googleನಾಗ ನಮ್ಮಪ್ಪ ಯಾರ ನೋಡ………

ಈ ಸುಟ್ಯಾಗ ಮಕ್ಕಳ ಮನ್ಯಾಗ ಕೂತ ಜೀವಾ ತಿಂತಾಂವ ಅಂತ ಒಂದ ಐದನೂರ ರೂಪಾಯಿ ಬಡದ ಸಮ್ಮರ್ ಕ್ಯಾಂಪಗೆ ಹಾಕಿದರ, ಆ ಸಮ್ಮರ್ ಕ್ಯಾಂಪನವರು ಮತ್ತ ಪೆರೆಂಟ್ಸ್ ಜೀವಾ ತಿನ್ನಲಿಕ್ಕೆ ಆ ಮಕ್ಕಳಿಗೆ ಹೋಮವರ್ಕ ಕೊಟ್ಟ ಕಳಸ್ತಾರ. ಇಷ್ಟ ದಿವಸ ಮಾಡಿದ್ದಲ್ಲದ ಈಗ ಸುಟ್ಯಾಗೂ ನಾವು ಹೋಮವರ್ಕ ಮಾಡಬೇಕಾಗೇದ. ಮೊನ್ನೆ ನನ್ನ ಮಗಗ ‘who is the father of the state ಅಂತ ಕೇಳ್ಕೊಂಡ ಬಾ ನಿಮ್ಮಪ್ಪನ ಕಡೆ’ ಅಂತ ಹೇಳಿ ಕಳಿಸ್ಯಾರ.
ಅಲ್ಲಾ ನನಗ ನಮ್ಮಪ್ಪ , ನಮ್ಮಜ್ಜ ಬಿಟ್ಟರ ನಮ್ಮಜ್ಜನ ಅಪ್ಪ ಯಾರು, ಯಾಕ ಅಂತ ಗೊತ್ತಿಲ್ಲಾ, ಇನ್ನ ಈ father of the state ಎಲ್ಲಿಂದ ಬಂದಾಲೇ ಅಂತ ವಿಚಾರ ಮಾಡ್ಲಿಕತ್ತೆ. ಇದ ನನ್ನ ತಲ್ಯಾಗ ಸರ್ಚ ಮಾಡಿದರ ಸೀಗೋದ ಅಲ್ಲಾ, ಎಲ್ಲಾರ ಅಪ್ಪಂದರು ಎಲ್ಲೇ ಇದ್ದರು googleನಾಗ ಸಿಕ್ಕ ಸಿಗತಾರ ಅಂತ ಸಿದಾ ಗೂಗಲ್ ಸರ್ಚ ಮಾಡಿದೆ. ಹಿಂಗ ಒಂದೆರಡ ರಿಸಲ್ಟ ನೋಡೊದರಾಗ ಎದಿ ಧಸಕ್ ಅಂತ. ಕಣ್ಣ ತಿಕ್ಕೊಂಡ ಚಸಮಾ ಒರಿಸಿಕೊಂಡ ಮತ್ತೊಮ್ಮೆ ನೋಡಿದೆ, ನಾ ನೋಡಿದ್ದು, ಓದಿದ್ದು ಎರಡು ಕರೆಕ್ಟ್ ಇದ್ದವು. ಅಗದಿ ಭಾಳ ಕ್ಲೀಯರ್ ಆಗಿ ಬರದಿದ್ದರು the father of our state, H.D .Devegowda ಅಂತ. ಓದಿ ನಿಮಗ ಶಾಕ್ ಆತ ಹೌದಲ್ಲ ? ನಂಗೂ ಹಂಗ ಆಗಿತ್ತ. ಆದ್ರ ಇದ ನಮ್ಮಪ್ಪನಾಣ್ಯಾಗು ಖರೇ. ನಾ ಏನ್ ಇದ ‘ಹಾಳ ಹರಟೆ’ ಅಂತ ಮಶ್ಕೀರಿ ಮಾಡಲಿಕ್ಕೆ ಬರದಿಲ್ಲಾ. ಬೇಕಾರ ನೀವು www.hddevegowda.in ಒಳಗ ನೋಡ್ರಿ ದೇವೆಗೌಡ್ರರ ಹೆಸರ ಮ್ಯಾಲೆ father of our state ಅಂತ ಬರದಾರೊ ಇಲ್ಲೋ ಅಂತ. ಇಷ್ಟ ದಿವಸ ನಾವೇಲ್ಲಾ ದೇವೆಗೌಡ್ರ ಅಂದ್ರ ಬರೆ ಮಣ್ಣಿನ ಮಗ ಅಂತ ತಿಳ್ಕೊಂಡಿದ್ವಿ. ಇವರ ನಮ್ಮ ರಾಜ್ಯದ ಅಪ್ಪ ಯಾವಾಗ ಆದ್ರು, ಯಾರ ಮಾಡಿದರು ಯಾರಪ್ಪಗೂ ಗೊತ್ತಿಲ್ಲಾ.
ಅಲ್ಲಾ ಇವರ ಹಿಂಗ ಬರಕೊಂಡಿದ್ದ ನಮ್ಮ ಯಡಿಯೂರಪ್ಪಗರ ಗೊತ್ತ ಅದನೋ ಇಲ್ಲೊ? ಗೊತ್ತಿದ್ದರು ಪಾಪ ಏನ ಮಾಡೋಹಂಗ ಇದ್ದಾರ, ಮೊದ್ಲ ಗೊತ್ತಿದ್ದರ father of state ಅನ್ನೊದನ್ನೂ denotify ಮಾಡ್ತಿದ್ದರು. ಈಗ ಅವರದ ಅವರಿಗೆ ರಗಡ ಆಗೇದ. ಆದ್ರು ಇದ ಸದಾನಂದಗೌಡ್ರದ notification ಅಂತ ಅನ್ನಬಹುದು. ನಾಳೆ ಯಡಿಯೂರಪ್ಪ, ದೇವೆಗೌಡ್ರ ಹೆಂಗ ‘ರಾಜ್ಯಪಿತ’ ಆದ್ರು ಅಂತ ತಮ್ಮ ಪಿತ್ತ ಏರಿಸಿಕೊಂಡ courtಗೆ ಹೋಗಿ ‘ ಅವರದ DNA ಟೆಸ್ಟ ಮಾಡಸರಿ, ಇದನ್ನ FBI enquiry ಮಾಡ್ರಿ’ ಅಂತ ಅಂದರು ಅಂದರ ಹೇಳಲಿಕ್ಕೆ ಬರಂಗಿಲ್ಲಾ.
ಹಂಗ ಈ father of the state ಅನ್ನೊದನ್ನ ಗೌಡ್ರಿಗೆ ಯಾ ಸರ್ಕಾರದವರು ಕೊಟ್ಟಿಲ್ಲಾ, ತಮ್ಮಷ್ಟಕ್ಕ ತಾವ ಅನ್ಕೊಂಡಿದ್ದು. ಅವರ ಮೊದ್ಲ ಅನ್ಕೊಂಡಾರ ಹಿಂಗಾಗಿ ಅವರ father. ಇದ ಒಂಥರಾ ಜನಪ್ರಿಯ ಅಭಿಪ್ರಾಯ, ಹಂಗ ಸರ್ಕಾರಿ ಅಫಿಸಿಯಲ್ ಡಿಕ್ಲೇರೆಶನ್ ಅಲ್ಲಾ, ಹಂಗ ಸರ್ಕಾರದಿಂದ ನೋಟಿಫಿಕೇಶನ್ ಮಾಡ್ಲಿಕ್ಕೂ ಬರಂಗಿಲ್ಲಾ.
ಹಂಗ ನೋಡಿದ್ರ ನಮ್ಮ ಗಾಂಧೀಜಿಯವರು ಹಿಂಗ popular notion ಮ್ಯಾಲೇನ father of the nation ಆಗಿದ್ದಂತ. ಮೊನ್ನೆ ಒಂದ 6ನೇತ್ತಾ ಹುಡುಗಿ father of the nation ಅಂತ ಗಾಂಧೀಜಿಗೆ ಬಿರುದು ಯಾರು, ಯಾವಾಗ ಕೊಟ್ಟರು? ಇದರ documents ಕೊಡರಿ ಅಂತ RTI ಹಾಕಿದ್ಲು. ನಮ್ಮ ಸರ್ಕಾರದ ಕಡೆ ‘Gandhi’ is our father of the nation ಅಂತ ಯಾ ಸರ್ಕಾರಿ documental proof ಸಿಗಲಿಲ್ಲ.
ಇನ್ನ ಗಾಂಧೀಜಿಯವರ ಹೆಂಗ father of the nation ಆಗ್ಯಾರಲಾ ಹಂಗ ನಮ್ಮ ದೇವೆಗೌಡ್ರು father of the state. ಗಾಂಧೀಜಿಗೆ ಮಂದಿ ‘ರಾಷ್ಟ್ರಪಿತ’ ಅಂತ ಕರದರು, ಆದ್ರ ನಮ್ಮ ಗೌಡ್ರ ತಮ್ಮಷ್ಟಕ್ಕ ತಾವ ‘ರಾಜ್ಯಪಿತ’ ಅಂತ ಕರಕೊಂಡರು. ಇವತ್ತ ನಮ್ಮ state ದ fate ಏನರ ಇರವಲ್ತಾಕ, ಆದರ father of the state ಮಾತ್ರ ದೇವೆಗೌಡ್ರ. ಇನ್ನೊಂದ ಸ್ವಲ್ಪ ದಿವಸಕ್ಕ ಎಲ್ಲಾ districtಗೆ fathers ಹುಟ್ಟತಾರ ನೋಡ್ತಿರ್ರಿ. ಅದೇನ ನಾಲ್ಕ ಮಂದಿ ಒಪಿನಿಯನ್, ಯಾರಬೇಕಾದವರು ತಮ್ಮಷ್ಟಕ್ಕ ತಾವ ಎದರದ ಬೇಕ ಅದರದ father ಅಂತ ಕರಕೋಬಹುದು.
ನಾಳೆ ನಮ್ಮ ಮಕ್ಕಳೇನರ ‘ನೀವ ನಮ್ಮ ಫಾದರ್ ಅಂತ official notification ತೊರಸ್ರಿ’ ಅಂತ ಅಂದ್ರ ನಾವು ಇವರಹಂಗ ‘I am your father by popular notion, ಬೇಕಾರ ಗೂಗಲನಾಗ ಸರ್ಚ ಮಾಡ’ ಅಂತ ಅನ್ನಲಿಕ್ಕೆ ಬರಂಗಿಲ್ಲ ಮತ್ತ, ಅಲ್ಲೆ ಅವರವ್ವನ ಕೊಳ್ಳಾಗ ಕಟ್ಟಿದ್ದ notification ತೋರಸ್ಬೇಕಾಗತದ.

Leave a Reply

Your email address will not be published.

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ