‘ಕುಟ್ಟವಲಕ್ಕಿ’ ಅನ್ನೊ ಈ ನನ್ನ ಪ್ರಹಸನಗಳ ಸಂಗ್ರಹವನ್ನ ಛಂದ ಪುಸ್ತಕದವರು ಅಗದಿ ಛಂದಾಗಿ ಪ್ರಕಟಿಸಿದ್ದಾರೆ , ಅವರಿಗೆ ನಾ ಆಭಾರ ಇದ್ದೇನಿ. ಹಂಗ ನಾ ಒಂದ ಪ್ರಹಸನ ಹಾಳ್ಯಾಗ ಬರದ ಓದಿ ಹೇಳಿದಾಗ, ಅಡ್ಡಿಯಿಲ್ಲ ದೋಸ್ತ ಸ್ವಲ್ಪ ತ್ರಾಸ ತೊಗೊಂಡ ಟೈಪ್ ಮಾಡ ಅಂತ ಹೇಳಿದ ಋಷಿಕೇಶ ಬಹಾದ್ದೂರ ದೇಸಾಯಿ ನನ್ನ ಮೊದಲ ಪುಸ್ತಕ ರೆಡಿ ಆಗಲಿಕ್ಕೆ ಮೂಲ ಕಾರಣ. ಆ ಕುಟ್ಟವಲಕ್ಕಿಯ ಎಲ್ಲ ಪ್ರಹಸನಗಳನ್ನ ನಿಮ್ಮ ಮುಂದ ಇಟ್ಟೇನಿ, ಓದಿ ನಿಮ್ಮ ಅಭಿಪ್ರಾಯ ತಿಳಸರಿ.
ಸುಮಾರ ಮೂರ ವರ್ಷದ ಹಿಂದಿನ ಮಾತು, ಶ್ರಾವಣ ಮಾಸದಾಗ ಒಂದ ಸಂಡೆ ನಮ್ಮ ಚಂದಕ್ಕ ಮೌಶಿ ಮನ್ಯಾಗ ಪವಮಾನ ಹೋಮ ಮತ್ತ ಸತ್ಯನಾರಾಯಣ ಪೂಜಾ ಇಟ್ಕೊಂಡಿದ್ದರು. ಇದ ಬ್ರಾಹ್ಮಣರಾಗ ಕಾಮನ್, ಅವರಿಗೆ ಶ್ರಾವಣ-ಭಾದ್ರಪದ ಮಾಸ ಬಂದಾಗ ಗೊತ್ತಾಗೋದು ಅವರ ಬ್ರಾಹ್ಮಣರಂತ, ವರ್ಷದಾಗ...
“ಪ್ರಶಾಂತಾ ನಾಳೇ ನೀ ರಜಾ ತಗೋ, ಎಲ್ಲಿನೂ ತಿರಗಲಿಕ್ಕ ಹೋಗಬ್ಯಾಡಾ, ಎರಡ ದಿವಸ ಆತು ನಳಾ ಬಂದಿಲ್ಲಾ. ನಾಳೆ ಗ್ಯಾರಂಟೀ ಬರತದ, ನೀನ ಮಡಿನೀರ ತುಂಬಬೇಕ ಈ ಸರತೆ” ಅಂತ ಸೋಮವಾರ ರಾತ್ರಿ ಊಟಕ್ಕ ಕೂತಾಗ ನಮ್ಮವ್ವಾ ಒಂದು ದೂಡ್ದ ಬಾಂಬ್...
ಮುಂದಿನ ವಾರ ನಮ್ಮ ಸುಮಕ್ಕನ ಮಗನ ಮದುವಿ ಫಿಕ್ಸ ಆಗೇದ. ನಿನ್ನೆ ನಮ್ಮ ಸುಮಕ್ಕ ನನ್ನ ಹೆಂಡತಿಗೆ ದೇವರ ಊಟಕ್ಕ ‘ಹಿತ್ತಲ ಗೊರ್ಜಿ’ ಮುತ್ತೈದಿ ಅಂತ ಹೇಳಲಿಕ್ಕೆ ಬಂದಿದ್ದರು. ಆದ್ರ ನನ್ನ ಹೆಂಡತಿ “ಸುಮಕ್ಕ ನಂದ ಡೇಟ್ ಅದ , ನಾ...
ಮೊನ್ನೆ ನಮ್ಮ ಅಬಚಿ (ಮೌಶಿ) ಮಗಾ ವಿನಾಯಕ ಭೆಟ್ಟಿಯಾಗಿದ್ದಾ , ಮಾತಾಡ್ತಾ-ಮಾತಾಡ್ತ ” ಏನಪಾ ಎರಡನೇದ ಲೋಡ ಮಾಡಿ ಅಂತ, ಹೇಳೆ ಇಲ್ಲಲಾ, ಮೊನ್ನೆ ನಿಮ್ಮವ್ವ ಫೋನ್ ಮಾಡಿದಾಗ ಗೋತ್ತಾತು” ಅಂದೆ. “ಹಕ್ಕ್.. ನಿನಗೂ ಬಂತಾ ಸುದ್ದಿ , ನಮ್ಮವ್ವನ ಬಾಯಾಗ...
ಕರೆಕ್ಟ ಇವತ್ತಿಗೆ ಹನ್ನೊಂದ ವರ್ಷದ ಹಿಂದ ನಾ ನನ್ನ ಮೂದಲನೇ ಹನಿಮೂನಗೆ ಕೆರಳಾಕ್ಕ ಹೋಗೊ ತಯಾರಿ ಒಳಗ ಇದ್ದೆ. ಮುಂದ ಜೀವನದಾಗ ಎರಡ-ಮೂರ ವರ್ಷಕ್ಕೊಂದ ಹನಿಮೂನಗೆ ಹೋಗಬೇಕು ಅನ್ನೋ ವಿಚಾರದಿಂದ ಅದು ಮೊದಲನೇ ಹನಿಮೂನ್ ಅಂತ ನಾ ಅನ್ಕೊಂಡಿದ್ದೆ. ಆದರ ಈ...
ನಾಳೆ ಗಣಪತಿ ಹಬ್ಬ, ನಮ್ಮ ಎಲ್ಲಾ ಹುಬ್ಬಳ್ಳಿ ಹಳೇ ದೋಸ್ತರಿಗೆ ತಮ್ಮ ಊರು, ಅವ್ವಾ-ಅಪ್ಪಾ, ಹಳೇ ದೋಸ್ತರು ,ತಮ್ಮ ಹಳೇ ಓಣಿ, ತಮ್ಮ ಮಾಜಿ ಇವೆಲ್ಲಾ ನೆನಪಾಗೋದ ಹಿಂತಾ ಹಬ್ಬ ಬಂದಾಗ ಇಲ್ಲಾ ಅವರ ಪೈಕಿ ಯಾರರ ಇಲ್ಲೇ ಗೊಟಕ್ ಅಂದಾಗ....
ನಮ್ಮ ಸುಮ್ಮಕ್ಕನ ಮಗಾ ನಿಖಿಲಂದ ಮೊನ್ನೆ ಔರಂಗಾಬಾದನಾಗ ಮದುವಿ ಆತು. ನಾವು ಇಲ್ಲಿಂದ ಗಾಡಿ ಖರ್ಚ ಮೈ ಮ್ಯಾಲೆ ಹಾಕ್ಕೊಂಡ ಹೋಗಿ ಸಾವಿರಗಟ್ಟಲೇ ಉಡಗೊರೆ ಕೊಟ್ಟ ಲಗ್ನ ಅಟೆಂಡ ಮಾಡಿ ಬಂದ್ವಿ, ಲಗ್ನಾದ ದಿವಸ ಮಧ್ಯಾಹ್ನನ ಸುಮಕ್ಕಾ ಮದುಮಕ್ಕಳನ್ನ ಕರಕೊಂಡ ಪುಣಾಕ್ಕ...
ನಾ ಸಣ್ಣವ ಇದ್ದಾಗ ನನಗ ನಮ್ಮ ಮನಿ ಕುಲದೇವರ ಬನಶಂಕರಿ ಅಂತ ಗೋತ್ತಾಗಿದ್ದ ನಮ್ಮವ್ವಾ ಹಗಲಗಲಾ “ಸಾಕವಾ ನಮ್ಮವ್ವಾ… ಈ ಮಕ್ಕಳ ಸಂಬಂಧ ಸಾಕಾಗಿ ಹೋಗೇದ, ತಾಯಿ ಬನಶಂಕರೀ, ಶಾಕಾಂಭರೀ…… ಲಗೂನ ಕರಕೊಳ್ಳವಾ” ಅಂತ ಅನ್ನೋದನ್ನ ಕೇಳಿ – ಕೇಳಿ. ಮೊದಲ...
ನಮ್ಮ ಪಕ್ಯಾ ಯಾ ಮೂಹೂರ್ತದಾಗ ಮಾಡಬಾರದ ಕಿತಾಪತಿ ಮಾಡಿ ಸಿಕ್ಕೊಂಡ ಜೇಲ ಸೇರಿದ್ನೋ ಏನೋ, ಆಮ್ಯಾಲೆ ಹೆಂತಿತಾವರ ಜೇಲ ಸೇರಿದ್ರು. ‘ಎದ್ದ ಕ್ಯಾಮಾರಿಲೇ ಬಂಗಾರದ ಕುರ್ಚಿಮ್ಯಾಲೇ ಕುಂತ ಹಲತಿಕ್ಕೊಳ್ಳೊರಿಂದ ಹಿಡದ, ವತ್ರ ವಂದಕ್ಕ ಬಂದ್ರ ಫಾರೆನಗೆ ಹೋಗಿ ಡಯಾಲಸಿಸ್ ಮಾಡಿಸಿಕೊಂಡ ಬರೋರ...
ನಿನ್ನೆ ರಾತ್ರಿ ಮಲಕೋಬೇಕಾರ ನನ್ನ ಹೆಂಡತಿ ಮಾರಿ ನೋಡಿ ಮಲ್ಕೋಂಡಿದ್ದೇನೋ ಏನೋ ? ನಡ ರಾತ್ರ್ಯಾಗ ಗಬಕ್ಕನ ಎಚ್ಚರ ಆತು. ಕಿವ್ಯಾಗ ಗುಂಗಾಡ ಗುಂಯ್ಯ ಅನ್ನಲಿಕತ್ತಿದ್ವು, ಸುಡಗಾಡ ಕರಂಟ ಯಾವಾಗೋ ಹೋಗಿ ಫ್ಯಾನ ಬಂದ ಆಗಿತ್ತು. ಒಂದ ಕಡೆ ಗೊಡೆ, ಒಂದ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...