“ಪ್ರಶಸ್ತಿ ನಿಂಗ ಎಷ್ಟ ಸಲಾ ಹೇಳ್ಬೇಕ, ಮಲ್ಕೋಬೇಕಾರ ಅಂಗಾರ ಹಚಗೊಂಡ ಮಲ್ಕೊ ಅಂತ ಹೇಳಿಲ್ಲಾ” ಅಂತ ದಿವಸಾ ನಮ್ಮವ್ವ ನನ್ನ ಮಗಳ ಮಲ್ಕೋಬೇಕಾರ ಒದರೋದ ಅಗದಿ ಕಾಮನ್, ಹಂಗ ಅತ್ತಲಾಗ ನಮ್ಮವ್ವ ಒದರೋ ಪುರಸತ್ತ ಇಲ್ಲದ ನನ್ನ ಹೆಂಡತಿ “ಪ್ರಶಸ್ತಿ, ಉಚ್ಚಿ...
ಮೊನ್ನೆ ಸಂಜಿಗೆ ನಾ ಮನಿಗೆ ಬರೋದ ತಡಾ ನನ್ನ ಹೆಂಡತಿ “ರ್ರೀ, ನೀವು ಇವತ್ತಿನಿಂದ ಪಡಸಾಲ್ಯಾಗ ಮಲ್ಕೋಬೇಕು” ಅಂದ್ಲು. ನಾ ಒಮ್ಮಿಕ್ಕಲೇ ಗಾಬರಿ ಆಗಿ “ಯಾಕಲೇ, ಹೋದ ವಾರದಾಗರ ಮೂರ ದಿವಸ ಹೊರಗ ಮಲ್ಕೊಂಡಿದ್ದೆ, ಈಗ ಮತ್ತ ಮೂರ ದಿವಸ ಹೊರಗ...
ಈ ಸುಡಗಡ ವಾಟ್ಸಪ್ ಒಂದ ಯಾರ ಕಂಡ ಹಿಡದರೋ ಏನೋ ಇದರ ಸಂಬಂಧ ಜೀವನ ಸಾಕ ಸಾಕಾಗಿ ಹೋಗೆದ. ಅದರಾಗ ಅರ್ಧಾ ಫೇಸಬುಕನಿಂದ ಹಳ್ಳಾ ಹಿಡದಿದ್ವಿ ಇನ್ನ ಅರ್ಧಾ ಈ ವಾಟ್ಸಪ್ ನಿಂದ ಹಳ್ಳಾ ಹಿಡದ ಬಿಟ್ಟೇವಿ. ಇನ್ನೊಂದ ಮಜಾ ಅಂದರ...
ರಾಮ ವನವಾಸ ಮುಗಿಸಿಕೊಂಡ ಪಟ್ಟಾಭಿಷೇಕ ಮಾಡಿಸಿಗೊಂಡ ಸುಖವಾಗಿ ರಾಜ್ಯ ಆಳಲಿಕ್ಕೆ ದಣೇಯಿನ ಶುರು ಮಾಡಿದ್ದಾ, ಎಲ್ಲಾ ಛಲೋ ನಡದಿತ್ತು, ಅವಂಗ ಒಮ್ಮಿಂದೊಮ್ಮಿಲೆ ಏನ ಅನಸ್ತೊ ಯಾಕ ಅನಸ್ತೋ ಏನೋ ನಮ್ಮ ರಾಜ್ಯದಾಗ ಜನಾ ನನ್ನ ಆಡಳಿತದ ಬಗ್ಗೆ ಏನ ಅನ್ನಲಿಕತ್ತಾರ ಅನ್ನೋದ...
ನನಗ ಚಸ್ಮಾ(ಕನ್ನಡಕ) ಬಂದ ಇಪ್ಪತ್ತ ವರ್ಷ ಆಗಲಿಕ್ಕೆ ಬಂತ. ನಾ ಕೆ.ಇ.ಸಿ ಇಂಟರ್ವಿವಗೆ ಹೋದಾಗ ಡಾಕ್ಟರ ಚೆಕ್ ಮಾಡಿ ಹೇಳಿದ್ದರು ’ತಮ್ಮಾ, ನಿಂದ ದೂರ ದೃಷ್ಟಿ ಸರಿ ಇಲ್ಲಾ’ ಅಂತ. ಹಂಗ ನಂಗ ಹತ್ತರಿಂದ ಎಲ್ಲಾ ಕರೆಕ್ಟ ಕಂಡರೂ ದೂರಿಂದ ಕರೆಕ್ಟ...
ಮೊನ್ನೆ ಬೆಂಗಳೂರಿಂದ ರಾಜಾ ಬಂದಿದ್ದಾ, ಪಾಪಾ ಭಾಳ ದಿವಸಾದ ಮ್ಯಾಲೆ ಕನ್ಯಾ ಫಿಕ್ಸ್ ಆಗಿತ್ತ ನಮಗೇಲ್ಲಾ ಪಾರ್ಟಿ ಗಿರ್ಟಿ ಕೊಡ್ತಾನ ತಡಿ ಅಂತ ಕೇಳಿದರ ಮಗಾ ’ಏ, ಎಲ್ಲೆ ಪಾರ್ಟಿ ಹೋಗರಲೇ’ ಅಂತ ನಮಗ ಜೋರ್ ಮಾಡಿದಾ. ಇಂವಾ ಯಾಕ ಈ...
ಮೊನ್ನೆ ಅಮೇರಿಕಾದ ಟೆಕ್ಸಾಸ್ ಹೌಸ್ ಆಫ್ ರಿಪಬ್ಲಿಕ್ ಒಳಗ ಒಂದ ಹೊಸಾ ಬಿಲ್ ಪ್ರೆಸೆಂಟ್ ಮಾಡ್ಯಾರ, ಇನ್ನ ಮುಂದ ಯಾರ ಗವರ್ನರ್ ಇಲೆಕ್ಷನಗೆ ನಿಲ್ಲತೀರಿ ಅವರ ನಿಮ್ಮ I.Qದ ಪ್ರೂಫ ತೋರಸಬೇಕು, ಹಂಗ ಇಷ್ಟ ಮಿನಿಮಮ್ I.Q ಇದ್ದರ ಇಷ್ಟ ಇಲೆಕ್ಷನಗೆ...
ಇದ ಒಂದ ವಾರದ ಹಿಂದಿನ ಮಾತ… ರಾತ್ರಿ ಹನ್ನೊಂದ ಹನ್ನೊಂದುವರಿ ಆಗಿತ್ತ, ಹಿಂಗ ನಿದ್ದಿ ಹತ್ತಲಿಕತ್ತಿತ್ತ ಸಡನ್ ಆಗಿ ಮೊಬೈಲ್ ರಿಂಗ ಆತ. ನನಗ ಮೊದ್ಲs ಮೊಬೈಲ ರಿಂಗ ಆಗಿದ್ದ ಕನಸಿನಾಗೊ ಇಲ್ಲಾ ಖರೇನೊ ಅಂಬೋದ ಕ್ಲೀಯರ್ ಆಗಲಿಲ್ಲ, ಅದರಾಗ ಅದ...
ಇದ ನನ್ನ ಲಗ್ನ ಆದ ಹೊಸ್ತಾಗಿನ ಮಾತ…ಹಂಗ ನಂದ ಮೊದ್ಲಿಂದ ದೋಸ್ತರದ ದೊಡ್ಡ ಸರ್ಕಲ್ ಅದರಾಗ ಎಲ್ಲಾರೂ ಲಗ ಭಗ್ ಒಂದ ವಾರ್ಗಿಯವರ ಇದ್ವಿ ಹಿಂಗಾಗಿ ನನ್ನ ಲಗ್ನ ಆಗಿ ಒಂದ್ಯಾರಡ ವರ್ಷ ಅನ್ನೋದರಾಗ ಭಾಳಿಷ್ಟ ದೋಸ್ತರದೇಲ್ಲಾ ಲಗ್ನ ಆಗೇ ಬಿಡ್ತ....
ನಿಮಗ ಹಿಂಗ ನಳಾ ಬಂತ ನಳಾ ಅಂತ ಹೆಡ್ಡಿಂಗ್ ನೋಡಿ ಇದೇನಪಾ ಹೆಡ್ಡಿಂಗ್ ಅಂತ ಅನಸಬಹುದು ಆದರ ಒಂದ ಇಪ್ಪತ್ತ ಇಪ್ಪತ್ತೈದ ವರ್ಷದ ಹಿಂದ ನಮಗ ನಳಾ ಬರೋದು ಅಂದರ ಅವತ್ತಿನ breaking news ಇದ್ದಂಗ ಇತ್ತ. ಈಗೀನ tv ಚಾನೆಲದ್...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...