ಮೊನ್ನೆ ರಾತ್ರಿ ಹನ್ನೊಂದುವರಿ- ಹನ್ನೆರಡ ಆಗಿತ್ತ, ಮೊಬೈಲ ರಿಂಗ ಆತ, ರಿಂಗ ಟೋನ್ ನನ್ನ ಹೆಂಡ್ತಿದ, ನಂಗೇನ ಸಂಬಂಧ ಇಲ್ಲಾ ಅಂತ ನಾ ತಲಿ ಕೆಡಸಿಕೊಳ್ಳಲಿಲ್ಲಾ. ಆದರ ಮೊಬೈಲ್ ಕಂಟಿನ್ಯೂ ರಿಂಗ ಆಗಲಿಕತ್ತ. ಸಿಟ್ಟಿಗೆದ್ದ ಗಡದ್ದ ಮಲ್ಕೊಂಡಿದ್ದ ನನ್ನ ಹೆಂಡ್ತಿಗೆ “ಏ…ಏಳ...
ಇದ ಒಂದ ಮೂರ ವರ್ಷದ ಹಿಂದಿನ ಮಾತ ಇರಬೇಕ, ಇನ್ನೇನ ಒಂದ ವಾರಕ್ಕ ಸಾಲಿ ಶುರು ಆಗೋದಿತ್ತ, ನನ್ನ ಮಗಳ ಗಂಟ ಮಾರಿ ಮಾಡ್ಕೊಂಡ ಅಡ್ಡಾಡ್ಲಿಕತ್ತಿದ್ಲು. ಅಕಿಗೆ ಅವರವ್ವ ’ಈ ವರ್ಷದಿಂದ ಕನ್ನಡ ಶುರು ಆಗ್ತದ, ಎಷ್ಟ ಬಡಕೊಂಡೆ ಸುಟ್ಯಾಗ ಅಂಕಲ್ಪಿ...
ಮೊನ್ನೆ ಸೆಪ್ಟೆಂಬರದ್ದ ಪಗಾರ ಆಗೋದ ತಡಾ ನನ್ನ ಹೆಂಡ್ತಿ “ರ್ರಿ…ಈ ತಿಂಗಳ ರೊಕ್ಕ ಜಾಸ್ತಿ ಬೇಕ, ಅಧಿಕ ಮಾಸ ಅದ” ಅಂದ್ಲು. ಇಕಿ ಎಲ್ಲಿ ಅಧಿಕ ಮಾಸ ತಂದ್ಲಲೇ, ಮೊದ್ಲ ಕರೊನಾ, ಗ್ಲೋಬಲ್ ರಿಸೆಶನ ಒಳಗ ಎಕಾನಮಿ ಹಳ್ಳಾ ಹಿಡದ ಕರೆಕ್ಟ...
ಜೀವನದಾಗ ಯಾವದ ಭಾಡಗಿಗೆ ಸಿಗ್ತದ ಅದನ್ನ ಎಂದೂ ಸ್ವಂತದ್ದ ಮಾಡ್ಕೋಬಾರದು ಅನ್ನೋದ ನಂದ ಒಂದ ಕಾಲದಾಗ principle of life ಇತ್ತ. ಹಿಂಗಾಗಿ ನಾ ಸೈಟ ತೊಗೊಂಡಿದ್ದರೂ ಮನಿ ಕಟ್ಟಲಿಕ್ಕೆ ಹೋಗಿದ್ದಿಲ್ಲಾ. ಒಂದು ಸೈಟಿಗೆ ಇದ್ದಷ್ಟ ವ್ಯಾಲ್ಯೂ ಮನಿ ಕಟ್ಟಿದರ ಇರಂಗಿಲ್ಲಾ,...
ಮೊನ್ನೆ ಮೇ ತಿಂಗಳದಾಗ ಒಂದ ದಿವಸ ಮುಂಜ ಮುಂಜಾನೆ ಒಂದ sms ಬಂತ. ಇತ್ತೀಚಿಗೆ ವಾಟ್ಸಪ್ ಬಂದಮ್ಯಾಲೆ sms ಬರೋದ ಕಡಮಿ ಆಗ್ಯಾವ. ಹಂಗೇನರ sms ಬಂದರ ಅದ ಎಮರ್ಜೆನ್ಸಿ ಅಂತ ಗ್ಯಾರಂಟೀ ಇರ್ತದ. ಹಿಂಗಾಗಿ ಯಾರದ ಮೆಸೆಜ್ ಅಂತ ನೋಡಿದರ...
ಇದ ನಾವ ಕಾಲೇಜನಾಗ ಇದ್ದಾಗಿನ ಮಾತ, ನಮಗ ಗಣಪತಿ ಹಬ್ಬ ಅಂದರ ಅಗದಿ ದೊಡ್ಡ ಹಬ್ಬ…ಹಂಗ ಗಣಪತಿ ಹಬ್ಬನ ದೊಡ್ಡದು ಅದರಾಗ ನಮ್ಮ ಹುಬ್ಬಳ್ಳಿ ಸಾರ್ವಜನಿಕ ಗಣಪತಿ ಹಬ್ಬ ಅಂದರ ಕೇಳ್ತಿರೇನ? ಇನ್ನ ನಮ್ಮಂತಾ ಕಾಲೇಜ ಹುಡುಗರಿಗಂತು ಅಗದಿ ಹೇಳಿ-ಕೇಳಿ ಬರೋ...
ಇದೇನಿಲ್ಲಾ ಅಂದರು ಹತ್ತ-ಹದಿನೈದ ವರ್ಷದ ಹಿಂದಿನ ಮಾತ. ನಮ್ಮ ದೋಸ್ತ ಒಬ್ಬಂವ ಹುಬ್ಬಳ್ಳ್ಯಾಗ ಮೆಡಿಕಲ್ ರೆಪ್ ಇದ್ದಂವಾ ಮ್ಯಾನೇಜರ್ ಆಗಿ ಬೆಂಗಳೂರಿಗೆ ಟ್ರಾನ್ಸಫರ್ ಆಗಿ ಹೊಂಟಾ. ಹಂಗ ನಮ್ಮ ದೋಸ್ತರ ಒಳಗ ಇಂವಾ ಒಂದನೇದಂವಾ ಮ್ಯಾನೇಜರ್ ಆಗಿ ಬೆಂಗಳೂರಿಗೆ ಹೊಂಟೊಂವಾ. ಇಂವಾ...
ಮೊನ್ನೆ ಸಂಜಿಗೆ ಮನಿಗೆ ಹೋಗೊ ಪುರಸತ್ತ ಇಲ್ಲದ ತಾಯಿ ಮಗಂದ ಜೋರ ಜಗಳ ನಡದಿತ್ತ. ಹಂಗ ಇದ ವಾರದಾಗ ಮೂರ ದಿವಸ ಇರೋದ. ನಾ ನನ್ನ ಹೆಂಡ್ತಿಗೆ ಎಷ್ಟ ಸರತೆ ’ಮಗಾ ಈಗ ದೊಡ್ಡೊಂವ ಆಗ್ಯಾನ ಸ್ವಲ್ಪ ರಿಸ್ಪೆಕ್ಟಲೇ ಟ್ರೀಟ್ ಮಾಡ’...
ಮೊನ್ನೆ ಮುಂಜ ಮುಂಜಾನೆ ಎದ್ದವನ ನಮ್ಮ ಶಂಬು ಮನಿಗೆ ಬಂದಾ, ದಿವಸಾ ಆರಾಮ ಎಂಟ-ಒಂಬತ್ತಕ್ಕ ಏಳೊಂವಾ ಇಷ್ಟ ಲಗೂ ಯಾಕ ನಮ್ಮ ಮನಿ ಕಡೆ ಬಂದಾ ಅಂತ ’ಲೇ.. ದೋಸ್ತ ಯಾಕ ನಿದ್ಯಾಗ ದಾರಿ ತಪ್ಪಿ ನಮ್ಮ ಮನಿ ಕಡೆ ಬಂದಿ...
ನಮ್ಮ ಮಾಮಾ ಒಬ್ಬೊಂವ ಬ್ಯಾಂಕಿನಾಗ ನೌಕರಿ ಮಾಡ್ತಿದ್ದಾ, ಮೊನ್ನೆ ರಿಟೈರ್ಡನೂ ಆದಾ. ಮನ್ಯಾಗ ನಮ್ಮ ಮಾಮಿ ’ನಮ್ಮ ಮನೆಯವರ ರಿಟೈರ್ಡ ಆಗ್ಯಾರ, ನಾಳಿಂದ ನೀ ಕೆಲಸಕ್ಕ ಬರೋದ ಬ್ಯಾಡಾ’ ಅಂತ ಕೆಲಸ್ದೊಕಿನ ಅಗದಿ ಖುಶಿಲೇ ಬಿಡಸಿದ್ರ ಅತ್ತಲಾಗ ಆ ಬ್ಯಾಂಕಿನವರ ನಮ್ಮ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...