ನಿನ್ನೆ ವಾಲೆಂಟೆನ್ಸ್ ಡೇ ಇತ್ತು , ವಾಲೆಂಟೆನ್ಸ್ ಡೇ ಅಂದರ ಪ್ರೇಮಿಗಳಿಗೆ ಹಬ್ಬ ಇದ್ದಂಗಂತ, ನಮ್ಮಂಗ ಲಗ್ನ ಆಗಿ ಹದಿನೈದ ವರ್ಷ ಆದೊರಿಗೆ ‘ಬಾಸಿ ಈದ್’ ಇದ್ದಂಗ. ಬಾಸಿ ಈದ್ ಅಂದ್ರ ನಿನ್ನೆ ಹಬ್ಬದೂಟಾ ಮಾಡ್ಕೊಂಡ ತಿಂದ ಉಳದದ್ದನ್ನ ಇವತ್ತ ತಿನ್ನೋ...
” ರ್ರಿ, ಏಳ್ರಿ…ಏಂಟಾತ, ಇವತ್ತ ವರ್ಷದ ತೊಡಕ್, ಹಂಗ ಮುಗ್ಗಲಗೇಡಿಗತೆ ಇಷ್ಟೊತ್ತನಕ ಮಲ್ಕೋಬಾರದ, ಲಗೂನ ಏಳ್ರಿ” ಅಂದ್ಲು. ನನಗ ನಿದ್ದಿ ಗಣ್ಣಾಗ ಇಕಿ ಯಾರದ ತೊಡಕ, ಏನ್ ತೊಡಕ್ ಅಂದ್ಲು ಗೊತ್ತಾಗಲಿಲ್ಲಾ, ಕಾಲಾಗ ಲುಂಗಿ ಏನರ ತೊಡಕ್ ಆಗೇದೇನ ಅಂತ ಮಲ್ಕೊಂಡಲ್ಲೆ...
ಧಾರವಾಡದ ಹೊಸಾ ಎಲ್ಲಾಪುರದಾಗ ನಮ್ಮ ಅಜ್ಜಿ ಮಾನ್ಯಾಗ ಒಂದ ಹಳೇ ಕಟ್ಟ ಹಾಕಸಿದ್ದ ಫೋಟೊ ಇತ್ತ. ಅಗದಿ ಹಳೇದ, ನಮ್ಮ ಅಜ್ಜ ಶಿಂದಗಿ ಮಾಸ್ತರ ಜಿ.ಬಿ.ಟಿ.ಸಿ. ಟ್ರೇನಿಂಗ ಕಾಲೇಜಿನಾಗ ಹುಡಗರಿಗೆ ಕಾರ್ಪೆಂಟರಕಿ ಕಲಸತಿದ್ದಾ ಹಿಂಗಾಗಿ ಅದನ್ನ ತಾನ ಸ್ವಂತ ತನ್ನ ಕೈಲೆ...
ನೀವು ಆ ಎರಡಗಾಲಿ scootyದ advertisement ನೋಡಿರಬೇಕಲಾ, ಅದs, ಪ್ರೀಯಾಂಕ ಛೋಪ್ರಾಂದ. ರಾತ್ರಿ ಆದ ಮ್ಯಾಲೆ ಗಾಡಿ ತೊಗೊಂಡ why should boys have all the fun ಅಂತ ಗಂಡಬೀರಿಗತೆ ತಿರಗಲಿಕ್ಕೆ ಹೋಗ್ತಾಳಲಾ. ಯಾವಗಿಂದ ಆ ad ಶುರು ಆಗೇದಲಾ...
ಇವತ್ತ ಮುಂಜಾನೆ ಎದ್ದ ಹೊರಗ ಬರೋದಕ್ಕ ಕಾಲಾಗ ಕಸಾ ಕಸಾ ಹತ್ತಲಿಕತ್ತ, ನನ್ನ ಹೆಂಡತಿ ದಿವಸಾ ಕ್ಯಾಗಸ ಹೊಡಿಯೋಕಿ ಇವತ್ತ ಯಾಕ ಇನ್ನು ಹೊಡದಿಲ್ಲಾ ಅಂತ ನಾ ಅಕಿಗೆ “ಏ,ಪ್ರೇರಣಾ..ಇವತ್ತ ಯಾಕ ಇನ್ನೂ ಕಸಾ ಹುಡಗಿಲ್ಲಾ” ಅಂತ ಕೇಳಿದರ ಅಕಿ “ಕಸಾ...
ಇವತ್ತ ಮುಂಜಾನೆ ಏಳೊ ಪುರಸತ್ತ ಇಲ್ಲದ ನನ್ನ ಹೆಂಡತಿ “ರ್ರಿ, ಇವತ್ತ ತಾರಿಖ ಎಷ್ಟು?” ಅಂದ್ಲು. ಹಂಗ ಅಕಿ ನಾರ್ಮಲಿ ಡೇಟ ಬಗ್ಗೆ ತಲಿಕೆಡಸಿಗೊಳ್ಳೊದ ಒಂದು ಅಕಿ ಡೇಟ ಇದ್ದಾಗ ಇಲ್ಲಾ ಏಳನೇ ತಾರಿಖಿಗೆ ಇಷ್ಟ, ಅದು ನನ್ನ ಪಗಾರ ಕ್ರೇಡಿಟ್...
ನಿನ್ನೆ ಸಂಜಿಮುಂದ ಕಟ್ಟಿ ಮ್ಯಾಲೆ ಕೂತ ನನ್ನ ಹೆಂಡತಿ ಒಮ್ಮಿಂದೊಮ್ಮಿಲೆ “ರ್ರಿ, ಮಿಡವೈಫ್ ಅಂದರೇನ್ರಿ” ಅಂತ ಒದರಿದ್ಲು. ನಾ ಇಕಿಗೆ ಒಮ್ಮಿಂದೊಮ್ಮೆಲೆ ಇದ್ಯಾಕ ನೆನಪಾತಪಾ ಅಂತ ನೋಡಿದ್ರ ಇಕಿ ಕಟ್ಟಿ ಮ್ಯಾಲೆ ಕಾಲ ಮ್ಯಾಲೆ ಕಾಲ ಹಾಕ್ಕೊಂಡ ಕೂತ ಇಂಗ್ಲೀಷ ಪೇಪರ...
ಇದ ೧೯೯೯-೨೦೦೦ರ ಟೈಮನಾಗಿನ ಮಾತ, ನಮ್ಮ ಒಂದಿಷ್ಟ ದೋಸ್ತರ ಸಿರಿಯಸ್ ಆಗಿ ಲಗ್ನಾ ಮಾಡ್ಕೋಬೇಕು ಅಂತ ಕನ್ಯಾ ನೋಡಲಿಕ್ಕೆ ಶುರು ಮಾಡಿದ್ದರು. ಆವಾಗ ಇವಾಗಿನಗತೆ ಕನ್ಯಾದ್ದ ಶಾರ್ಟೇಜ ಏನ ಇರಲಿಲ್ಲಾ ಹಿಂಗಾಗಿ ಒಂದ ಬಿಟ್ಟ ಇಪ್ಪತ್ತ ಕನ್ಯಾ ನೋಡಿ ಇದ್ದಿದ್ದರಾಗ ಛಂದನ್ವು...
ಅಕ್ಕ ನನ್ನಕಿಂತ ನಾಲ್ಕ ವರ್ಷ ದೊಡ್ಡೊಕಿ,ತಂಗಿ ನನ್ನಕಿಂತ ನಾಲ್ಕ ವರ್ಷ ಸಣ್ಣೊಕಿ. ಅಪ್ಪಗ ಅಕ್ಕನ್ನ ಕಂಡರ ಅಷ್ಟಕ್ಕಷ್ಟ ಆದರ ತಂಗಿ ಮ್ಯಾಲೆ ಭಾಳ ಜೀವ ಇದ್ದಾ. ನಾ ಹುಬ್ಬಳ್ಳಿ ಘಂಟಿಕೇರಿ ಒಳಗಿನ ನ್ಯಾಶನಲ್ ಹೈಸ್ಕೂಲಿಗೆ ಹೋಗಬೇಕಾರ ನಾ ಅಕ್ಕನ ಕೈ ಹಿಡ್ಕೊಂಡ...
ಕೃಷ್ಣಮೂರ್ತಿಗೆ ಈಗ ೭೬ ವರ್ಷ ಆಗಲಿಕ್ಕೆ ಬಂತ. ಅವನ ಹೆಂಡ್ತಿ ಸಿಂಧೂಗ ೬೮ ದಾಟಿದ್ವು. ಇಬ್ಬರದು ೪೩-೪೪ ವರ್ಷದ ಸಂಸಾರ, ಎರಡ ಮಕ್ಕಳು, ಎರಡು ಮೊಮ್ಮಕ್ಕಳು ಅಗದಿ ಫ್ಯಾಮಿಲಿ ಪ್ಲ್ಯಾನಿಂಗ ಫ್ಯಾಮಿಲಿ. ಹಂಗ ಕೃಷ್ಣಮೂರ್ತಿದ ಆರೋಗ್ಯ ಈಗ ಒಂದ ಸ್ವಲ್ಪ ಡಗಮಾಯಿಸಿದುರು...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...