ಮೊನ್ನೆ ಬುಧವಾರ ಮುಂಜ ಮುಂಜಾನೆ ನಮ್ಮ ಪವ್ಯಾ ಫೋನ್ ಮಾಡಿದಾ, ಅಲ್ಲಾ ಒಂದ ತಿಂಗಳಾಗಿತ್ತ ಮಗಂದ ಫೊನಿಲ್ಲಾ ಏನಿಲ್ಲಾ, ಹಂತಾವ ಇವತ್ಯಾಕ ಫೋನ ಮಾಡಿದಾಪಾ ಅಂತ ನಾ ಫೋನ ಎತ್ತಿದರ ಅದು ಇದು ಮಾತಾಡಿ ಲಾಸ್ಟಿಗೆ “ಲೇ..ಭಾಳ ದಿವಸಾತಲೇ ಎಲ್ಲೂ ಕೂತೇಲ?...
ಮೊನ್ನೆ ನಮ್ಮ ಪುಣಾ ಮಾಮಾ ಭಾಳ ದಿವಸದ ಮ್ಯಾಲೆ ಹುಬ್ಬಳ್ಳಿ ಕಡೆ ಬಂದಿದ್ದರು. ಅವರದ ಭೆಟ್ಟಿ ಅಪರೂಪ. ಅವರ ಇತ್ತಲಾಗ ಬರಂಗಿಲ್ಲಾ ನಾವ ಅತ್ತಲಾಗ ಹೋಗಂಗಿಲ್ಲಾ. ಇನ್ನ ಯಾವದರ ತಪ್ಪಸಲಾರದ ಕಾರ್ಯಕ್ರಮ ಅಂದರ ಹತ್ತ ದಿವಸದಾಗಿನವರ ಹೋದರ ಇಲ್ಲಾ ಬಿಡಲಾರದಂತಾ ಮದುವಿ,...
“ರ್ರಿ..ಎಲ್ಲಿದ್ದೀರಿ?” “ಲೇ, ಇಲ್ಲೇ ಇದ್ದೇನಿ ಹಾಸ್ಪಿಟಲನಾಗ…ಅದೇಷ್ಟ ಸರತೆ ಫೋನ್ ಮಾಡ್ತಿ…ICUದಾಗ ಫೋನ ಎತ್ತಲಿಕ್ಕೆ ಕೊಡಂಗಿಲ್ಲಾ.. ತಿಳಿಯಂಗಿಲ್ಲಾ” ಅಂತ ನಾ ಅಕಿ ಐದನೇ ಸರತೆ ಫೋನ ಮಾಡಿದ ಮ್ಯಾಲೆ ಸಿಟ್ಟಲೇ ಹೇಳಿದೆ. “ಅಲ್ಲರಿ ಯಾವಾಗ ಒಂದ ಆರ ಗಂಟೆಕ್ಕ ಹೋಗಿರಿ, ಒಂಬತ್ತಾತು….. ಮತ್ತ...
ಈಗ ಒಂದ ತಿಂಗಳ ಹಿಂದ ನಮ್ಮ ಪಿ.ಜಿ. ಫೋನ ಮಾಡಿದ್ದಾ, ಇಂವಾ ಈಗ ಅಮೇರಿಕಾದಾಗ ಇರ್ತಾನ. ಒಂದ ಕಾಲದಾಗ ಕೊತಂಬರಿ ಕಾಲೇಜನಾಗ ನನ್ನ ಪಿ.ಯು.ಸಿ ಕ್ಲಾಸಮೇಟ್ ಇದ್ದಾ. ಭಾರಿ ಶಾಣ್ಯಾ ನನ್ನ ಮಗಾ. ಹಂಗ ಅಕ್ಕಿ ಆಲೂರನಂವಾ ಖರೆ ಆದರ ದೊಡ್ಡ...
ಮೊನ್ನೆ ಜುಲೈ೧೧ಕ್ಕ ವರ್ಲ್ಡ ಪಾಪ್ಯೂಲೇಶನ್ ಡೇ ಇತ್ತ, ಅಂದರ ವಿಶ್ವ ಜನಸಂಖ್ಯಾ ದಿವಸ. ಅಲ್ಲಾ ಹಂಗ ಅವತ್ತ ಯಾರ ಜಾಸ್ತಿ ಹಡದಿರ್ತಾರ ಅವರಿಗೇನ ಹಿಡದ ದಂಡಾ ಹಾಕಂಗಿಲ್ಲಾ, ಕಡಮಿ ಹಡದವರಿಗೇನ ಕರದ ಪ್ರೈಜ ಕೊಡಂಗಿಲ್ಲ ಮತ್ತ. ಜಗತ್ತಿನಾಗ ಜನರಿಗೆ ಜನಸಂಖ್ಯೆ ಅರಿವು...
ಒಂದ ತಿಂಗಳ ಹಿಂದ ನಮ್ಮ ಕಾಶಕ್ಕ ಮೌಶಿ ಗಂಡನ ಕಟಗೊಂಡ ಕಾಶಿಗೆ ಹೋಗಿ ಬಂದ್ಲು. ಪಾಪ ಹಂಗ ಅಕಿ ಕಾಶಿಗೆ ಹೋಗಬೇಕ ಅನ್ನಲಿಕತ್ತ ಹತ್ತ ವರ್ಷ ಆಗಿತ್ತ ಖರೆ ಆದರ ಮಗಾ ವಿನ್ಯಾಗ ಅವರವ್ವಾ ಅಪ್ಪನ ಕಾಶಿ ಕಳಸಲಿಕ್ಕೆ ದುಡ್ಡಿದ್ದರು ಟೈಮ...
ಒಂದ ಎರಡ ತಿಂಗಳದ ಹಿಂದ ಫ್ರೀ ಎಂಟ್ರಿ ಅದ ಅಂತ ಒಂದ ಸಂಗೀತ ಕಾರ್ಯಕ್ರಮಕ್ಕ ಹೆಂಡ್ತಿನ್ನೂ ಕರಕೊಂಡ ಹೋಗಿದ್ದೆ. ಇನ್ನೇನ ಕಾರ್ಯಕ್ರಮ ಶುರು ಆಗಬೇಕು, ನಿರೂಪಕಿ ಬಂದ ಸ್ವಾಗತ ಮಾಡೋದಕ್ಕ ನನ್ನ ಹೆಂಡ್ತಿ ಸಟಕ್ಕನ್ “ರ್ರಿ…ನಾ ಇವರ ಧ್ವನಿ ಎಲ್ಲೋ ಕೇಳೇನ್ರಿ”...
ಇವತ್ತ ಮುಂಜಾನೆ ಒಮ್ಮಿಂದೊಮ್ಮಿಲೇ ನನ್ನ ಹೆಂಡ್ತಿ ’ರ್ರಿ….ಇವತ್ತಿಂದ ಏನ ನಿಂಬದ ಬ್ಲೂ ಕಾಲಮ್ ಏನ್ರಿ?’ ಅಂತ ಕೇಳಿದ್ಲು. ನಾ ಒಮ್ಮಿಕ್ಕಲೇ ಗಾಬರಿ ಆದೆ. ಅಲ್ಲಾ ನಾ ಬರೇಯೋದ ತಿಂಗಳಿಗೆ ಎರಡ ಸಲಾ ಗಿರಮಿಟ್ ಕಾಲಮ್. ಇನ್ನ ನಾ ಯಾವಾಗಿಂದ ಬ್ಲೂ ಕಾಲಮ್...
ಮೊನ್ನೆ ಆಫೀಸನಾಗ ಅಡಿಟ್ ಇತ್ತು, ಅಡಿಟರ್ ಕರೆಕ್ಟ ಆಫೀಸ ಶುರು ಆಗೋದಕ್ಕ ಬಂದರು. ಆದರ ನಮ್ಮ ಅಕೌಂಟೆಂಟದ ಇನ್ನೂ ಪತ್ತೆ ಇರಲಿಲ್ಲಾ. ನಾವ ದಾರಿ ಕಾಯ್ಕೋತ ಕೂತ್ವಿ, ಮುಂದ ಒಂದ ತಾಸ ಬಿಟ್ಟ ನಮ್ಮ ಅಕೌಂಟಂಟ್ ಬಂದ್ಲು. ಅಕಿ ಬರೋ ಪುರಸತ್ತ...
ಅಲ್ಲಾ, ನಾ ಕೇಳಲಿಕತ್ತಿದ್ದ ಹೆಂಡ್ತಿ ಬೆಕ್ಕಿಗೆ ಅಡ್ಡ ಹೋದರ ಬೆಕ್ಕಿಗೆ ಛಲೋನೋ ಕೆಟ್ಟೋ ಅಂತ ಮತ್ತ, ಹೆಂಡ್ತಿಗೆ ಅಲ್ಲಾ. ಹಂಗ ಹೆಂಡ್ತಿಗೆ ಗಂಡನ್ನ ಒಬ್ಬೊವನ ಬಿಟ್ಟ ಯಾರ ಅಡ್ಡ ಹೋದರು ಛಲೋನ ಆ ಮಾತ ಬ್ಯಾರೆ. ಜನಾ ಬೆಕ್ಕ ಅಡ್ಡ ಹೋದರ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...