ಮೊನ್ನೆ ಮುಂಜ ಮುಂಜಾನೆ ನಮ್ಮ ರಕ್ಷಕ್ಕ ಫೇಸಬುಕ್ಕಿನಾಗ ಒಂದ ಸ್ಟೇಟಸ್ ಹಾಕಿದ್ಲು. ಹಂಗ ಅಕಿ ಫೇಸಬುಕ್ಕಿನಾಗ ಮೊದ್ಲಿಂದ ಭಾರಿ active, ಒಂಥರಾ ಫೇಸಬುಕನಾಗಿನ ಹೀರೆಮನಷ್ಯಾಳ ಅನ್ನರಿ. ಇನ್ನ ಲಾಕ್ ಡೌನ ಆದಾಗಿಂದಂತೂ ಗಂಡಂದೂ, ಮಗಳದೂ ಇಬ್ಬರದೂ ವರ್ಕ್ ಫ್ರಾಮ್ ಹೋಮ್ ಅಂದ...
ಮೊನ್ನೆ ಲಾಕಡೌನ್ ಅನೌನ್ಸ ಮಾಡಿ ಒಂದ-ಎರಡ ದಿವಸಕ್ಕ ನಮ್ಮ ಮೌಶಿ ಗಂಡಂದ ವಾಟ್ಸಪ್ ಬಂತ ’ಜಿಲ್ಲೆಯಲ್ಲಿ ಕೋರೊನಾ ಹಾವಳಿ ಜಾಸ್ತಿ ಆದ ಕಾರಣ ಲಾಕಡೌನ್ ಘೋಷಿಸಿದ್ದು. ನನ್ನ ಸುಪುತ್ರ ಚಿ. ಚಿದಾನಂದ ಇವನ ಮದುವೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ, ಮುಂದಿನ ದಿನಾಂಕವನ್ನು ತಿಳಿಸಲಾಗುವದು’...
ಹೋದ ಸಂಡೆ ಮುಂಜ ಮುಂಜಾನೆ ಎದ್ದ ದಾಡಿ-ಗಿಡಿ ಮಾಡ್ಕೊಂಡ ಸ್ಮಾರ್ಟ ಆಗಿ ರೆಡಿ ಆಗೋದಕ್ಕ ನನ್ನ ಹೆಂಡ್ತಿ ಅಡ್ದ ಬಾಯಿ ಹಾಕಿ “ಎಲ್ಲೇ ಹೊಂಟದ ಸವಾರಿ…’ ಅಂತ ಕೇಳಿದ್ಲು. “ಎಷ್ಟ ಸಲಾ ಹೇಳಬೇಕಲೇ ನಿಂಗ ಎಲ್ಲೇರ ಹೊಂಟಾಗ ಹಂಗ ಕೇಳಬಾರದು ಅಂತ…ಆಗೋ...
ಮೊನ್ನೆ ಗ್ಯಾಸ ಮ್ಯಾಲೆ ಹಾಲ ಉಕ್ಕಿ ಅಟ್ಟಸಲಿಕತ್ತಿತ್ತ ’ಅವ್ವಾ, ಹಾಲ ಮಳ್ಳಲಿಕತ್ತದ,ನೀ ಏನ್ಮಾಡ್ಲಿಕತ್ತಿ?’ ಅಂತ ನಾ ಒದರಿದರ ಅಲ್ಲೇ ಡೈನಿಂಗ ಟೇಬಲ್ ಮ್ಯಾಲೆ ಟ್ಯಾಬ್ ಹಿಡ್ಕೊಂಡ ಕೂತ ನಮ್ಮವ್ವಂದ ಹೂಂ ನೂ ಇಲ್ಲಾ ಹಾಂ ನೂ ಇಲ್ಲಾ. ಇನ್ನ ನಮ್ಮಕಿ ಅಂತೂ...
ನಾಳೆ, ಮಾರ್ಚ ೧೪ಕ್ಕ ’international maths day’ ಅದ. ಮೊನ್ನೆ ಈಗಿನ ಗಣಿತಕ್ಕ ಮತ್ತ ನಮ್ಮ ಕಾಲದಾಗಿನ ಗಣಿತಕ್ಕ, ನಾವ ಕಲತಿದ್ದಕ್ಕೂ ಈಗ ಕಲಿತಿರೋದಕ್ಕೂ ಎಷ್ಟ ಫರಕ ಅದ ಅಂತ ಹಂಗ ವಿಚಾರ ಮಾಡಲಿಕತ್ತಿದ್ದೆ. ನಮ್ಮ ಹಳೇ ಕಾಲದ ಗಣಿತ, ಅದನ್ನ...
ನಾಳೆ ವ್ಯಾಲೆಂಟೈನ್ ಡೇ ಅಂತ. ಹಂಗ ಅದ ನಮ್ಮ ಸಂಪ್ರದಾಯ, ಸಂಸ್ಕೃತಿ ಅಂತು ಅಲ್ಲಾ ಮ್ಯಾಲೆ ಲಗ್ನಾ ಆಗಿ ಇಪ್ಪತ್ತ ವರ್ಷ ಆದಮ್ಯಾಲೆ ಕಟಗೊಂಡ ಹೆಂಡ್ತಿ ಎಷ್ಟ ಜೀವಾ ತಿಂದರು ಒಂದ ಒಪ್ಪತ್ತನೂ ಏಕ ಪತ್ನಿ ವೃತ ಬಿಡಲಾರದ ಪಾಲಸೋರಿಗೆ ಎಲ್ಲಿ...
ಇದ ಒಂದ ನಾಲ್ಕ ವರ್ಷದ ಹಿಂದಿನ ಮಾತ, ನನ್ನ ಹೆಂಡ್ತಿಗೆ ನಾ ಸಿಂಡಿಕೇಟ ಮೆಂಬರ್ ಆಗೋದ ತಡಾ ತಾನೂ ಡಿಗ್ರಿ ಮಾಡ್ಬೇಕು ಅಂತ ಅನಸಲಿಕತ್ತ. ಹಂಗ MBA from symbiosis ಕಲತ ಸಿಂಡಿಕೇಟ ಮೆಂಬರ್ ಹೆಂಡ್ತಿ ಅಂದ ಮ್ಯಾಲೆ ಒಂದ ಡಿಗ್ರಿನರ...
ನಮ್ಮ ದೋಸ್ತ ಒಬ್ಬಂವ ಸಂಚಗಾರ ಸಂಜ್ಯಾ ಅಂತ ಇದ್ದಾನ. ಸಂಚಗಾರ ಸಂಜ್ಯಾ ಯಾಕ ಅಂದ್ರ ಅಂವಾ ಎಲ್ಲಾ ವ್ಯವಹಾರ ಸಂಚಗಾರ ಇಸ್ಗೊಂಡರ ಮಾಡ್ತಾನ ಇಲ್ಲಾ ಕೊಟ್ಟರ ಮಾಡ್ತಾನ. ಅವನ ಪ್ರಕಾರ ಸಂಚಗಾರ ಕೊಟ್ಟರ ಕೆಲಸ ನಿಕ್ಕಿ ಆದಂಗ. ಅಲ್ಲಾ, ಹಂಗ ಅಂವಾ...
…………. ನಾ ಗಡದ್ದ ಮಲ್ಕೊಂಡಿದ್ದೆ ಸಡನ್ ಆಗಿ ಬಸ್ಯಾನ ಫೋನ ಬಂತ, ನಾ ಎತ್ತೋದ ತಡಾ ’ಲೇ…ಮಧ್ಯಾಹ್ನದ ಮೆಡಿಕಲ್ ಬುಲೆಟಿನ್ ನೋಡಿದೇನ’ ಅಂತ ಕೇಳಿದಾ. ’ಏ..ಇಲ್ಲಲೇ…ಯಾಕ? ಮತ್ತ ಹೊಸಾ ಕೇಸ ಬಂತಿನ ನಮ್ಮ ಏರಿಯಾದಾಗ?’ ಅಂತ ಹೆದರಕೋತ ಕೇಳಿದೆ. ’ಲೇ ನಮ್ಮ...
ಈಗ ಒಂದ ತಿಂಗಳ ಹಿಂದ ಹೆಂಗ ಕಾರ ತೊಗೊಂಡೆ ಅನ್ನೊದರ ಬಗ್ಗೆ ’ ಕಾರ ಇದ್ದಷ್ಟ ಕಾಲ ಚಾಚಬೇಕು’ ಅಂತ ಒಂದ ದೊಡ್ಡ ಪ್ರಹಸನನ ಬರದಿದ್ದೆ. ಕಾರಿಗೆ ನಂಬರ್ ಪ್ಲೇಟ್ ಬರೋದಕ್ಕ ಆ ಪ್ರಹಸನ ನಿಂತಿತ್ತ. ಈಗ ಮುಂದಿನ ಪ್ರಹಸನ ನನ್ನ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...