ಇದ ಭಾಳ ಹಳೇ ಕಥಿ, ನಾವು ಕಾಲೇಜ ಕಲಿಬೇಕಾರ ನಮ್ಮ ಜೊತಿ ಮನ್ಯಾ ಅಂತ ದೋಸ್ತ ಇದ್ದಾ. ಅಂವಾ ಭಾರಿ ದೇವರು, ದಿಂಡರು ಅಂತಿದ್ದಾ. ದಿವಸಕ್ಕ ಎರಡ ಸರತೆ ಸಂಧ್ಯಾವಂದನಿ, ಮುಂಜಾನೆ ದಿವಸಾ ರಾಯರ ಮಠಕ್ಕ, ಶನಿವಾರಕ್ಕೊಮ್ಮೆ ನುಗ್ಗಿಕೇರಿ ಹನಮಪ್ಪ, ಮಂಗಳವಾರಕ್ಕೊಮ್ಮೆ...
ಇದ ಇವತ್ತ ಮುಂಜಾನಿ ಮಾತ, ನನಗ ಗಡದ್ದ ನಿದ್ದಿ ಹತ್ತಿತ್ತ ಒಮ್ಮಿಂದೊಮ್ಮಿಲೆ ಯಾರೋ ಕಿವ್ಯಾಗ ’ಗ್ರಹಣ ಬಿಡ್ತ ಗ್ರಹಣ’ ಅಂತ ಒದರಿದಂಗ ಆತ. ನಂಗ ಅದ ಕನಸೋ ಇಲ್ಲಾ ನನಸೊ ಅನ್ನೋದ ಗೊತ್ತಾಗಲಿಲ್ಲಾ, ಅದರಾಗ ರಾತ್ರಿ ಬ್ಯಾರೆ ಯರಕೊಂಡ ಮಲ್ಕೊಂಡಿದ್ದೆ…ಅಲ್ಲಾ, ಅದೇನಾಗಿತ್ತಂದರ...
ಇದ ಏನಿಲ್ಲಾ ಅಂದ್ರು ಒಂದ ಐದ ವರ್ಷದ ಹಿಂದಿನ ಮಾತ ಇರಬೇಕ ಒಂದ ದಿವಸ ಸುಮ್ಮನ ಪೇಪರ ಓದ್ಕೊತ ಕೂತಾಗ ನನ್ನ ಹೆಂಡ್ತಿ ಸಟಕ್ಕನ್ನ “ರ್ರೀ.. ನೀವ ಯಾವಾಗ ಬ್ಯಾಂಕಾಕಗೆ ಹೋಗ್ತೀರಿ?” ಅಂತ ಕೇಳಿದ್ಲು. ನಂಗ ಒಮ್ಮಿಕ್ಕಲೇ ಗಾಬರಿ ಆತ, ಅಲ್ಲಾ...
ಮೊನ್ನೆ ಪೂಣಾದಿಂದ ನಮ್ಮ ಸುಮ್ಮಕ್ಕನ ಫೋನ್ ಬಂದಿತ್ತ ,ಅಗದಿ ಭಾಳ ಖುಶಿಲೇ ತನ್ನ ಹೊಸಾ ಸೊಸಿ ‘ಹಂಗ ಇದ್ದಾಳ , ಹಿಂಗ ಇದ್ದಾಳ’ ಅಂತ ಒಂದ ತಾಸ ನಮ್ಮವ್ವನ ಮುಂದ ತನ್ನ ಸೊಸಿನ್ನ ಹೊಗಳಿದ್ದ-ಹೊಗಳಿದ್ದ. ನಮ್ಮವ್ವ ಅಕಿ ಹೇಳಿದ್ದಕ್ಕೆಲ್ಲಾ ‘ಹೂಂ..ಹೂಂ…ಹೌದಿನ್ವಾ’,’ಭಾಳ ಪುಣ್ಯಾ...
ಹಂಗ ನಾ ದುಡಿಲಿಕ್ಕೆ ಚಾಲು ಮಾಡಿದ್ದ B.Sc ಫಸ್ಟ ಇಯರ ಇದ್ದಾಗಿಂದ. ಯಾವಾಗ ನಮ್ಮ ಮನ್ಯಾಗ ನಂಗ ಮೆರಿಟ್ ಮ್ಯಾಲೆ ಸೀಟ ಸಿಕ್ಕರು ವರ್ಷಕ್ಕ ಹತ್ತ ಸಾವಿರ ರೂಪಾಯಿ ಖರ್ಚ ಮಾಡಿ B.E ಕಲಸಲಿಕ್ಕೆ ಆಗಂಗಿಲ್ಲಾಂತ ಖಾತರಿ ಆತ ಆವಾಗ ನನಗ...
ನಿನ್ನೆ ಬೆಳಿಗ್ಗೆ ಏಳೋ ಪುರಸತ್ತ ಇಲ್ಲದ ನಮ್ಮ ಕೌಸ್ತ್ಯಾನ ಫೋನ್ ಬಂತ, ಇಂವಾ ಹಂಗ ಇಷ್ಟ ಲಗೂ ಎದ್ದ ಫೋನ್ ಮಾಡೋಂವ ಅಲ್ಲಾ, ಯಾಕ ಮಾಡಿದಾ ಪಾ, ಯಾರರ ಗೊಟಕ-ಗಿಟಕ್ ಅಂದ-ಗಿಂದಾರಿನ ಅಂತ ವಿಚಾರ ಮಾಡ್ಕೋತ ಫೋನ ಎತ್ತಿದೆ. ಅಂವಾ ಒಂದ...
ನಾ ನನ್ನ ಜೀವನದಾಗ ಪೂರ್ತಿ ಓದಿದ್ದ ಮೊದ್ಲನೇ ಇಂಗ್ಲೀಷ್ ಫಿಕ್ಶನ್ ಅಂದರ ಜಾಕಿ ಕಾಲಿನ್ಸಂದ ’ಹಾಲಿವುಡ್ ಹಸಬಂಡ್ಸ್’. ನಂಗ ಈ ಬುಕ್ ಸಿಕ್ಕದ್ದ ನಮ್ಮ ಚಿಮ್ಮಲಗಿ ಮಾಮನ ಮನ್ಯಾಗ, ಅವರ ಮಗಳ ಚೈತ್ರಿ ನಾನು ಕ್ಲಾಸಮೇಟ್ ಹಿಂಗಾಗಿ ನಾ ಯಾಕ ರಿಸ್ಕ...
‘ಹತ್ತ ದಾಸಿಯರನ ಇಟಗೊಳೊದ ಕಿಂತಾ ಒಬ್ಬ ರಾಜ ನರ್ತಕಿನ ಇಟಗೋಬೇಕು’ ಅಂತ ಒಂದ ಗಾದಿ ಮಾತ ಅದ, ಕೇಳಿರೇನ? ಅಲ್ಲಾ, ಹಿಂತಾವೇಲ್ಲಾ ನೀನ ಕೇಳಿರತಿ ಇಲ್ಲಾ ಹುಟ್ಟಿಸಿರತಿ ತೊಗೊ ಮಗನ ಅಂತ ಅನಬ್ಯಾಡರಿ. ಖರೇನ ಇದ ಒಂದ ಗಾದಿ ಮಾತ, ನಾ...
ಮೊನ್ನೆ ನಮ್ಮ ವೈಶಾಲಿ ಹೆಗಡೆಯವರ ‘ಉರ್ಮಿಳಾನ ಸ್ನಾನ ಕಡಿಕೂ ಮುಗಿತೊ ಇಲ್ಲೊ..?’ ಅನ್ನೊ ಬರಹ ಓದಿ ನನಗ ನನ್ನ ಹೆಂಡತಿ ಸ್ನಾನದ್ದ ಪುರಾಣಗಳು ನೆನಪಾದವು. ಹಂಗ ರಾಮಾಯಣದಾಗ ಲಕ್ಷ್ಮಣ ವನವಾಸಕ್ಕ ತನ್ನ ಹೆಂಡತಿ ಉರ್ಮಿಳಾನ್ನ ಬಿಟ್ಟ ಹೋದಾಗ ಆಕಿ ಸಿಟ್ಟಿಗೆದ್ದ ೧೪...
ಬ್ರಾಹ್ಮಣರಾಗ ಕನ್ಯಾ ತೀರಿ ಹೋಗ್ಯಾವ ಅಂದರ ಎಲ್ಲಾ ತೀರಕೊಂಡಾವ ಅಂತಲ್ಲಾ, ಖಾಲಿ ಆಗ್ಯಾವ ಅಂದರ ಮುಗದಾವ ಅಂತ ಅರ್ಥ. ಮುಗದಾವ ಅಂದರ ಎನ ಎಲ್ಲಾ ಪೂರ್ತಿಖಾಲಿನೂ ಆಗಿಲ್ಲಾ ಆದರ ತಳಕ್ಕ ಅಂತೂ ಹತ್ಯಾವ. ಆ ಉಳದ ತಳದಾಗಿನ ಕನ್ಯಾಗಳಿಗೆ ಈಗ ಎಲ್ಲಿಲ್ಲದ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...