ಕೆಂಡಸಂಪಿಗೆ ಒಳಗ ಒಂದ ಪ್ರಹಸನ ಬರಿಲಿಕ್ಕೆ ಶುರು ಮಾಡಿದ್ದ ಇವತ್ತ ಒಂದ ಪುಸ್ತಕ ಆಗೋತನಕ ಬಂದ ಮುಟ್ಟತ, ಕಡಿಕೆ ಮೊನ್ನೆ ಎಪ್ರಿಲ್ 6ಕ್ಕ ಬೆಂಗಳೂರಾಗ ‘ಕುಟ್ಟವಲಕ್ಕಿ’ ಅಂತ ಹೆಸರಿಲಿ ಪುಸ್ತಕನು ಬಿಡುಗಡೆ ಆತು. ಛಂದ ಪುಸ್ತಕದವರ ಈ ನನ್ನ ಪ್ರಹಸನಗಳನ್ನ ಎಲ್ಲಾ...
ಒಂದ ವಾರದಿಂದ ಯಾಕೋ ನನ್ನ ಹೆಂಡತಿ ನನಗ “ರ್ರಿ ಬರೋ ಮಾರ್ಚ೩೧ಕ್ಕ ನಂದ ಅಕೌಂಟ ಕ್ಲೋಸ್ ಮಾಡಿ ಬಿಡರಿ” ಅಂತ ಗಂಟs ಬಿದ್ದಾಳ. ನಂಗ ಅಕಿ ಯಾ ಸುಡಗಾಡ ಅಕೌಂಟ ಬಗ್ಗೆ ಮಾತಡಲಿಕತ್ತಾಳ ಅಂತ ಗೊತ್ತಾಗವಲ್ತಾಗೇದ. ಹಂಗ ಅಕಿ ಎರಡ ಹಡದ...
“ಲೇ, ನಿನ್ನೌನ. ಎಲ್ಲಿ ಇದ್ದೀಲೇ? ಏನ ಸುದ್ದೀನ ಇಲ್ಲಲಾ? ಇದಿಯೋ ಸತ್ತೀಯೋ” ಅಂತ ನಿನ್ನೆ ನಮ್ಮ ರಾಘ್ಯಾ ಬೆಂಗಳೂರಿಂದ ಫೋನ ಮಾಡಿದ್ದಾ. ಅವನೌನ ಇವಂಗ ಎಲ್ಲಾ ಬಿಟ್ಟ ಇವತ್ತ ಯಾಕ ನಂದ ನೆನಪಾತಪಾ? ಈ ಮಗಾ ಲಾಸ್ಟ ನನಗ ಫೋನ ಮಾಡಿದ್ದ...
“ರ್ರಿ, ಕಡಕೋಳ ಮಾಮಿ ಬಂದರು, ನನ್ನ ಕೇಳಿದರ ಈಗ ಜಸ್ಟ ಸ್ನಾನಕ್ಕ ಹೋಗೇನಿ ಅಂತ ಹೇಳರಿ” ಅಂತ ಹೇಳಿದೋಕಿನ ನನ್ನ ಹೆಂಡತಿ ಬಚ್ಚಲಮನಿಗೆ ಜಿಗದ ಡಬಕ್ಕನ ಬಾಗಲಾ ಹಕ್ಕೊಂಡ್ಲು. ನಂಗರ ಒಂದು ತಿಳಿಲೇ ಇಲ್ಲಾ. ಈಗರ ಸ್ನಾನ ಮುಗಿಸಿಕೊಂಡ ಹೊರಗ ಬಂದ...
ಮೊನ್ನೆ ನವರಾತ್ರಿ ಒಳಗ ನಮ್ಮ ಹಳಿಯಾಳದ ಅನಸಕ್ಕಜ್ಜಿ ತಾ ಋಷಿ-ಪಂಚಮಿ ಹಿಡದೇನಿ, ಇದ ಎಂಟನೇ ವರ್ಷ ಉದ್ಯಾಪನಿ ಮಾಡಬೇಕು ಅದಕ್ಕ ಹದಿನಾರ ಮಂದಿ ಬ್ರಾಹ್ಮಣ ಮುತ್ತೈದೆರ ಜೊಡಿ ಬೇಕು, ಇಲ್ಲೆ ಹಳಿಯಾಳದಾಗ ನಮ್ಮಂದಿ ಪೈಕಿ ಅಷ್ಟ ಜೋಡಿ ಇಲ್ಲಾ ಅದಕ್ಕ ನೀ...
ಮೊನ್ನೆ ಹಾನಗಲದಿಂದ ನನ್ನ ಹೆಂಡತಿ ಶಕ್ಕು ಮೌಶಿ ಬಂದಿದ್ಲು, ಹಂಗ ಅಕಿ ಹುಬ್ಬಳ್ಳಿಗೆ ಬಂದು ಹೋಗಿ ಮಾಡೇ ಮಾಡತಿರ್ತಾಳ. ಆದ್ರ ಇತ್ತೀಚಿಗೆ ಸ್ವಲ್ಪ ಬರೋದ ಕಡಿಮೆ ಆಗಿತ್ತ. ಬಂದೋಕಿನ ಸೀದಾ ನನ್ನ ಹೆಂಡತಿಗೆ “ಏನ್ವಾ, ಮಗನ ಮುಂಜ್ವಿ ತಗದಿ ಅಂತ, ಏನ...
ಇವತ್ತಿಗೆ (೨೮.೧೧.೨೦೧೨) ನನ್ನ ಮದುವಿ ಆಗಿ ಕರೆಕ್ಟ ಹನ್ನೇರಡ ವರ್ಷ ಆತ. ಹಂಗ ಈ ಹನ್ನೇರಡ ವರ್ಷದಾಗ ನಾ ಎಷ್ಟ ಸಾಧಸೇನಿ, ಎಷ್ಟ ಸವದೇನ ಅನ್ನೋದ ನನಗ ಗೊತ್ತ. ಆದ್ರೂ ಹನ್ನೇರಡ ವರ್ಷ ಹೆಂಗ ಹೋತ ಗೊತ್ತಾಗಲಿಲ್ಲಾ. ನಾ ವರ್ಷಾ ಅನಿವರ್ಸರಿ...
ಮೊನ್ನೆ ಸಂಡೇ ಮಾರ್ಚ್ ೩ಕ್ಕ ನಮ್ಮಜ್ಜಿ ಜನ್ಮಶತಮಾನೋತ್ಸವ ಸಂಬಂಧ ಹುಬ್ಬಳ್ಳಿ ಒಳಗ ಚಿತ್ರಸಂತೆ ಇತ್ತ. ಏನ ಇವರಜ್ಜಿ ಅಷ್ಟ ಫೇಮಸ್ ಇದ್ಲೋ ಇಲ್ಲಾ ರವಿ ವರ್ಮನ ಅಬಚಿನೋ ಅಕಿ ಸಂಬಂಧ ಚಿತ್ರಸಂತೆ ಮಾಡಲಿಕ್ಕೆ ಅಂತ ಅನಬ್ಯಾಡರಿ. ನಮ್ಮಜ್ಜಿ ನಂಗಿಷ್ಟ ಅಜ್ಜಿ ಅಲ್ಲಾ,...
ನಾವ B.Sc ಕಲಿಬೇಕಾರ ನಮ್ಮ ಜೊತಿ ಒಬ್ಬ ಮಾರವಾಡಿ ದೋಸ್ತ ಇದ್ದಾ. ಹಂಗ ಆವಾಗ ಮಾರವಾಡಿ ಮಂದಿ ಸೈನ್ಸ ಕಲಿಯೋದ ಭಾಳ ಕಡಿಮಿ ಇತ್ತ. ಮಾರವಾಡಿ ಮಂದಿ ಟ್ರೇಡಿಂಗ ಮಾಡೊದ ಜಾಸ್ತಿ ಹಿಂಗಾಗಿ ಅವರೇಲ್ಲಾ ಕಾಮರ್ಸ ತೊಗೊಂಡ ಪಿ.ಯು.ಸಿ ಪಾಸ್ ಆದರ...
ಈಗ ಒಂದ ಎರಡ ವರ್ಷದಿಂದ ನಮ್ಮನಿ ಬಾಜು ಇಬ್ಬರ ಅಗದೀ ವಯಸ್ಸಾದ ಗಂಡಾ ಹೆಂಡ್ತಿ ಬಂದಾರ. ಹಂಗ ಅದ ಅವರದ ಸ್ವಂತ ಮನಿ, ಇಷ್ಟ ವರ್ಷ ಬೆಂಗಳೂರಾಗ ಮಗಾ ಸೊಸಿ ಜೊತಿ ಇದ್ದರು ಹಿಂಗಾಗಿ ಹುಬ್ಬಳ್ಳಿ ಮನಿ ಭಾಡಗಿ ಕೊಟ್ಟಿದ್ದರು. ಎರಡ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...