ಈಗ ಒಂದ ಆರ ತಿಂಗಳ ಹಿಂದ ಒಂದ ಸುದ್ದಿ ಬಂದಿತ್ತ. ಒಬ್ಬೊಂವಾ ಮುಂದ ತನ್ನ ಅತ್ತಿ ಆಗೋಕಿ ಕೈಯಾಗ ಮೋಬೈಲ್ ಕೊಟ್ಟ ’ಈಗ ನಾ ನಿನ್ನ ಮಗಳಿಗೆ ಪ್ರಪೋಸ ಮಾಡ್ತೇನಿ ಅದನ್ನ ನೀ ವೀಡಿಯೊ ಮಾಡ’ ಅಂತ ಹೇಳಿದ್ನಂತ. ಇನ್ನ ಮುಂದ ಆಗೊ ಅಳಿಯಾ ಹೇಳಲಿಕತ್ತಾನ ಇಲ್ಲಾ ಅನ್ನಲಿಕ್ಕೆ ಬರಂಗಿಲ್ಲಾ ಅಂತ ಪಾಪ ಅಕಿ ಮೋಬೈಲನಾಗ ವೀಡಿಯೊ ಮಾಡಿದ್ಲು. ಅಂವಾ ಅಕಿ ಮಗಳಿಗೆ ಪ್ರಪೋಸ್ ಮಾಡಿದಾ. ಮಗಳ accept ಮಾಡಿದ್ಲು. ಆ ಅಳಿಯಾ ಆಗೊಂವಾ ಅಗದಿ excite ಆಗಿ ಅವರತ್ತಿ ಮಾಡಿದ್ದ ವೀಡಿಯೊ ನೋಡಿದರ ಅಕಿ ಅಂವಾ propose ಮಾಡೋ ವೀಡಿಯೊ ಸೆಲ್ಫಿ ಮೋಡನಾಗ ರಿಕಾರ್ಡಿಂಗ ಮಾಡಿದ್ಲು. ಅದರ ಒಳಗ ಅಕಿದ ಗಾಬರಿ ಆಗಿದ್ದ reaction ಇತ್ತ ಹೊರತು ಅಕಿ ಮಗಳ excite ಆಗಿದ್ದ reaction ಇರ್ಲಿಲ್ಲಾ. ಆದರು ಅಳಿಯಾ ಆಗೊಂವ ನನ್ನಂಗ ಭಾಳ ಜನರಸ್ ಇದ್ದಾ, ಹಿಂಗಾಗಿ ಆಗಿದ್ದ ಆಗಲಿ ಹಿಂಗಾದರೂ ನನ್ನ ಪ್ರಪೋಸಲ್ ಮೆಮೊರೇಬಲ್ ಆತಲಾ ಅಂತ ಸುಮ್ಮನಾದ. ಪಾಪ ಆ ಅತ್ತಿ ಆಗೋಕಿ I am not good at photography ಅಂತ regret ಮಾಡಿದ್ಲು. ಇದ ನಡದಿದ್ದ new mexico ಒಳಗ. ಹಂಗ ಮುಂದ ಒಂದ ಸ್ವಲ್ಪ ದಿವಸಕ್ಕ ಆ ಪ್ರಪೋಸ ಮಾಡಿದಂವನೂ ನಮ್ಮಂಗ ಪ್ರಪೋಸ ಮಾಡಿದ್ದಕ್ಕ regret ಮಾಡಿದ್ದರು ಮಾಡಿರ್ತಾನ ಆ ಮಾತ ಬ್ಯಾರೆ. ಅಲ್ಲಾ ಅದ ಅಮೇರಿಕಾ, ಅಲ್ಲೇ ಏನ ಬೇಕಾರ ಆಗಬಹುದು. ನಮ್ಮಂಗ ಪ್ರಪೋಸ ಮಾಡಿದೋಕಿಗೆ ಮಾಡ್ಕೊಬೇಕ ಅಂತನೂ ಏನ ಇರಂಗಿಲ್ಲಾ.
ಹಂಗ ಇತ್ತೀಚಿಗೆ ಎಲ್ಲಾರಿಗೂ selfie ಹುಚ್ಚ ಜಾಸ್ತಿ ಆಗೇದ, ಎಲ್ಲೇ ಬೇಕಲ್ಲೇ ಸೆಲ್ಫಿ ಹೊಡ್ಕೋಳೊ ಚಟಾ. ಸಣ್ಣ ಹುಡುಗರಿಂದ ಹಿಡದ ವಯಸ್ಸಾದವರ ತನಕಾ ಎಲ್ಲಾರೂ ’ಒಂದ ಸೆಲ್ಫಿ please’ ಅಂತಾರ. ನನ್ನ ಪ್ರಕಾರ we should live the moment not the memory ಅಂದರ ಈ ಕ್ಷಣವನ್ನ ಅನುಭವಸಬೇಕ, ಆನಂದ ಪಡಬೇಕ ಹೊರತು ಆ ಕ್ಷಣದಾಗ photo ಹೊಡ್ಕೊಂಡ ಆಮ್ಯಾಲೆ ಅದನ್ನ ನೋಡಿ ಮೆಮರಿ enjoy ಮಾಡೋದಲ್ಲಾ.
ಜನಾ ಹೆಂತಿಂತಾ ಜಗಾದಾಗ ಸೆಲ್ಫಿ ತೊಗೊತಾರ, ಹೆಂತಿಂತಾವರ ಜೊತಿ ತೊಗೊತಾರ..ಅಯ್ಯಯ್ಯ ಅದರಾಗ ಏನೂ ಲಾಜಿಕ್ ಇಲ್ಲ ಬಿಡ್ರಿ. ನಮ್ಮ ದೋಸ್ತ ಸದು ಅಂತು ಒಬ್ಬಂವ ಇದ್ದಾನ. ಅವಂಗ ನಾವಂತು selfie sadu ಅಂತ ಕರಿತೇವಿ. ಅಂವಾ ಏನಿಲ್ಲಾ ಅಂದರು ದಿವಸಕ್ಕ ಒಂದ ಇಪ್ಪತ್ತ-ಇಪ್ಪತ್ತೈದ ಸೆಲ್ಫಿ ಹೋಡ್ಕೊತಾನ. ಸಾವಜಿ ಖಾನಾವಳಿ ಒಳಗ ಸಿರವಾ ದಿಂದ ಹಿಡದ ಡೆನಿಸನ್ಸ್ ಒಳಗಿನ ಚಿಕನ್ ಡ್ರಮಸ್ಟಿಕ್ ತನಕ ಏನ ತಿಂದರು ಸೆಲ್ಫಿ, ಯಾರ ಭೆಟ್ಟಿ ಆದರೂ ಸೆಲ್ಫಿ..ಅಂವಾ I am documenting my life thru selfie ಅಂತ ಅದಕ್ಕ explanation ಬ್ಯಾರೆ ಕೊಡ್ತಾನ. ಹೋಗ್ಲಿ ಬಿಡ ಅವನ ಮೋಬೈಲ ಅಂವಾ ಏನರ ಹಾಳ ಗುಂಡಿ ಬೀಳಲಿ ಅಂತ ಬಿಟ್ಟರ ಮಗಾ ಆ ಸೆಲ್ಫಿ ಎಲ್ಲಾ ಫೇಸಬುಕ್ಕಿನಾಗ ಅಪಲೋಡ್ ಮಾಡಿ ಮ್ಯಾಲೆ ಅದರಾಗ ಇದ್ದವರನ ಟ್ಯಾಗ ಮಾಡ್ತಾನ.
ಮೊನ್ನೆ ಗುರವಾರ ನಾ ಮಠಾ ಒಪನ್ ಆಗೇದ ಅಂತ ಮಠಕ್ಕ ಹೋಗಿ ಬರ್ತೇನಿ ಅಂತ ಹೆಂಡ್ತಿಗೆ ಹೇಳಿ ಹೋಗಿದ್ದೆ, ಅಲ್ಲಾ ಖರೇನ ಮಠಕ್ಕ ಹೋಗಿದ್ದೆ. ವಾಪಸ ಬರಬೇಕಾರ ಈ ಸದ್ಯಾ ಸಿಕ್ಕಾ. ನಾ ಒಲ್ಲೆ ಅಂದರೂ ’ಲೇ ICECUBE ಒಪನ್ ಆಗೇದ ನಡಿ’ ಅಂತ ಕರಕೊಂಡ ಹೋದಾ. ಒಂದ ಹೆಂತಾದೋ ಮಾರ್ಟೀನಿ ಅಂತ ಹೇಳಿ ಅದರ ಜೊತಿ ನನ್ನೂ ಮಿಕ್ಸ್ ಮಾಡಿ ಒಂದ ಸೆಲ್ಫಿ ತೊಗೊಂಡಾ. ನಾ ಭಾಳ ತಲಿಗೆಡಸಿಕೊಂಡಿದ್ದಿಲ್ಲಾ.
ಮರದಿವಸ ಮುಂಜಾನೆ ನಾ ಏಳೋದ ತಡಾ
’ನಿನ್ನೆ ಮಠಕ್ಕ ಹೋಗಿದ್ದರೋ ಇಲ್ಲಾ ಮತ್ತೇಲ್ಲರ ಹೋಗಿದ್ದರೊ’ ಅಂತ ನನ್ನ ಹೆಂಡತಿ ಕೇಳೆ ಬಿಟ್ಲು.
’ಏ..ಮಠಕ್ಕ ಹೋಗಿದ್ದೆ…ಬೇಕಾರ ರಾಮಾಚಾರ್ಯರನ ಕೇಳ’ ಅಂತ ನಾ ಅಂದರ
’ಹಂಗರ ಇದೇನ’ ಅಂತ ಸೀದಾ ನನ್ನ ಹೆಂಡ್ತಿ ಫೇಸಬುಕ್ ಒಳಗಿನ ಅವನ ಸ್ಟೇಟಸ್ ಮಾರಿಗೆ ಹಿಡದ್ಲು. ಈ ಮಗಾ ನಡ ರಾತ್ರ್ಯಾಗ ಆ ICECUBE ಫೋಟೊ ಫೇಸಬುಕ್ಕಿಗೆ ಅಪಲೋಡ ಮಾಡಿ ನಂಗ ಟ್ಯಾಗ ಮಾಡಿದ್ದಾ, ಅವಂಗ ಲೈಕ ಬಂದಾಗೊಮ್ಮೆ ನೋಟಿಫಿಕೇಶನ್ ನಂಗೂ ಬರ್ತಿದ್ವು. ಹಂಗ ನಂದ ಮನ್ಯಾಗ ನೋಟಿಫಿಕೇಶನ್ ಮ್ಯೂಟ್ ಇದ್ದರು ನನ್ನ ಹೆಂಡ್ತಿಗೆ ಬರ್ತಿದ್ವು… ಯಾಕಂದರ ನನ್ನ ಫೇಸಬುಕ ಸೆಟ್ಟಿಂಗ್ ನಮ್ಮಕಿ ಹಂಗ ಮಾಡ್ಯಾಳ. ಹಿಂಗಾಗಿ ಆ ಸುಡಗಾಡ ನೋಟಿಫಿಕೇಶನ ನೋಡಿ ಅಕಿಗೆ ಡೌಟ ಬಂದಿತ್ತ.
ಮುಂದ ನಾ ಅಕಿಗೆ ಎಷ್ಟ ತಿಳಿಸಿ ‘ನಾ ಸದ್ಯಾನ ಜೊತಿ ಹೋಗಿದ್ದ ಖರೇ ಆದರ ಬರೇ sweet & salt lime juice ಕುಡದ ಬಂದೇನಿ’ ಅಂತ ಹೇಳಿದರು ಅಕಿ ಏನ ನಂಬಲಿಲ್ಲಾ. ಅಲ್ಲಾ ಈ ವಿಷಯದಾಗ ನೀವು ನನ್ನ ನಂಬಂಗಿಲ್ಲ ಬಿಡ್ರಿ…ಆದರ ನಾ ಅವತ್ತ ಖರೇನ chilled ಪಾನಕಾ ಕುಡದ ಬಂದಿದ್ದೆ.
ಹಿಂಗ ಇಂವಾ ಸೆಲ್ಫಿ ಹೊಡ್ಕೊಂಡ ಮಂದಿಗೂ ಸಿಗಿಸಿ ಇಡ್ತಾನ.
ಹಂತಾವನ ಜೊತಿ ಸೇರಿ ಮೊನ್ನೆ ಕಟಿಂಗ ಅಂಗಡಿಗೆ ಮೂರ ನಾಲ್ಕ ತಿಂಗಳಿಂದ ಲಾಕಡೌನ ಒಳಗ ನೀರು ಗೊಬ್ಬರ ಹಾಕಿ ಬೆಳಸಿದ್ದ ದಾಡಿ ಚುಚ್ಚತಾವ ಅಂತ ತಗಸಲಿಕ್ಕೆ ಹೋದಾಗ ನಾನು ಒಂದ ನಾಲ್ಕ ಸೆಲ್ಫಿ ತೊಗೊಂಡ ಫೇಸಬುಕ್ಕಿನಾಗ ಹಾಕಿದ್ದೆ. ದಾಡಿ ನೋಡಿ ಜನಾ ನನಗ ಅಗದಿ intellectual ಕಂಡಂಗ ಕಾಣ್ತಿಲೇ ಅಂತಿದ್ದರ ತಡಿ ಅಂತ ಮೊದ್ಲ ದಾಡಿ ಇರತ ಒಂದ selfie ತೊಗೊಂಡೆ…ಮುಂದ ದಾಡಿಯಿಂದ ಫ್ರೆಂಚ್ ಕಟ್ ಮಾಡಿಸಿಸಿ ಮತ್ತೊಂದ ಸೆಲ್ಫಿ ತೊಗೊಂಡೆ, ನೆಕ್ಸ್ಟ ಬರೇ ಮೀಸಿ ಮ್ಯಾಲೆ ಒಂದ ತೊಗೊಂಡೆ, ಲಾಸ್ಟಿಗೆ ಮೀಸಿ ತಗಿಸಿ original face ಮ್ಯಾಲೆ ಮತ್ತೊಂದ ಸೆಲ್ಫಿ ತೊಗೊಂಡ
’ಏಷ್ಟಾತ’ ಅಂತ ಕೇಳಿದರ ಅಂಗಡಿಯಂವಾ
’ಎರಡನೂರ ನಲವತ್ತ’ ಅಂದಾ..ಅಷ್ಟ್ಯಾಕ ಅಂತ ಕೇಳಿದರ
‘ದಾಡಿ ತಗದದ್ದಕ್ಕ ಅರವತ್ತ, ಫ್ರೇಂಚ್ ಸ್ಟೈಲಿಗೆ ಅರವತ್ತ, ಬರೇ ಮೀಸಿಗೆ ಅರವತ್ತ, ಲಾಸ್ಟಿಗೆ ಮೀಸಿ ತಗದದ್ದಕ್ಕ ಅರವತ್ತ…ಒಂದೊಂದ selfie stageಗೆ ಅರವತ್ತ’ ಅಂದಾ.
ಮನಿಗೆ ಬಂದ ನನ್ನ ಹೆಂಡ್ತಿಗೆ ಅಷ್ಟು ಸೆಲ್ಫಿ ತೊರಿಸಿದರ ಅಕಿ
“ಮಂದಿ ನಿಮಗ multifaceted personality ಅಂತ ಅಂದಾಗ ನಂಗ ಗೊತ್ತಾಗಿರಲಿಲ್ಲಾ…ಈಗ ಗೊತ್ತಾತ ನಿಮಗ multiface personality disorder ಅದ ” ಅಂತ ಅಂದ್ಲು. ಏನ್ಮಾಡ್ತಿರಿ?
ಹಂಗ ಸೆಲ್ಫಿ ತೊಗೊಳೊರ ಜಗತ್ತಿನಾಗ ರಗಡ ಮಂದಿ ಇದ್ದಾರ. ಒಂದಿಷ್ಟಂತೂ ಇಷ್ಟ ವಿಚಿತ್ರ ವಿಚಿತ್ರ ಕಥಿ ಅವ ಅಂದರ
ಒಬ್ಬೋಕಿ ದಿವಸಕ್ಕ ಒಂದ ನೂರ-ನೂರಾ ಐವತ್ತ ಸೆಲ್ಫಿ ಹೊಡ್ಕೊಂಡ ರಾತ್ರಿ ಐದ-ಆರ ತಾಸ ಕೂತ ಅವನ್ನ ಎಡಿಟ್ ಮಾಡ್ತಾಳ ಅಂತ….ಅಕಿನ್ನ ಮುಂದ ಹಾಸ್ಪಿಟಲಗೆ ಅಡ್ಮಿಟ್ ಮಾಡಿದರು ಆ ಮಾತ ಬ್ಯಾರೆ. ಒಬ್ಬೋಕಿ ಸೆಲ್ಫಿ ಸಂಬಂಧ ಹಾರ್ಮೋನ್ ಇಂಜೆಕ್ಷನ್ ತೊಗೊಂಡ ದಪ್ಪಾ ಆಗಲಿಕತ್ತಾಳಂತ. ಅಕಿ ಅಂತೂ To me taking a selfie is the same as taking a breath of oxygen ಅಂತ ಸ್ಟೇಟಮೆಂಟ್ ಕೊಟ್ಟಾಳ.
ಅಲ್ಲಾ ಹಂಗ ನನ್ನ ಹೆಂಡ್ತಿ ಅಪರೂಪಕ್ಕೊಮ್ಮೆ ಸೆಲ್ಫಿ ತೊಗೊಬೇಕಾರ ’ನೀ ಒಂದs ಮೋಬೈಲ ಸೆಲ್ಫಿ ಒಳಗ ಬರಂಗಿಲ್ಲಾ, ಎರೆಡ ಮೋಬೈಲ ಹಿಡ್ಕೊ ಇಲ್ಲಾ ಒಂದ 12 inch tab ತೊಗೊ ಅಂತ’ ಕಾಡಸ್ತಿರ್ತೇನಿ. ಅಕಿ ಎಲ್ಲರ ಇದನ್ನ ಓದಿದರ ಸೆಲ್ಫಿ ಸಂಬಂಧ Degrowth ಹಾರ್ಮೋನ್ ಕೊಡಸರಿ ಅಂತ ಗಂಟ ಬಿದ್ದರೂ ಬೀಳಬಹುದು.
ಇವೇಲ್ಲಾ ಬ್ಯಾರೆ ದೇಶದ್ದ ಕೇಸಿಸ ಇದ್ದರೂ ನಮ್ಮ ದೇಶದಾಗ ಸೆಲ್ಫಿ ಹಾವಳಿ ಜಾಸ್ತಿ ಆಗಿ ನಾವೇಲ್ಲಾ ಅಡಿಕ್ಟ ಆಗಿದ್ದಂತೂ ಖರೆ.
ಹಂಗ ಮುಂದಿನ ವಾರ ಅಂದರ june 21ಕ್ಕ ಅಮೇರಿಕಾದವರ national selfie day ಮಾಡ್ತಾರ. ನಮ್ಮ ದೋಸ್ತ ಸದುಗ ನೀನೂ ಸೆಲೆಬ್ರೇಟ್ ಮಾಡ್ಲೆ ಅಂತ ಹೇಳಿದರ ಅಂವಾ ಉಲ್ಟಾ ನಂಗ
’ಲೇ…ಈ ಸೆಲ್ಫಿ ಕಂಡ ಹಿಡದವರ ಯಾರ ನೋಡಲೇ…ಅವರ ಜೊತಿ ಒಂದ ಸೆಲ್ಫಿ ತೊಗೊಬೇಕ’ ಅಂತ ಅಂದಾ.
ಹಂಗ ಈ ಸೆಲ್ಫಿ ಇತ್ತಿಚಿಗೆ ಫೇಮಸ್ ಆಗಿದ್ದರೂ Robert Cornelius ಅನ್ನೊ ಫೋಟೊಗ್ರಾಫರ 1839ರಾಗ ಸೆಲ್ಫಿ ತೊಗೊಂಡಿದ್ದಾ and that is first selfie of the world. 2013ರ ತನಕ selfie ಅನ್ನೋ ಶಬ್ದ Oxford dictionary ಒಳಗೂ ಇರಲಿಲ್ಲಾ.
ನೋಡ್ರಿ…ಇನ್ನ ಇಷ್ಟೇಲ್ಲಾ ಓದಿದ ಮ್ಯಾಲೆ ನಾ ಎಲ್ಲರ ದುರ್ಗದಬೈಲಾಗ ಸಿಕ್ಕರ
’ಏ, ನೀವು ಭಾರಿ ಬರಿತಿರಿ, ನಿಮ್ಮ ಜೋತಿ ಒಂದ ಸೆಲ್ಫಿ ತೊಗೊತೇನಿ’ ಅನಬ್ಯಾಡ್ರಿ ಮತ್ತ.
A selfie a day keeps your friends away ಅನ್ನೊದನ್ನ ಮರಿಬ್ಯಾಡ್ರಿ.