ಇದ ಒಂದ ಎಂಟ ತಿಂಗಳ ಹಿಂದಿನ ಮಾತ ಇರಬೇಕ, ಜಸ್ಟ ದಣೇಯಿನ ನಮ್ಮ ಹುಬ್ಬಳ್ಳ್ಯಾಗ ಲಾಕಡೌನ ತಗದಿದ್ದರು, ನಾವು ಮನಿ ಕೆಲಸ, ಮನೆಯವರ ಕೆಲಸ ಬಿಟ್ಟ ಮಾಲಕರ ಕೆಲಸಕ್ಕ ಹೊಂಟಿದ್ವಿ. ಒಂದ ದಿವಸ ಮಟಾ ಮಟಾ ಮಧ್ಯಾಹ್ನ ನಮ್ಮ ಸುಮ್ಮಕ್ಕ ಪೂಣೆಯಿಂದ...
ಮೊನ್ನೆ ಒಮ್ಮಿಂದೊಮ್ಮಿಲೇ ನನ್ನ ಹೆಂಡತಿ “ರ್ರಿ…ನಿಂಬದ ಮದ್ವಿ ಆಗಿದ್ದ ಯಾ ಟೈಪ್?’ ಅಂತ ಕೇಳಿದ್ಲು. ನಂಗ ಗಾಬರಿ ಆತ, ಇಕಿ ಏನ ಕೇಳಲಿಕತ್ತಾಳ ಅನ್ನೋದರ ತಳಾ ಬುಡಾನ ತಿಳಿಲಿಲ್ಲಾ, ಅಲ್ಲಾ ಅದರಾಗ ’ನಿಮ್ಮ ಮದ್ವಿ’ ಅಂತ ಬ್ಯಾರೆ ಅಂತಾಳ, ಇಕಿಗೇನ ನನ್ನ...
ಹದಿನೈದ ದಿವಸದ ಹಿಂದ ನನ್ನ ಹೆಂಡ್ತಿ ಅತ್ಯಾನ ಮಗಗ ಕನ್ಯಾ ನೋಡಲಿಕ್ಕೆ ಹೋಗಿದ್ದ ಪ್ರಹಸನ ಬರದಿದ್ದೆ, ಇದ ಅದರ ಮುಂದಿನ ಕಥಿ. ಅದರ ಅರ್ಥ ನನ್ನ ಹೆಂಡ್ತಿ ನೋಡಿದ್ದ ಆ ಕನ್ಯಾ ನಮ್ಮ ಹುಡುಗಗ ರಿಜೆಕ್ಟ ಮಾಡ್ತ ಅಂತ ಬಿಡಿಸಿ ಹೇಳೋದ...
ಹೋದ ಸಂಡೆ ಒಂದ ಕನ್ಯಾ ನೋಡಲಿಕ್ಕೆ ಹೋಗಿದ್ದೆ. ನಂಗಲ್ಲ ಮತ್ತ. ಅಲ್ಲಾ, ಹಂಗ ನಂಗೇನ ಕನ್ಯಾ ನೋಡಲಾರದಷ್ಟ ವಯಸ್ಸಾಗಿಲ್ಲಾ, ಇನ್ನೂ ವರಾ ಕಂಡಂಗ ಕಾಣ್ತೇನಿ ಆ ಮಾತ ಬ್ಯಾರೆ ಆದರ ಇಪ್ಪತ್ತೊಂದ ವರ್ಷದ ಹಿಂದ ಏನ ಒಂದ ಕನ್ಯಾ ನೋಡಿ ಕಟಗೊಂಡೆ...
ನಾವ ಸಣ್ಣೋರಿದ್ದಾಗ ಗಣಪತಿ ಕೂಡಸೋ ಹಬ್ಬ ಬಂದರ ಮುಗದಹೋತ, ಅದ ಒಂದs ನಮಗ ಗಂಡಸರ ಹಬ್ಬ ಅಂತ ಅನಸ್ತಿತ್ತ. ಹಂಗ ಮನಿ ಗಣಪತಿಕಿಂತಾ ಸಾರ್ವಜನಿಕ ಗಣಪತಿಗೆ ಭಾಳ ಇಂಟರೆಸ್ಟ ಇರ್ತಿತ್ತ. ದಿವಸಾ ಮನ್ಯಾಗಿನ ಗಣಪತಿ ಮಂಗಳಾರತಿಗೆ ನಾವ ಇರಲಿಲ್ಲಾ ಅಂದರೂ ಸಾರ್ವಜನಿಕ...
ಹೋದ ಶನಿವಾರ ನಾನು ನಮ್ಮ ದೋಸ್ತ ಮಂಜ್ಯಾ ವೀಕೆಂಡ್ ಅಂತ ಹೋಗಿದ್ವಿ. ಹಂಗ ಶನಿವಾರ ನಮ್ಮಕಿದ ಒಪ್ಪತ್ತ ಇತ್ತ ಅಂತ ಸುಮ್ಮನ ದೋಸ್ತನ ಜೊತಿ ಹೋಗ್ಲಿಕ್ಕೆ ಬಿಟ್ಟಳ ಅನ್ನರಿ, ಇಲ್ಲಾಂದರ ಎಲ್ಲೆ ಹೊಂಟರೂ ’ ನಾನೂ..ಬರೋಕಿ’ ಅಂತ ಅಡ್ಡಗಾಲ ಹಾಕೋ ಚಟಾ...
ಮೊನ್ನೆ ಸಂಜಿ ಮುಂದ ಒಮ್ಮಿಂದೊಮ್ಮಿಲೇ ನನ್ನ ಹೆಂಡತಿ ’ರ್ರಿ..ಅನ್ನಂಗ ನಿಂಬದ h index ಎಷ್ಟ ಅದ?” ಅಂತ ಕೇಳಿದ್ಲು. ನಾ ಒಮ್ಮಿಕ್ಕಲೇ ಗಾಬರಿ ಆದೆ, ಒಂದು ನಾ ಈ h index ಬಗ್ಗೆ ಕೇಳಿದ್ದಿಲ್ಲಾ, ಮ್ಯಾಲೆ ನಂಗ ಹಿಂಗ ಗಂಡಂದರ ಪರಫಾರ್ಮನ್ಸ...
ನಮ್ಮ ಮನ್ಯಾಗ ಒಂದ ಕಾಲ ಇತ್ತ, ಎಲ್ಲಾ ಕೆಲಸ ನಮ್ಮವ್ವ ಒಬ್ಬೋಕಿನ ಮಾಡ್ಕೊಂಡ, ಗಂಡಾ-ಮಕ್ಕಳನ್ನ ಸಾಕ್ಕೊಂಡ ಮತ್ತ ಮ್ಯಾಲೆ ತಾ ಪ್ರೆಸ್ ನಾಗ ಕೆಲಸಕ್ಕ ಬ್ಯಾರೆ ಹೋಗ್ತಿದ್ಲು. ಒಂದ ಮುಂಜಾನೆ ಐದಕ್ಕ ಎದ್ದಳು ಅಂದರ ರಾತ್ರಿ ಹತ್ತರ ತನಕ ದುಡಿಯೋಕಿ. ಅಕಿಗೆ...
ಒಂದ ಕಾಲದಾಗ ನಮ್ಮ ಸಂಸಾರ ಅಂದರ ಪ್ಯಾರಾಗಾನ್ ಫ್ಯಾಮಿಲಿ ಆಗಿತ್ತ. ನಾ ಅಂತು ಹವಾಯಿ ಚಪ್ಪಲ್ ಮ್ಯಾಲೆ ಸಾಲಿ ಕಲ್ತೇನಿ. ಕಾಲೇಜಿಗೆ ಹೊಂಟಾಗ ಬೂಟ ಕೊಡಸ್ತಿ ಏನಪಾ ಅಂತ ನಮ್ಮಪ್ಪಗ ಕೇಳಿದರ ’ಸುಮ್ಮನ ಚಪ್ಪಲ್ ತೊಗೊತಿಯೋ ಇಲ್ಲಾ ಬೂಟ ತೊಗೊಳ್ಯೋ’ ಅಂದ...
ಹಂಗ ನಾ ಮೊದ್ಲಿಂದ ಕಡ್ದಿ ಪೈಲವಾನ. ಈಗ ಏನೊ ಎರಡ ಮಕ್ಕಳ ಹುಟ್ಟಿ ಆಪರೇಶನ್ ಆದಮ್ಯಾಲೆ, ಅಂದರ ಹೆಂಡ್ತಿದ ಮತ್ತ, ಒಂದ ಚೂರ ಗಡತರ ಆಗೇನಿ ಅನ್ನೋದ ಬಿಟ್ಟರ ಯಾವಾಗಲೂ ಅಂಡರ ವೇಟ್ ಮನಷ್ಯಾನ. ನಮ್ಮಜ್ಜಂತೂ ನಾ ಸಣ್ಣಂವ ಇದ್ದಾಗ ’ನಾಯಿ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...