‘ಕುಟ್ಟವಲಕ್ಕಿ’ ಅನ್ನೊ ಈ ನನ್ನ ಪ್ರಹಸನಗಳ ಸಂಗ್ರಹವನ್ನ ಛಂದ ಪುಸ್ತಕದವರು ಅಗದಿ ಛಂದಾಗಿ ಪ್ರಕಟಿಸಿದ್ದಾರೆ , ಅವರಿಗೆ ನಾ ಆಭಾರ ಇದ್ದೇನಿ. ಹಂಗ ನಾ ಒಂದ ಪ್ರಹಸನ ಹಾಳ್ಯಾಗ ಬರದ ಓದಿ ಹೇಳಿದಾಗ, ಅಡ್ಡಿಯಿಲ್ಲ ದೋಸ್ತ ಸ್ವಲ್ಪ ತ್ರಾಸ ತೊಗೊಂಡ ಟೈಪ್ ಮಾಡ ಅಂತ ಹೇಳಿದ ಋಷಿಕೇಶ ಬಹಾದ್ದೂರ ದೇಸಾಯಿ ನನ್ನ ಮೊದಲ ಪುಸ್ತಕ ರೆಡಿ ಆಗಲಿಕ್ಕೆ ಮೂಲ ಕಾರಣ. ಆ ಕುಟ್ಟವಲಕ್ಕಿಯ ಎಲ್ಲ ಪ್ರಹಸನಗಳನ್ನ ನಿಮ್ಮ ಮುಂದ ಇಟ್ಟೇನಿ, ಓದಿ ನಿಮ್ಮ ಅಭಿಪ್ರಾಯ ತಿಳಸರಿ.
” ಏನ್ರಿ ಸಾಹೇಬರ ಮನ್ನೇನ ದಿಲ್ಲಿಗೆ ಸೆಶನಗೆ ಹೋಗಿದ್ರಿ, ಯಾವಾಗೋ ವಾಪಸ ಬಂದಿರಲಾ ? ” ಅಂತ ನಿನ್ನೆ ಒಂದ ಮದುವ್ಯಾಗ ನಮ್ಮ ಲೋಕಲ ಎಮ್.ಪಿ. ನೋಡಿ ಕೇಳಿದೆ. ” ಏ, ದಿನಾ ಪಾರ್ಲಿಮೆಂಟನಾಗ ಗದ್ಲಾ ಮಾಡಿ ಸೂಟಿ ಮಾಡ್ಲಿಕತ್ತಾರ ಹಿಂಗಾಗಿ...
ನಾಳೆ ಡಿಸೆಂಬರ್ ೧೩ಕ್ಕ ನಮ್ಮ ದೇಶದ ಸಂಸತ್ತ ಮ್ಯಾಲೆ ದಾಳಿಯಾಗಿ ಹತ್ತ ವರ್ಷ ಆತು. ನಮ್ಮ ಮಂದಿಗೆ ಪಾರ್ಲಿಮೆಂಟ ಮ್ಯಾಲೆ ಅಟ್ಯಾಕ ಆಗಿತ್ತೂ ಅದನ್ನ ತಡಿಲಿಕ್ಕೆ ಹೋಗಿ ಏಳ ಮಂದಿ ಹುತಾತ್ಮರಾಗಿದ್ದರು ಅನ್ನೋದ ನೆನಪಾಗೋದ ವರ್ಷಕ್ಕ ಒಂದ ಸಲಾ. ಏನ್ಮಾಡೋದು ನಮ್ಮ...
ನಿನ್ನಿಗೆ ನಮ್ಮ facebookಗೆ ಎಂಟ ತುಂಬಿ ಒಂಬತ್ತರಾಗ ಬಿತ್ತು. ನಾವು ಲೋಕಲ್ ಫೆಸಬುಕ್ ಗೆಳ್ಯಾರೆಲ್ಲಾ ಸೇರಿ ಅದರ ಬರ್ಥಡೆ ಸೆಲೆಬ್ರೇಟ್ ಮಾಡಿದ್ವಿ. ಇತ್ತೀಚಿಗಂತೂ ‘facebook ’ ನಮಗೆಲ್ಲಾ ಒಂದ ಕೆಟ್ಟ ಚಟಾ ಆಗಿಬಿಟ್ಟದ. ನನಗಂತೂ ಎದ್ದ ಕೂಡಲೇನ ಕ್ಯಾಮಾರಿಲೇ ಮೊದಲ ಕಂಪ್ಯೂಟರನಾಗ...
ಡಿಸೆಂಬರ್ ೨೯ ರ ರಾತ್ರಿ ನಮ್ಮ ಎಮ್. ಎಲ್. ಏ ಮಾಮಾ ಹನ್ನೆರಡ ಆದ್ರು ಮಲ್ಕೋಳ್ಳಲಾರದ ಟಿ.ವಿ ಮುಂದ ಕೂತಿದ್ದಾ ” ಮಾಮಾ ಇವತ್ತ ಹೊಸ ವರ್ಷ ಅಲ್ಲಾ ಹೋಗಿ ಮಲ್ಕೊ , ಹೊಸಾ ವರ್ಷಕ್ಕ ಇನ್ನೂ ಎರಡ ದಿವಸ ಅದ...
ಹೋದ ವಾರ ದೀಪಾವಳಿ ಫರಾಳಕ್ಕ ನಮ್ಮ ಗೆಳ್ಯಾ ತಮ್ಮ ಮನಿಗೆ ಕರದಿದ್ದಾ , ಈ ಗೆಳ್ಯಾಗ ಹೆಸರ ಅದ, ಆದರ ಈ ಸರತೆ ಯಾಕೋ ಹೆಸರ ಬರೆಯೋದ ಅಷ್ಟ ಸರಿ ಅನಸವಲ್ತು , ಯಾಕ ಅನ್ನೋದ ನಿಮಗೂ ಆಮೇಲೆ ಲೇಖನಾ ಒದತಾ...
ಮೊನ್ನೆ ಹಂಪಿಗೆ ನಮ್ಮಜ್ಜನ ಧರ್ಮೋದಕ ಬಿಡಲಿಕ್ಕ ಹೋಗಿದ್ದೆ. ನದಿ ದಂಡಿ ಮ್ಯಾಲೆ ‘ಕಾಗಿ ಪಿಂಡ’ ರೆಡಿಮಾಡಿ ಕಾಗಿಗೆ ಅಹ್ವಾನ ಮಾಡಿದರು. ಒಂದ ಕಾಗಿನೂ ಅರ್ಧತಾಸ ಆದರೂ ಪಿಂಡದ ಹತ್ತರ ಹಾಯಲಿಲ್ಲಾ , ನಾವೇಲ್ಲಾ ಒದ್ದಿ ಪಂಜಿಲೆ ಇಂಥಾ ಥಂಡ್ಯಾಗ ಸಾಯ್ಕೋತ ಕಾಗಿ...
ಮನ್ನೆ ಮಧ್ಯಾಹ್ನ ದುಡದ ಸಾಕಾಗಿ ಬಂದ ದಣೇಯಿನ ಊಟಕ್ಕ ಕೂತಿದ್ದೆ. ಒಂದ ಸರತೆ ಸಾರೂ ಅನ್ನ ಉಂಡ, ಇನ್ನೇನ ಎರಡನೇ ಸರತೆ ಅನ್ನಕ್ಕ ಹುಳಿ ಹಾಕಸಿಗೋಬೇಕು ಅನ್ನೋದರಾಗ ನಮ್ಮವ್ವಾ ಅಡಗಿ ಮನ್ಯಾಗಿಂದ ಒಂದ ಕೈಯಾಗ ಸಾರಿನ ಸೌಟ ಹಿಡಕೊಂಡ “ಪ್ರಶಾಂತಾ, ಹೋದ...
ಒಂದ ೧೫ ವರ್ಷದ ಹಿಂದಿನ ಮಾತು, ನಮ್ಮ ದೊಸ್ತ ಅನಂತ ಸುಬ್ಬರಾವ ( ಅನಂತು) ಅವರ ಅಪ್ಪಾ ಅಂದರ ಸುಬ್ಬರಾವ ಭಟ್ಟರು ತಮ್ಮ ಅನಂತೂಗ ಬಿ.ಎಸ್.ಸಿ ಮಾಡಿದ ಮ್ಯಾಲೆ ಮೆಡಿಕಲ್ ರೆಪ್ ಕೆಲಸ ಸಿಕ್ಕಾಗ ತಮ್ಮ ಹೋಟೆಲಗೆ ಬಂದ ಅವರ ಗೆಳೆಯಾ...
ನಾಳೆ ನವೆಂಬರ್ ೧೪ಕ್ಕ ’ವಿಶ್ವ ಮಧುಮೇಹ ದಿವಸ’, ಅದರ ಸಂಬಂಧ ಒಂದ ವಾರದಿಂದ ನಮ್ಮ ದೋಸ್ತ ಬಂಕಾಪುರ ಡಾಕ್ಟರ್ ಡಯಾಬೀಟಿಸ್ ಕ್ಯಾಂಪ್ ಮಾಡಲಿಕತ್ತಾನ. ” ನೀವು ಗಂಡಾ ಹೆಂಡತಿ ಬಂದ ಪುಕ್ಕಟ ಚೆಕ್ ಮಾಡಿಸಕೊಂಡ ಹೋಗರಿ ” ಅಂತ ಅಂದಿದ್ದಾ. ಹಂಗ...
ಹೋದ ತಿಂಗಳ್ ನಮ್ಮ ಬೀದರ ಬಹಾದ್ದೂರ ದೇಸಾಯಿ ಹುಬ್ಬಳ್ಳಿಗೆ ಬಂದಿದ್ದಾ, ಹಂಗ ಮಾತಾಡ್ತಾ-ಮಾತಾಡ್ತಾ “ನಿನ್ನ ಕೆಂಡಸಂಪಿಗೆ ಒಳಗಿನ ಲೇಖನಾ ಓದಿ ನಮ್ಮ ಬೀದರನಾಗಿನ ಮಂದಿನೂ ನಿನ್ನ ಹುಬ್ಬಳ್ಳಿ ಭಾಷಾ ಕಲಿಲಿಕತ್ತಾರ, ನಿಂಗ ಬೀದರ ಜಿಲ್ಲಾ ಸಾಹಿತ್ಯ ಸಮ್ಮೇಳನದಾಗ ಮಾತಾಡಲಿಕ್ಕೆ ಕರಸಬೇಕು ಅಂತ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...