ಈಗ ಒಂದ ವಾರದ ಹಿಂದ ಲೇಡಿ ಗೈನಾಕಲಜಿಸ್ಟ ಕಡೆ ಹೋಗಿದ್ದೆ…ಅಲ್ಲಾ, ಹೆಂಡ್ತಿ ಕರಕೊಂಡ ಹೋಗಿದ್ದೆ. ಯಾಕ ಅನ್ನೋದ ಇಂಪಾರ್ಟೆಂಟ್ ಅಲ್ಲಾ..ಸುಳ್ಳ congratulations ಅಂತ ಕಮೆಂಟ್ ಮಾಡ್ಲಿಕ್ಕೆ ಹೋಗಬ್ಯಾಡ್ರಿ…ನಾ ಅಲ್ಲೆ ಏನಿಲ್ಲಾ ಅಂದರೂ ಒಂದ ಮೂರ-ನಾಲ್ಕ ತಾಸ ಇದ್ದೆ.. ಇನ್ನ ಕೆಲಸಿಲ್ಲಾ ಬೊಗಸಿಲ್ಲಾ...
ನಿನ್ನೆ ರಾತ್ರಿ ಒಮ್ಮಿಂದೊಮ್ಮಿಲೇ…’ರ್ರಿ…ನನ್ನ ಕಡೆ ಒಂದು ಬಿಳಿ ಸೀರಿನ ಇಲ್ಲಾ…ನಾಳೆಗೆ ಬಿಳಿ ಸೀರಿ ಬೇಕಾಗಿತ್ತ…’ ಅಂತ ನಮ್ಮಕಿ ಶುರು ಮಾಡಿದ್ಲು. ನಾ ಏನ ಅಕಿ ಕೇಳಿದಾಗೊಮ್ಮೆ ಕೇಳಿದ್ದ ಕಲರ್ ಸೀರಿ ಕೊಡ್ಸೋರ ಗತೆ’ಮೊನ್ನೇ ಹೇಳ್ಬಿಕಿತ್ತಿಲ್ಲ, ಹೆಂಗಿದ್ದರೂ ಬರ್ಥಡೇ ಇತ್ತ ಅವತ್ತ ಕೊಡಸ್ತಿದ್ದೆ’...
’ಏ..ಇವತ್ತಿಗೆ ನೀ ಹುಟ್ಟಿ ನಲ್ವತ್ತೈದ ವರ್ಷ ಆತ ನಿಂಗ ಹೆಂಗ ಅನಸ್ತದ….’ ಅಂತ ನಮ್ಮಕಿನ ನಾ ಕೇಳಿದರ ಅಕಿ’ಹುಟ್ಟಿದ್ದಕ್ಕೋ ಇಲ್ಲಾ ನಿಮ್ಮನ್ನ ಕಟಗೊಂಡಿದ್ದಕ್ಕೋ…’ ಅಂತ ಕೇಳಿದ್ಲು…’ಲೇ..ಇವತ್ತ ಹುಟ್ಟಿದ್ದರ ಬಗ್ಗೆ ಹೇಳ….anniversary ಇದ್ದಾಗ ನನ್ನ ಕಟಗೊಂಡಿದ್ದರ ಬಗ್ಗೆ ಹೇಳೊ ಅಂತಿ….’ ಅಂತ ನಾ...
ಇವತ್ತಿಗೆ ಪಕ್ಷ ಮಾಸ ಮುಗದಂಗ ಆತ….ಮೊನ್ನೆ ದಶಮಿ ತಿಥಿ ದಿವಸ ನಮ್ಮಪ್ಪನ ಪಕ್ಷ ಮಾಡ್ಲಿಕ್ಕೆ ಹೋದಾಗ ನಡೆದ ಒಂದಿಷ್ಟ ಪ್ರಸಂಗ ಪ್ರಹಸನ ರೂಪದಾಗ…ಗುಡಿ ಒಳಗ ನಮ್ಮಪ್ಪನ ಪಕ್ಷದ ಜೊತಿ ಇನ್ನ ಎಂಟ ಮಂದಿ ಪಕ್ಷ ಇತ್ತ…ಪಕ್ಷ ಮಾಡಸಲಿಕ್ಕೆ ಬಂದ ರಾಮಭಟ್ಟರ ಅಗದಿ...
ಆಷಾಡ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ ದಿವಸ ನಮ್ಮಪ್ಪನ ಶ್ರಾದ್ಧ. ನಮ್ಮವ್ವ ಶ್ರಾದ್ಧ ಇನ್ನೂ ಒಂದ ತಿಂಗಳ ಇರತ ಮಠಕ್ಕ ಹೋಗಿ ಮಾಡಿ ಬುಕ್ ಮಾಡ ಅಂತ ಗಂಟ ಬಿದ್ದಿದ್ಲು. ನಾ ಮಳೆ ಇತ್ತ ಅಂತ ಆಚಾರ್ಯರಿಗೆ ಫೋನ ಮಾಡಿ...
ಒಂದ ತಿಂಗಳ ಹಿಂದ ನಮ್ಮ ಸುಮ್ಯಾಂದ ಐರ್ಲೇಂಡನಿಂದ ಫೋನ್ ಬಂದಿತ್ತ..ಹಂಗ ಮಾತಾಡ್ತ-ಮಾತಾಡ್ತ ಮುಂದಿನ ವಾರ ಜೆಂಡರ್ ರೀವಿಲ್ ಪಾರ್ಟಿ ಇಟಗೊಂಡೇನಿ ಅಂದಾ…ನಂಗ ಒಮ್ಮಿಕ್ಕಲೇ ’ ಜೆಂಡರ್ ರೀವೀಲ್ ಪಾರ್ಟಿ ’ ಅಂದರ ಏನಂತ ತಿಳಿಲಿಲ್ಲಾ. ನಾ’ಯಾರ ಜೆಂಡರ್ ರೀವೀಲ್’ ಅಂತ ಕೇಳಿದೆ’ನನ್ನ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...