಕಿ ಆಶ್ಯಾ ತಿರಿಸಿಸಿ ಮುಂದ ಒಂದ ತಾಸ ಶಿಪ್ ಒಳಗ ವಾಕಿಂಗ್ ಮಾಡಿ ಕಡಿಕೆ ಸ್ನಾನ ಮಾಡಿ ಲಾಸ್ಟ ಉಳದಿದ್ದ ಒಂದ ಕಾಂಪ್ಲಿಮೆಂಟರಿ ಬ್ರೆಕ್ ಫಾಸ್ಟನ್ನ ಮಧ್ಯಾಹ್ನದ ಹ್ಯಾವಿ ಲಂಚಗತೆ ಮಾಡಿ ಒಂಬತ್ತ ಗಂಟೇಕ್ಕ ಕಡಿಕೂ ಅಂಗ್ರೀಯಾ ಬಿಟ್ಟ ಕೆಳಗ ಇಳದ್ವಿ. ನನ್ನ ಹೆಂಡ್ತಿ ಅಂತೂ ಅಗದಿ ತವರಮನಿ ಬಿಟ್ಟ ಗಂಡನ ಮನಿಗೆ ಒಂದನೇ ಸರತೆ ಬರಬೇಕಾರ ಮಾಡ್ತಾರಲಾ ಹಂಗ ಬಿಟ್ಟ ಬರಲಿಕ್ಕೆ ರೆಡಿ ಇದ್ದಿದ್ದಿಲ್ಲಾ, ಇನ್ನೊಂದ ತಾಸ ಇದ್ದ ಹೋಗೊಣ ಅಂತ ಗಂಟ ಬಿದ್ದಿದ್ಲು.
“ಏ….ಹುಚ್ಚಿ ಬಾಂಬೆ ಪೋರ್ಟ ಒಳಗ ನಾ ಬುಕ್ ಮಾಡಿದ್ದ ಕಾರ ಬಂದ ನಿಂತದ ಸಾಕ ಬಾ ಮತ್ತ ಬರೋಣಂತ” ಅಂತ ಹೇಳಿ ಅಲ್ಲಿಂದ ಬೋಟ ಹತ್ತಿ ಮುಂಬಯಿ ಮಜಗಾಂವ್ ಪೋರ್ಟ ಮುಟ್ಟಿದ್ವಿ.
ಮುಂಬಯಿ ಪೋರ್ಟ ಒಳಗ ಟ್ರಾಫಿಕ್ ಜಾಸ್ತಿ ಇರೋದರಿಂದ ಅಂಗ್ರೀಯಾ ದಂಡಿ ತನಕ ಬರಂಗಿಲ್ಲಾ, ಅದ ಒಂದ ಐದ ಕಿ.ಮಿ.ದೂರ ಸಮುದ್ರದಾಗ ನಿಲ್ತದ ಅಲ್ಲಿಂದ ಬೋಟ ಒಳಗ ಕರಕೊಂಡ ಬಂದ ನಮಗ ದಡಾ ಮುಟ್ಟಸ್ತಾರ.
ಮುಂದ ಮುಂಬೈ ಪೋರ್ಟ ಒಳಗ ನಂಬದೇನ ಅಂಗ್ರೀಯಾ ಕಾರ್ಡ ಇರ್ತದ ಅದನ್ನ ಅವರಿಗೆ ವಾಪಸ ಕೊಟ್ಟ ಅದರಾಗ ಉಳದಿದ್ದ ರೊಕ್ಕಾ ವಾಪಸ ಇಸ್ಗೊಂಡ ನಮ್ಮ ಕ್ಯಾಬ ಹತ್ತಿ ಹುಬ್ಬಳ್ಳಿ ಹಾದಿ ಹಿಡದ್ವಿ.
ಹಿಂಗ ಅಂತು ಇಂತು ನನ್ನ ಹೆಂಡತಿ ನನ್ನ ಮಗಳದು ಟೈಟಾನಿಕ್ ಹತ್ತೋ ಕನಸ ಒಂದ ಚೂರ ನನಸಾತ ಅನ್ನರಿ.
ಇನ್ನ ನನ್ನ ಆಶಾ ಇಡೇರಲಾರದ್ದ ಅಂದರ ನಾನೂ ಟೈಟಾನಿಕ ಹೀರೋನ ಗತೆ ಇಕಿ ಕೊಳ್ಳಾಗ ಒಂದ ಇಮಿಟೇಶನ್ ಜ್ಯುವೇಲರಿದ ಡೈಮಂಡ್ ನೆಕ್ಲೇಸ್ ಒಂದ ಹಾಕಿ ಡ್ರಾಯಿಂಗ ಮಾಡಬೇಕಂತ ಇತ್ತ, ಇಕಿ ಆ ಐಡಿಯಾ ಕೇಳಿ
“ನಿಮಗೇನ ಹುಚ್ಚ-ಗಿಚ್ಚ ಹಿಡದದೇನ…ಅವು ಹುಡಗ ಬುದ್ದಿವ ಇದ್ವು…ಯಂಗ ಇದ್ವು…..ನಿಮ್ಮ ವಯಸ್ಸೇನು ಏನ್ತಾನ…ಎರಡ ಮಕ್ಕಳಾದ ಮ್ಯಾಲೆ ಹಂತಾ ಡ್ರಾಯಿಂಗ ಮಾಡಿದರ ಮಂದಿ ಏನಂತಾರ” ಅಂತ ನಂಗ ಬೈದ ಬಾಯಿ ಮುಚ್ಚಸಿದ್ಲು. ಹಂಗ ಅಕಿ ಹೇಳೋದ ಖರೇ ಅಕಿಗೂ ವಯಸ್ಸಾಗೇದ ಬಿಡ ಅಂತ ನಾ ಸುಮ್ಮನಾದೆ.
ನನ್ನ ಇನ್ನೊಂದ ಆಶಾ ಬಾಕಿ ಉಳದಿದ್ದ ಅಂದರ ಸ್ಪಾ ಕ್ಕ ಹೋಗೊದ, ನಾ ಎಷ್ಟ ಬಡಕೊಂಡೆ ಇಲ್ಲೇ ಗಂಡಸರ ಮಸಾಜ್ ಮಾಡ್ತಾರ ಅಂತ ಆದರೂ ನನ್ನ ಹೆಂಡ್ತಿಗೆ ನನ್ನ ಮ್ಯಾಲೆ ವಿಶ್ವಾಸ ಇರಲಿಲ್ಲಾ ಹಿಂಗಾಗಿ ಸ್ಪಾಕ್ಕ ಒಂದ ಹೋಗಲಿಕ್ಕೆ ಬಿಡಲಿಲ್ಲಾ.
ಆದರೂ ಏನ ಅನ್ನರಿ ಎಲ್ಲಾರೂ ಆರಾಮ ಹೋಗಿ ಆರಾಮ ಬಂದ್ವಿ…ಹೋಗಬೇಕಾರು ಎರಡ ಮಕ್ಕಳ ಇದ್ವು…ಬರಬೇಕಾರು ಎರಡ ಇದ್ವು..ಅಲ್ಲಾ ಹಂಗ ಹದಿನಾಲ್ಕತಾಸನಾಗ ಮಕ್ಕಳೇನ ಆಗಂಗಿಲ್ಲಾ ಖರೇ ಆದರೂ ಮಾತ ಹೇಳಿದೆ..
ಒಂದ ಒಳ್ಳೆ ಅನುಭವ ಅನ್ನರಿ….ನನಗಂತೂ ಈ ಅಂಗ್ರೀಯಾ ’the titanic of middle class’ ಅಂತ ಅನಸ್ತು. ಅಲ್ಲಾ ಹಂಗ ನೀವೇಲ್ಲಾ ಇಂಟರನ್ಯಾಶನಲ್ ಕ್ರ್ಯೂಸ್ ಅಡ್ಡಾಡಿರಬಹುದು, ನನಕಿಂತಾ ಜಾಸ್ತಿ ಎಂಜಾಯ್ ಮಾಡಿರಬಹುದು. ಆದರ ನನ್ನ ಎಂಜಾಯಮೆಂಟ ನಂದ …ನಿಂಬದ ನಿಮ್ಮದ…ಹಂಗ ನಾ ಬರದ ನಿಮ್ಮ ಜೊತಿ ಹಂಚಗೊಂಡೆ ..ನೀವು ಏನರ ಹಂಗ ಆಫಿಸಿಯಲ್ ಫ್ಯಾಮಿಲಿ ಜೊತಿ ಹೋಗಿದ್ದರ ಹಂಚಗೋರಿ…
ನನ್ನ ಮಗಳಂತೂ ತನ್ನ ಫ್ರೇಂಡ್ಸ್ ಮುಂದ ನಾವ ಟೈಟಾನಿಕ್ ಒಳಗ ಹೋಗಿದ್ವಿ ಅಂತ ಓಣಿ ತುಂಬ ಹೇಳ್ಕೋತ ಮೋಬೈಲನಾಗಿನ ಫೋಟೊ ತೊರಿಸ್ಗೋತ ಹೊಂಟಾಳ.
ನೋಡ್ರಿ ನೀವು ಒಮ್ಮೆ ಹೋಗಿ ಬರ್ರಿ…ಹಂಗ ಅದರ ಬಗ್ಗೆ ಇನ್ನೂ ಹೆಚಗಿ ಮಾಹಿತಿ ಬೇಕಂದರ ಕಮೆಂಟ ಬರೀರಿ, ನಾ ಅಲ್ಲೇ ನಿಮಗ ಎಲ್ಲಾ ರಿಪ್ಲೈ ಕೋಡ್ತೇನಿ…ಹಂಗ
“ನೀನು ನಮ್ಮ ಜೊತಿ ಬಂದ ಬಿಡ ಗೈಡ ಆದಂಗ ಆಗ್ತದ ” ಅಂತ ಕರಕೊಂಡ ಹೋದರು ಬರ್ತೇನಿ……ಏ ನಿವೇನ ಚಿಂತಿ ಮಾಡಬ್ಯಾಡ್ರಿ, ಹೆಂಡ್ತಿ ಬಿಟ್ಟ ಬರ್ತೇನಿ ಈ ಸರತೆ.
ಅನ್ನೊಂಗ ಇನ್ನೊಂದ ಹೇಳೋದ ಮರತೆ, ಈ ಕ್ರೂಸಗೆ ’ಅಂಗ್ರೀಯಾ ಅಂತ ಯಾಕ ಹೆಸರ ಇಟ್ಟರು ಅಂದರ ಕಾನೋಜಿ ಅಂಗ್ರೀಯಾ ಅಂತ ಒಬ್ಬ ಮರಠಾ ನೇವಿದ ಮೊದಲನೇ ಅಡ್ಮಿರಲ್ ಇದ್ದಾ. ( 1667-1729) ಅವಂಗ ಸಮುದ್ರ ಶಿವಾಜಿ ಅಂತ ಕರಿತಿದ್ದರು. ಅಂವಾ ಸೂರತನಿಂದ ಕೊಂಕಣ ತನಕ ಇಡಿ ಅರಬಿ ಸಮುದ್ರದ ರಾಜಾ ಇದ್ದಂಗ ಇದ್ದನಂತ. ಬ್ರೀಟಿಷರು ಮತ್ತ ಪೋರ್ಚುಗೀಸರು ಅವನ ಜೊತಿ ಎಷ್ಟ ಸರತೆ ಯುದ್ಧ ಮಾಡಿದರು ಅವನ ಸೋಲಸಲಿಕ್ಕೆ ಆಗಲಿಲ್ಲಾ. he remained undefeated till his death. ಅವನಿಗೆ ಗೌರವ ಕೊಡ್ಲಿಕ್ಕೆ ಈ ಹಡಗಕ್ಕ ಅಂಗ್ರೀಯಾ ಅಂತ ಹೆಸರ ಇಟ್ಟಿದ್ದ.
Beautifully depicted experience, tastefully spiced with a tinge of fiction … By the way, was anyone affected by sea sickness ?
you feel that you are sailing once you into ship and involved in angriya…no nausea…nothing….
hogabekadra erdu , barbekadra erdu maklu andri,, aadara photodaaga mooravalari 😛
onda namma dostanda…hanga kada isgondidvi
ನಿಮ್ಮ ಅನುಭವ ಓದಿದ ನಂತರ, ನಾವೇ ಹಡಗಿನ ಪ್ರವಾಸ ಮಡಿದ ಹಾಗೆ ಅನಿಸಿತು.
Yes Adur I do did Cruise biggest in Singapore 2 years (with wife only) back Most of ur feelings yes but the kind of things you shared is just Wow moments Gr8 👏👏👏
ಸಾರ್ ಬುಕ್ ಮಾಡೋದು ಹೇಗೆ ಎಷ್ಟು ಖರ್ಚು ಬರುತ್ತೆ ನಿಮ್ಮ ನಂಬರ್ ಕೊಡಿ ದಯವಿಟ್ಟು
http://www.angriyacruises.com
9379101596
Thanks to my father who told me regarding this web site,
this blog is actually awesome.
thank u..keep reading the blog