ಇದು ನನ್ನ ಇತರೆ ಪ್ರಬಂಧಗಳ ಸಂಗ್ರಹ, ಅವಧಿ, ಅಪರಂಜಿ ಹಾಗೂ ಕನ್ನಡ ಓನ್ ಇಂಡಿಯಾದಲ್ಲಿ ಬರೆದ ಲೇಖನಗಳು…
ಇವತ್ತ ಮುಂಜಾನೆ ಏಳೊ ಪುರಸತ್ತ ಇಲ್ಲದ ನನ್ನ ಹೆಂಡತಿ “ರ್ರಿ, ಇವತ್ತ ತಾರಿಖ ಎಷ್ಟು?” ಅಂದ್ಲು. ಹಂಗ ಅಕಿ ನಾರ್ಮಲಿ ಡೇಟ ಬಗ್ಗೆ ತಲಿಕೆಡಸಿಗೊಳ್ಳೊದ ಒಂದು ಅಕಿ ಡೇಟ ಇದ್ದಾಗ ಇಲ್ಲಾ ಏಳನೇ ತಾರಿಖಿಗೆ ಇಷ್ಟ, ಅದು ನನ್ನ ಪಗಾರ ಕ್ರೇಡಿಟ್...
ನಿನ್ನೆ ಸಂಜಿಮುಂದ ಕಟ್ಟಿ ಮ್ಯಾಲೆ ಕೂತ ನನ್ನ ಹೆಂಡತಿ ಒಮ್ಮಿಂದೊಮ್ಮಿಲೆ “ರ್ರಿ, ಮಿಡವೈಫ್ ಅಂದರೇನ್ರಿ” ಅಂತ ಒದರಿದ್ಲು. ನಾ ಇಕಿಗೆ ಒಮ್ಮಿಂದೊಮ್ಮೆಲೆ ಇದ್ಯಾಕ ನೆನಪಾತಪಾ ಅಂತ ನೋಡಿದ್ರ ಇಕಿ ಕಟ್ಟಿ ಮ್ಯಾಲೆ ಕಾಲ ಮ್ಯಾಲೆ ಕಾಲ ಹಾಕ್ಕೊಂಡ ಕೂತ ಇಂಗ್ಲೀಷ ಪೇಪರ...
ಇದ ೧೯೯೯-೨೦೦೦ರ ಟೈಮನಾಗಿನ ಮಾತ, ನಮ್ಮ ಒಂದಿಷ್ಟ ದೋಸ್ತರ ಸಿರಿಯಸ್ ಆಗಿ ಲಗ್ನಾ ಮಾಡ್ಕೋಬೇಕು ಅಂತ ಕನ್ಯಾ ನೋಡಲಿಕ್ಕೆ ಶುರು ಮಾಡಿದ್ದರು. ಆವಾಗ ಇವಾಗಿನಗತೆ ಕನ್ಯಾದ್ದ ಶಾರ್ಟೇಜ ಏನ ಇರಲಿಲ್ಲಾ ಹಿಂಗಾಗಿ ಒಂದ ಬಿಟ್ಟ ಇಪ್ಪತ್ತ ಕನ್ಯಾ ನೋಡಿ ಇದ್ದಿದ್ದರಾಗ ಛಂದನ್ವು...
ಅಕ್ಕ ನನ್ನಕಿಂತ ನಾಲ್ಕ ವರ್ಷ ದೊಡ್ಡೊಕಿ,ತಂಗಿ ನನ್ನಕಿಂತ ನಾಲ್ಕ ವರ್ಷ ಸಣ್ಣೊಕಿ. ಅಪ್ಪಗ ಅಕ್ಕನ್ನ ಕಂಡರ ಅಷ್ಟಕ್ಕಷ್ಟ ಆದರ ತಂಗಿ ಮ್ಯಾಲೆ ಭಾಳ ಜೀವ ಇದ್ದಾ. ನಾ ಹುಬ್ಬಳ್ಳಿ ಘಂಟಿಕೇರಿ ಒಳಗಿನ ನ್ಯಾಶನಲ್ ಹೈಸ್ಕೂಲಿಗೆ ಹೋಗಬೇಕಾರ ನಾ ಅಕ್ಕನ ಕೈ ಹಿಡ್ಕೊಂಡ...
ಕೃಷ್ಣಮೂರ್ತಿಗೆ ಈಗ ೭೬ ವರ್ಷ ಆಗಲಿಕ್ಕೆ ಬಂತ. ಅವನ ಹೆಂಡ್ತಿ ಸಿಂಧೂಗ ೬೮ ದಾಟಿದ್ವು. ಇಬ್ಬರದು ೪೩-೪೪ ವರ್ಷದ ಸಂಸಾರ, ಎರಡ ಮಕ್ಕಳು, ಎರಡು ಮೊಮ್ಮಕ್ಕಳು ಅಗದಿ ಫ್ಯಾಮಿಲಿ ಪ್ಲ್ಯಾನಿಂಗ ಫ್ಯಾಮಿಲಿ. ಹಂಗ ಕೃಷ್ಣಮೂರ್ತಿದ ಆರೋಗ್ಯ ಈಗ ಒಂದ ಸ್ವಲ್ಪ ಡಗಮಾಯಿಸಿದುರು...
ಮೊನ್ನೆ ಸಂಡೇ ನಮ್ಮ ಮನ್ಯಾಗ ಅತ್ತಿ ಸೊಸಿ ಕೂಡಿ ಅರಬಿ ಒಗಿಲಿಕತ್ತಿದ್ದರು. ಅದು ವಾಶಿಂಗ ಮಶೀನ ಒಳಗ. ಅಲ್ಲಾ ಇತ್ತೀಚಿಗೆ ಎಲ್ಲಾರ ಮನ್ಯಾಗ ಅರಬಿ ಒಗೆಯೋದು ವಾಶಿಂಗ ಮಶೀನ ಒಳಗ ಬಿಡ್ರಿ, ಇಗ್ಯಾರ ಮನ್ಯಾಗ ಒಗೆಯೋ ಕಲ್ಲಮ್ಯಾಲೆ ಅರಬಿ ಒಗಿತಾರ, ಅದು...
ಯಾರರ ಹಡದದ್ದ ಸುದ್ದಿ ಬಂತ ಅಂದರ ಮೊದ್ಲ ನಾವ ಕೇಳೊದ ಏನು? ಗಂಡೋ, ಹೆಣ್ಣೊ ಹೌದಲ್ಲ ಮತ್ತ..? ಮುಂಜಾನೆ ನನ್ನ ಹೆಂಡತಿ ಮೌಶಿ ತನ್ನ ಮಗಳ ಹಡದದ್ದ ಸುದ್ದಿ ಹೇಳಲಿಕ್ಕೆ ಫೋನ ಮಾಡಿದರ ನನ್ನ ಹೆಂಡತಿ ಮೊದ್ಲ ಕೇಳಿದ್ದ ಏನಪಾ ಅಂದರ...
ಪೇರೆಂಟ್ಸ ಡೇ ( 4th sunday of every july) ನಿಮಿತ್ತ ವಿಶೇಷ ಲೇಖನ, ಮೊನ್ನೆ ಬೆಂಗಳೂರ ಬನಶಂಕರಿ ನಾಲ್ಕನೇ ಸ್ಟೇಜ ಶ್ರೀ ವೆಂಕಟೇಶ್ವರ ಮಂಗಲ ಕಾರ್ಯಾಲಯದಾಗ ಗುರಣ್ಣಂದ ವರ್ಷಾಂತಕ ಇತ್ತ. ಹಂಗ ಗುರಣ್ಣ ಇಲ್ಲೇ ಧಾರವಾಡದಾಗ ಸತ್ತ ಇಲ್ಲಿ ಪಂಚಭೂತದೊಳಗ...
ಇದ ನನ್ನ ಮಗನ ಮುಂಜವಿಗೆ ಸಂಬಂಧ ಪಟ್ಟಿದ್ದ ಮಾತ. ಹಂಗ ನಾ ಮುಂಜವಿಗೆ ಬಂದೊರಿಗೆಲ್ಲಾ ’ನಿಮ್ಮ ಆಶೀರ್ವಾದಕ್ಕೆ ನಮ್ಮ ಉಡುಗೊರೆ’(return gift) ಅಂತ ದೊಡ್ಡಿಸ್ತನಾ ಬಡದ ಬಾಂಬೆದಿಂದ ಮೂರ ನಾಲ್ಕ ನಮನಿವ ಹೋಲಸೇಲನಾಗ ಏರ್ ಟೈಟ ಸ್ಟೇನಲೆಸ್ ಸ್ಟೀಲ್ ಡಬ್ಬಿ ಸೆಟ್...
ದಿನಾ ನಡೆಯೊ ಹಂಗ ಮೊನ್ನೆ ಗಂಡಾ ಹೆಂಡತಿದ ಮನ್ಯಾಗ ವಾಸ್ಯಾಟ ನಡದಾಗ ಒಮ್ಮಿಂದೊಮ್ಮಿಲೆ ನನ್ನ ಹೆಂಡತಿ “ರ್ರಿ, ಹಂಗ್ಯಾಕ ಎಲ್ಲಾದಕ್ಕೂ ಸಿಡಿ-ಸಿಡಿ ಹಾಯ್ತೀರಿ…ಸ್ವಲ್ಪ ಸಮಾಧಾನ ಇಟಗೋರಿ. ನಂಗೊತ್ತ ನಿಮಗ ಮಿಡಲೈಫ ಕ್ರೈಸಿಸ್ ಸ್ಟಾರ್ಟ್ ಆಗೇದ ಅಂತ” ಅಂತ ಅಂದ ಬಿಟ್ಳು. ನಂಗ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...