’ಗಿರಮಿಟ್’ ನನ್ನ ಪ್ರಸ್ತುತ ವಿಜಯವಾಣಿಯ ಅಂಕಣ… ನನಗೆ ಅಂಕಣ ಬರಿಲಿಕ್ಕೆ ಅವಕಾಶ ಕೊಟ್ಟ ವಿಜಯ ವಾಣಿಯವರಿಗೆ ಅನಂತ ಧನ್ಯವಾದಗಳು.
ಈಗ ಒಂದ ತಿಂಗಳ ಹಿಂದ ಒಂದ ಮದ್ವಿ ಹಿಂದಿನ ದಿವಸದ ರುಕ್ಕೋತ್ ಊಟಕ್ಕ ಅಂದರ ಮಂಡಗಿ ಊಟಕ್ಕ ಕೂತಿದ್ದೆ. ನನಗ ಹಾಕಿದ್ದ ಎಲಿ ಅಗದಿ ಸಣ್ಣದ ಇತ್ತ. ಆಜು ಬಾಜುದವರ ಎಲಿ ನೋಡಿದೆ ಅವರದ ಎಲಿ ಒಂದ ಸ್ವಲ್ಪ ದೊಡ್ಡದ ಇತ್ತ....
ಈಗ ಒಂದ ವಾರದ ಹಿಂದ ಇನ್ನೇನ ಶ್ರಾವಣ ಬರತದ ಗೌರಿ ಕೂಡ್ಸೋದ ಅದ ಅಂತ ಇಡಿ ಮನಿ ಅತ್ತಿ ಸೊಸಿ ಕೂಡಿ ಸ್ವಚ್ಛ ಮಾಡಲಿಕತ್ತಿದ್ದರು. ಹಂಗ ಗೌರಿ ದೇವರ ಮನ್ಯಾಗ ಕೂಡ್ಸೋದ ಇಡಿ ಮನಿಯಾಕ ಅಂದರ ನಮ್ಮವ್ವಾ ಕೇಳಂಗಿಲ್ಲಾ’ಅದ ನಮ್ಮ ಪದ್ದತಿ,...
ಮೊನ್ನೆ ಮುಂಜ-ಮುಂಜಾನೆ ನಸಿಕಲೇ ವಾಕಿಂಗ ಮುಗಿಸಿಗೊಂಡ ಹಿಂಗ ಮನಿ ಕಡೆ ಬರಲಿಕ್ಕೆ ಹತ್ತಿದ್ದೆ, ನಮ್ಮ ಆಜು ಬಾಜು ಮನಿ ಹೆಣ್ಣ ಮಕ್ಕಳ ಹರಟಿ ಹೊಡ್ಕೊತ ವಾಕಿಂಗ ಹೊಂಟಿದ್ದರು. ಹಂಗ ನಾ ಖರೇ ಹೇಳ್ತೇನಿ ಈ ಹೆಣ್ಣ ಮಕ್ಕಳ ವಾಕಿಂಗ ಮಾಡ್ಬೇಕ ಅಂತ...
ಮೊನ್ನೆ ಭವಾನಿನಗರ ರಾಯರ ಮಠದಾಗ ನಮ್ಮ ಮೌಶಿ ಮಗನ ಮದ್ವಿ ಇತ್ತ. ಮನಿ ಅಕ್ಕಿಕಾಳ ಮುಗದ ಮೂರತಾಸ ಆಗಿತ್ತ. ಎಲ್ಲಾರೂ ಯಾವಾಗ ಸಾರ್ವಜನಿಕ ಅಕ್ಕಿಕಾಳ ಮುಗಿತದ, ಎಲಿ ಯಾವಾಗ ಹಾಕ್ತಾರ ಅಂತ ಕಾಯಲಿಕತ್ತಿದ್ವಿ. ಅದರಾಗ ಈ ಸಾರ್ವಜನಿಕ ಅಕ್ಕಿಕಾಳ ಈ ಬ್ಯೂಟಿ...
ಈಗ ಒಂದ ಮೂರ ವರ್ಷದಿಂದ ನಾ ರಕ್ತಾ ಕೊಡಲಿಕ್ಕೆ ಶುರು ಮಾಡೇನಿ, ಹಂಗ ನಲವತ್ತೈದ ವರ್ಷದ ತನಕಾ ಒಟ್ಟ ರಕ್ತಾ ಕೊಟ್ಟಿದ್ದಿಲ್ಲಾ, ಹಂತಾವ ಒಮ್ಮಿಂದೊಮ್ಮಿಲೇ ಅದು ಕೋರೊನಾ ಟೈಮನಾಗ ರಕ್ತಾ ಕೊಡಲಿಕ್ಕೆ ಶುರು ಮಾಡಿದೆ. ರಕ್ತಾ ಕೊಡಬೇಕಂದರ 45kg ವೇಟ್ ಇರಬೇಕ...
ಇದ ಒಂದ ಇಪ್ಪತ್ತ ವರ್ಷದ ಹಿಂದಿನ ಮಾತ ಇರಬೇಕ, ನಂಬದ ದಣೇಯಿನ ಮದ್ವಿ ಆಗಿತ್ತ, ಇಬ್ಬರು ಸೇರಿ ಯಾರದೋ ಕುಬಸಕ್ಕ ಬೆಂಗಳೂರಿಗೆ ಹೋಗಿದ್ವಿ. ಇನ್ನ ಬೆಂಗಳೂರ ತನಕ ಬಂದೇನಿ ಒಂದ ರೌಂಡ ಬ್ರಿಗೇಡ್ ರೋಡ್, ಎಮ್.ಜಿ. ರೋಡ ಅಡ್ಡಾಡಿ ಪಬ್ ಹೊಕ್ಕ...
ಒಂದ ಇಪ್ಪತ್ತ ವರ್ಷದ ಹಿಂದಿನ ಮಾತ ಇರಬೇಕ, ಒಂದ ಸಂಡೇ ಎಲ್ಲಾರೂ ಊಟಕ್ಕ ಕೂತಿದ್ವಿ, ಒಮ್ಮಿಂದೊಮ್ಮಿಲೇ ಹೊರಗ ಹೆಣ್ಣಮಕ್ಕಳ ಬಾಯಿ ಕೇಳಸಲಿಕತ್ತ. ಅದ ಏನ ಆಗಿತ್ತಂದರ ನಮ್ಮ ಲೈನ ಒಳಗ ಒಂದ ಹಾವ ಬಂದಿತ್ತ. ಅದ ಒಬ್ಬೊಬ್ಬರ ಮನಿ ಗೇಟ ಹೊಕ್ಕೋತ-ಹೊಕ್ಕೋತ...
ಮೊನ್ನೆ ಒಂದ ಮುಂಜವಿಗೆ ಹೋಗಿದ್ದೆ, ಅಗದಿ ಹತ್ತರದವರದ, ಮ್ಯಾಲೆ ಅವರ ಮನಿ ಅಕ್ಕಿ ಕಾಳಿಗೆ ಬಂದವರಿಗೆ ಇಷ್ಟ ರಿಟರ್ನ್ ಗಿಫ್ಟ ಅಂತ ಹೇಳಿದ್ದಕ್ಕ ಲಗೂನ ಹೋಗಿದ್ದೆ. ಮುಂಜವಿ ಮಠದಾಗ ಇಟಗೊಂಡಿದ್ದರು. ನಂಗ ಮಠಕ್ಕ ಯಾವದರ ಕಾರ್ಯಕ್ರಮಕ್ಕ ಹೋಗೊದ ಅಂದರ ಮೈಮ್ಯಾಲೆ ಬರತದ....
ಇದ ಕರೆಕ್ಟ ಒಂದ ವರ್ಷದ ಹಿಂದಿನ ಮಾತ ನನ್ನ ಹೆಂಡ್ತಿ ಅತ್ಯಾನ ಮಗನ ಮ್ಯಾರೇಜ್ ಇತ್ತ. ಇನ್ನ ನಮ್ಮ ಅತ್ತಿ ಮನಿ ಕಡೆ ಮ್ಯಾರೇಜ್ ಅಂದರ ನನ್ನ ಹೆಂಡ್ತಿ ಒಂದ ವಾರ ಮೊದ್ಲ ಜಿಗದಿದ್ಲು, ಮ್ಯಾಲೆ ನನಗ ’ಇದ್ದೂರಾಗ ಲಗ್ನಾ ನೀವ...
ಇವತ್ತ ಮುಂಜಾನೆ ನಮ್ಮವ್ವ ಅಂಗಳದಾಗ ಪೇಪರ ಬರೋದಕ್ಕ ಒಂದ ರೌಂಡ ಪೇಪರ ಮ್ಯಾಲೆ ಕಣ್ಣ ಆಡಿಸಿ ನನ್ನ ಹೆಂಡತಿಗೆ “ಏ..ಪ್ರೇರಣಾ ನಿನ್ನ ಗಂಡನ ಗಿರಮಿಟ್ ಇವತ್ತ ಬಂದದ ನೋಡ ಬಾ” ಅಂತ ಒದರಿದ್ಲು. ನಿದ್ದಿ ಗಣ್ಣಾಗ ಕ್ಯಾಗಸಾ ಹೊಡಿಲಿಕತ್ತಿದ್ದ ನನ್ನ ಹೆಂಡ್ತಿ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...