’ಗಿರಮಿಟ್’ ನನ್ನ ಪ್ರಸ್ತುತ ವಿಜಯವಾಣಿಯ ಅಂಕಣ… ನನಗೆ ಅಂಕಣ ಬರಿಲಿಕ್ಕೆ ಅವಕಾಶ ಕೊಟ್ಟ ವಿಜಯ ವಾಣಿಯವರಿಗೆ ಅನಂತ ಧನ್ಯವಾದಗಳು.
ಈಗ ಒಂದ ಮೂರ ತಿಂಗಳ ಹಿಂದ ಒಂದ ಹೊಸಾ ಸ್ಮಾರ್ಟ ಫೋನ ತೊಗೊಂಡಿದ್ದೆ. ಹಂಗ ಒಂದೂ ಮನ್ಯಾಗ ಸ್ಮಾರ್ಟ ಹೆಂಡ್ತಿನರ ಇರಬೇಕ, ಇಲ್ಲಾ ಸ್ಮಾರ್ಟ ಫೋನರ ಇರಬೇಕ ಅಂತಾರ ಖರೆ ಆದರ ಯಾವಾಗ ಸ್ಮಾರ್ಟ ಫೋನ್ ಸ್ಮಾರ್ಟ ಹೆಂಡ್ತಿಕಿಂತಾ ಜಾಸ್ತಿ ಅನಿವಾರ್ಯ...
ಇದ ಅಗದಿ ಒಂದ 23 ವರ್ಷದ ಹಿಂದಿನ ಕಥಿ ಅನ್ನರಿ, ರಥಸಪ್ತಮಿ ದಿವಸ ಮುಂಜಾನೆ ನಮ್ಮ ಓಣ್ಯಾಗಿನ ಜೋಶಿ ಅಂಟಿ ಬಂದ ನಮ್ಮವ್ವಗ’ಸಂಜಿಗೆ ನಮ್ಮ ಮೊಮ್ಮಗಗ ಕರಿ ಎರಿತೇವಿ, ನೀವು ಮತ್ತ ನಿಮ್ಮ ಸೊಸಿ ಇಬ್ಬರು ಸೇರಿ ಅರಿಷಣ-ಕುಂಕಮಕ್ಕ ಬರ್ರಿ…ಸೊಸಿನ್ನ ಮರಿ...
ಇದ ಒಂದ ನಾಲ್ಕ ದಿವಸದ ಹಿಂದಿನ ಮಾತ ಇರಬೇಕ ನಾ ಸಂಜಿಗೆ ಆಫೀಸನಿಂದ ಮನಿಗೆ ಬರೋದರಾಗ ಮನ್ಯಾಗ ನನ್ನ ಹೆಂಡ್ತಿದ ಒಂದ ನಾಲ್ಕ ಖಾಸ್ ಗೇಳ್ತ್ಯಾರ ಬಂದಿದ್ದರ. ಇವತ್ತೇನ ನಮ್ಮ ಮನ್ಯಾಗ ಏನರ ಇವರದ ಕಿಟ್ಟಿ ಪಾರ್ಟಿ ಇಟ್ಗೊಂಡಾರೇನ ಅಂತ ನಾ...
ಹೋದ ಶನಿವಾರ ನಮ್ಮವ್ವಾ ನಾ ಮಾರ್ನಿಂಗ್ ವಾಕಿಂಗ್ ಮುಗಿಸ್ಗೊಂಡ ಬರೋ ಪುರಸತ್ತ ಇಲ್ಲದ ’ಇವತ್ತ ನಾಷ್ಟಾಕ್ಕ ಭಕ್ಕರಿಪಾ’ ಅಂದ್ಲು. ಹಂಗ ನಂಗ ಭಕ್ಕರಿ ಅಷ್ಟಕ್ಕಷ್ಟ ಆದರ ಬಿಸಿ ಬಿಸಿ ಮಾಡಿ ಕೊಟ್ಟರ ನಾ ತಿನ್ನೋದ ಒಂದ ತೊಗೊ ಅಂತ ’ಹೂಂ’ ಅಂದೆ.ಸರಿ,...
ಹಿಂಗ ಮದ್ವಿದ ಒಂದನೇ ವರ್ಷದ್ದ ಅನಿವರ್ಸರಿ ಮುಗದ ಒಂದ ಎರಡ ದಿವಸ ಆಗಿತ್ತ, ಒಂದ ದಿವಸ ಮುಂಜಾನೆ ನಾ ಆಫೀಸಗೆ ಹೋಗ ಬೇಕಾರ ನಮ್ಮಕಿ ಒಮ್ಮಿಂದೊಮ್ಮಿಲೇ’ರ್ರಿ…ಈ ವರ್ಷ ಹನಿಮೂನಗೆ ಎಲ್ಲೆ ಹೋಗೋದ?’ ಅಂತ ಅಂದ್ಲು. ನಾ ಒಮ್ಮಿಕ್ಕಲೇ ಗಾಬರಿ ಆದೆ.’ಲೇ..ಹನಿಮೂನ ಜೀವನದಾಗ...
ಈಗ ಒಂದ ಆರ-ಏಳ ತಿಂಗಳ ಹಿಂದಿನ ಮಾತ ಇರಬೇಕ ಒಂದ ಲಗ್ನಕ್ಕ ಹೋಗಿದ್ದೆ. ಹಂಗ ನಾ ಹೋಗಿದ್ದ ಹೆಣ್ಣಿನವರ ತರಪಿ ಖರೆ ಆದರ ಅಲ್ಲೆ ಹೋದ ಮ್ಯಾಲೆ ಗೊತ್ತಾತ ಆ ಹುಡುಗನು ನನ್ನ ಪರಿಚಯದವನ ಅಂತ. ಅವನ ಸೋದರ ಮಾವ ನನ್ನ...
ನಾವ ಸಣ್ಣ ಹುಡುಗರ ಇದ್ದಾಗ ಒಂದ ಆಟಾ ಆಡ್ತಿದ್ವಿ,’ಅವರನ ಬಿಟ್ಟ…ಇವರನ ಬಿಟ್ಟ…ಇವರ‍್ಯಾರು’ ಅಂತ ಕಣ್ಣ ಮುಚಗೊಂಡ ಎದರಿಗೆ ನಿಂತ ಮೂರ ನಾಲ್ಕ ಮಂದಿ ದೋಸ್ತರನ ಕರೆಕ್ಟ ಗೊತ್ತ ಹಿಡಿಯೋದ. ಒಬ್ಬರ ನಮ್ಮ ಕಣ್ಣ ಮುಚ್ಚತಿದ್ದರು, ಕಣ್ಣ ಮುಚ್ಚಿದ ಕೂಡ್ಲೇ ಎದರಗಿನ ದೊಸ್ತರ...
ಮೊನ್ನೆ ಮುಂಜಾನೆ ಎದ್ದೋಕಿನ’ಅನ್ನಂಗ…ಈ ಸರತೆ ದೀಪಾವಳಿ ಫರಾಳ ಏನ ಮಾಡ್ಲಿರಿ?’ ಅಂತ ಕೇಳಿದ್ಲು.ನಾ ನಿದ್ದಿ ಗಣ್ಣಾಗ’ಯಾಕ ಹೋದ ವರ್ಷದ ಏನ ಉಳದಿಲ್ಲೇನ?’ ಅಂದ ಬಿಟ್ಟೆ’ರ್ರಿ …ನಾ ದೀಪಾವಳಿ ಫರಾಳದ ಬಗ್ಗೆ ಕೇಳಲಿಕತ್ತೇನಿ, ನಿಮ್ಮ ನಾಷ್ಟಾದ ಬಗ್ಗೆ ಅಲ್ಲಾ, ನಿನ್ನೆ ಉಳದಿದ್ದ ಅನ್ನಕ್ಕ...
ಮೊನ್ನೆ ಮುಂಜ-ಮುಂಜಾನೆ ಪೇಪರ ಓದ್ಲಿಕತ್ತ ನನ್ನ ಹೆಂಡ್ತಿ ಒಮ್ಮಿಕ್ಕಲೆ’ರ್ರೀ…ಲಿವಿಂಗ ಟುಗೆದರ್ ಅಂದರ ಏನ್ರಿ?’ ಅಂತ ಕೇಳಿದ್ಲು. ಎಲ್ಲಾ ಬಿಟ್ಟ ಇಕಿ ಈ ಸಬ್ಜೆಕ್ಟ ಯಾಕ ತಗದ್ಲಪಾ ಅಂದರ ಪೇಪರನಾಗ ನಮ್ಮ ಬಾಲಿವುಡ್ ಒಳಗ ಯಾರ ಯಾರ ಮೊದ್ಲ ಲಿವಿಂಗ ಟುಗೆದರ್ ಇದ್ದರು...
ಒಂದ ಹದಿನೈದ ದಿವಸದ ಹಿಂದ ಶನಿವಾರ ಮುಂಜ-ಮುಂಜಾನೆ ನಮ್ಮ ಬಸ್ಯಾ ಫೋನ್ ಮಾಡಿದವನ’ದೋಸ್ತ ಮಧ್ಯಾಹ್ನ ಫ್ರೀ ಇದ್ದಿ ಏನ’ ಅಂತ ಕೇಳಿದಾ. ನಾ ಫ್ರೀ ಇದ್ದೇ, ಒಂದ ಹೊಡ್ತಕ್ಕ’ಫ್ರೀ ಇದ್ದೇನಲಾ…ಯಾಕ ಶ್ರಾವಣ ಮಧ್ಯಾಹ್ನಕ್ಕ ಮುಗಿತದ ಅಂತ ವೀಕೆಂಡ್ ಮಧ್ಯಾಹ್ನನ ಶುರು ಮಾಡೋಣೇನ?’...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...