‘ಕುಟ್ಟವಲಕ್ಕಿ’ ಅನ್ನೊ ಈ ನನ್ನ ಪ್ರಹಸನಗಳ ಸಂಗ್ರಹವನ್ನ ಛಂದ ಪುಸ್ತಕದವರು ಅಗದಿ ಛಂದಾಗಿ ಪ್ರಕಟಿಸಿದ್ದಾರೆ , ಅವರಿಗೆ ನಾ ಆಭಾರ ಇದ್ದೇನಿ. ಹಂಗ ನಾ ಒಂದ ಪ್ರಹಸನ ಹಾಳ್ಯಾಗ ಬರದ ಓದಿ ಹೇಳಿದಾಗ, ಅಡ್ಡಿಯಿಲ್ಲ ದೋಸ್ತ ಸ್ವಲ್ಪ ತ್ರಾಸ ತೊಗೊಂಡ ಟೈಪ್ ಮಾಡ ಅಂತ ಹೇಳಿದ ಋಷಿಕೇಶ ಬಹಾದ್ದೂರ ದೇಸಾಯಿ ನನ್ನ ಮೊದಲ ಪುಸ್ತಕ ರೆಡಿ ಆಗಲಿಕ್ಕೆ ಮೂಲ ಕಾರಣ. ಆ ಕುಟ್ಟವಲಕ್ಕಿಯ ಎಲ್ಲ ಪ್ರಹಸನಗಳನ್ನ ನಿಮ್ಮ ಮುಂದ ಇಟ್ಟೇನಿ, ಓದಿ ನಿಮ್ಮ ಅಭಿಪ್ರಾಯ ತಿಳಸರಿ.
ಮೂನ್ನೆ ಶಿರಡಿ ಪ್ರಸಾದ ಕೊಟ್ಟ ಬರೋಣಂತ ನಮ್ಮ ಕಿಲ್ಲೇದಾಗಿನ ದೋಸ್ತ ಜೋಶ್ಯಾನ ಮನಿಗೆ ಹೋಗಿದ್ದೆ, ಹಂಗ ನನಗ ತೀರ್ಥ ಯಾತ್ರಾಕ್ಕ ಹೋಗಿ ಬಂದಾಗ ಒಮ್ಮೆ ಊರ ಮಂದಿಗೆಲ್ಲಾ ಪ್ರಸಾದ ಹಂಚೊ ಚಟಾ. ಅದರಾಗ ನಾ ಶಿರಡಿಗೆ ಹೊಂಟೇನಿ ಅನ್ನೋದ ಜೋಶ್ಯಾಗ ಗೊತ್ತಾಗಿ,...
ಮುಂಜ ಮುಂಜಾನೆ ಎದ್ದ ತಯಾರ ಆಗೋ ಹೊತ್ತಿನಾಗ ನನ್ನ ಮೊಬೈಲ್ ಹೊಯ್ಕೊಳ್ಳಿಕತ್ತ, ಇನ್ನ ನಾ ಮೂಬೈಲ್ ಎತ್ತಿ ಮಾತಾಡಿದರ ನನಗ ಆಫೀಸಿಗೆ ಹೊತ್ತಾಗತದ ಆಂತ ನನ್ನ ಹೆಂಡತಿಗೆ ” ಲೇ ಫೋನ್ ಎತ್ತ, ಅದು ಒದರೋದ ಕೇಳಸಂಗಿಲ್ಲೇನ ” ಅಂತ ನಾ...
ಹೆಸರ ಓದಿ ಕನಫ್ಯೂಸ್ ಆಗಬ್ಯಾಡ್ರಿ, ನಮ್ಮ ಪಾಚಾಪುರ ಡಾಕ್ಟರಗೆ ಈ ಹೆಸರ ಬಂದದ್ದು ಅವನ ‘ಧಂಧೆ’ ಮ್ಯಾಲೇ , ಕಲತದ್ದು ಡಾಕ್ಟರಕಿ ಅಂತ ಹೆಸರ ಹಿಂದ ‘ಡಾ||’ ಅಂತ ಬರದೇನಿ, ಆದರ ಅವನ ಉಪಜೀವನ ನಡೇಯೋದು ‘ರಿಯಲ್ ಎಸ್ಟೇಟ್’ಮ್ಯಾಲೆ ಅಂತ ಅದನ್ನ...
” ರ್ರಿ…ರ್ರಿ….ಏಳ್ರಿ…ಎಷ್ಟ ಒದರಬೇಕರಿ, ಹತ್ತಸಲಾ ಆತು ಎಬ್ಬಸಲಿಕತ್ತ, ರಾತ್ರಿ ಲೇಟಾಗಿ ಬರೋದು ಮುಂಜಾನೆ ಲಗೂನ ಏಳಂಗಿಲ್ಲಾ. ಅದರಾಗ ಸಂಡೆ ಇದ್ದರಂತು ಮುಗದ ಹೋತು” ಅಂತ ನನ್ನ ಹೆಂಡತಿ ಕಿವ್ಯಾಗ ಶಂಖಾ ಊದಿದ್ಲು. ನಾ ಗಾಬರಿ ಆಗಿ ಎದ್ದ ಕೂತೆ. “ಏಳ್ರಿ, ಎದ್ದ...
ಒಂದ ೧೦-೧೫ ದಿವಸ ಆತು ಮಳಿ ಹಿಡದ ಬಿಟ್ಟದ ,ಎಲ್ಲಿನೂ ಹೊರಗ ಹೊಗೋಹಂಗಿಲ್ಲ, ಯಾವಾಗ ಮಳಿ ಬರತದ ಯಾವಗ ಇಲ್ಲಾ ಅಂತ ಗೊತ್ತ ಆಗಂಗಿಲ್ಲ, ಮೊನ್ನೆ ೨-೩ ಸಲ ಮಳ್ಯಾಗ ತೋಯ್ಸಕೊಂಡ ನೆಗಡಿ ಬ್ಯಾರೇ ಆಗಿತ್ತು. ಒಂದ ಸ್ವಲ್ಪ ಮೈಯಾಗ ಬ್ಯಾರೆ...
ಸುಮಾರ ಮೂರ ವರ್ಷದ ಹಿಂದಿನ ಮಾತು, ಶ್ರಾವಣ ಮಾಸದಾಗ ಒಂದ ಸಂಡೆ ನಮ್ಮ ಚಂದಕ್ಕ ಮೌಶಿ ಮನ್ಯಾಗ ಪವಮಾನ ಹೋಮ ಮತ್ತ ಸತ್ಯನಾರಾಯಣ ಪೂಜಾ ಇಟ್ಕೊಂಡಿದ್ದರು. ಇದ ಬ್ರಾಹ್ಮಣರಾಗ ಕಾಮನ್, ಅವರಿಗೆ ಶ್ರಾವಣ-ಭಾದ್ರಪದ ಮಾಸ ಬಂದಾಗ ಗೊತ್ತಾಗೋದು ಅವರ ಬ್ರಾಹ್ಮಣರಂತ, ವರ್ಷದಾಗ...
ಒಂದ ರವಿವಾರ ಭವಾನಿ ನಗರ ರಾಯರ ಮಠಕ್ಕ ನಮ್ಮ ಗೆಳ್ಯಾ ಪಚ್ಚ್ಯಾನ ಮಗನ ಜವಳಕ್ಕ ಹೋಗಿದ್ದೆ. ಹೋಗೊದರಾಗ ಜವಳ ಮುಗದು ರಾಯರ ಕನಕಾಭಿಷೇಕ ಬಾಕಿ ಇತ್ತು. ಕನಕಾಭಿಷೇಕ ಆದ ಮ್ಯಾಲೇನ ಎಲಿ ಹಾಕೋದು ಅಂತ ಧಾಬಳಿ ಉಟಗೊಂಡ ಭಟ್ಟರು ಹೇಳಿದ ಮ್ಯಾಲೇ,...
ಹೆಂತಾ ಛಲೋ ಬೆಚ್ಚಗ ಹೋತಗೊಂಡ ಇವತ್ತ ಅರಾಮ ಎದ್ದರಾತ ಅಂತ ಮಲ್ಕೋಂಡಿದ್ದೆ, ನನ್ನ ಮಗಾ ಬಂದ ” ಡ್ಯಾಡಿ ವೇಕ್ ಅಪ್, ಯಾರೋ ಕಂಬಾರ ಅಂಕಲ್, ನಿಂಗ ಕನ್ನಡದಾಗ ಬೈಲಿಕತ್ತಾರ ” ಅಂತ ಮೊಬೈಲ್ ಮುಸಕಿನಾಗ ತುರುಕಿದಾ. ನಾ ನಿದ್ದಿ ಗಣ್ಣಾಗ...
ಇದ ಏನ್ ಪ್ರಹಸನ ಅಲ್ಲ ಮತ್ತ, ಇದು ನಾ ಈ ಪುಸ್ತಕದಾಗ ಬರದದ್ದ ಪ್ರಹಸನಗಳ ಪ್ರಸವ ವೇದನೆಯ ಅನುಭವಗಳ ಒಂದ ಲೇಖನ. ನನ್ನ ಜೀವನದಾಗ ನಾ ಕನ್ನಡದಾಗ ಬರಿತೇನಿ ಅಂತ ಎಂದೂ ಅನ್ಕೋಂಡಿದ್ದಿಲ್ಲ ಆದರೂ ಇವತ್ತ ಒಂದ ಮಾಟನ ಛಂದನ ಪುಸ್ತಕಾ...
ಬ್ರಾಹ್ಮಣರಾಗ ಕನ್ಯಾ ತೀರಿ ಹೋಗ್ಯಾವ ಅಂದರ ಎಲ್ಲಾ ತೀರಕೊಂಡಾವ ಅಂತಲ್ಲಾ, ಖಾಲಿ ಆಗ್ಯಾವ ಅಂದರ ಮುಗದಾವ ಅಂತ ಅರ್ಥ. ಮುಗದಾವ ಅಂದರ ಎನ ಎಲ್ಲಾ ಪೂರ್ತಿಖಾಲಿನೂ ಆಗಿಲ್ಲಾ ಆದರ ತಳಕ್ಕ ಅಂತೂ ಹತ್ಯಾವ. ಆ ಉಳದ ತಳದಾಗಿನ ಕನ್ಯಾಗಳಿಗೆ ಈಗ ಎಲ್ಲಿಲ್ಲದ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...