ಮೊನ್ನೆ ನಮ್ಮ ಬೀದರ ದೇಸಾಯಿ ಬಂದಿದ್ದಾ, ಪ್ರತಿ ಸರತೆದ ಗತೆ ಇಂವಾ ಮುಂಜ-ಮುಂಜಾನೆ ಪೇಪರನವರು, ಹಾಲನವರು ಬರೋಕಿಂತಾ ಮುಂಚೆ ಗೇಟ ಮುಂದ ಹಾಜರ ಆಗೇ ಬಿಟ್ಟಾ. ನಮ್ಮವ್ವ ಅದ ಏನ ಎದ್ದ ಕ್ಯಾಗಸ ಹೊಡಿಲಿಕ್ಕೆ ಹತ್ತಿದ್ಲು, ಒಂದ ಕೈಯಾಗ ಕಸಬರಗಿ ಹಿಡ್ಕೊಂಡ...
ಮುಂಜಾನೆ ಹತ್ತುವರಿ ಹನ್ನೊಂದ ಆಗಿತ್ತ ನಮ್ಮ ಕಾಕನ ಮಗಾ ಫೋನ್ ಮಾಡಿದಾ “ಪ್ರಶಾಂತ, ಅಮ್ಮ ಯಾಕೋ ಇನ್ನೂ ಎದ್ದೇ ಇಲ್ಲೋ, ಎಷ್ಟ ಒದರಿದರು ಏಳವಳ್ಳು, ಹಂಗ ಉಸಿರಾಡಲಿಕತ್ತಾಳ ಆದರ ನೀರ ಗುಜ್ಜಿದರು ಎಚ್ಚರ ಆಗವಲ್ತು” ಅಂದಾ. “ಅಲ್ಲೇ ಯಾವದರ ಡಾಕ್ಟರಗೆ ಕರದ...
ಈ ಪ್ರಹಸನ ನನ್ನ ಜೀವನದಾಗ ನಡೆದ ಖರೆ ಘಟನೆಗಳನ್ನ ಒಳಗೊಂಡಿದ್ದ, ಅಂದರ ನಾ ಮೊದ್ಲ ಬರದಿದ್ದೆಲ್ಲಾ ಸುಳ್ಳ-ಸುಳ್ಳ ಘಟನೆಗಳು ಅಂತ ಅನ್ಕೋಬ್ಯಾಡರಿ, ಅವು ಖರೇನ ಆದ್ರ ಇದು ಒಂಥರಾ ನನ್ನ ಆಟೊಬೈಯೊಗ್ರಾಫಿ ಇದ್ದಂಗ, ಹಿಂದ ನಡೆದ ಹೋದ, ಮಾಸಿದ ಆದ್ರ ಹಳಸಲಾರದ...
ಇದೇನಪಾ ಸಾಧನೇಯ ಸಮಾವೇಶ, ಇಂವಾ ಏನ್ ಜೀವನದಾಗ ಹಂತಾದ ಸಾಧಸಿದಾ ಅಂತ ಸಮಾವೇಶ ಮಾಡ್ಕೋಳಿಕ್ಕೆ ಹೊಂಟಾನ ಅಂತ ಗಾಬರಿ ಆಗಬ್ಯಾಡರಿ. ನಾ ಹಂತಾದ ಏನ್ ಸಾಧಿಸಿಲ್ಲಾ, ಹಂಗ ಸಾಧಸಲಿಕ್ಕು ಹೋಗಂಗಿಲ್ಲಾ. ನನ್ನ ಕಡೆ ಆಗಂಗನ ಇಲ್ಲಾ, ನನ್ನ ಹೆಂಡತಿ ಸಾಧಸಲಿಕ್ಕ ಬಿಟ್ಟರಲಾ...
ಮೊನ್ನೆ ಸೆಪ್ಟೇಂಬರ್ 26ಕ್ಕ ನಾ ದಿಲ್ಲಿಗೆ ಮನಮೋಹನ ಸಿಂಗವರಿಗೆ ಎಂಬತ್ತ ವರ್ಷ ತುಂಬಿದ್ವು ಅಂತ ಅವರದ ಇಂಟರ್ವಿವ್ ತೊಗೊಳಿಕ್ಕೆ ಹೋಗಿದ್ದೆ. ನಾ ಹೋದಾಗ ಅವರು world contraception day programಗೆ ಭಾಷಣಕ್ಕ ಹೋಗಿದ್ದರು. ಅರೇ ಇದೇನ ಭಾರಿ ಕೊಇನ್ಸಿಡೇನ್ಸಲಾ, ಮನಮೋಹನಜಿ ಹುಟ್ಟಿದ್ದ...
ಒಂದ ವಾರದ ಹಿಂದ ಬೆಂಗಳೂರಾಗ ‘ಪೂರ್ಣೊ’ ಭೇಟ್ಟಿ ಆಗಿದ್ರ, ಅದ ರಾಷ್ಟ್ರಪತಿ ಅಭ್ಯರ್ಥಿ ಪೂರ್ಣೋ ಎ. ಸಂಗ್ಮಾ. ಪಾಪ, ಭಾಳ ಟೆನ್ಶನಾಗ ಇದ್ರು. “ಯಾಕ್ರಿ, ನೀವು ಇಲ್ಲೆ? ಮತ್ತೇನ್ ವಿಶೇಷ. ಯಡಿಯೂರಪ್ಪೇನರ ನಿಮಗ ಸಪೋರ್ಟ ಮಾಡಂಗಿಲ್ಲಾ ಅಂತ ಮತ್ತ ಹೆದರಸ್ಯಾರೇನ?” ಅಂದೆ....
ಹಂಗ ಹೆಡ್ಡಿಂಗ್ ಓದಿ ಗಾಬರಿ ಆಗಿ ಇವಂಗೇನ್ ನಿನ್ನಿದ ಇನ್ನೂ ಇಳದಿಲ್ಲೇನ ಅನ್ನಬ್ಯಾಡ್ರಿ. ಇದ ಒಂದ ವಾರದ ಹಿಂದಿಂದ. ಒಂದ ಹತ್ತ ದಿವಸದ ಹಿಂದ ನನಗ ಅಮೇರಿಕಾದಿಂದ ನಮ್ಮ ಸಾವಜಿ ದೋಸ್ತ ಫೋನ್ ಮಾಡಿ ” ಲೇ, ನಮ್ಮ ದೇಶದಾಗ ನ್ಯಾಶನಲ್...
ನಿನ್ನೆ ಮುಂಜ-ಮುಂಜಾನೆ ಎದ್ದೋವನ ನಮ್ಮಪ್ಪ “ಆ ಕಿಲ್ಲೆದಾಗಿನ ರಾಮಭಟ್ಟರಿಗೆ ಫೊನ್ ಮಾಡಿ ಮನಿಗೆ ಬಾ ಅಂತ ಹೇಳು” ಅಂದಾ. ಆಷಾಡ ಮಾಸದಾಗ ನಮ್ಮಪ್ಪನ ತಲ್ಯಾಗ ಏನ ಹೊಕ್ಕತಪಾ, ಇಂವಾ ಏನರ ಯಡಿಯೂರಪ್ಪಗ ಜೇಲ್ ಬದ್ಲಿ ಬೇಲ್ ಸಿಕ್ಕತಂತ ಮನ್ಯಾಗ ಶ್ರೀಸತ್ಯನಾರಯಣ ಪೂಜಾ...
ಹೋದ ವಾರ ನಮ್ಮ sensex ದಪ್ಪಂತ ಬಿತ್ತ. ಹಂಗ ಇದ ಏಳೋದ ಬೀಳೋದ ನಮಗೇನ ಹೋಸಾದಲ್ಲ ಬಿಡ್ರಿ, ಆದ್ರೂ ಈ ಸರತೆ ಬೀಳಲಿಕ್ಕೆ ಕಾರಣ ಅಂದ್ರ ಅಮೇರಿಕನ್ ಮಾರ್ಕೆಟನಾಗ facebook ಎತ್ತ, ಅಂದ್ರ ಆವಾಗ facebookದ್ದ IPO ಇತ್ತ. ಇಷ್ಟ ದಿವಸ...
ಇತ್ತಿಚಿಗೆ ಮುಂಜಾನೆ ಎದ್ದ ಪೇಪರ ತಗದರ ಸಾಕ ಬರೇ ಭಿನ್ನಮತದ ಸುದ್ದಿನ ತುಂಬಿರತದ, ಅದರಾಗ ಮಾತ -ಮಾತಿಗೆ ಹೈಕಮಾಂಡ ಅಂತ ದಿಲ್ಲಿ ಮಂದಿನ್ನ ಕರಸ್ತಾರ, ಅವರ ಇಲ್ಲೆ ಬಂದ ಉದ್ದಹುರಿಯೋದು ಅಷ್ಟರಾಗ ಅದ. ಖರೇ ಅಂದ್ರ ನಮ್ಮ ರಾಜ್ಯದ ರಾಜಕೀಯ ಹದಗೆಡಸಿದ್ದ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...