About me

my profile photo

ಪ್ರಶಾಂತ ಆಡೂರ
ಹುಟ್ಟಿದ್ದು ೧೯೭೩ ಅಕ್ಟೋಬರ ೧೩, ಶಿವಮೊಗ್ಗದೊಳಗ. ಮುಂದೆ ಕಲತಿದ್ದು ಬೆಳದಿದ್ದು ಬಲತಿದ್ದು ಎಲ್ಲಾ ಹುಬ್ಬಳ್ಳಿ ಒಳಗ. ಬಿ.ಎಸ್.ಸಿ. ಎಮ್.ಬಿ.ಎ ತನಕಾ ಶಿಕ್ಷಣ.
ಒಂದ ನಾಲ್ಕ ವರ್ಷದಿಂದ ಕನ್ನಡ ಹಾಸ್ಯ ಲೇಖನಗಳನ್ನ ಬರಿಲಿಕತ್ತೇನಿ. ಉತ್ತರ ಕರ್ನಾಟಕದ ಆಡು ಭಾಷೆಯೊಳಗ ಬರೇಯೊದು ನನ್ನ ಲೇಖನಗಳ ವಿಶೇಷತೆ. ಮೊದಲ ಕೆಂಡಸಂಪಿಗೆ ಅಂಕಣಕಾರ ಆಗಿ ಬರಿಲಿಕ್ಕೆ ಶುರು ಮಾಡಿದೆ. ಆಮ್ಯಾಲೆ ವಿಜಯ ಕರ್ನಾಟಕದ ’ಹಾಳ ಹರಟೆ’ ಅಂಕಣಕಾರ ಆಗಿದ್ದೆ. ನನ್ನ ಮೊದಲ ಪುಸ್ತಕ ’ಕುಟ್ಟವಲಕ್ಕಿ,’ಇದನ್ನ ಛಂದ ಪುಸ್ತಕದವರು ಪ್ರಕಟಿಸಿದರು.ಮುಂದ ಹೋದ ವರ್ಷ ’ಗೊಜ್ಜವಲಕ್ಕಿ’ ಅಂತ ಮತ್ತೊಂದ ಪುಸ್ತಕ ಬಿಡುಗಡೆ ಆತು. ಅವಧಿ ಮತ್ತು ಕನ್ನಡಾ ಒನ್ ಒಳಗೂ ಬರಿತಿದ್ದೆ.
ಹಂಗ ಟೈಮ ಸಿಕ್ಕಾಗ ಊರ ಹಿರೇತನ ಅಂದರ ಸಮಾಜ ಸೇವಾನೂ ಮಾಡತಿರ್ತೇನಿ. ಆವಾಗ ಇವಾಗ ಪೇಂಟಿಂಗ್, ಫೋಟೊಗ್ರಾಫಿನೂ ಮಾಡತೇನಿ.
ಸದ್ಯೆ ಹುಬ್ಬಳ್ಳಿ ಒಳಗ ಒಂದ ಪ್ರೈವೇಟ್ ಕಂಪನ್ಯಾಗ ಜನರಲ್ ಮ್ಯಾನೇಜರ ಆಗಿ ಕೆಲಸಾ ಮಾಡಲಿಕತ್ತೇನಿ. ಮನಿ ಒಳಗ ಅವ್ವಾ-ಅಪ್ಪಾ, ಒಂದ ಹೆಂಡತಿ ಎರಡ ಮಕ್ಕಳ ಜೊತಿ ಸಂಸಾರ ನಡಿಸಿಗೊಂಡ ಹೊಂಟೇನಿ.

 

born on 13th of October 1973

B.Sc, MBA., working as manager in private firm in Hubli

Enjoying this bloody life is motto of my life.

I have parents ,a wife, son and a daughter.

Writing ,painting and photography are my present passions.

You can contact me at

prashantadur@gmail.com

you can talk to me on 9379101596