ಇದು ನನ್ನ ಇತರೆ ಪ್ರಬಂಧಗಳ ಸಂಗ್ರಹ, ಅವಧಿ, ಅಪರಂಜಿ ಹಾಗೂ ಕನ್ನಡ ಓನ್ ಇಂಡಿಯಾದಲ್ಲಿ ಬರೆದ ಲೇಖನಗಳು…
“ದನಾ ಕಾಯೋನ ಬುದ್ಧಿ ಎಲ್ಲೆ ಇಟ್ಟಿ, ಊಟಕ್ಕ ಕೂತಾಗ ಬಲಗೈಲೆ ಸಾರಿನ ಸೌಟ ಮುಟ್ಟ ಬ್ಯಾಡ ಅಂತ ಎಷ್ಟ ಸರತೆ ಹೇಳಬೇಕ? ಮುದಕಾದರು ಮುಸರಿ ಯಾವದು ಎಂಜಲ ಯಾವದು ತಿಳಿಯಂಗಿಲ್ಲಲಾ, ಯಾ ಕೈಲೆ ಏನ ಮಾಡಬೇಕು, ಏನ ಮಾಡಬಾರದು ಅಂತ ಗೊತ್ತಾಗಂಗಿಲ್ಲಾ”...
ನನ್ನ ಹೆಂಡತಿ ನನ್ನ ಮದವಿ ಮಾಡ್ಕೊಂಡ ನಮ್ಮ ಮನಿಗೆ ಬಂದ ಸಂಸಾರ ಶುರು ಮಾಡಿ ಒಂದನೇ ವಾರದಾಗಿನ ಕೆಲವು ಸಂದರ್ಭಗಳು….. ಸಂದರ್ಭ ಒಂದು… ಇಳಗಿಗೆ ಸಂಬಂಧ ಪಟ್ಟದ್ದು ನನ್ನ ಹೆಂಡತಿ ನಮ್ಮವ್ವಗ “ನಿಮ್ಮ ಇಳಗಿ ಹರ್ತ ಅದ, ನಂಗ ನಿಮ್ಮನಿ ಇಳಗ್ಯಾಗ...
ಹಂಗ ನಾ ಕನ್ಯಾ ಫಿಕ್ಸ್ ಮಾಡ್ಕೋಳೊಕಿಂತ ಮೊದಲ ಭಾಳ ತಲಿ ಕೆಡಸಿಗೊಂಡ ವಿಚಾರ ಮಾಡಿದ್ದರ ಪೈಕಿ ಇಂಪಾರ್ಟೆಂಟ್ ವಿಚಾರ ಅಂದರ ’ಈ ಹುಡಗಿ ನನ್ನ ಜೊತಿ ಹೊಂದ್ಕೊಂಡ ಹೋಗಲಿಲ್ಲಾ ಅಂದ್ರು ಎಷ್ಟ ಹೋತು, ನಮ್ಮ ಮನಿಗೆ ಹೊಂದ್ಕೊಂಡ ಹೋಗ್ತಾಳೊ ಇಲ್ಲೊ? ಇಕಿ...
ನಾವ ಸಣ್ಣೊರ ಇದ್ದಾಗಿನ ಮಾತ, ಆವಾಗ ಇವಾಗಿನಗತೆ ಮನ್ಯಾಗ ಇರೊ ರೂಮಿನಾಗೇಲ್ಲಾ ಒಂದೊಂದ ಸಂಡಾಸ ಇರತಿದ್ದಿಲ್ಲಾ. ಅಲ್ಲಾ ಆವಾಗ ಮನಿಗೆ ಒಂದ ಸಂಡಾಸ ದೂರ ಹೋತ ನಾಲ್ಕ- ಐದ ಮನಿಗೆ, ಇಲ್ಲಾ ಇಡಿ ಚಾಳಿಗೆ ಒಂದೊ ಎರಡೊ ಸಂಡಾಸ ಇರತಿದ್ವು. ಒಂಥರಾ...
ಇತ್ತೀಚಿಗೆ ಯಾಕೊ ಏನೋ ಗೊತ್ತಿಲ್ಲಾ ರಾತ್ರಿ ಮಲ್ಕೊಂಡಾಗ ಕೆಟ್ಟ ಕೆಟ್ಟ ಕನಸ ಭಾಳ ಬರಲೀಕತ್ತಾವ, ಸುಮ್ಮನ ನಮ್ಮ ವಿನಾಯಕ ಭಟ್ಟರಗೆ ಕೇಳಿ ಪಲ್ಲಂಗ ಬುಡಕ ಒಂದ ಹೋಮಾ ಹವನರ ಮಾಡಸಬೇಕೊ ಏನೊ ಗೊತ್ತಿಲ್ಲಾ. ’ಅಲ್ಲಾ, ಯಾಕ, ಏನಾತ ಕನಸಿನಾಗು ಹೆಂಡ್ತಿ ಬಂದಿದ್ಲೇನೊ?’...
ಮೊನ್ನೆ ಪೋಸ್ಟನಿಂದ ಒಂದ ಇಂಟರನ್ಯಾಶನಲ್ ಇಂಗ್ಲೆಂಡ ಕವರ ಬಂತು, ಅದು ಅಮೇರಿಕಾದಿಂದ, ನನ್ನ ಹೆಂಡತಿ ಹೆಸರಿನ ಮ್ಯಾಲೆ. ನಂಗ ’ಇದೇನಪಾ ನಂಗಿಷ್ಟ ಅಮೇರಿಕಾದಾಗ ಫ್ಯಾನ್ಸ ಇದ್ದಾರ ಅಂತ ಅನ್ಕೊಂಡರ ಅಕಿಗೂ ಫಾರೇನದಾಗ ಫ್ಯಾನ್ಸ ಆಗ್ಯಾರಿನ’ ಅಂತ ಅನಸಲಿಕತ್ತ. ಹಂಗ ಲೆಟರ್ ಮ್ಯಾಲೆ...
ಇದ ಮೊನ್ನೆ ಒಂದ ಹದಿನೈದ ದಿವಸದ ಹಿಂದಿನ ಮಾತ ಇರಬೇಕ, ನಮ್ಮ ಬೆಂಗಳೂರ ದೋಸ್ತ ಒಬ್ಬಂವಾ ಫೇಸಬುಕ್ಕಿನಾಗ capital ಅಕ್ಷರದಲೇ I QUIT ಅಂತ ಬರದ ಒಂದ status message ಹಾಕಿದ್ದಾ. ನಾ ಅದನ್ನ ನೋಡಿದವನ ಖರೇನ ಗಾಬರಿ ಆಗಿಬಿಟ್ಟೆ. ನಂಗ...
ಮೊನ್ನೆ ಮುಂಜ ಮುಂಜಾನೆ ನಾ ಇನ್ನೇನ ಗಾಡಿಗೆ ಕಿಕ್ ಹೊಡದ ಆಫೀಸಿಗೆ ಹೋಗಬೇಕ ಅಂತ ಗೇಟ ತಗಿಯೊದಕ್ಕ ಕಿಲ್ಲೇದಾಗಿನ ಗಾಯತ್ರಿ ಮೌಶಿ ಆಟೊ ತಗೊಂಡ ಇಳದ್ಲು, ಅಕಿ ಬಂದಿದ್ದ ಸ್ಪೀಡ್ ನೋಡಿದರ ಏನೋ ಎಮರ್ಜನ್ಸಿ ಆಗಿರಬೇಕ ಅಂತ ’ಏನ ಆತ ಮೌಶಿ,...
ನಾ ಮದುವಿ ಮಾಡ್ಕೊಂಡ ಹೊಸ್ತಾಗಿ ಗಾಂಧಿನಗರದಾಗಿನ ಡಬಲ್ ಬೆಡ್ ರೂಮ್ ಮನಿಗೆ ಶಿಫ್ಟ ಆಗಿದ್ದೆ. ಹಂಗ ಮನಿ ಎಲ್ಲಾ ಛಲೋ ಇತ್ತ ಆದರ ಆ ಮನ್ಯಾಗ ಜೊಂಡಿಗ್ಯಾ, ಹಲ್ಲಿ, ಇಲಿ, ಕಪ್ಪಿ ಸಿಕ್ಕಾ ಪಟ್ಟೆ ಇದ್ವು. ನನ್ನ ಹೆಂಡತಿಗೆ ಹಲ್ಲಿ ಒಂದ...
ನನ್ನ ಹೆಂಡತಿಗೆ ಮೊದ್ಲ ಮೊದ್ಲ ಈ ಹ್ಯಾಷ ಟ್ಯಾಗ್ ಅಂದರು ಏನು? ಅದನ್ನ ಯಾಕ ಹಾಕ್ತಾರ ಅಂತ ಗೊತ್ತ ಆಗತಿದ್ದಿಲ್ಲಾ, ಅಕಿ ಯಾರರ ಫೇಸಬುಕ್ಕಿನಾಗ ಇಲ್ಲಾ ಟ್ವಿಟ್ಟರನಾಗ ಇದನ್ನ ಹಾಕಿದ್ದರು ಅಂದರ, ಒಂದು ಅವರ ಟೈಪಿಂಗ್ ತಪ್ಪ ಮಾಡ್ಯಾರ (typo) ಇಲ್ಲಾ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...