ನಿಮ್ಮ ಆಗಮನವೇ ಉಡುಗೊರೆ, your presence is presents. ನಿಮ್ಮ ಆಶೀರ್ವಾದವೇ ಉಡುಗೊರೆ, presents in blessings only ಅಂತೇಲ್ಲಾ ಕಾರ್ಡ ಮ್ಯಾಲೆ ಪ್ರಿಂಟ ಮಾಡಿ ಮತ್ತು ಕಾರ್ಯಕ್ರಮದ ದಿವಸ ಎರಡು ಕೈಲೆ ಪ್ರೆಸೆಂಟ್ಸ್ ತೊಗೊಂಡ ಫೋಟೊ ಹೊಡಸಿಗೊಳೊ ಮಂದಿನ್ನ ನೀವ...
ತಿಂಗಳದ ಒಂದನೇ ವಾರ ಯಾವಗಲೂ ಭಾಳ ಟೆನ್ಶನ್ ವಾರ. ನಳದ ಬಿಲ್ಲ, ಕರೆಂಟ ಬಿಲ್ಲ, ಹಾಲಿಂದ, ಕಿರಾಣಿದ ಎಲ್ಲಾ ಸುಡಗಾಡ ಬಿಲ್ಲ ಬರೋದ ಒಂದನೇ ವಾರದಾಗ. ಹಂಗ ಪ್ರತಿ ಬಿಲ್ಲ ನೋಡಿದಾಗ ಒಮ್ಮೆ ನಾ ಬಿ.ಪಿ ಏರಿಸಿಗೊಂಡ ನಮ್ಮವ್ವಗ ‘ನೋಡಿ ಖರ್ಚ...
ಮೊನ್ನೆ ನಮ್ಮ ರಾಜಾಗ ಕಡಿಕೂ ಮದುವಿ ಆಗಿ ಎಂಟ ವರ್ಷದ ಮ್ಯಾಲೆ ಒಂದ ಕೂಸ ಹುಟ್ಟತು. ಏನಿಲ್ಲದ ಅವಂಗ ಕನ್ಯಾ ಸಿಕ್ಕ ಮದುವಿ ಆಗೋದರಾಗ ೩೬ ವರ್ಷ ಆಗಿದ್ವು, ಅದರಾಗ ಅಂವಾ ಸಾಲಿ ಜಾಸ್ತಿ ಕಲತಿದ್ದಿಲ್ಲಾ, ಥರ್ಡ ಕ್ಲಾಸಿನಾಗ ಬಿ.ಎಸ್ಸಿ ಮಾಡಲಿಕ್ಕೆ...
ಇದ ಒಂದ ಎರಡ ತಿಂಗಳ ಹಿಂದಿನ ಮಾತ ಇರಬೇಕ ಒಂದ ದಿವಸ ಮುಂಜ-ಮುಂಜಾನೆ ನಮ್ಮ ಮನ್ಯಾ ಫೋನ ಮಾಡಿದಾ. ಹಂಗ ಅಂವಾ ಜಾಸ್ತಿ ಆನಲೈನ ಚಾಟಿಂಗ ಒಳಗ ಸಿಕ್ಕಿರತಾನ ಹಿಂಗಾಗಿ ಫೋನ ಮಾಡೋದ ಕಡಮಿ ಆದರೂ ಯಾಕ ಫೋನ್ ಮಾಡಿದಾ ಅಂತ...
ಮೊನ್ನೆ ನಮ್ಮ ಬೀದರ ದೇಸಾಯಿ ಬಂದಿದ್ದಾ, ಪ್ರತಿ ಸರತೆದ ಗತೆ ಇಂವಾ ಮುಂಜ-ಮುಂಜಾನೆ ಪೇಪರನವರು, ಹಾಲನವರು ಬರೋಕಿಂತಾ ಮುಂಚೆ ಗೇಟ ಮುಂದ ಹಾಜರ ಆಗೇ ಬಿಟ್ಟಾ. ನಮ್ಮವ್ವ ಅದ ಏನ ಎದ್ದ ಕ್ಯಾಗಸ ಹೊಡಿಲಿಕ್ಕೆ ಹತ್ತಿದ್ಲು, ಒಂದ ಕೈಯಾಗ ಕಸಬರಗಿ ಹಿಡ್ಕೊಂಡ...
ಮುಂಜಾನೆ ಹತ್ತುವರಿ ಹನ್ನೊಂದ ಆಗಿತ್ತ ನಮ್ಮ ಕಾಕನ ಮಗಾ ಫೋನ್ ಮಾಡಿದಾ “ಪ್ರಶಾಂತ, ಅಮ್ಮ ಯಾಕೋ ಇನ್ನೂ ಎದ್ದೇ ಇಲ್ಲೋ, ಎಷ್ಟ ಒದರಿದರು ಏಳವಳ್ಳು, ಹಂಗ ಉಸಿರಾಡಲಿಕತ್ತಾಳ ಆದರ ನೀರ ಗುಜ್ಜಿದರು ಎಚ್ಚರ ಆಗವಲ್ತು” ಅಂದಾ. “ಅಲ್ಲೇ ಯಾವದರ ಡಾಕ್ಟರಗೆ ಕರದ...
ಈ ಪ್ರಹಸನ ನನ್ನ ಜೀವನದಾಗ ನಡೆದ ಖರೆ ಘಟನೆಗಳನ್ನ ಒಳಗೊಂಡಿದ್ದ, ಅಂದರ ನಾ ಮೊದ್ಲ ಬರದಿದ್ದೆಲ್ಲಾ ಸುಳ್ಳ-ಸುಳ್ಳ ಘಟನೆಗಳು ಅಂತ ಅನ್ಕೋಬ್ಯಾಡರಿ, ಅವು ಖರೇನ ಆದ್ರ ಇದು ಒಂಥರಾ ನನ್ನ ಆಟೊಬೈಯೊಗ್ರಾಫಿ ಇದ್ದಂಗ, ಹಿಂದ ನಡೆದ ಹೋದ, ಮಾಸಿದ ಆದ್ರ ಹಳಸಲಾರದ...
ಇದೇನಪಾ ಸಾಧನೇಯ ಸಮಾವೇಶ, ಇಂವಾ ಏನ್ ಜೀವನದಾಗ ಹಂತಾದ ಸಾಧಸಿದಾ ಅಂತ ಸಮಾವೇಶ ಮಾಡ್ಕೋಳಿಕ್ಕೆ ಹೊಂಟಾನ ಅಂತ ಗಾಬರಿ ಆಗಬ್ಯಾಡರಿ. ನಾ ಹಂತಾದ ಏನ್ ಸಾಧಿಸಿಲ್ಲಾ, ಹಂಗ ಸಾಧಸಲಿಕ್ಕು ಹೋಗಂಗಿಲ್ಲಾ. ನನ್ನ ಕಡೆ ಆಗಂಗನ ಇಲ್ಲಾ, ನನ್ನ ಹೆಂಡತಿ ಸಾಧಸಲಿಕ್ಕ ಬಿಟ್ಟರಲಾ...
ಮೊನ್ನೆ ಸೆಪ್ಟೇಂಬರ್ 26ಕ್ಕ ನಾ ದಿಲ್ಲಿಗೆ ಮನಮೋಹನ ಸಿಂಗವರಿಗೆ ಎಂಬತ್ತ ವರ್ಷ ತುಂಬಿದ್ವು ಅಂತ ಅವರದ ಇಂಟರ್ವಿವ್ ತೊಗೊಳಿಕ್ಕೆ ಹೋಗಿದ್ದೆ. ನಾ ಹೋದಾಗ ಅವರು world contraception day programಗೆ ಭಾಷಣಕ್ಕ ಹೋಗಿದ್ದರು. ಅರೇ ಇದೇನ ಭಾರಿ ಕೊಇನ್ಸಿಡೇನ್ಸಲಾ, ಮನಮೋಹನಜಿ ಹುಟ್ಟಿದ್ದ...
ಒಂದ ವಾರದ ಹಿಂದ ಬೆಂಗಳೂರಾಗ ‘ಪೂರ್ಣೊ’ ಭೇಟ್ಟಿ ಆಗಿದ್ರ, ಅದ ರಾಷ್ಟ್ರಪತಿ ಅಭ್ಯರ್ಥಿ ಪೂರ್ಣೋ ಎ. ಸಂಗ್ಮಾ. ಪಾಪ, ಭಾಳ ಟೆನ್ಶನಾಗ ಇದ್ರು. “ಯಾಕ್ರಿ, ನೀವು ಇಲ್ಲೆ? ಮತ್ತೇನ್ ವಿಶೇಷ. ಯಡಿಯೂರಪ್ಪೇನರ ನಿಮಗ ಸಪೋರ್ಟ ಮಾಡಂಗಿಲ್ಲಾ ಅಂತ ಮತ್ತ ಹೆದರಸ್ಯಾರೇನ?” ಅಂದೆ....
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...