ಇದ ಒಂದ ಇಪ್ಪತ್ತೈದ ವರ್ಷದ ಹಿಂದಿನ ಮಾತ ಇರಬೇಕ ಬನಶಂಕರಿ ನವರಾತ್ರಿ ಬಂದಿತ್ತ, ನಮ್ಮ ಕುಲದೇವರ ಬನಶಂಕರಿ. ನಮ್ಮ ಮನ್ಯಾಗ ಬನಶಂಕರಿ ನವರಾತ್ರಿ ಅಗದಿ ಪದ್ದತ ಸೀರ ನಮ್ಮ ಶಿರ್ಶಿ ಕಾಕಾ ವರ್ಷಾ ಮಾಡ್ತಿದ್ದಾ. ಇನ್ನ ನಾವ ಕಡಿ ಮೂರ ದಿವಸದೊಳಗ...
ಇದ ಅಕ್ಟೋಬರ್ ತಿಂಗಳದ್ದ ಸುದ್ದಿ ಇರಬೇಕ, ನಮ್ಮ ಧಾರವಾಡ ಶಶಿ ಮೌಶಿ ಮನ್ಯಾಗ ಒಂದ ಪೂಜಾ ಇತ್ತ ಅಂತ ನಾವ ದಂಪತ್ ಹೋಗಿದ್ವಿ. ಅಲ್ಲೇ ನಮ್ಮ ಮೌಶಿ ನಿಗೇಣ್ಣಿನೂ ಬಂದಿದ್ದರು.ಹಂಗ ನಮಗ ಈ ಮೌಶಿನ ದೂರದಿಂದ ಮೌಶಿ ಆಗಬೇಕ, ಇನ್ನ ಹಂತಾದರಾಗ...
ಇದ ಒಂದ ಎರಡ ತಿಂಗಳ ಹಿಂದಿನ ಮಾತ ಇರಬೇಕ…ನನ್ನ ಮಗಳ ಭರತನಾಟ್ಯದ್ದ ’ ರಂಗ ಪ್ರವೇಶ’ ದ ಕಾರ್ಯ ಕ್ರಮ ಫಿಕ್ಸ್ ಆತ…..ಇನ್ನಅಕಿ ಗುರುಗಳು ಅಕಿಗೆ ಒಂದ ’ಏಕ ವ್ಯಕ್ತಿ…ರೂಪಕ ಮಾಡಬೇಕು..ಅಕಿ ಅದನ್ನ ನಾಟ್ಯ ರೂಪದೊಳಗ ಪ್ರಸ್ತುತ ಪಡಸಬೇಕು…ನಿಮ್ಮ ತಲ್ಯಾಗ ಯಾವದರ...
ಮೊನ್ನೆ ಆಷಾಡ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿಗೆ ನಮ್ಮಪ್ಪ ಹೋಗಿ ಬರೋಬ್ಬರಿ ಏಳ ವರ್ಷ ಆತ. ಏ ಅಡ್ಡಿಯಿಲ್ಲಾ ಮಗಾ ಅಗದಿ ತಿಥಿ, ಪಕ್ಷ, ಮಾಸ ಎಲ್ಲಾಇನ್ನೂ ನೆನಪ ಇಟ್ಟಾನ ಅಂತ ಅನಬ್ಯಾಡ್ರಿ ಹಂಗ ನನಗ ಒಂದ ಹನಿನೈದ ದಿವಸದಿಂದ...
ಪ್ರತಿ ಮಂಗಳವಾರ ನಾ ಗಣಪತಿ ಗುಡಿಗೆ ಹೋಗ್ತೇನಿ…ಅಲಾಲಾಲಾ…ಯಾವಾಗಿಂದ ಆಸ್ತಿಕ ಆದಿ ಅನಬ್ಯಾಡ್ರಿ…ಹಂಗ ನಾ ಗಣಪತಿ ಗುಡಿಗೆ ಹೋಗ್ಲಿಕತ್ತ ಮೂವತ್ತ ವರ್ಷ ಆತ….ನಾ ಸುಳ್ಳ ಹೇಳಿದರ ಬೇಕಾರ ಗಣಪತಿಗೆ ಕೇಳ್ರಿ….ಈಗ ದಿವಸಾ ನನಗ ಮಗಳನ ಕಾಲೇಜಿಗೆ ಬಿಟ್ಟ ನಾ ಆಫೀಸಗೆ ಹೋಗೊದ ಇರ್ತದ,...
ಈಗ ಲಾಸ್ಟ ಒಂದ ದಿಡ ತಿಂಗಳದೊಳಗ ನಮಗ 13 ಮುಂಜವಿ, 6 ಲಗ್ನ ಮತ್ತ 5 ಮನಿ ಒಪನಿಂಗದ್ದ ಆಮಂತ್ರಣ ಬಂದಿದ್ವು..ಒಂದ ತಿಂಗಳದ್ದ ಅರ್ಧಾ ದುಡದದ್ದ ಪಗಾರ ಈ ಸರತೆ ಉಡಗೊರೆ ಕೊಡ್ಲಿಕ್ಕೆ ಮತ್ತ್ತ ಕಾರ್ ಪೆಟ್ರೋಲ್ ಗೆ ಹೋಗೇದ….ಇನ್ನ ಅಷ್ಟ...
ನಾ ರೆಡಿ ಆಗಿ ಇನ್ನೇನ ಆಫಿಸಗೆ ಹೋಗಬೇಕು ಅಂತ ತಿಂಡಿ ತಿನ್ನಲಿಕ್ಕೆ ಕೂರ್ತಿರ್ತೇನಿ ಹೊರಗ ಕಸದ್ದ ಗಾಡಿದ ಹಾರ್ನ್ ಆಗ್ತದ. ನನ್ನ ಹೆಂಡ್ತಿಗೆ ಕಸದ್ದ ಗಾಡಿ ಹಾರ್ನ್ ಕೇಳ್ಸೋದ ತಡಾ’ಅತ್ಯಾ…ಕಸದ್ದ ಗಾಡಿ ಬಂತ’ ಅಂತ ಒದರ್ತಾಳ. ಮುಂದ ಅತ್ತಿ-ಸೊಸಿ ’ಕಸದ್ದ ಗಾಡಿ...
ಇದ ಹೋದ ವರ್ಷ ಜೂನದಾಗಿನ ಸುದ್ದಿ ಇರಬೇಕ. ನನ್ನ ಮಗಳ ಮ್ಯಾಟ್ರಿಕ್ ಪಾಸ್ ಆದ್ಲಂತ ಕಾಲೇಜ ಸೇರಸಿದ್ದೆ.ನನ್ನ ಮಗಳ ಕಾಲೇಜಿಗೆ ಹೊಂಟಾಗಿಂದ ಅಕಿನ್ನ ಬಿಟ್ಟ ಬರೋದು, ಕರಕೊಂಡ ಬರೋದ ನಂದ ಜವಾಬ್ದಾರಿ ಆಗಿತ್ತ. ಅದರಾಗ ನಮ್ಮಕಿಂತೂ’ನಾ ಒಂಬತ್ತ ತಿಂಗಳ ಹೊತ್ತು- ಹೆತ್ತು...
ಮೊನ್ನೆ ಮುಂಜಾನೆ ಏಳೋ ಪುರಸತ್ತ ಇಲ್ಲದ ಸೀನ್ಯಾನ ಫೊನ ಬಂತ. ನಾ ಫೋನ ಎತ್ತೋದ ತಡಾ ಅಗದಿ ಸಣ್ಣ ಆವಾಜಲೇ’ಲೇ ಹಿಂದಿನ ದಿವಸನೂ ತೊಗೊಬಾರದು ಮತ್ತ ಅವತ್ತು ತೊಗೊಬಾರದೇನ?’ ಅಂತ ಕೇಳಿದಾ. ಮುಂಜ ಮುಂಜಾನೆ ಇದೆಂತಾ ಕ್ವೆಶನ್ ಅಂತ ನಂಗ ಒಂದೂ...
“ರ್ರಿ…ಮುಂಜ ಮುಂಜಾನೆ ಏನ ಲ್ಯಾಪಟಾಪ್ ಹಿಡ್ಕೊಂಡ ಕೂತಿರಿ…. ಒಲಿ ಮ್ಯಾಲೆ ಹಾಲ ಇಟ್ಟೆನಿ ನೋಡ ಅಂತ ಹೇಳಿದ್ದಿಲ್ಲಾ” ಅಂತ ಅಂಗಳಾ ಕಸಾ ಹುಡಗಲಿಕತ್ತಿದ್ದ ನನ್ನ ಹೆಂಡ್ತಿ ಓಣಿ ಮಂದಿಗೆ ಕೇಳೊ ಹಂಗ ಒದರಿದ್ಲ.“ಲೇ….ಒಂದ ಸ್ವಲ್ಪ ತಡ್ಕೊ…..ಮುಂದಿನ ವಾರ ಸಂಜುನ ಅಪ್ಪಾ-ಅಮ್ಮಂದ 50...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...