ಹಂಗ ಖರೆ ಹೇಳ್ಬೇಕಂದರ ನಾ ಈ ಲೇಖನಾ ಬರದಿದ್ದ ಹೋದ ಹೋಳಿ ಹುಣ್ಣಿಮಿಗೆ, ಆದರ ಅವತ್ತ ನಾ ಇನ್ನೇನ ಈ ಲೇಖನಾ ಟೈಪ ಮಾಡಿ ಕೆಂಡಸಂಪಿಗೆಗ ಕಳಸಬೇಕು ಅನ್ನೋದರಾಗ ಅದನ್ನ ನನ್ನ ಹೆಂಡತಿ ಓದಿ ಬಿಟ್ಲು. ಅದರಾಗ ಇತ್ತೀಚಿಗೆ ನಿಮ್ಮ ಪೈಕಿ...
(ಇದು ನನ್ನ ಕುಟ್ಟವಲಕ್ಕಿ ಪುಸ್ತಕದೊಳಗ ಈಗಾಗಲೇ ಪ್ರಕಟಾಗಿದ್ದ ಲೇಖನ, ನಾ ಇದನ್ನ february 29, ಪ್ರಪೋಸಲ್ ಡೇ ಅಂತ ಅದರಾಗ ಬರದಿದ್ದೆ, ಅದನ್ನ ಇವತ್ತ ಕುಟ್ಟವಲಕ್ಕಿ ಹಲ್ಲಿಗೆ ಬರಂಗಿಲ್ಲಾಂತ ಅಂತ ಬರೇ ಕೆಂಡಸಂಪಿಗಿ ಒಳಗ ಘಮ-ಘಮಾ ವಾಸನಿ ತೊಗೊತ ಇರೋರ ಸಲುವಾಗಿ...
ಮತ್ತ IPL ಶುರು ಆತು. ಇದು ಐದನೇ ಕಂತು, ಭಾಗ, ಆವೃತ್ತಿ, ಸರಣಿ ಏನ ಸುಡಗಾಡರ ಅನ್ರಿ. ಇನ್ನ ಒಂದೆರಡ ತಿಂಗಳಂತೂ ತಲಿ ಚಿಟ್ಟ ಹಿಡಿಯೋಷ್ಟ ಕ್ರಿಕೆಟ. ಹಂಗ ರೊಕ್ಕಾ ತೊಗಂಡ ಆಡೋರಿಗೆನ ಅನಸಂಗಿಲ್ಲಾ, ಪುಕಶೆಟ್ಟೆ ಮನ್ಯಾಗ ಕೂತ ನೋಡವರಿಗೆ ತ್ರಾಸ....
ಈ ಕೆಂಡಸಂಪಿಗೆ ಅಂದ್ರ ಏನ ಅಂತ ನನ್ನ ಹೆಂಡತಿಗೆ ನಾ ಒಂದ್ಯಾರಡ ಲೇಖನಾ ಬರೇಯೊತನಕಾ ಗೊತ್ತ ಇದ್ದಿದ್ದಿಲ್ಲಾ, ಅಲ್ಲಾ ಹಂಗ ನನಗೂ ಬರೇಯೋಕಿಂತ ಮುಂಚೆ ಗೊತ್ತಿದ್ದಿಲ್ಲಾ ಆ ಮಾತ ಬ್ಯಾರೆ. ಆದ್ರ ನಾ ಇತ್ತೀಚಿಗೆ ಕೆಂಡಸಂಪಿಗೆ ಜೊತಿ ಹೊತ್ತ ಕಳದಷ್ಟ ನನ್ನ...
ಒಂದ ಎಂಟ ದಿವಸ ಹಿಂದ ಹಿಂಗs ಫಾಲತು ಬ್ರೌಸಿಂಗ ಮಾಡಬೇಕಾರ ಒಂದ ಇಂಟರೆಸ್ಟಿಂಗ ಟೈಟಲ್ ಕಾಣ್ತ. ’Royal baby worth $376 Million to the British Economy’ ಅಂತ ಇತ್ತ. ಅಲ್ಲಾ ಬರೇ Royal baby worth $376 Million...
ಕೆಂಡಸಂಪಿಗೆ ಒಳಗ ಒಂದ ಪ್ರಹಸನ ಬರಿಲಿಕ್ಕೆ ಶುರು ಮಾಡಿದ್ದ ಇವತ್ತ ಒಂದ ಪುಸ್ತಕ ಆಗೋತನಕ ಬಂದ ಮುಟ್ಟತ, ಕಡಿಕೆ ಮೊನ್ನೆ ಎಪ್ರಿಲ್ 6ಕ್ಕ ಬೆಂಗಳೂರಾಗ ‘ಕುಟ್ಟವಲಕ್ಕಿ’ ಅಂತ ಹೆಸರಿಲಿ ಪುಸ್ತಕನು ಬಿಡುಗಡೆ ಆತು. ಛಂದ ಪುಸ್ತಕದವರ ಈ ನನ್ನ ಪ್ರಹಸನಗಳನ್ನ ಎಲ್ಲಾ...
ಒಂದ ವಾರದಿಂದ ಯಾಕೋ ನನ್ನ ಹೆಂಡತಿ ನನಗ “ರ್ರಿ ಬರೋ ಮಾರ್ಚ೩೧ಕ್ಕ ನಂದ ಅಕೌಂಟ ಕ್ಲೋಸ್ ಮಾಡಿ ಬಿಡರಿ” ಅಂತ ಗಂಟs ಬಿದ್ದಾಳ. ನಂಗ ಅಕಿ ಯಾ ಸುಡಗಾಡ ಅಕೌಂಟ ಬಗ್ಗೆ ಮಾತಡಲಿಕತ್ತಾಳ ಅಂತ ಗೊತ್ತಾಗವಲ್ತಾಗೇದ. ಹಂಗ ಅಕಿ ಎರಡ ಹಡದ...
“ಲೇ, ನಿನ್ನೌನ. ಎಲ್ಲಿ ಇದ್ದೀಲೇ? ಏನ ಸುದ್ದೀನ ಇಲ್ಲಲಾ? ಇದಿಯೋ ಸತ್ತೀಯೋ” ಅಂತ ನಿನ್ನೆ ನಮ್ಮ ರಾಘ್ಯಾ ಬೆಂಗಳೂರಿಂದ ಫೋನ ಮಾಡಿದ್ದಾ. ಅವನೌನ ಇವಂಗ ಎಲ್ಲಾ ಬಿಟ್ಟ ಇವತ್ತ ಯಾಕ ನಂದ ನೆನಪಾತಪಾ? ಈ ಮಗಾ ಲಾಸ್ಟ ನನಗ ಫೋನ ಮಾಡಿದ್ದ...
“ರ್ರಿ, ಕಡಕೋಳ ಮಾಮಿ ಬಂದರು, ನನ್ನ ಕೇಳಿದರ ಈಗ ಜಸ್ಟ ಸ್ನಾನಕ್ಕ ಹೋಗೇನಿ ಅಂತ ಹೇಳರಿ” ಅಂತ ಹೇಳಿದೋಕಿನ ನನ್ನ ಹೆಂಡತಿ ಬಚ್ಚಲಮನಿಗೆ ಜಿಗದ ಡಬಕ್ಕನ ಬಾಗಲಾ ಹಕ್ಕೊಂಡ್ಲು. ನಂಗರ ಒಂದು ತಿಳಿಲೇ ಇಲ್ಲಾ. ಈಗರ ಸ್ನಾನ ಮುಗಿಸಿಕೊಂಡ ಹೊರಗ ಬಂದ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...