ಈಗ ಒಂದ ಆರ ತಿಂಗಳ ಹಿಂದ ಒಂದ ಸುದ್ದಿ ಬಂದಿತ್ತ. ಒಬ್ಬೊಂವಾ ಮುಂದ ತನ್ನ ಅತ್ತಿ ಆಗೋಕಿ ಕೈಯಾಗ ಮೋಬೈಲ್ ಕೊಟ್ಟ ’ಈಗ ನಾ ನಿನ್ನ ಮಗಳಿಗೆ ಪ್ರಪೋಸ ಮಾಡ್ತೇನಿ ಅದನ್ನ ನೀ ವೀಡಿಯೊ ಮಾಡ’ ಅಂತ ಹೇಳಿದ್ನಂತ. ಇನ್ನ ಮುಂದ...
ಇದ ಒಂದ ಮುವತ್ತೈದ-ಮುವತ್ತಾರ ವರ್ಷದ ಹಿಂದಿನ ಮಾತ ಇರಬೇಕ. ನಮ್ಮಪ್ಪ ನನಗ ಸರ್ಕಾರಿ ಸಾಲ್ಯಾಗಿಂದ ಗೊಂಜಾಳ ಉಪ್ಪಿಟ್ಟ ಹಜಮ ಆಗಂಗಿಲ್ಲಾ ಅಂತ ಐದನೇತ್ತಕ್ಕ ೫ ನಂ. ಸಾಲಿ ಬಿಡಿಸಿಸಿ ಘಂಟಿಕೇರಿ ನ್ಯಾಶನಲ್ ಹೈಸ್ಕೂಲಿಗೆ ಅಡ್ಮಿಶನ್ ಮಾಡಿಸಿದಾ. ಆವಾಗ ಸಾಲಿ ಕರೆಕ್ಟ ಜೂನ...
ಮೊನ್ನೆ ಹಿಂಗ ಗಂಡಾ ಹೆಂಡ್ತಿ ಇಬ್ಬರು ಫಾರ ಚೇಂಜ್ ಜಗಳಾಡಲಾರದ ನಮ್ಮ ನಮ್ಮ ಮೋಬೈಲ ಹಿಡ್ಕೊಂಡ ವಾಟ್ಸಪನಾಗಿನ ಮೆಸೆಜ್ ಸಂಬಂಧ ಇದ್ದವರಿಗೆ, ಇರಲಾರದವರಿಗೆ ಎಲ್ಲಾರಿಗೂ ಫಾರವರ್ಡ ಮಾಡ್ಕೋತ ಅಡ್ಡಾಗಿದ್ವಿ. ಅದರಾಗ ಲಾಕಡೌನ ಆಗಿ ಹಿಂಗ ಗಂಡ ತಿಂಗಾಳಾನಗಟ್ಟಲೇ ಮನ್ಯಾಗ ಬಿದ್ಕೊಂಡರ ಯಾ...
ಕೆಲವೊಬ್ಬರಿಗೆ ದಿವಸಾ ಬೆಳಿಗ್ಗೆ ಎದ್ದ ಕೂಡ್ಲೆನ ಅವತ್ತಿಂದ ತಮ್ಮ ರಾಶಿ ಫಲಾ, ಭವಿಷ್ಯ ನೋಡೊ ಚಟಾ ಇರ್ತದ. ಅದನ್ನ ನೋಡಿನ ಮುಂದಿನ ಕೆಲಸ.ಹಂಗ ಅದರಾಗ ತಪ್ಪೇನಿಲ್ಲಾ, ’ಜ್ಯೋತಿಷಮ್ ನೇತ್ರಮುಚ್ಯತೇ’ ಅಂತಾರ. ಸೃಷ್ಟಿಯನ್ನ, ವೇದಗಳನ್ನ ಅರ್ಥ ಮಾಡ್ಕೊಬೇಕಂದರ ಜ್ಯೋತಿಷ್ಯ ಶಾಸ್ತ್ರ ತಿಳ್ಕೊಳೊದ ಅವಶ್ಯ,...
ಮಾರ್ಚ ೨೪,೨೦೨೦ ರಾತ್ರಿ ೮ ಘಂಟೆ………… ಮೋದಿಯವರ ರಾಷ್ಟ್ರವನ್ನು ಉದ್ದೇಶಿಸಿ ’ಇವತ್ತು ರಾತ್ರಿ ಹನ್ನೆರಡು ಘಂಟೆಯಿಂದ ಸಂಪೂರ್ಣ ದೇಶ ೨೧ ದಿವಸ ಲಾಕಡೌನ್’ ಅಂತ ಅನೌನ್ಸ ಮಾಡೋದ ತಡಾ ನನಗ ತಲಿನ ಓಡಲಾರದಂಗ ಆತ. ಏನ ಬಂತಪಾ ಈ ಸುಡಗಾಡ ಕೊರೊನಾದ್ದ...
ಮೊನ್ನೆ ನಮ್ಮ ತಿಳವಳ್ಳಿ ಮಾಮಿ ಫೋನ ಮಾಡಿದ್ಲು. ಹಂಗ ಅಕಿ ಇತ್ತೀಚಿಗೆ ಭಾಳ ಫೋನ ಮಾಡ್ಲಿಕತ್ತಾಳ. ಅದಕ್ಕ ಕಾರಣ ಏನಪಾ ಅಂದರ ಅಕಿ ಮಗಳ ಒಬ್ಬೋಕಿ ಕನ್ಯಾ ಇದ್ದಾಳ. ಅಗದಿ ಸರ್ವಗುಣ ಸಂಪನ್ನಿ, ಎದರಾಗೂ ತಗಿಯೊಹಂಗಿಲ್ಲಾ, ಆರಸೋಹಂಗಿಲ್ಲಾ. ಮರದಾಗ ಒಂದ ಸರತೆ...
ನಮ್ಮ ದೋಸ್ತ ಒಬ್ಬೊಂವ ಇತ್ತೀಚಿಗೆ ಟ್ವಿಟರ್ ಅಕೌಂಟ ಓಪನ್ ಮಾಡಿ ಭಾರಿ ಯಾಕ್ಟೀವ್ ಆಗ್ಯಾನ, ಅಗದಿ ಖತರನಾಕ ಟ್ವೀಟ್ ಮಾಡೊದ, ಸಂಬಂದ ಇದ್ದೋರಿಗೆ ಇಲ್ಲದವರಿಗೆ ಎಲ್ಲಾರಿಗೂ ಟ್ಯಾಗ ಮಾಡೋದ, ಮೆನ್ಶನ್ ಮಾಡೋದ ಎಲ್ಲಾ ಮಾಡ್ಲಿಕತ್ತಾನ. ಅವಂದ ಇಂಗ್ಲೀಷರ ಫ್ರೆಂಚ್ & ಗ್ರೀಕ್...
ಎರಡ ದಿವಸದಿಂದ ನನ್ನ ಹೆಂಡ್ತಿ ಒಂದ ಸಮನ ಫೋನ ಮಾಡಿ ಮಾಡಿ ತನ್ನ ಫ್ರೇಂಡ್ಸಗೇಲ್ಲಾ ’ಸಂಡೇ…ನಮ್ಮನಿಗೆ ಅರಿಷಣ-ಕುಂಕುಮಕ್ಕ ಬಂದ ಹೋಗ’ಅಂತ ಹೇಳಿದ್ದ ಹೇಳಿದ್ದ. ನಾನು ಒಂದ ನಾಲ್ಕೈದ ಮಂದಿಗೆ ಕರಿಯೋತನಕಾ ಸುಮ್ಮನ ಇದ್ದೆ. ಆಮ್ಯಾಲೆ ’ಸಂಡೇ ಏನ ಅದಲೇ… ಯಾಕ ಎಲ್ಲಾರನೂ...
’ಲಂಗಣಂ ಪರಮೌಶಧಮ್’ ಅಂತ ಸಂಸ್ಕೃತ ಒಳಗ ಒಂದ ಮಾತ ಅದ, ಅದರ ಅರ್ಥ ಉಪವಾಸನ ಔಷದ ಇದ್ದಂಗ ಅಂತ. ನಮ್ಮಪ್ಪ ಇದನ್ನ ಭಾಳ ಪಾಲಸ್ತಿದ್ದಾ. ಅಂವಾ ಒಂದ ಸ್ವಲ್ಪ ಹೊಟ್ಟಿ ಅಪಸೆಟ್ ಆದರ ರಾತ್ರಿ ಊಟಾ ಬಿಟ್ಟ ಬಿಡ್ತಿದ್ದಾ. ಅವತ್ತ ಅವಂದ...
ನಮ್ಮ ದೋಸ್ತ ರಾಜಾಂದ ಹುಟ್ಟಾ ಒಂದ ಕೆಟ್ಟ ಚಟಾ ಇತ್ತ. ಅಂವಾ ಯಾವಾಗಲೂ ಎಡಗೈ ಹೆಬ್ಬಟ್ಟ ಬಾಯಾಗ ಇಟಗೊತಿದ್ದಾ. ಅಲ್ಲಾ ಹಂಗ ಅಂವಾ ಚೀಪತಿದ್ದನೋ ಕಡಿತಿದ್ದನೋ ಅದ ನಮಗ ಗೊತ್ತಿಲ್ಲಾ ಒಟ್ಟ ಅವನ ಹೆಬ್ಬಟ್ಟ ಮಾತ್ರ ಕಾಯಮ್ ಬಾಯಾಗ ಇರ್ತಿತ್ತ. ಅಂವಾ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...