’ಗಿರಮಿಟ್’ ನನ್ನ ಪ್ರಸ್ತುತ ವಿಜಯವಾಣಿಯ ಅಂಕಣ… ನನಗೆ ಅಂಕಣ ಬರಿಲಿಕ್ಕೆ ಅವಕಾಶ ಕೊಟ್ಟ ವಿಜಯ ವಾಣಿಯವರಿಗೆ ಅನಂತ ಧನ್ಯವಾದಗಳು.
ಮೊನ್ನೆ ಮಂಗಳವಾರ ಮುಂಜ ಮುಂಜಾನೆ ಎದ್ದೋಕಿನ ನನ್ನ ಹೆಂಡ್ತಿ ’ರ್ರಿ ..ಮಂಗಳ ಗ್ರಹಕ್ಕ ಹೋಗೊದ ಎಲ್ಲಿಗೆ ಬಂತ?’ ಅಂತ ಕೇಳಿದ್ಲು. ’ಲೇ..ಇವತ್ತ ಮಂಗಳವಾರ… ಗಣಪತಿ ಗುಡಿಗೆ ಹೋಗ್ತೇವಿ…ಮಂಗಳ ಗ್ರಹಕ್ಕ ಅಲ್ಲಾ…’ ಅಂತ ನಾ ಅಂದರ ’ಅಲ್ಲರಿ ಮಿಶನ್ ’ಮಾರ‍್ಸ ಒನ್’ (mars...
ಮೊನ್ನೆ ಗಂಡಾ ಹೆಂಡ್ತಿ ಇಬ್ಬರೂ ಕೂಡಿ ಭಾಳ ದಿವಸದ ಮ್ಯಾಲೆ ಅಕ್ಷಯಪಾರ್ಕ ಸಂತಿಗೆ ಹೋಗಿದ್ವಿ. ಹಂಗ ನಮ್ಮಲ್ಲೆ ದಂಪತ್ ಸಂತಿಗೆ ಹೋಗೊ ಪದ್ದತಿ ಇಲ್ಲಾ. ಅದರಾಗ ನಾ ಹೆಂಡ್ತಿ ಜೊತಿ ಸಂತಿಗೆ ಹೋಗೊ ಮನಷ್ಯಾನೂ ಅಲ್ಲಾ. ಮ್ಯಾಲೆ ಅಕಿ ಸಂತಿ ಮಾಡೋದ...
ಇದ ಒಂದ ವರ್ಷದ ಹಿಂದಿನ ಮಾತ, ನಮ್ಮ ಪಮ್ಯಾ ಮುಂಜ-ಮುಂಜಾನೆ ಫೋನ ಮಾಡಿ ’ನಾಡದ ನಮ್ಮಪ್ಪನ ಸೀಮ ಇಟ್ಗೋಳೊದ ಅದ ನಿಮ್ಮವ್ವನ ಕರಕೊಂಡ ಬಾ’ ಅಂದಾ. ನಂಗ ಒಮ್ಮಿಕ್ಕಲೇ ಗಾಬರಿ ಆತ, ನಂಗ ಅವರಪ್ಪ ಹೋಗಿದ್ದ ಗೊತ್ತ ಇದ್ದಿದ್ದಿಲ್ಲಾ, ಇಂವಾ ಡೈರೆಕ್ಟ...
’ಬಾಣಂತನನ ಮುಗ್ಗಲಗೇಡಿತನಕ್ಕ ಮೂಲ ಕಾರಣ’ ಇದ ನನ್ನ ಡೈಲಾಗ ಅಲ್ಲಾ ನಮ್ಮ ಅಜ್ಜಿದ. ಅಕಿ ಹಗಲಗಲಾ ಹೇಳೋಕಿ ಹೆಣ್ಣ ಮಕ್ಕಳ ಮುಗ್ಗಲಗೇಡಿ ಆಗೋದ ಬಾಣಂತನ ಆದ ಮ್ಯಾಲೆ ಅಂತ. “ಅಲ್ಲಾ ಹಂಗ ಗೊತ್ತ ಇದ್ದರು ನೀ ಯಾಕ ಮೂರ ನಾಲ್ಕ ಹಡದಿ,...
ಜಗತ್ತಿನೊಳಗ ಹೆಂಡ್ತಿ ಕೇಳೊ ಕೋಟ್ಯಾಂತರ ಪ್ರಶ್ನೆ ಒಳಗ ಇದರಂಥಾ ಅಗದಿ ಸಿಂಪಲ್ ಮತ್ತ ಕಾಂಪ್ಲಿಕೇಟೆಡ್ ಪ್ರಶ್ನೆ ಮತ್ತೊಂದಿಲ್ಲಾ ಅಂತ ನಂಗ ಅನಸ್ತದ. ಹಂಗ ಕುಕ್ಕರ್ ಎಷ್ಟ ಸೀಟಿ ಹೊಡಿತ ಅನ್ನೊದನ್ನ ಎಣಸಲಿಕ್ಕೆ ಎರಡನೇತ್ತ ಕಲತದ್ದ ಗಂಡ ಸಾಕ. ಆದರ ಅದನ್ನ ಲಕ್ಷ...
ಇದ ಒಂದ ಎಂಟ ತಿಂಗಳ ಹಿಂದಿನ ಮಾತ ಇರಬೇಕ, ಜಸ್ಟ ದಣೇಯಿನ ನಮ್ಮ ಹುಬ್ಬಳ್ಳ್ಯಾಗ ಲಾಕಡೌನ ತಗದಿದ್ದರು, ನಾವು ಮನಿ ಕೆಲಸ, ಮನೆಯವರ ಕೆಲಸ ಬಿಟ್ಟ ಮಾಲಕರ ಕೆಲಸಕ್ಕ ಹೊಂಟಿದ್ವಿ. ಒಂದ ದಿವಸ ಮಟಾ ಮಟಾ ಮಧ್ಯಾಹ್ನ ನಮ್ಮ ಸುಮ್ಮಕ್ಕ ಪೂಣೆಯಿಂದ...
ಮೊನ್ನೆ ಒಮ್ಮಿಂದೊಮ್ಮಿಲೇ ನನ್ನ ಹೆಂಡತಿ “ರ್ರಿ…ನಿಂಬದ ಮದ್ವಿ ಆಗಿದ್ದ ಯಾ ಟೈಪ್?’ ಅಂತ ಕೇಳಿದ್ಲು. ನಂಗ ಗಾಬರಿ ಆತ, ಇಕಿ ಏನ ಕೇಳಲಿಕತ್ತಾಳ ಅನ್ನೋದರ ತಳಾ ಬುಡಾನ ತಿಳಿಲಿಲ್ಲಾ, ಅಲ್ಲಾ ಅದರಾಗ ’ನಿಮ್ಮ ಮದ್ವಿ’ ಅಂತ ಬ್ಯಾರೆ ಅಂತಾಳ, ಇಕಿಗೇನ ನನ್ನ...
ಹದಿನೈದ ದಿವಸದ ಹಿಂದ ನನ್ನ ಹೆಂಡ್ತಿ ಅತ್ಯಾನ ಮಗಗ ಕನ್ಯಾ ನೋಡಲಿಕ್ಕೆ ಹೋಗಿದ್ದ ಪ್ರಹಸನ ಬರದಿದ್ದೆ, ಇದ ಅದರ ಮುಂದಿನ ಕಥಿ. ಅದರ ಅರ್ಥ ನನ್ನ ಹೆಂಡ್ತಿ ನೋಡಿದ್ದ ಆ ಕನ್ಯಾ ನಮ್ಮ ಹುಡುಗಗ ರಿಜೆಕ್ಟ ಮಾಡ್ತ ಅಂತ ಬಿಡಿಸಿ ಹೇಳೋದ...
ಹೋದ ಸಂಡೆ ಒಂದ ಕನ್ಯಾ ನೋಡಲಿಕ್ಕೆ ಹೋಗಿದ್ದೆ. ನಂಗಲ್ಲ ಮತ್ತ. ಅಲ್ಲಾ, ಹಂಗ ನಂಗೇನ ಕನ್ಯಾ ನೋಡಲಾರದಷ್ಟ ವಯಸ್ಸಾಗಿಲ್ಲಾ, ಇನ್ನೂ ವರಾ ಕಂಡಂಗ ಕಾಣ್ತೇನಿ ಆ ಮಾತ ಬ್ಯಾರೆ ಆದರ ಇಪ್ಪತ್ತೊಂದ ವರ್ಷದ ಹಿಂದ ಏನ ಒಂದ ಕನ್ಯಾ ನೋಡಿ ಕಟಗೊಂಡೆ...
ನಾವ ಸಣ್ಣೋರಿದ್ದಾಗ ಗಣಪತಿ ಕೂಡಸೋ ಹಬ್ಬ ಬಂದರ ಮುಗದಹೋತ, ಅದ ಒಂದs ನಮಗ ಗಂಡಸರ ಹಬ್ಬ ಅಂತ ಅನಸ್ತಿತ್ತ. ಹಂಗ ಮನಿ ಗಣಪತಿಕಿಂತಾ ಸಾರ್ವಜನಿಕ ಗಣಪತಿಗೆ ಭಾಳ ಇಂಟರೆಸ್ಟ ಇರ್ತಿತ್ತ. ದಿವಸಾ ಮನ್ಯಾಗಿನ ಗಣಪತಿ ಮಂಗಳಾರತಿಗೆ ನಾವ ಇರಲಿಲ್ಲಾ ಅಂದರೂ ಸಾರ್ವಜನಿಕ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...