ಇದು ನನ್ನ ಇತರೆ ಪ್ರಬಂಧಗಳ ಸಂಗ್ರಹ, ಅವಧಿ, ಅಪರಂಜಿ ಹಾಗೂ ಕನ್ನಡ ಓನ್ ಇಂಡಿಯಾದಲ್ಲಿ ಬರೆದ ಲೇಖನಗಳು…
ನಿನ್ನೆ ಮುಂಜ-ಮುಂಜಾನೆ ಏಳೋ ಪುರಸತ್ತ ಇಲ್ಲದ ಪೂಣಾದಿಂದ ನಮ್ಮ ಮೌಶಿದ ಫೊನ, ನಾ ಫೋನ ಎತ್ತಿದೆ ಆದರ ಅಕಿ ನನ್ನ ಜೊತಿ ಭಾಳ ಮಾತಾಡಲಾರದ ಸೀದಾ “ನಿಮ್ಮ ಅವ್ವಗ ಫೊನ ಕೊಡ” ಅಂತ ಹೇಳಿದ್ಲು. ನಂಗ ಒಂದ ಸಲಾ ಅಕಿ ಹಂಗ...
ಇವತ್ತಿಗೆ ಕರೆಕ್ಟ ನಮ್ಮ ಮಾಮಾನ ಮಗಾ ವಿನ್ಯಾಂದ ಮದುವಿ ಆಗಿ ಒಂಬತ್ತ ತಿಂಗಳ ಹದಿನೆಂಟ ದಿವಸ ಆತ, ಹಂಗ ಇವತ್ತ ಅವನ ಮಗನ ಹೆಸರ ಇಡೊ ಕಾರ್ಯಕ್ರಮನೂ ಮುಗದಂಗ ಆತ ಅನ್ನರಿ. ಅಂವಾ ನಾಳೆನ ತನ್ನ ಹೆಂಡತಿನ್ನ ಕಟಗೊಂಡ ಹೆತ್ತಿ ಬಣ...
“ರ್ರಿ, ನಂಗ ಖರೇನ ಸಾಕಾಗಿ ಬಿಟ್ಟದ ನಿಮ್ಮ ಮಗಳ ಸಂಬಂಧ, ಒಂದ ತಾಸ ಆತ ತೊಡಿ ಮ್ಯಾಲೆ ಹಾಕಿ ಬಡಿಲಿಕತ್ತ, ಇನ್ನು ಮಲ್ಕೊಳಿಕ್ಕೆ ತಯಾರಿಲ್ಲಾ. ನಂಗsರ ಯಾವಾಗ ಬೆನ್ನ ಹಾಸಗಿಗೆ ಹಚ್ಚೇನೋ ಅನ್ನೊ ಅಷ್ಟ ಸಾಕಾಗಿರ್ತದ, ಇದ ನೋಡಿದರ ಶನಿ ಇಷ್ಟ...
ಒಂದ ವಾರದ ಹಿಂದ ಮುಂಜ ಮುಂಜಾನೆ ಎದ್ದೋಕಿನ ನನ್ನ ಹೆಂಡತಿ “ರ್ರಿ, ಈ ಸಲಾ ಆಷಾಡ ಮಾಸದಾಗ ನಾ ಒಂದ ತಿಂಗಳ ತವರ ಮನಿಗೆ ಹೋಗೊಕಿ” ಅಂತ ಹೇಳಿದ್ಲು. ಅಕಿ ’ನಾ ತವರ ಮನಿಗೆ ಹೋಗ್ತೇನಿ’ ಅಂತ ತನ್ನ ಡಿಸಿಜನ್ ಹೇಳಿದ್ಲ...
ಒಂದ ದಿವಸ ಸಂಜಿಮುಂದ ನಾ ಹಿಂಗ ಕೆಲಸಾ ಮುಗಿಸಿಕೊಂಡ ಬಂದ ಸಾಕಾಗಿ ಮನ್ಯಾಗ ಅಡ್ಡಾಗಿದ್ದೆ, ನನ್ನ ಮೊಬೈಲಗೆ ಒಂದ ಫೋನ್ ಬಂತ. ಬರೇ ನಂಬರ ಇಷ್ಟ ಇತ್ತ ಹಿಂಗಾಗಿ ಕಂಪಲ್ಸರಿ ಎತ್ತ ಬೇಕಾತ. ಹಂಗ ಹೆಸರ ಬಂದಿತ್ತಂದರ ಆ ಹೆಸರ ನೋಡಿ...
ಬರ ಬರತ ಏನ ಬಂತಪಾ ನಮ್ಮ ಹುಡುಗರ ಹಣೇಬರಹ ಅಂತ ಇತ್ತೀಚಿಗೆ ಕೆಟ್ಟ ಭಾಳ ಕೆಟ್ಟ ಅನಸಲಿಕತ್ತದ. ಮೊದ್ಲs ಏನ ಇಲ್ಲದ ಕನ್ಯಾದ shortage ಅದರಾಗ ಇದ್ದ ಬಿದ್ದ ಕನ್ಯಾಕ್ಕು software engineer,ಬೆಂಗಳೂರ, ಪೂಣೆ ಹುಡುಗರ ಬೇಕ. ಹಿಂಗಾದರ ನಮ್ಮ ಹುಬ್ಬಳ್ಳಿ...
ಮೊನ್ನೆ ಸಂಡೇ ಹುಬ್ಬಳ್ಳಿ ಒಳಗ ತಾಲುಕ ಕನ್ನಡ ಸಾಹಿತ್ಯ ಸಮ್ಮೇಳನ ಇತ್ತ. ಹಂಗ ನಂಗ ನಮ್ಮೂರಾಗೂ ಸಾಹಿತ್ಯ ಸಮ್ಮೇಳನ ಮಾಡ್ತಾರಂತ ಗೊತ್ತಗಿದ್ದ ಒಂದ ವಾರದ ಹಿಂದ ನಮ್ಮ ದೋಸ್ತ ಒಬ್ಬಂವ ಫೊನ ಮಾಡಿ “ಏನಪಾ, ಹುಬ್ಬಳ್ಳಿ ಸಾಹಿತ್ಯ ಸಮ್ಮೇಳನಕ್ಕ ಬರಲಿಕತ್ತಿ ಇಲ್ಲ?...
(ಟಿ.ವಿ. ಒಳಗ ಜಾಹಿರಾತುಗಳನ್ನ ನೋಡವವರಿಗಾಗಿ ಮಾತ್ರ) ಏನ ಸುಡಗಾಡ ಅಡ್ವರ್ಟೈಸಮೆಂಟ್ ಬರತಾವರಿಪಾ ಟಿ.ವಿ. ಒಳಗ, ನನಗ ಅನಸ್ತದ ಅರ್ಧಾ ನಮ್ಮ ಸಂಸಾರ ಹಾಳಾಗೋದ ಈ ಟಿ.ವಿ. ಸಂಬಂಧ ಅದು ಈ ಅಡ್ವರ್ಟೈಸನಿಂದನ ಅಂತ. ಅಲ್ಲಾ, ಈಗ ಎಲ್ಲಾ ಬಿಟ್ಟ ಈ ಟಿ.ವಿ....
’ಎಲ್ಲಾರ ಮನ್ಯಾಗು ತಾಟನಾಗ ಕೂದಲ ಬರೋದ’ಅಂತ ಗಾದಿ ಮಾತ ಅದ. ಕೇಳಿರೇನ? ಕೇಳಿಲ್ಲ ಹೌದಲ್ಲ. ಅಲ್ಲಾ, ಹಂಗೇನ ಸುಡಗಾಡ ಗಾದಿ ಮಾತಿಲ್ಲಾ ಮತ್ತ, ಇದ ನಮ್ಮವ್ವ ಕಟ್ಟಿದ್ದ ಗಾದಿ ಮಾತ. ನಮ್ಮ ಮನ್ಯಾಗ ಊಟದ್ದ ತಾಟ ನಾಗ ವಾರದಾಗ ಒಂದ್ಯಾರಡ ಸರತೆ...
ಒಂದ ಆರ ತಿಂಗಳ ಹಿಂದ ಬೆಂಗಳೂರಿಗೆ ಒಂದ ಬುಕ್ ಬಿಡಗಡೆ ಫಂಕ್ಶನಗೆ ಹೋಗಿದ್ದೆ, ಹಂಗ ಅಲ್ಲಿ ಬಂದವರೇಲ್ಲಾ ನನ್ನ ಫಸ್ಟ ಟೈಮ ಭೆಟ್ಟಿ ಆಗಲಿಕತ್ತವರು, ಆದರ ಫೇಸಬುಕ್ಕ ಒಳಗ ಭಾಳ ಕ್ಲೋಸ ಇದ್ದವರು ಹಿಂಗಾಗಿ ಬೆಂಗಳೂರ ತನಕ ಅವರನೇಲ್ಲಾ ಭೆಟ್ಟಿ ಆಗಲಿಕ್ಕಂತ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...