ಇತ್ತೀಚಿಗೆ ಯಾಕೊ ಏನೋ ಗೊತ್ತಿಲ್ಲಾ ರಾತ್ರಿ ಮಲ್ಕೊಂಡಾಗ ಕೆಟ್ಟ ಕೆಟ್ಟ ಕನಸ ಭಾಳ ಬರಲೀಕತ್ತಾವ, ಸುಮ್ಮನ ನಮ್ಮ ವಿನಾಯಕ ಭಟ್ಟರಗೆ ಕೇಳಿ ಪಲ್ಲಂಗ ಬುಡಕ ಒಂದ ಹೋಮಾ ಹವನರ ಮಾಡಸಬೇಕೊ ಏನೊ ಗೊತ್ತಿಲ್ಲಾ. ’ಅಲ್ಲಾ, ಯಾಕ, ಏನಾತ ಕನಸಿನಾಗು ಹೆಂಡ್ತಿ ಬಂದಿದ್ಲೇನೊ?’...
ನಿನ್ನೆ ಜನೇವರಿ ನಾಲ್ಕಕ್ಕ ಒಂದಿಷ್ಟ ದೇಶದಾಗ ಡೈವರ್ಸ್ ಡೇ ಅಂತ ಆಚರಿಸದರು. ಅವತ್ತಿನ ದಿವಸ ಅಗದಿ ಪ್ರಶಸ್ತ ಅಂತ ಡೈವರ್ಸ್ ಕೊಡಲಿಕ್ಕೆ, ನಾವ ಹೆಂಗ ನಮ್ಮ ದೇಶದಾಗ ಅಕ್ಷತ್ರೀತಿಯಾ ದಿವಸ ಮೂಹರ್ತ ನೋಡಲಾರದ ಮದುವಿ ಮಾಡ್ಕೋತೇವಿ ಮನಿ ಒಪನಿಂಗ ಮಾಡ್ತೇವಿ ಹಂಗ....
ನಾವ ಸಣ್ಣವರ ಇದ್ದಾಗಿನ ಮಾತ, ಆಗ ಮಳೆಗಾಲದಾಗ ಮಳೆ ಆಗಲಾರದ ಬರಗಾಲ ಬಂದ್ರ ಊರ ಹಿರಿಯಾರ ಕೂಡಿ ಕತ್ತೆ ಲಗ್ನ ಮಾಡಿ ಊರತುಂಬ ಮೆರವಣಗಿ ಮಾಡ್ತಿದ್ದರು. ಆ ಜೋಡ ಕತ್ತೆ ಹಿಂದ ನಮ್ಮಂತಾ ಒಂದ ಹತ್ತ ಹನ್ಯಾರಡ ಕತ್ತೆ ಕಾಯೋ ಹುಡ್ಗುರು...
ಇದ ಒಂದ ನಾಲ್ಕ ತಿಂಗಳದ ಹಿಂದಿನ ಮಾತ ಇರಬೇಕ, ನಮ್ಮ ತಂಗಿ ಅತ್ತಿ ಮನ್ಯಾಗಿನ ಶ್ರೀಮಂತ ಮುಗಿಸಿಕೊಂಡ ಹಡಿಲಿಕ್ಕೆ ಅಂತ ಗಂಡನ ಮನ್ಯಾಗಿಂದ ಗುಡಚಾಪಿ ಕಿತಗೊಂಡ ನಮ್ಮ ಮನಿಗೆ ಬಂದ ಟೆಂಟ್ ಹಾಕಿದ್ಲು. ಹಂಗ ಅಕಿವು ಲಗ ಭಗ ಎಷ್ಟ ನಮೂನಿ...
ನಾ ಒಂದ ಮನಿ ಕಟ್ಟಲಿಕತ್ತೇನಿ ಹುಬ್ಬಳ್ಳಿ ಒಳಗ, ಅದೇನೊ ಅಂತಾರಲಾ ’ಮನಿ ಕಟ್ಟಿ ನೋಡ, ಮದುವಿ ಮಾಡ್ಕೊಂಡ ನೋಡ’ ಅಂತ ಹಂಗ ಮದುವಿ ಮಾಡ್ಕೊಂಡಂತೂ ನೋಡಿದೆ, ಅದರ ಹಣೆಬರಹ ಏನ ಹಗಲಗಲ ಹೇಳೋದ ನಿಮಗೇಲ್ಲಾ ಗೊತ್ತಿದ್ದದ್ದ ಅದ. ಇನ್ನ ಮನಿ ಕಟ್ಟೋದ...
ಇದ ಒಂದ ಎಂಟ-ಹತ್ತ ತಿಂಗಳ ಹಿಂದಿನ ಮಾತ ಇರಬೇಕು, ಸುಮ್ಮನ ಪೇಪರ ಹೆಡಲೈನ್ಸ್ ಓದ್ಕೋತ ಕೂತಿದ್ದ ನನ್ನ ಹೆಂಡತಿ ಒಮ್ಮಿಂದೊಮ್ಮಿಲೆ “ರ್ರಿ, ನಂಗೂ ಮಂಗಳ ಗ್ರಹಕ್ಕ ಕರಕೊಂಡ ಹೋಗರಿ” ಅಂದ್ಲು. ನಂಗ ಒಮ್ಮಿಕ್ಕಲೇ ನನ್ನ ಬುಡಕಿನ ಭೂಮಿ ಗ್ರಾವಿಟೇಶನಲ್ ಫೋರ್ಸ್ ಕಳಕೊಂಡಂಗ...
ನಾ ಏನಿಲ್ಲಾಂದ್ರು ಒಂದ ಹತ್ತ ಸರತೆ ಹೇಳೇನಿ ನನ್ನ ಹೆಂಡತಿಗೆ ‘ನೀ ರಾತ್ರಿ ಮಲ್ಕೋಬೇಕಾರ ಆ ಸುಡಗಾಡ ಇಂಗ್ಲೀಷ್ ಸಿನೇಮಾ ನೋಡ ಬ್ಯಾಡಾ, ರಾತ್ರಿ ಬಡಬಡಸ್ತಿ’ ಅಂತ, ಆದರೂ ಅಕಿ ನನ್ನ ಮಾತ ಒಟ್ಟ ಕೇಳಂಗಿಲ್ಲಾ. ಅದರಾಗ ಯಾವದರ ಹಾರರ್ ಇಲ್ಲಾ...
ಮೊನ್ನೆ ಬನಶಂಕರಿ ನವರಾತ್ರಿಗೆ ನಾ ಸಹ-ಕುಟಂಬ ಪರಿವಾರದೊಂದಿಗೆ ಅಂದರ ನನ್ನ ಆಫಿಸಿಯಲ್ ಕುಟಂಬ ಕರಕೊಂಡ ಬನಶಂಕರಿಗೆ ಹೋಗಿದ್ದೆ. ಬನಶಂಕರಿ ನಮ್ಮನಿ ಕುಲದೇವರ ಹಿಂಗಾಗಿ ವರ್ಷಕ್ಕೊಮ್ಮೆ ನವರಾತ್ರಿಗೆ ಸ್ವಂತ ಗಾಡಿ ಖರ್ಚ ಮಾಡಕೊಂಡ ಹೋಗಬೇಕಂತ, ಅದಕ್ಕ ಹೋಗಿದ್ದೆ. ಒಳಗ ಗರ್ಭಗುಡ್ಯಾಗ ಸೀರಿ ಉಡಿತುಂಬಿ,...
“ರ್ರಿ, ಅನ್ನಂಗ ನಾ ನಿಮಗ ಒಂದ ಮಾತ ಕೇಳೊದಿತ್ತ, ನಂಬದ ಮದುವಿ ರೆಜಿಸ್ಟ್ರೇಶನ್ ಮಾಡಿಸಿರಿ ಇಲ್ಲೊ?” ಅಂತ ಒಂದ ವಾರದ ಹಿಂದ ಒಮ್ಮಿಂದೊಮ್ಮಿಲೇ ನನ್ನ ಹೆಂಡತಿ ಕೇಳಿದ್ಲು. ನನಗ ಒಮ್ಮಿಕ್ಕಲೇ ಇಕಿಗೆ ಎಲ್ಲಾ ಬಿಟ್ಟ ಮದುವಿ ರೆಜಿಸ್ಟ್ರೇಶನ್ ಯಾಕ ನೆನಪಾತ್ಲೆ, ಮದುವಿ...
ಇವತ್ತ World Wildlife Conservation Day. ಬೆಳಿಗ್ಗೆ ನಮ್ಮ ಹುಬ್ಬಳ್ಳಿ wwfನವರು (world wide fund for nature) ನಾಲ್ಕ ಮಾತಾಡ್ರಿ ಅಂತ ಕರದಿದ್ದರು. ನಾ ಅಗದಿ ಭಾರಿ ಉಮೇದಿಲೆ ಹೋಗಿ “The sad truth is that the world’s...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...